‘ರಾಕಿಂಗ್ ಸ್ಟಾರ್’ (Rocking Star) ಯಶ್(Yash) ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’(KGF Chapter 2) ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಂತಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಪಾರ್ಟ್ 1 ರಿಲೀಸ್ ಆಗಿತ್ತು. ಇದೀಗ ಏಪ್ರಿಲ್ 14ರಂದು ಪಾರ್ಟ್ 2 ರಿಲೀಸ್ ಆಗಲಿದೆ. ಕೆಜಿಎಫ್ ಇಡೀ ವಿಶ್ವವನ್ನೇ ಕನ್ನಡ(Kannada) ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಕೆಜಿಎಫ್ ಹೆಸರನಲ್ಲೇ ಒಂದು ಖದರ್ ಇದೆ. ಅದರಲ್ಲಿ ನಟಿಸಿದ ಯಶ್ಗೊಂದು ಫೇಮ್ ಇದೆ. ರಾಕಿ ಭಾಯ್ ಅಂದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಅಷ್ಟರ ಮಟ್ಟಿಗೆ ಕೆಜಿಎಫ್ ಸಿನಿಮಾ ಜನರ ತಲೆಯೊಳಗೆ ಹೊಕ್ಕಿದೆ. ‘ಕೆಜಿಎಫ್’ ಚಿತ್ರ ಆಧುನಿಕ ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತಿಗೇ ಪರಿಚಯಿಸಿದ ಸಿನಿಮಾ. ಮಾರ್ಚ್ 27ಕ್ಕೆ ಕೆಜಿಎಫ್ ಚಾಪ್ಟರ್ 2 (KGF Chapter 2)ಸಿನಿಮಾದ ಟ್ರೈಲರ್(Trailer) ರಿಲೀಸ್ ಆಗಲಿದೆ.
ಕೆಜಿಎಫ್ 2 ಟ್ರೈಲರ್ ನೋಡಿದ ಸೆನ್ಸಾರ್ ಸದಸ್ಯ!
ಹೌದು, ಹೊರ ದೇಶಗಳಲ್ಲಿಯೂ ಟ್ರೈಲರ್ ಬಿಡುಗಡೆ ಮಾಡಲು ಟ್ರೇಲರ್‌ನ ಸೆನ್ಸಾರ್ ಮಾಡಲಾಗಿದ್ದು, ‘ಕೆಜಿಎಫ್ 2’ ಸಿನಿಮಾದ ಟ್ರೈಲರ್ ನೋಡಿದ ಸೆನ್ಸಾರ್ ಸದಸ್ಯರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಉಮೈರ್ ಸಾಂಧು ಹೆಸರಿನ ಸಾಗರೋತ್ತರ ಸೆನ್ಸಾರ್‌ಬೋರ್ಡ್ ಸದಸ್ಯ ತಾವು ‘ಕೆಜಿಎಫ್ 2’ ಸಿನಿಮಾದ ಟ್ರೈಲರ್ ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಟ್ರೈಲರ್ ಬಗ್ಗೆ ಸಹ ಹೇಳಿದ್ದಾರೆ. ‘ಈ ಟ್ರೈಲರ್ ಅದ್ಭುತವಾಗಿದೆ, ಗೂಸ್ಬಂಪ್ಸ್ ಮತ್ತು ಮೈಂಡ್ಬ್ಲೋವಿಂಗ್ ಆಗಿದೆ. ಯಶ್‌ಗೆ ದೊಡ್ಡ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಾರೆ.
ಹಲವು ಸಿನಿಮಾಗಳ ವಿಮರ್ಶೆ ಮಾಡುವ ಉಮೈರ್!
ಉಮೈರ್ ಸಾಂಧು ಹೀಗೆ ಸಿನಿಮಾ ಹಾಗೂ ಟ್ರೈಲರ್ಗಳ ವಿಮರ್ಶೆ ಮಾಡುತ್ತಿರುವುದು ಇದು ಮೊದಲೇನೂ ಅಲ್ಲ. ದಕ್ಷಿಣ ಭಾರತದ ಬಹುತೇಕ ಭಾರಿ ನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುವ ಮುನ್ನವೇ ನೋಡಿ ಅದರ ಬಗ್ಗೆ ಮಾಹಿತಿ ನೀಡುತ್ತಾರೆ. ‘ಕೆಜಿಎಫ್: ಚಾಪ್ಟರ್ 1’ ಬಿಡುಗಡೆ ಆದಾಗಲೂ ಸಿನಿಮಾವನ್ನು ವಿಮರ್ಶೆ ಮಾಡಿದ್ದ ಉಮೈರ್ ಸಾಂಧು ಸಿನಿಮಾ ಅದ್ಭುತವಾಗಿದೆ ಎಂದು ಹೇಳಿದ್ದರು.
Saw Rush Print of #KGF2 Trailer ! Goosebumps & MINDBLOWING 🔥 ! Final Cut trailer will be Out very soon.
— Umair Sandhu (@UmairSandu) January 21, 2022
ಇದನ್ನೂ ಓದಿ: ಕೆಜಿಎಫ್ ಗತ್ತು ಇಡೀ ವಿಶ್ವಕ್ಕೇ ಗೊತ್ತು! ಗೂಗಲ್ ಮ್ಯಾಪ್ನಲ್ಲೂ ರಾಕಿ ಭಾಯ್ ಸಿನಿಮಾದೇ ಹವಾ..
ಗೂಗಲ್ ಮ್ಯಾಪ್ನಲ್ಲೂ ಕೆಜಿಎಫ್ ಹವಾ!
ಹೌದು, ಕೆಜಿಎಫ್ ಸೃಷ್ಟಿಮಾಡಿರವ ಹೊಸ ದಾಖಲೆಗಳನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಶಾಂತ್ ನೀಲ್ ಆ ರೀತಿಯ ಸಿನಿಮಾ ಮಾಡಿದ್ದರು. ಮಾರ್ಚ್ 27ರಂದು ಕೆಜಿಎಫ್ ಚಾಪ್ಟರ್ 2 ಸಿನಿಮಾ ಟ್ರೈಲರ್ ರಿಲೀಸ್ ಆಗಲಿದೆ. ಈಗಿನಿಂದಲೇ ಟ್ರೈಲರ್ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಒಂದು ಸಖತ್ ವೈರಲ್ ಆಗುತ್ತಿದೆ. ಅದನ್ನು ಕಂಡ ಅಭಿಮಾನಿಗಳು ಇದು ಕೆಜಿಎಫ್ ಸಿನಿಮಾದ ಗತ್ತು ಅಂದರೆ ಅಂತ ಹೇಳುತ್ತಿದ್ದಾರೆ. ಗೂಗಲ್ ಮ್ಯಾಪ್ನಲ್ಲೂ ಕೆಜಿಎಫ್ ಅಬ್ಬರಿಸುತ್ತಿದೆ. ಸಿನಿಮಾ ಶೂಟಿಂಗ್ ಮಾಡಿದ ಸ್ಥಳಕ್ಕೆ ಗೂಗಲ್ ಮ್ಯಾಪ್ನಲ್ಲಿ ಕೆಜಿಎಫ್ ಶೂಟಿಂಗ್ ಸ್ಪಾಟ್ ಅಂತ ಲೋಕೇಷನ್ ರೀ ನೇಮ್ ಆಗಿದೆ.
ಇದನ್ನೂ ಓದಿ: ಸಿನಿಮಾ ಚೆನ್ನಾಗಿದ್ರೂ ಸಿಕ್ತಿಲ್ಲ ಥಿಯೇಟರ್.. `ಓಲ್ಡ್ ಮಾಂಕ್‘ಗೆ ಪರಭಾಷೆ ಚಿತ್ರಗಳಿಂದ ಸಮಸ್ಯೆ!
ಕೆಜಿಎಫ್ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಒಂದು ಕ್ರೇಜ್ ಇತ್ತು. ಸಿನಿಮಾ ರಿಲೀಸ್ ಆದಮೇಲೆ ಒಂದು ಟ್ರೆಂಡ್ ಆಯ್ತು. ಇದೀಗ ಕೆಜಿಎಫ್ ಸಿನಿಮಾ ಶೂಟಿಂಗ್ ಮಾಡಿದ ಸ್ಥಳಗಳು ಗೂಗಲ್ನಲ್ಲಿ ಕೆಜಿಎಫ್ ಫಿಲ್ಮ್ ಸ್ಪಾಟ್ ಎಂದು ಮರುನಾಮಕರಣಗೊಂಡಿರುವುದು ಕಂಡು ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. ಇದು ನಮ್ಮ ಕನ್ನಡ ಸಿನಿಮಾಗಳಿಗೆ ಇರುವ ತಾಕತ್ತು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ