ಬೆಳ್ಳಿ ತೆರೆಗೆ ಬರಲಿದೆ ಒಶೋ ಜೀವನ: ಬಾಲಿವುಡ್​ನ ಯಾವ ಖಾನ್​ ಗುರುವಾಗಲಿದ್ದಾರೆ ಗೊತ್ತಾ?

news18
Updated:August 30, 2018, 5:50 PM IST
ಬೆಳ್ಳಿ ತೆರೆಗೆ ಬರಲಿದೆ ಒಶೋ ಜೀವನ: ಬಾಲಿವುಡ್​ನ ಯಾವ ಖಾನ್​ ಗುರುವಾಗಲಿದ್ದಾರೆ ಗೊತ್ತಾ?
news18
Updated: August 30, 2018, 5:50 PM IST
ನ್ಯೂಸ್​ 18 ಕನ್ನಡ

ಇತ್ತೀಚೆಗೆ ಬಾಲಿವುಡ್‍ನಲ್ಲಿ ಬಯೋಪಿಕ್ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಇದೇ ಪಟ್ಟಿಗೆ ಒಶೋ ಜೀವನಾಧರಿತ ಚಿತ್ರ ಕೂಡ ಸೇರ್ಪಡೆಯಾಗಲಿದ್ದು, ನಟ ನಟಿಯರ ಆಯ್ಕೆ ಕೂಡ ಅಂತಿಮವಾಗಿದೆ.

ಒಶೋ ಎಂದೇ ಪ್ರಖ್ಯಾತಿ ಪಡೆದಿರೋ ದೇವಮಾನವ ಭಗವಾನ್ ರಜನೀಶ್ ಅವರ ಜೀವನಾಧರಿತ ಚಿತ್ರ ತಯಾರಗಲು ಸಜ್ಜಾಗಿದೆ. ಈ ಹಿಂದೆಯೇ ಈ ಸುದ್ದಿ ಪ್ರಕಟವಾಗಿತ್ತಾದರೂ,ಯಾವುದೇ ಅಧಿಕೃತ ಮಾಹಿತಿ ಹೊರಬಂದಿರಲಿಲ್ಲ.

ಇದೀಗ ಈ ಚಿತ್ರ ತಯಾರಾಗೋದು ಖಚಿತವಾಗಿದ್ದು, ತಾರಗಣ ಕೂಡ ಅಂತಿಮವಾಗಿದೆ. ನಟ ಅಮೀರ್ ಖನ್ ಒಶೋ ಪಾತ್ರವನ್ನ ನಿರ್ವಹಿಸಲಿದ್ದು, ಆಲಿಯಾ ಭಟ್ ಒಶೋ ಅವರ ಆಪ್ತ ಕಾರ್ಯದರ್ಶಿ ಮಾ ಆನಂದ ಲೀಲಾ ಅವರ ಪಾತ್ರ ನಿರ್ವಹಿಸಲಿದ್ದಾರಂತೆ.

ಸದ್ಯ ಚಿತ್ರಕ್ಕೆ ಟೈಟಲ್ ಇನ್ನು ಅಂತಿಮವಾಗಿಲ್ಲ. ಇನ್ನೂ ಸ್ಕ್ರಿಪ್ಟ್ ಹಂತದಲ್ಲಿ ಕೆಲಸ ನಡೆಯುತ್ತಿದ್ದು, ಆದಷ್ಟು ಬೇಗ ಚಿತ್ರೀಕರಣ ಕೂಡ ಆರಂಭವಾಗಲಿದೆ. ಇನ್ನು ಚಿತ್ರವನ್ನ ಶಕುನ್ ಬ್ರಾತ್ರಾ ನಿರ್ದೇಶನ ಮಾಡಲಿದ್ದಾರೆ.

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ