Nayanthara: ನಯನತಾರಾ ಜೋಡಿಗೆ ಬಿಗ್​ ರಿಲೀಫ್, ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ​ ನೆಟ್​ಫ್ಲಿಕ್ಸ್

ಕೆಲ ದಿನಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಇಂದು ತೆರೆಬಿದ್ದಿದೆ. ನಯನತಾರಾ ಮತ್ತು ವಿಘ್ನೇಶ್​ ಶಿವನ್​ ವಿವಾಹದ ದೃಶ್ಯಗಳನ್ನು ಶೀಘ್ರದಲ್ಲೇ ಪ್ರಸಾರ ಮಾಡುವುದಾಗಿ ನೆಟ್​ಫ್ಲಿಕ್ಸ್​ ಸಾಮಾಜಿಕ ಜಾಲತಾಣವಾದ ಟ್ವಿಟರ್​ ನಲ್ಲಿ ಹಂಚಿಕೊಂಡಿದೆ.

ನಯನತಾರಾ ಮತ್ತು ವಿಘ್ನೇಶ್ ಶಿವನ್

ನಯನತಾರಾ ಮತ್ತು ವಿಘ್ನೇಶ್ ಶಿವನ್

  • Share this:
ದಕ್ಷಿಣ ಭಾರತದ ಸ್ಟಾರ್ ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan)​ ಇತ್ತೀಚೆಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್​ 9ರಂದು ಮಹಾಬಲಿಪುರಂನಲ್ಲಿ ಅವರ ಮದುವೆ ಅದ್ಧೂರಿಯಾಗಿ ನಡೆಯಿತು. ಆದರೆ ಇವರ ವಿವಾಹ ವಾದ ಬಳಿಕ ಸಾಲು ಸಾಲು ಸಮಸ್ಯೆಗಳನ್ನು ಈ ಜೋಡಿ ಎದುರಿಸುತ್ತಿದ್ದಾರೆ. ಹೌದು, ಮದುವೆಯ ಮರುದಿನ ಈ ಸ್ಟಾರ್​ ದಂಪತಿಗಳು ತಿರುಪತಿಗೆ ತೆರಳಿದ್ದರು. ಈ ವೇಳೆಯೂ ದೇವಾಲಯದ ಆವರಣದಲ್ಲಿ ಚಪ್ಪಲಿ ಹಾಕಿಕೊಂಡು ಹೋಗಿದ್ದರು ಎಂದು ವಿವಾದ ಉಂಟಾಗಿತ್ತು. ಇದಾದ ಬಳಿಕ ಇದೀಗ ಕೆಲ ದಿನಗಳ ಹಿಂದೆ ನಯನತಾರಾ ಮದುವೆಯ ವಿಡಿಯೋವನ್ನು ನೆಟ್​ಫ್ಲಿಕ್ಸ್ (Netflix) ಖರೀದಿಸಿತ್ತು. ಆದರೆ ವಿಘ್ನೇಶ್ ಶಿವನ್ ಅವರು ಮದುವೆಯ ಫೋಟೋಗಳನ್ನು ಹಂಚಿಕೊಂಡ ಹಿನ್ನಲೆ ನೆಟ್​ಫ್ಲಿಕ್ಸ್ ಮದುವೆಯ ವಿಡಿಯೋದ ಪ್ರಸಾರ ಮಾಡುವುದಿಲ್ಲವೆಂದು ಹೇಳಿತ್ತು ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದೀಗ ಅಧಿಕೃತವಾಗಿ ನೆಟ್​ಫ್ಲಿಕ್ಸ್ ಮದುವೆಯ ವಿಡಿಯೋವನ್ನು ಪ್ರಸಾರ ಮಾಡುವುದಾಗಿ ತಿಳಿಸಿದೆ.

ನಯನತಾರಾ ಮದುವೆ ವಿಡಿಯೋ ನೆಟ್​ಫ್ಲಿಕ್ಸ್​ನಲ್ಲಿ:

ಹೌದು, ಕೆಲ ದಿನಗಳಿಂದ ಕೇಳಿಬರುತ್ತಿದ್ದ ಊಹಾಪೋಹಗಳಿಗೆ ಇಂದು ತೆರೆಬಿದ್ದಿದೆ. ನಯನತಾರಾ ಮತ್ತು ವಿಘ್ನೇಶ್​ ಶಿವನ್​ ವಿವಾಹದ ಅದ್ಭುತ ದೃಶ್ಯಗಳನ್ನು ಶೀಘ್ರದಲ್ಲೇ ಪ್ರಸಾರ ಮಾಡುವುದಾಗಿ ನೆಟ್​ಫ್ಲಿಕ್ಸ್​ ಸಾಮಾಜಿಕ ಜಾಲತಾಣವಾದ ಟ್ವಿಟರ್​ ನಲ್ಲಿ ಹಂಚಿಕೊಂಡಿದೆ. ಈ ಟ್ವಿಟ್​ ನೋಡಿದ ನಯನತಾರಾ ಅಭಿಮಾನಿಗಳು ಸಖತ್ ಖುಷಿ ಆಗಿದ್ದು, ವಿವಾಹದ ವಿಡಿಯೋ ಎಂದು ರಿಲೀಸ್ ಆಗಲಿದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಈ ಕುರಿತು ಬರೆದುಕೊಂಡಿರುವ ನೆಟ್​ಫ್ಲಿಕ್ಸ್, ‘ನಯನತಾರಾ ಹಾಗೂ ವಿಘ್ನೇಶ್​ ಶಿವನ್ ಅವರ ವಿವಾಹದ ವಿಡಿಯೋ ನೆಟ್​ಫ್ಲಿಕ್ಸ್ ನಲ್ಲಿ ಪ್ರಸಾರವಾಗಲಿದೆ. ಇದೊಂದು ಅದ್ಭುತ ಚಿತ್ರಣವಾಗಿರಲಿದೆ. ಶೀಘ್ರದಲ್ಲಿಯೇ ನಿಮ್ಮ ಎದುರಿಗೆ ಈ ಅದ್ಭುತ ದೃಶ್ಯ ಬರಲಿದೆ‘ ಎಂದು ಬರೆದುಕೊಂಡಿದ್ದಾರೆ.





ಇನ್ನು, ನಯನತಾರಾ ವಿವಾಹಕ್ಕೆ ಶಾರುಖ್​ ಖಾನ್​, ರಜನಿಕಾಂತ್, ಸೂರ್ಯಾ, ವಿಜಯ್ ಸೇತುಪತಿ ಸೇರಿದಂತೆ ಅನೇಕ ಸಿನಿ ಗಣ್ಯರು ಸಾಕ್ಷಿಯಾಗಿದ್ದರು. ಹೀಗಾಗಿ ಈ ಅದ್ಧೂರಿ ಮದುವೆಯ ತುಣುಕುಗಳು ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿದೆ. ಮದುವೆ ಕುರಿತು ನಯನತಾರಾ, ವಿಘ್ನೇಶ್​ ಏನು ಹೇಳಿದ್ದಾರೆ? ಒಟ್ಟಾರೆ ಮದುವೆ ಹೇಗಿತ್ತು? ಅತಿಥಿಗಳ ಸಂಗಮ ಹೇಗಿತ್ತು? ಎನ್ನುವ ಕುತೂಹಲಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ತೆರೆಬಿಳಲಿದೆ.

ಇದನ್ನೂ ಓದಿ: Miss India Sini shetty: ಸಿನಿ ಶೆಟ್ಟಿ ಮಿಸ್​ ಇಂಡಿಯಾ ಆಗಲು ಇವರೇ ಕಾರಣವಂತೆ, ರಹಸ್ಯ ಬಿಚ್ಚಿಟ್ಟ ಸುಂದರಿ

ತಪ್ಪಾಗಿದೆ ಕ್ಷಮಿಸಿ ಎಂದಿದ್ದ ವಿಘ್ನೇಶ್​ :

ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗಿದ್ದ ಜೋಡಿ ಸಾಂಪ್ರದಾಯಿಕ ಉಡುಪಿನಲ್ಲೇ ದೇವಸ್ಥಾನ ಆವರಣವನ್ನು ಪ್ರವೇಶ ಮಾಡಿದ್ದರು. ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಆದರೆ ನಯನತಾರಾ ಚಪ್ಪಲಿ ಧರಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಪತಿ ವಿಘ್ನೇಶ್ ಬರಿಗಾಲಲ್ಲಿ ನಡೆದುಕೊಂಡು ಬಂದರೆ, ನಯನತಾರಾ ಮಾತ್ರ ಚಪ್ಪಲಿ ಧರಿಸಿದ್ದರು ಎಂದು ಅಲ್ಲಿದ್ದ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೆ ಈಗ ವಿಘ್ನೇಶ್​ ಶಿವನ್ ಅರಿವಿಗೆ ಬಾರದೇ ಈ ತಪ್ಪು ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: Nayanthara: ನಯನತಾರಾಗೆ ಬಿಗ್​ ಶಾಕ್​, ಮದುವೆ ಡೀಲ್​ ಕ್ಯಾನ್ಸಲ್​!

ತಿರುಮಲದ ಮೇಲೆ ತಮ್ಮಲ್ಲಿ ಅಪಾರ ಭಕ್ತಿ ಮತ್ತು ನಂಬಿಕೆ ಇದೆ. ಮದುವೆಯ ನಂತರ ಸ್ವಾಮಿಯ ಆಶೀರ್ವಾದಕ್ಕಾಗಿ ಇಲ್ಲಿಗೆ ಬಂದಿದ್ದೆವು. ದೇವಸ್ಥಾನದ ಹೊರಗೆ ಭಕ್ತಾದಿಗಳ ದಂಡೇ ನೆರೆದಿದ್ದರಿಂದ ಎರಡನೇ ಬಾರಿಗೆ ಫೋಟೋ ತೆಗೆಯಲು ಬಂದಿದ್ದೆವು. ಈ ವೇಳೆ ಈ ಅಚಾತುರ್ಯ ಜರುಗಿದೆ. ತಪ್ಪಿಗಾಗಿ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.
Published by:shrikrishna bhat
First published: