ಬೇಸಿಗೆ ರಜೆಯಲ್ಲಿ (Summer Vacation) ಏನು ಮಾಡುವುದೆಂಬ ಚಿಂತೆಯಲ್ಲಿದ್ದೀರಾ? ಬಿಸಿಲಿನಿಂದಾಗಿ (Sunny Day) ಎಲ್ಲೂ ಹೊರಗಡೆ ಸುತ್ತಾಡೋಕಾಗ್ತಿಲ್ವಾ? ಮನೋರಂಜನೆಗಾಗಿ ಕಾಯ್ತಿದ್ದರೆ ನಿಮಗೆ ಇಲ್ಲೊಂದು ಗುಡ್ನ್ಯೂಸ್ ಇದೆ. ಈ ಸಮ್ಮರ್ ವೆಕೇಷನ್ನಲ್ಲಿ ಸೂಪರ್ ಸಿನಿಮಾಗಳು, ವೆಬ್ ಸಿರೀಸ್ಗಳನ್ನು (Web Series) ನೋಡಿ ನೀವು ಎಂಜಾಯ್ ಮಾಡಬಹುದು. ಅದೂ ಮನೆಯಲ್ಲಿಯೇ ಕುಳಿತು ಭರ್ಜರಿ ಮೂವಿ ನೋಡಬಹುದು. ಹೌದು, ಈ ತಿಂಗಳು ಹಾಗೂ ಮುಂದಿನ ತಿಂಗಳೂ ಸೇರಿ ಬರೋಬ್ಬರಿ 38 ಶೋ, ಮೂವಿ, ಸಿರೀಸ್ಗಳು ಒಟಿಟಿಯಲ್ಲಿ (OTT) ರಿಲೀಸ್ ಆಗುತ್ತಿವೆ. ಅದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ನೆಟ್‌ಫ್ಲಿಕ್ಸ್‌ನಲ್ಲಿ ಏನೇನಿದೆ?
ನೆಟ್ ಫ್ಲಿಕ್ಸ್ನಲ್ಲಿ ಜಾನ್ ಮುಲಾನೆ: ಬೇಬಿ ಏ.25, 'ದಿ ಲೈಟ್ ವುಯ್ ಕ್ಯಾರಿ': ಮಿಚೆಲ್ ಒಬಾಮಾ ಆಂಡ್ ಓಪ್ರಾ ವಿನ್‌ಫ್ರೆ(ಏಪ್ರಿಲ್ 25), 'ಲವ್ ಆಫ್ಟರ್ ಮ್ಯೂಸಿಕ್' ಏ.26, 'ದಿ ಗುಡ್ ಬ್ಯಾಡ್ ಮದರ್' ಏ.26, 'ಕಿಸ್ ಕಿಸ್!' ಏ.26ರಂದು ರಿಲೀಸ್ ಆಗಿದೆ. 'ದಿ ಮ್ಯಾಚ್ ಮೇಕರ್' ಏ.27ರಂದು, 'ದಸರಾ' ಏ.27, 'ದಿ ನರ್ಸ್'ಏ.27, 'ಸ್ವೀಟ್ ಟೂತ್' ಸೀಸನ್- 2 ಏ.27ರಂದು ರಿಲೀಸ್ ಆಗಿದೆ. ಏಕೇ ಏ.28, ಬಿಫೋರ್ ಲೈಫ್ ಆಫ್ಟರ್ ಡೆತ್ ಏ.28, ಕಿಂಗ್ ಆಫ್ ಕಲೆಕ್ಟಬಲ್ಸ್: ದಿ ಗೋಲ್ಡನ್ ಟಚ್ ಏ,28, ಯೋಯೋ ಹನಿಸಿಂಗ್ ಏ.28, ಮ್ಯೂಯಿ: ದಿ ಕರ್ಸ್ ರಿಟರ್ನ್ಸ್ ಏ.30ರಂದು ರಿಲೀಸ್ ಆಗುತ್ತಿದೆ.
ಅಮೆಜಾನ್ ಪ್ರೈಮ್‌ನಲ್ಲಿ ಭರ್ಜರಿ ಸಿನಿಮಾಗಳು
ಮನೋರಂಜನೆಗಾಗಿ ಅಮೆಜಾನ್ ಪ್ರೈಮ್ ವಿಡಿಯೋ ಬಳಸುತ್ತಿರುವವರು ನೀವಾಗಿದ್ದರೆ ಇಲ್ಲಿಯೂ ಭರ್ಜರಿ ಸಿನಿಮಾಗಳನ್ನು ಬಿಡಲಾಗಿದೆ. 'ಪತ್ತು ತಲ' ಏಪ್ರಿಲ್ 27ರಂದು ಒಟಿಟಿಯಲ್ಲಿ ರಿಲೀಸ್ ಆಗಿದೆ. ಇದು ತಮಿಳು ನಟ ಸಿಂಬು ನಟಿಸಿರುವ ಕನ್ನಡದ 'ಮಫ್ತಿ' ಸಿನಿಮಾದ ರೀಮೆಕ್. ಇತ್ತೀಚೆಗೆ ತೆರೆಕಂಡ ಈ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು. 'ಸಿಟಾಡೆಲ್' ಏಪ್ರಿಲ್ 28ರಂದು ರಿಲೀಸ್ ಆಗುತ್ತದೆ. ಇದು ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ಅಭಿನಯಿಸಿದ ಹಾಲಿವುಡ್ ವೆಬ್ ಶೋ. ಮೊದಲ ಎಪಿಸೋಡ್ ಏಪ್ರಿಲ್ 28ಕ್ಕೆ ಸ್ಟ್ರೀಮ್ ಆಗಲಿದೆ.
ಡಿಸ್ನಿ ಪ್ಲಸ್ ಹಾಟ್ಸ್ಟಾರ್
ಡಿಸ್ನಿ ಪ್ಲಸ್ ಹಾಟ್‌ಸ್ಟರ್ 'ಸೇವ್ ದಿ ಟೈಗರ್ಸ್' ಏ.27, 'ಡಾಕ್ಟರ್ ರೊಮ್ಯಾಂಟಿಕ್' ಸೀಸನ್- 3 ಏ.28, 'ವೇದ್' ಏ.28, ಪೀಟರ್ ಪಾನ್ ಆಂಡ್ ವೆಂಡಿ ಏ.28ರಂದು ರಿಲೀಸ್ ಆಗುತ್ತಿದೆ.
ಯೂಟರ್ನ್
ಜೀ 5ನಲ್ಲಿ ಯೂಟರ್ನ್ ಏಪ್ರಿಲ್ 28ರಂದು ರಿಲೀಸ್ ಆಗಲಿದೆ. ಪವನ್ ಕುಮಾರ್ ನಿರ್ದೇಶನದ 'ಯೂಟರ್ನ್' ಹಿಂದಿ ರೀಮೆಕ್ ಇದು. ವ್ಯವಸ್ಥ ಎಂಬ ಹೆಸರಿನ ತೆಲುಗು ವೆಬ್ ಸೀರಿಸ್ ಕೂಡಾ ರಿಲೀಸ್ ಆಗುತ್ತದೆ.
ಇದನ್ನೂ ಓದಿ: Hoysala: ಓಟಿಟಿಗೆ ಬಂತು ಹೊಯ್ಸಳ! ಇಲ್ಲಿದೆ ಡೀಟೆಲ್ಸ್
ಇನ್ನುಳಿದಂತೆ ಸೋನಿ ಲೈವ್ನಲ್ಲಿ ಏಪ್ರಿಲ್ 28ಕ್ಕೆ 'ತುರುಮುಖಮ್' ಹಾಗೂ ಅಹಾ ಪ್ಲಾಟ್‌ಫಾರ್ಮ್‌ನಲ್ಲಿ 'ಜಲ್ಲಿಕಟ್ಟು' ಏಪ್ರಿಲ್ 26ಕ್ಕೆ ಸ್ಟ್ರೀಮಿಂಗ್ ಆಗಲಿದೆ. ನಾನಿ ನಟನೆಯ 'ದಸರಾ' ಸಿನಿಮಾ ಕೂಡ ಇದೇ ವಾರ ಓಟಿಟಿಗೆ ಬರುತ್ತಿದೆ. ಸಿನಿಮಾ ರಿಲೀಸ್ ಆಗಿ 28 ದಿನಕ್ಕೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ಕನ್ನಡದ ಹೊಯ್ಸಳ
ಡಾಲಿ ಧನಂಜಯ್ ಅಭಿನಯದ ಗುರುದೇವ್ ಹೊಯ್ಸಳ ಸಿನಿಮಾ ಇನ್ಮುಂದೆ ಓಟಿಟಿ ಫ್ಲಾಟ್ ಫಾರಂನಲ್ಲೂ ನೀವು ನೋಡಬಹುದು. ರಿಲೀಸ್ ಆಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ ನೊಡಿ ಆಗಲೇ ಗುರುದೇವ್ ಹೊಯ್ಸಳ ಓಟಿಟಿಗೆ ಬಂದಿದೆ. ಗುರುದೇವ್ ಹೊಯ್ಸಳ ಕಳೆದ ತಿಂಗಳು ಮಾರ್ಚ್-30 ರಂದು ತೆರೆ ಕಂಡಿತ್ತು. ಆದರೆ ಇದೀಗ ಏಪ್ರಿಲ್-27 ರಂದು ಸಿನಿಮಾ ಓಟಿಟಿಗೆ ಬಂದಿದೆ. ಅಮೆಜಾನ್ ಪ್ರೈಮ್‌ನಲ್ಲಿ ಗುರುದೇವ್ ಹೊಯ್ಸಳ ಸಿನಿಮಾ ನೋಡಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ