Tiger Shroff: ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಮಾರಿಕೊಂಡು ಬದುಕಿದ್ದೆವು: ಕಷ್ಟದ ದಿನಗಳನ್ನು ನೆನೆದ ನಟ ಟೈಗರ್ ಶ್ರಾಫ್

ನಮ್ಮ ಪೀಠೋಪಕರಣಗಳು ಮತ್ತು ವಸ್ತುಗಳನ್ನು ಒಂದೊಂದಾಗಿ ಹೇಗೆ ಮಾರಾಟ ಮಾಡಲಾಯಿತು ಎಂಬುದು ನನಗೆ ನೆನಪಿದೆ. ನನ್ನ ತಾಯಿಯ ಕಲಾಕೃತಿಗಳು, ದೀಪಗಳು ... ನಾನು ಬೆಳೆದಾಗ ನಮ್ಮ ಸುತ್ತಲೂ ನೋಡಿದ ವಸ್ತುಗಳು ಕಣ್ಮರೆಯಾಗಲಾರಂಭಿಸಿದವು.

ನಟ ಟೈಗರ್​ ಶ್ರಾಫ್​​

ನಟ ಟೈಗರ್​ ಶ್ರಾಫ್​​

 • Share this:

  ನಮ್ಮೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್‌ ದಂಪತಿಗಳಾದ ಜಾಕಿ ಶ್ರಾಫ್ ಮತ್ತು ಆಯೆಷಾ ಶ್ರಾಫ್ ಅವರ ಪುತ್ರ ಟೈಗರ್ ಶ್ರಾಫ್ ನಿಸ್ಸಂದೇಹವಾಗಿ ಚಿತ್ರರಂಗದಲ್ಲಿ ತಮ್ಮ ಭಿನ್ನವಾದ ನಟನೆಯ ಮೂಲಕ ಹೊಸ ಛಾಪು ಮೂಡಿಸಿದ್ದಾರೆ.  ಕೆಲವು ವರ್ಷಗಳ ಹಿಂದೆ  ಆರಂಭದಲ್ಲಿ ಬಾಲಿವುಡ್‌ಗೆ ಬರುವ ಯಾವುದೇ ಯೋಜನೆಯನ್ನು ಹೊಂದಿರದ ಟೈಗರ್, ತೀವ್ರ ಆರ್ಥಿಕ ತೊಂದರೆಗಳನ್ನು ಎದುರಿಸಿದ್ದರಂತೆ. ತನ್ನ ಹೆತ್ತವರು ಹೇಗೆ  ಬೆಂಬಲಿಸಿದರು ಹಾಗೂ ಪ್ರೇರೇಪಿಸಿದರು ಎಂಬುದನ್ನು ಟೈಗರ್ ಶ್ರಾಫ್ ಹಂಚಿಕೊಂಡಿದ್ದಾರೆ. ಸಿನಿ ಜೀವನದ ತಮ್ಮ ಅನುಭವವನ್ನು ತಿಳಿಸಿದ್ದಾರೆ. ಬನ್ನಿ ಈ ಕುರಿತು ಇನ್ನಷ್ಟು ಮಾಹಿತಿ ತಿಳಿಯೋಣ.


  ಟೈಗರ್ ಅವರ ಕುಟುಂಬ ದಿವಾಳಿಯಾದಾಗ ಹಾಗೂ ಅವರ ಮನೆಯು ಮಾರಾಟಕ್ಕೆ ಬಂದಾಗ, ಟೈಗರ್‌ ಅವರಿಗೆ 11 ವರ್ಷ. ಹಳೆಯ ಜಿಕ್ಯೂ ಸಂದರ್ಶನವೊಂದರಲ್ಲಿ  ಟೈಗರ್ ಶ್ರಾಫ್ ಅವರ ತಂದೆಯ ಆರ್ಥಿಕ ಹೊರೆ ಅವರ ಮೇಲೆ ಹೇರಿದ ಒತ್ತಡವನ್ನು ಮಾತ್ರ ಚರ್ಚಿಸಿದ್ದಲ್ಲದೆ, ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಹೇಗೆ ಎದುರಿಸಿತು? ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.


  "ನಮ್ಮ ಪೀಠೋಪಕರಣಗಳು ಮತ್ತು ವಸ್ತುಗಳನ್ನು ಒಂದೊಂದಾಗಿ ಹೇಗೆ ಮಾರಾಟ ಮಾಡಲಾಯಿತು ಎಂಬುದು ನನಗೆ ನೆನಪಿದೆ. ನನ್ನ ತಾಯಿಯ ಕಲಾಕೃತಿಗಳು, ದೀಪಗಳು ... ನಾನು ಬೆಳೆದಾಗ ನಮ್ಮ ಸುತ್ತಲೂ ನೋಡಿದ ವಸ್ತುಗಳು ಕಣ್ಮರೆಯಾಗಲಾರಂಭಿಸಿದವು. ನಂತರ ನನ್ನ ಹಾಸಿಗೆಯನ್ನು ಕೂಡ ಕಳೆದುಕೊಂಡೆ. ನಾನು ನೆಲದ ಮೇಲೆ ಮಲಗಲು ಪ್ರಾರಂಭಿಸಿದೆ. ಇದು ನನ್ನ ಜೀವನದ ಕರಾಳ ದಿನಗಳು ಹಾಗೂ ಈಗಲೂ ನೆನಸಿಕೊಂಡರೆ ನನಗೆ ಕೆಟ್ಟ ಅನುಭವ ಉಂಟಾಗುತ್ತದೆ . ನಾನು ಆ ವಯಸ್ಸಿನಲ್ಲಿ ಕೆಲಸ ಮಾಡಲು ಬಯಸುತ್ತಿದ್ದೆ, ಆದರೆ ಆ ವಯಸ್ಸಿನಲ್ಲಿ ನಾನು ಏನೂ ಮಾಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿತ್ತು”ಎಂದು ನಟ ಸಂದರ್ಶನವೊಂದರಲ್ಲಿ ತಮ್ಮ ಕರಾಳ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ.


  ಫಿಲ್ಮ್ ಪೈರಸಿ ಪ್ರಕರಣದಿಂದಾಗಿ, ವಿತರಕರು ಹಿಂದೆ ಸರಿದರು, ಆದರೆ ಜಾಕಿ ಮುಂದೆ ಬಂದರು ಮತ್ತು ಅದರ ವಿತರಣೆಯನ್ನು ಖಚಿತಪಡಿಸಿದರು. ಆದರೆ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗಲಿಲ್ಲ. ಇದರಿಂದ ಶ್ರಾಫ್ಸ್ ತಮ್ಮ ನಾಲ್ಕು ಬೆಡ್ ರೂಮ್‌ನ ಬಾಂದ್ರಾ ಅಪಾರ್ಟ್‌ಮೆಂಟ್ ಅನ್ನು ಮಾರಿ ಸಣ್ಣ ಅಪಾರ್ಟ್‌ಮೆಂಟ್‌ಗೆ ಹೋಗಬೇಕಾಯಿತು ಎಂದು ಟೈಗರ್‌ ತಮ್ಮ ಕರಾಳ ದಿನಗಳನ್ನು ಕುರಿತು ಹೇಳಿಕೊಂಡಿದ್ದಾರೆ. ಆ ವರ್ಷಗಳ ಅನಿಶ್ಚಿತತೆಯು ಪ್ರಬಲ ಪ್ರೇರಣೆಯಾಗಿದೆ ಎಂದು ಟೈಗರ್ ಶ್ರಾಫ್ ಹಂಚಿಕೊಂಡರು. ಅವರು ಚಿತ್ರರಂಗಕ್ಕೆ ಸೇರಿದ ನಂತರ, ತಮ್ಮ ಮನೆಯನ್ನು ಮರಳಿ ಖರೀದಿಸುವುದಾಗಿ ತಾಯಿಗೆ ಭರವಸೆ ನೀಡಿದ ಟೈಗರ್‌ ಅವರು 2014 ರಲ್ಲಿ ಹೆರೋಪಂತಿ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. 2017 ರ ಹೊತ್ತಿಗೆ ಅವರು ತಮ್ಮ ಅಮ್ಮನಿಗೆ ನೀಡಿದ ಭರವಸೆಯನ್ನು ಪೂರ್ಣಗೊಳಿಸಿದ್ದಾರೆ. ಇಂದು ಬಾಲಿವುಡ್‌ನಲ್ಲಿ ದೊಡ್ಡ ನಟನಾಗಿ ಮಿಂಚುತ್ತಿದ್ದಾರೆ.


  “ನನ್ನ ಮಕ್ಕಳ ಬಗ್ಗೆ ನನಗೆ ಹೆಮ್ಮೆ ಇದೆ. ಅವರು ಮನೆಯನ್ನು ಮರಳಿ ಪಡೆಯಲು ಸಾಕಷ್ಟು ಪ್ರಬಲರಾಗಿದ್ದಾರೆ; ನನ್ನ ಹೆಂಡತಿ ಅದನ್ನು ಮರಳಿ ಪಡೆಯಲು ಬಯಸುವುದಿಲ್ಲ. ಅವಳು, ‘ಹೋದದ್ದು ಹೋಗಿದೆ’ ಎಂದು ಹೇಳುತ್ತಾಳೆ. ನಮಗೆ ಮನೆಯನ್ನು ಮರುಳಿ ಪಡೆಯಲು ಇಷ್ಟವಿಲ್ಲ. ಆದರೆ ನನ್ನ ಮಗನ ಆಲೋಚನೆ ಚೆನ್ನಾಗಿತ್ತು, ಅವನ ಆಲೋಚನೆ ಸುಂದರವಾಗಿತ್ತು, ಅವನು ತನ್ನ ತಾಯಿ ಮತ್ತು ಅವನ ಕುಟುಂಬಕ್ಕೆ ಮನೆ ಮರಳಿ ಪಡೆಯಲು ಬಯಸಿದ ಎಂದು ಟೈಗರ್‌ ಕುರಿತು ಜಾಕಿ ಇತ್ತೀಚಿನ ಸಂದರ್ಶನವೊಂದರಲ್ಲಿ ಹೆಳಿದರು. ಜಾಕಿ ದಂಪತಿಗಳು ನಿರಾಕರಿಸಿದ ಕಾರಣ ಅವರು ತಮ್ಮ ಪ್ರಸ್ತುತ ನಿವಾಸದಲ್ಲಿ ಅಂದರೆ ಅಮೀರ್ ಖಾನ್ ಅವರು ನೆಲೆಸಿರುವ ಕಟ್ಟಡದಲ್ಲಿ ನೆಲೆಸಿದ್ದಾರೆ.

  First published: