Oscars 2023: ಗುಜರಾತಿ ಸಿನಿಮಾ 'ಛೆಲ್ಲೊ ಶೋ' ಆಸ್ಕರ್ 2023ಕ್ಕೆ ಭಾರತದ ಅಧಿಕೃತ ಪ್ರವೇಶ

ಗುಜರಾತಿ ಚಲನಚಿತ್ರ ಛೆಲ್ಲೊ ಶೋ ಸಿನಿಮಾವು 95 ನೇ ಅಕಾಡೆಮಿ ಪ್ರಶಸ್ತಿಯಾದ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶ ಎಂದೆನಿಸಿದೆ ಎಂದು ಭಾರತದ ಫಿಲ್ಮ್ ಫೆಡರೇಶನ್ ಟ್ವೀಟ್‌ನಲ್ಲಿ ತಿಳಿಸಿದೆ. ನಾಮನಿರ್ದೇಶನ ಪಟ್ಟಿಯಲ್ಲಿ ಚಿತ್ರವು ಸ್ಥಾನ ಪಡೆದರೆ ಮಾತ್ರವೇ ಪ್ರಶಸ್ತಿಗೆ ಅರ್ಹವಾಗುತ್ತದೆ ಎಂದು ಭಾರತದ ಫಿಲ್ಮ್ ಫೆಡರೇಶನ್ ತಿಳಿಸಿದೆ.

ಛೆಲ್ಲೊ ಶೋ

ಛೆಲ್ಲೊ ಶೋ

  • Share this:
2023 ರ ಅಕಾಡೆಮಿ ಪ್ರಶಸ್ತಿಗಳಿಗೆ, ಗುಜರಾತಿ ಚಲನಚಿತ್ರ (Gujarati film) ಛೆಲ್ಲೊ ಶೋ (Chhello Show) ಭಾರತದ ಅಧಿಕೃತ ಪ್ರವೇಶವಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ. ಗುಜರಾತಿ ಚಲನಚಿತ್ರ ಛೆಲ್ಲೊ ಶೋ ಸಿನಿಮಾವು 95 ನೇ ಅಕಾಡೆಮಿ ಪ್ರಶಸ್ತಿಯಾದ ಆಸ್ಕರ್‌ಗೆ (Oscars Award) ಭಾರತದ ಅಧಿಕೃತ ಪ್ರವೇಶ ಎಂದೆನಿಸಿದೆ ಎಂದು ಭಾರತದ ಫಿಲ್ಮ್ ಫೆಡರೇಶನ್ (Film Federation of India) ಟ್ವೀಟ್‌ನಲ್ಲಿ ತಿಳಿಸಿದೆ. ನಾಮನಿರ್ದೇಶನ ಪಟ್ಟಿಯಲ್ಲಿ ಚಿತ್ರವು ಸ್ಥಾನ ಪಡೆದರೆ ಮಾತ್ರವೇ ಪ್ರಶಸ್ತಿಗೆ (Award) ಅರ್ಹವಾಗುತ್ತದೆ ಎಂದು ಭಾರತದ ಫಿಲ್ಮ್ ಫೆಡರೇಶನ್ ತಿಳಿಸಿದೆ.

ಟ್ವೀಟ್ ಮಾಡಿರುವ ನಿರ್ದೇಶಕ ಪಾನ್ ನಳಿನ್
"ಓಹ್ ದೇವರೇ ಈ ರಾತ್ರಿ ಅತ್ಯುತ್ತಮ ರಾತ್ರಿ ಎಂದೆನಿಸಲಿದೆ! ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾಕ್ಕೆ ಕೃತಜ್ಞತೆಗಳು ಮತ್ತು FFI (ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ) ತೀರ್ಪುಗಾರರ ಸದಸ್ಯರಿಗೆ ಧನ್ಯವಾದಗಳು. ಛೆಲ್ಲೊ ಶೋನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು. ಇದೀಗ ನಾನು ಮತ್ತೊಮ್ಮೆ ಹುಟ್ಟಿಬಂದಿರುವೆ ಹಾಗೂ ನಮ್ಮನ್ನು ಮನರಂಜಿಸುವ, ಸ್ಫೂರ್ತಿ ಮತ್ತು ಜ್ಞಾನವನ್ನು ನೀಡುವ ಸಿನಿಮಾದ ಮೇಲೆ ನಂಬಿಕೆ ಇರಿಸಿರುವೆ" ಎಂದು ನಿರ್ದೇಶಕ ಪಾನ್ ಟ್ವೀಟ್ ಮಾಡಿದ್ದು ಆಸ್ಕರ್ ಹ್ಯಾಶ್‌ಟ್ಯಾಗ್ ಅನ್ನು ಟ್ವೀಟ್‌ಗೆ ಸೇರಿಸಿದ್ದಾರೆ.



ಛೆಲ್ಲೊ ಶೋ ಅನ್ನು ಇಂಗ್ಲಿಷ್‌ನಲ್ಲಿ ಲಾಸ್ಟ್ ಫಿಲ್ಮ್ ಶೋ ಎಂದು ಹೆಸರಿಸಲಾಗಿದೆ, ಇದನ್ನು ಪಾನ್ ನಳಿನ್ ನಿರ್ದೇಶಿಸಿದ್ದು ಚಿತ್ರದಲ್ಲಿ ಭವಿನ್ ರಬರಿ, ಭವೇಶ್ ಶ್ರೀಮಾಲಿ, ರಿಚಾ ಮೀನಾ, ದಿಪೇನ್ ರಾವಲ್ ಮತ್ತು ಪರೇಶ್ ಮೆಹ್ತಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ
95 ನೇ ಆಸ್ಕರ್‌ಗಳು ಮಾರ್ಚ್ 12, 2023 ರಂದು ಲಾಸ್ ಏಂಜಲೀಸ್‌ನ ಡಾಲಿ ಥಿಯೇಟರ್‌ನಲ್ಲಿ ನಡೆಯಲಿದೆ. 2023 ರ ಅಕಾಡೆಮಿ ಪ್ರಶಸ್ತಿಗಳಿಗೆ ಸಾಮಾನ್ಯ ಪ್ರವೇಶ ವಿಭಾಗಗಳಿಗೆ ಸಲ್ಲಿಕೆ ಗಡುವು ನವೆಂಬರ್ 15 ಆಗಿದೆ. ಡಿಸೆಂಬರ್ 12 ರಂದು ಪ್ರಾಥಮಿಕ ಮತದಾನ ಪ್ರಾರಂಭವಾಗುತ್ತದೆ ಮತ್ತು ಶಾರ್ಟ್‌ಲಿಸ್ಟ್‌ಗಳನ್ನು ಡಿಸೆಂಬರ್ 21 ರಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: Aiyyo Shraddha: ಬಾಲಿವುಡ್​ಗೆ ಎಂಟ್ರಿ ಕೊಟ್ಟ ಮಂಗಳೂರು ಚೆಲುವೆ, ಸ್ಟಾರ್ ನಟನ ಜೊತೆ ಅಯ್ಯೋ ಶ್ರದ್ಧಾ!

ಕಳೆದ ಕೆಲವು ವರ್ಷಗಳಿಂದ ಆಸ್ಕರ್ ಪ್ರವೇಶಗಳೊಂದಿಗೆ ಭಾರತ ಇತಿಹಾಸ ಸೃಷ್ಟಿಸಿದೆ - ಕೂಜಂಗಲ್, ಜಲ್ಲಿಕಟ್ಟು, ಗಲ್ಲಿ ಬಾಯ್, ವಿಲೇಜ್ ರಾಕ್‌ಸ್ಟಾರ್ಸ್, ನ್ಯೂಟನ್, ವಿಸರಣಾನಿ, ಈ ಎಲ್ಲಾ ಚಿತ್ರಗಳು ಆಸ್ಕರ್ ಶಾರ್ಟ್‌ಲಿಸ್ಟ್‌ಗೆ ಅರ್ಹಗೊಳ್ಳಲು ವಿಫಲವಾಗಿವೆ. ಇದುವರೆಗೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಏಕೈಕ ಭಾರತೀಯ ಚಲನಚಿತ್ರಗಳೆಂದರೆ ಮದರ್ ಇಂಡಿಯಾ, ಸಲಾಮ್ ಬಾಂಬೆ ಮತ್ತು ಲಗಾನ್.

ಛೆಲ್ಲೊ ಶೋ ಥಿಯೇಟರ್‌ನಲ್ಲಿ ಬಿಡುಗಡೆ
ಗುಜರಾತಿ ಚಲನಚಿತ್ರ ಛೆಲ್ಲೊ ಶೋ ಅಕ್ಟೋಬರ್ 14, 2022 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದ್ದು, ಬಾಲಕ ಸಮಯನ 35 ಎಂಎಂ ಕನಸನ್ನು ಬೆನ್ನಟ್ಟುವ ಚಿತ್ರ ಕಥೆ ಹೊಂದಿದೆ.

ಚಿತ್ರವು 2021 ರಲ್ಲಿ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಅಕ್ಟೋಬರ್ 2021 ರಲ್ಲಿ, ಛೆಲ್ಲೊ ಶೋ 66 ನೇ ವಲ್ಲಾಡೋಲಿಡ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಸ್ಪೈಕ್ ಅನ್ನು ಗೆದ್ದುಕೊಂಡಿತು.

ಪಟ್ಟಿಯಲ್ಲಿರುವ ಇನ್ನೆರಡು ಚಲನಚಿತ್ರಗಳು
ಆಸ್ಕರ್ ಪ್ರಶಸ್ತಿಗೆ ಭಾರತದ ಪ್ರವೇಶವೆಂದು ಊಹಿಸಲಾದ ಎರಡು ಚಲನಚಿತ್ರಗಳೆಂದರೆ ದಿ ಕಾಶ್ಮೀರ್ ಫೈಲ್ಸ್ ಮತ್ತು ಪಶ್ಚಿಮದಲ್ಲಿ ಹೆಚ್ಚಿನ ಆಕರ್ಷಣೆಯನ್ನು ಪಡೆದುಕೊಂಡ RRR ಚಿತ್ರಗಳಾಗಿವೆ.

ಎಸ್‌ಎಸ್ ರಾಜಮೌಳಿಯ RRR ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದಾಗಿನಿಂದ, ಅಂತರರಾಷ್ಟ್ರೀಯ ಮಾಧ್ಯಮಗಳು, ಚಲನಚಿತ್ರ ನಿರ್ಮಾಪಕರು ಮತ್ತು ಅಭಿಮಾನಿಗಳು ನಿರ್ಮಾಪಕರ ಊಹಾತ್ಮಕ ಕಥಾಪ್ರಸ್ತುತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Anushka Sharma: ಕ್ರೀಡಾಧಾರಿತ ಸಿನಿಮಾದಲ್ಲಿರುವ ಸವಾಲುಗಳೇನು? ಅನುಷ್ಕಾ ಶರ್ಮಾ ಏನ್ ಹೇಳಿದ್ದಾರೆ ನೋಡಿ

ಅಮೆರಿಕಾದಲ್ಲಿ ಆಯೋಜಿಸಿದ ಚಲನಚಿತ್ರದ ಪ್ರದರ್ಶನಗಳಿಗೆ ರಾಜಮೌಳಿಯವರೇ ಹಾಜರಾಗಿದ್ದು, RRR ಚಿತ್ರವು ಆಸ್ಕರ್‌ಗೆ ನಾಮನಿರ್ದೇಶನಗೊಳ್ಳುವುದರ ಕುರಿತು ಹೆಚ್ಚಿನ ಭರವಸೆಯನ್ನು ಹೊಂದಿದ್ದಾರೆ.
Published by:Ashwini Prabhu
First published: