ಕೆಜಿಎಫ್​‘ ಹಾಡಿನಲ್ಲಿ ಹಿಂದಿ ಹೇರಿಕೆ!; ಟ್ವಿಟ್ಟರ್​ನಲ್ಲಿ ಭುಗಿಲೆದ್ದ ಆಕ್ರೋಶ

ನಿನ್ನೆ ಬಿಡುಗಡೆ ಆದ ಕೆಜಿಎಫ್​ ಚಿತ್ರದ ಹಾಡಿನಲ್ಲಿ ಹಿಂದಿ ಶಬ್ದಗಳ ಬಳಕೆ ಮಾಡಲಾಗಿದೆ. ಇದು ಕೆಲ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಾಡಿನಲ್ಲಿ ಹಿಂದಿ ಶಬ್ದ ಬಳಕೆ ಮಾಡಿರುವುದನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ.

Rajesh Duggumane | news18
Updated:December 5, 2018, 10:28 AM IST
ಕೆಜಿಎಫ್​‘ ಹಾಡಿನಲ್ಲಿ ಹಿಂದಿ ಹೇರಿಕೆ!; ಟ್ವಿಟ್ಟರ್​ನಲ್ಲಿ ಭುಗಿಲೆದ್ದ ಆಕ್ರೋಶ
ಕೆಜಿಎಫ್​ ಚಿತ್ರದಲ್ಲಿನ ಯಶ್​ ಲುಕ್​
Rajesh Duggumane | news18
Updated: December 5, 2018, 10:28 AM IST
'ರಾಕಿಂಗ್​ ಸ್ಟಾರ್​' ಯಶ್​ ನಟನೆಯ ಬಹುನಿರೀಕ್ಷಿತ ‘ಕೆಜಿಎಫ್’ ಚಿತ್ರ ಇದೇ ತಿಂಗಳು 21ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಟ್ರೇಲರ್​ ರಿಲೀಸ್​ ಮಾಡುವ ಮೂಲಕ ಸಿನಿಮಾ ನಿರೀಕ್ಷೆಗೆ ಮೈಲೇಜ್​ ನೀಡಿದ್ದರು ನಿರ್ದೇಶಕರು. ಈಗ ‘ಕೆಜಿಎಫ್’ ತಂಡ ‘ಸಲಾಮ್​ ರಾಕಿ ಭಾಯ್​’ ಹೆಸರಿನ ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಅಪಸ್ವರ ಕೂಡ ಕೇಳಿ ಬಂದಿದೆ.

ನಿನ್ನೆ ಬಿಡುಗಡೆ ಆದ ಹಾಡಿನಲ್ಲಿ ಹಿಂದಿ ಶಬ್ದಗಳ ಬಳಕೆ ಮಾಡಲಾಗಿದೆ. ಇದು ಕೆಲ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಹಿಂದಿ ಹೇರಿಕೆ ವಿರುದ್ಧ ಅನೇಕರು ಧ್ವನಿ ಎತ್ತಿದ್ದರು. ಈಗ ಕನ್ನಡದ ಚಿತ್ರದಲ್ಲೇ ಹಿಂದಿ ಪದಗಳನ್ನು ಬಳಕೆ ಮಾಡಿರುವುದು ಮತ್ತಷ್ಟು ವಿವಾದ ಸೃಷ್ಟಿಸಿದೆ. ‘ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ವಿರೋಧ ಕೇಳಿ ಬರುತ್ತಿದೆ. ಇದೇ ನಾಡಿನ ಮಂದಿ ಬೆಂಗಳೂರಿಗೆ ಬಂದು ಈ ಹೋರಾಟವನ್ನು ಮಣ್ಣುಪಾಲು ಮಾಡುತ್ತಿದ್ದಾರೆ’ ಎಂದು ಕೆಲವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಕೆ.ಜಿ.ಎಫ್​. ಸಿನಿಮಾದ ಲಿರಿಕಲ್​ ವಿಡಿಯೋ ಬಿಡುಗಡೆLoading...

ಹಾಡಿನಲ್ಲಿ ಹಿಂದಿ ಶಬ್ದ ಬಳಕೆ ಮಾಡಿರುವುದನ್ನು ಕೆಲವರು ಸಮರ್ಥಿಸಿಕೊಂಡಿದ್ದಾರೆ. ‘ಮುಂಬೈನಲ್ಲಿ ಚಿತ್ರದ ಕಥೆ ಸಾಗುತ್ತದೆ. ಹಾಗಾಗಿ ಅದರಲ್ಲಿ ಹಿಂದಿ ಶಬ್ದದ ಬಳಕೆ ಮಾಡಲಾಗಿದೆ. ಅದಕ್ಕೆ ವಿವಾದ ಬೇಡ’ ಎಂದು ಹೇಳುವ ಮೂಲಕ ಯಶ್​ ಪರ ಬ್ಯಾಟ್ ಬೀಸಿದ್ದಾರೆ. ಒಟ್ಟಿನಲ್ಲಿ ಬಹು ನಿರೀಕ್ಷಿತ ‘ಕೆಜಿಎಫ್​’ ಈಗ ನಿರೀಕ್ಷೆ ಹುಟ್ಟು ಹಾಕುವುದರ ಜೊತೆಗೆ ವಿವಾದವನ್ನೂ ಮೈಗೆಳೆದುಕೊಂಡಿದೆ. ಇದು ಚಿತ್ರದ ಮೇಲೆ ಋಣಾತ್ಮಕ ಪ್ರಭಾವ ಬೀರುವ ಸಾಧ್ಯತೆಯೂ ಇದೆ.ಯಶ್​ ನಟನೆಯ ‘ಕೆಜಿಎಫ್​’ ಚಿತ್ರಕ್ಕೆ ಪ್ರಶಾಂತ್​ ನೀಲ್​ ನಿರ್ದೇಶನವಿದೆ. ಯಶ್​ಗೆ ಜೊತೆಯಾಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. ಐದು ಭಾಷೆಗಳಲ್ಲಿ ಸಿನಿಮಾ ತೆರೆಕಾಣುತ್ತಿದ್ದು, ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್​ 2 ಕೋಟಿಗೂ ಅಧಿಕಬಾರಿ ವೀಕ್ಷಣೆ ಕಂಡಿತ್ತು.

ಇದನ್ನೂ ಓದಿ:  ನಾನು ಎರಡನೇ ಪ್ರಭಾಸ್ ಅಲ್ಲ, ಮೊದಲ ಯಶ್!; ವೈರಲ್ ಆಯ್ತು ‘ರಾಕಿಂಗ್ ಸ್ಟಾರ್’ ಹೇಳಿಕೆ

First published:December 5, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...