Saina Nehwal: ನಟ ಸಿದ್ದಾರ್ಥ್- ಸೈನಾ ನೆಹ್ವಾಲ್ 'ಟ್ವೀಟ್' ಗುದ್ದಾಟ, ಆತ ಹೀಗೆ ಎಂದು ಅಂದುಕೊಡಿರ್ಲಿಲ್ಲ ಎನ್ನುತ್ತಿದ್ದಾರೆ ಜನ

ವಿವಾದದ ಬಳಿಕ ಎಚ್ಚೆತ್ತುಕೊಂಡ ಸಿದ್ಧಾರ್ಥ್ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ನಾನು ಅವಹೇಳನಕಾರಿಯಾಗಿ ಏನನ್ನೂ ಹೇಳಿಲ್ಲವೆಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ

ಸಿದ್ದಾರ್ಥ್, ಸೈನಾ ನೆಹ್ವಾಲ್ ಟ್ವೀಟ್

ಸಿದ್ದಾರ್ಥ್, ಸೈನಾ ನೆಹ್ವಾಲ್ ಟ್ವೀಟ್

  • Share this:
ತಮಿಳು ನಟ ಸಿದ್ಧಾರ್ಥ್ (Actor Siddharth) ಆಗಾಗ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡು ಸುದ್ದಿಯ್ಲಲಿರುತ್ತಾರೆ. ಈ ಬಾರಿ ಕೂಡ ಮಾಜಿ(Badminton Star) ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಗೆ( Saina Nehwal) ಪ್ರತಿಕ್ರಿಯಿಸಿದ ಸಿದ್ದಾರ್ಥ್ ಟ್ವೀಟ್ ಸದ್ಯ ವಿವಾದಕ್ಕೀಡಾಗಿದೆ( Controversial) . ತಮಿಳು ನಟನ ವಿರುದ್ಧ ಮಹಿಳಾ ಆಯೋಗ (Women's Commission) ಆಕ್ರೋಶ ವ್ಯಕ್ತ ಪಡಿಸಿದೆ. ಹಲವು ರಾಜಕಾರಣಿಗಳು, ನಟ ನಟಿಯರು ಸಿದ್ಧಾರ್ಥ್ ಹೇಳಿಕೆ ಬಗ್ಗೆ ಕಿಡಿ ಕಾರಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರ್ತಿ, ಬಿಜೆಪಿ ಪಕ್ಷದ ನಾಯಕಿ ಸೈನಾ ನೆಹ್ವಾಲ್ ಪ್ರಧಾನಿ ನರೇಂದ್ರ ಮೋದಿಗೆ ಪಂಜಾಬಿನಲ್ಲಿ ಆದ ರಕ್ಷಣಾ ಲೋಪದ ಕುರಿತು ಟ್ವೀಟ್ ಮಾಡಿದ್ದರು. ಆ ಟ್ವೀಟ್‌ಗೆ ತಮಿಳು ನಟ ಸಿದ್ಧಾರ್ಥ್ ಪ್ರತಿಕ್ರಿಯಿಸಿದ್ದರು. ಇದೇ ಟ್ವೀಟ್ ಈಗ ವಿವಾದಕ್ಕೆ ಸಿಲುಕಿದೆ. ಇದು ರಾಷ್ಟ್ರೀಯ ಮಹಿಳಾ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ಸಿದ್ಧಾರ್ಥ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಸೈನಾ ನೆಹ್ವಾಲ್ ಕೂಡ ಸಿದ್ಧಾರ್ಥ್ ಟ್ವೀಟ್‌ಗೆ ತಿರುಗೇಟು ನೀಡಿದ್ದಾರೆ.

ಏನಿದು 'ಟ್ವೀಟ್' ಗುದ್ದಾಟ...!
ದೇಶದಲ್ಲಿ ಭಾರಿ ಸದ್ದು ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭದ್ರತಾ ಲೋಪ ಪ್ರಕರಣದ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಪಂಜಾಬ್‌ನಲ್ಲಿ ಜನವರಿ 5 ರಂದು ಪ್ರಧಾನಿ ಮೋದಿಗೆ ಭದ್ರತಾ ಲೋಪ ಆದ ಕುರಿತು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು. "ಒಂದು ದೇಶ ತನ್ನ ಪ್ರಧಾನಿಯ ಭದ್ರತೆಯಲ್ಲಿ ರಾಜಿ ಮಾಡಿಕೊಂಡರೆ, ಆ ದೇಶವನ್ನು ಸುರಕ್ಷಿತ ದೇಶವೆಂದು ಕರೆಯಲು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಮೇಲೆ ನಡೆಸಿದ ಹೇಡಿತನದ ದಾಳಿಯನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ" ಎಂದು ಸೈನಾ ನೆಹ್ವಾಲ್ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: Siddharth: ಚೀಟರ್ಸ್ ಟ್ವೀಟ್ ಬಗ್ಗೆ ನಟ ಸಿದ್ಧಾರ್ಥ್ ಸ್ಪಷ್ಟನೆ: ನಾನು ಜವಾಬ್ದಾರನಲ್ಲ ಅಂದಿದ್ದು ಯಾರಿಗೆ?

ಇದಕ್ಕೆ ಪ್ರತಿಕ್ರಿಯಿಸಿದ ನಟ ಸಿದ್ದಾರ್ಥ್ ಸೂಕ್ಷ್ಮ ಕಾಕ್, ವಿಶ್ವ ಚಾಂಪಿಯನ್, ನಾವು ಈಗಾಗಲೇ ರಕ್ಷಕರನ್ನು ಹೊಂದಿದ್ದೇವೆ. ದೇವರಿಗೆ ಧನ್ಯವಾದಗಳು. ಶೇಮ್ ಆನ್ ಯು ರಿಹಾನ್ನ ಎಂಬ ಹ್ಯಾಷ್ ಟ್ಯಾಗ್ ಬಳಸಿ ಸೈನಾಗೆ ತಿರುಗೇಟು ನೀಡಿದ್ದರು. ಈ ಕಾರಣಕ್ಕೆ ಸಿದ್ಧಾರ್ಥ್ ವಿವಾದಕ್ಕೀಡಾಗಿದ್ದಾರೆ.

ಏಟಿಗೆ-ಎದುರೇಟು ನೀಡಿದ ಸೈನಾ ನೆಹ್ವಾಲ್..!
ಸಿದ್ಧಾರ್ಥ್ ಟ್ವೀಟ್ ವಿವಾದ ಸೃಷ್ಟಿಸುತ್ತಿದ್ದಂತೆ, ಸೈನಾ ನೆಹ್ವಾಲ್ ಪ್ರತಿಕ್ರಿಯಿಸಿದ್ದಾರೆ. "ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ. ಅವರನ್ನು ನಾನು ಒಬ್ಬ ನಟನಾಗಿ ಇಷ್ಟ ಪಟ್ಟಿದ್ದೇನೆ. ಆದರೆ ಈ ಹೇಳಿಕೆ ಒಳ್ಳೆಯದಲ್ಲ. ಅವರು ತಮ್ಮ ಅಭಿಪ್ರಾಯಗಳನ್ನು ಉತ್ತಮ ಪದಗಳನ್ನು ಬಳಸಿ ಹೇಳಬಹುದಿತ್ತು." ಎಂದು ಸಿದ್ಧಾರ್ಥ್‌ಗೆ ತಿರುಗೇಟು ನೀಡಿದ್ದಾರೆ.

ಸಿದ್ಧಾರ್ಥ್ ವಿರುದ್ಧ ಮಹಿಳಾ ಆಯೋಗ ಗರಂ
ಸೈನಾ ನೆಹ್ವಾಲ್ ಟ್ವೀಟ್‌ಗೆ ಸಿದ್ದಾರ್ಥ್ ಪ್ರತಿ ಟ್ವೀಟ್ ಮಾಡಿದ್ದರ ಬಗ್ಗೆ ಮಹಿಳಾ ಆಯೋಗ ಅಲ್ಲದೆ ನೆಟ್ಟಿಗರೂ ಕೂಡ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರ್ಥ್ ವಿವಾದಾತ್ಮಕ ಟ್ವೀಟ್ ವಿಚಾರದಲ್ಲಿ ರಾಷ್ಟ್ರಿಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಸಿದ್ದಾರ್ಥ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಹಾರಾಷ್ಟ್ರದ ಡಿಜಿಪಿಗೆ ಪತ್ರ ಬರೆದಿದ್ದಾರೆ. ಟ್ವಿಟ್ಟರ್‌ ಇಂಡಿಯಾಗೂ ಸಿದ್ಧಾರ್ಥ್ ಖಾತೆಯನ್ನು ನಿರ್ಬಂಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಪತ್ರ ಬರೆದಿದೆ.

ಇದನ್ನೂ ಓದಿ: ಸರ್ಜರಿಗೆಂದು ಲಂಡನ್ ಸೇರಿಕೊಂಡ ಕಾಲಿವುಡ್​ ನಟ Siddharth

ಟ್ವೀಟ್ ಬಗ್ಗೆ ಸಿದ್ದಾರ್ಥ್‌ ಸ್ಪಷ್ಟನೆ
ವಿವಾದದ ಬಳಿಕ ಎಚ್ಚೆತ್ತುಕೊಂಡ ಸಿದ್ಧಾರ್ಥ್ " ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ಅವಹೇಳನಕಾರಿಯಾಗಿ ಏನನ್ನೂ ಹೇಳಿಲ್ಲವೆಂದು" ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಾಕ್ ಅಂಡ್ ಬುಲ್‌ಗೆ ಯಾವುದೇ ಬೇರೆ ಅರ್ಥ ಕೊಡಬೇಡಿ ಎಂದಿದ್ದಾರೆ.

ನಟಿ ಖುಷ್ಬೂ ಪ್ರತಿಕ್ರಿಯೆ
ಸಿದ್ಧಾರ್ಥ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ನಟಿ ಖುಷ್ಬೂ ಸಿದ್ ನೀ ನನಗೆ ಒಳ್ಳೆ ಫ್ರೆಂಡ್. ನಿನ್ನಿಂದ ಇದನ್ನು ನೀರಿಕ್ಷಿಸಿರಲಿಲ್ಲ. ಮತ್ತೊಮ್ಮೆ ಈ ತಪ್ಪನ್ನು ಮಾಡ್ಬೇಡ ಎಂದು ಸಿದ್ದಾರ್ಥ್‌ಗೆ ಪ್ರತಿಕ್ರಿಯಿಸಿದ್ದಾರೆ.
Published by:vanithasanjevani vanithasanjevani
First published: