HOME » NEWS » Entertainment » OSCARS 2021 DELAYED BY TWO MONTHS DUE TO CORONAVIRUS PANDEMIC RMD

Oscars 2021: ಕೊರೋನಾ ಎಫೆಕ್ಟ್: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವೂ 2 ತಿಂಗಳು ಮುಂದೂಡಿಕೆ

ಕೊರೋನಾ ವೈರಸ್​ನಿಂದಾಗಿ ಕಳೆದ ಎರಡು ತಿಂಗಳಿಂದ ಯಾವುದೇ ಸಿನಿಮಾ ತೆರೆಕಂಡಿಲ್ಲ. ಈ ಕಾರಣಕ್ಕೂ  ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ ಎನ್ನುವ ಮಾತು ಕೇಳಿ ಬಂದಿದೆ.

news18-kannada
Updated:June 17, 2020, 12:35 PM IST
Oscars 2021: ಕೊರೋನಾ ಎಫೆಕ್ಟ್: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವೂ 2 ತಿಂಗಳು ಮುಂದೂಡಿಕೆ
ಆಸ್ಕರ್
  • Share this:
ಕೊರೋನಾ ವೈರಸ್​ ಅಬ್ಬರಕ್ಕೆ ಇಡೀ ವಿಶ್ವ ತತ್ತರಿಸಿದೆ. ಪ್ರಪಂಚದಾದ್ಯಂತ 82 ಲಕ್ಷ ಜನರಿಗೆ ಕೊರೋನಾ ಸೋಂಕು ಅಂಟಿದ್ದು, 4.4 ಲಕ್ಷ ಜನರು ಕೊರೋನಾಗೆ ಮೃತಪಟ್ಟಿದ್ದಾರೆ. ಈ ಮಧ್ಯೆ ಸಾಕಷ್ಟು ಪ್ರಮುಖ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಈಗ ಈ ಸಾಲಿಗೆ ಆಸ್ಕರ್​ ಪ್ರಶಸ್ತಿ ಸಮಾರಂಭ ಕೂಡ ಸೇರಿಕೊಂಡಿದೆ.

ಸೋಂಕು ಹರಡುವಿಕೆ ಹೆಚ್ಚಾದಾಗ ನಾಮಕಾವಸ್ತೆಗೆ ಮಾತ್ರ ಲಾಕ್​​ಡೌನ್​​ ಜಾರಿಗೊಳಿಸಿದ ಪರಿಣಾಮ ಭಾರತದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಿದೆ. ಮಂಗಳವಾರ 10,974 ಕೊರೋನಾ ಪ್ರಕರಣಗಳು ಕಂಡುಬಂದಿವೆ.‌ ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 3,54,065ಕ್ಕೆ ಏರಿಕೆಯಾಗಿದೆ. ಇನ್ನು ವಿಶ್ವ ಮಟ್ಟದಲ್ಲೂ ಕೊರೋನಾ ವೈರಸ್ ಹರಡುವಿಕೆ ವೇಗದಲ್ಲಿ ಸಾಗಿದೆ. ಸಾಕಷ್ಟು ರಾಷ್ಟ್ರಗಳಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ, 2021ರ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ಎರಡು ತಿಂಗಳ ಕಾಲ ಮುಂದೂಡಲಾಗಿದೆ.

ಇದನ್ನೂ ಓದಿ: ಆಸ್ಕರ್​​ಗೆ ಗಲ್ಲಿ ಬಾಯ್​: ಭಾರತದಿಂದ ಆಯ್ಕೆಯಾದ ಚಿತ್ರಗಳ ಪಟ್ಟಿಯಲ್ಲಿತ್ತು ಕನ್ನಡದ ಸ್ಟಾರ್ ನಟನ ಸಿನಿಮಾ..!

ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಫೆ.28. 2021ರಂದು ಆಸ್ಕರ್​ ಪ್ರಶಸ್ತಿ ಸಮಾರಂಭ ನಡೆಯಬೇಕಿತ್ತು. ಆದರೆ, ಇದನ್ನು ಏಪ್ರಿಲ್​ 25ಕ್ಕೆ ಮುಂದೂಡಲಾಗಿದೆ. ಆಸ್ಕರ್​ಗೆ ಅರ್ಹತೆ ಪಡೆಯಲು ಏಪ್ರಿಲ್​ 28ರವರೆಗೆ ಸಮಯಾವಕಾಶ ನೀಡಲಾಗಿದೆ. ಮಾರ್ಚ್​ 15ಕ್ಕೆ ನಾಮಿನೇಷನ್​ ಹಾಗೂ ಏಪ್ರಿಲ್​ 25ರಂದು ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.

ಕೊರೋನಾ ವೈರಸ್​ನಿಂದಾಗಿ ಕಳೆದ ಎರಡು ತಿಂಗಳಿಂದ ಯಾವುದೇ ಸಿನಿಮಾ ತೆರೆಕಂಡಿಲ್ಲ. ಈ ಕಾರಣಕ್ಕೂ  ಆಸ್ಕರ್​ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ ಎನ್ನುವ ಮಾತು ಕೇಳಿ ಬಂದಿದೆ.
First published: June 17, 2020, 12:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories