Oscars 2020: ಜೋಕರ್​ ಹೀರೋ ಜಾಕ್ವೀನ್ ಫಿನಿಕ್ಸ್​ಗೆ ಆಸ್ಕರ್​; ಇಲ್ಲಿದೆ ಪ್ರಶಸ್ತಿಗಳ ಸಂಪೂರ್ಣ ವಿವರ

Oscars 2020 Winners: ಲಾಸ್​ ಏಂಜಲಸ್​ನ ಡಾಲ್ಬಿ ಥಿಯೇಟರ್​ನಲ್ಲಿ 92ನೇ ಆಸ್ಕರ್​ ಪ್ರಶಸ್ತಿ ಪ್ರದಾನ  ಕಾರ್ಯಕ್ರಮ ನಡೆಯಿತು. ಯಾರಿಗೆ ಯಾವ ಪ್ರಶಸ್ತಿ ಲಭ್ಯವಾಗಿದೆ ಎನ್ನುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

news18-kannada
Updated:February 10, 2020, 10:46 AM IST
Oscars 2020: ಜೋಕರ್​ ಹೀರೋ ಜಾಕ್ವೀನ್ ಫಿನಿಕ್ಸ್​ಗೆ ಆಸ್ಕರ್​; ಇಲ್ಲಿದೆ ಪ್ರಶಸ್ತಿಗಳ ಸಂಪೂರ್ಣ ವಿವರ
ಜೋಕರ್​ ಪೋಸ್ಟರ್​
  • Share this:
Oscars: 2020ನೇ ಸಾಲಿನ ಪ್ರತಿಷ್ಠಿತ ಆಸ್ಕರ್​ ಪ್ರಶಸ್ತಿ ಇಂದು ಘೋಷಣೆ ಆಗಿದೆ. ಕಳೆದ ವರ್ಷ ತೆರೆಕಂಡ ‘ಜೋಕರ್' ಚಿತ್ರದ ಅತ್ಯದ್ಭುತ ನಟನೆಗೆ ಜಾಕ್ವೀನ್ ಫಿನಿಕ್ಸ್​ಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ.

ಲಾಸ್​ ಏಂಜಲಸ್​ನ ಡಾಲ್ಬಿ ಥಿಯೇಟರ್​ನಲ್ಲಿ 92ನೇ ಆಸ್ಕರ್​ ಪ್ರಶಸ್ತಿ ಪ್ರದಾನ  ಕಾರ್ಯಕ್ರಮ ನಡೆಯಿತು. 2019ರಲ್ಲಿ ತೆರೆಕಂಡ 'ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್' ಸಿನಿಮಾದ ಉತ್ತಮ ನಟನೆಗಾಗಿ ನಟ ಬ್ರ್ಯಾಡ್ ಪಿಟ್​ಗೆ ಅತ್ಯುತ್ತಮ ಫೋಷಕ ನಟ ಪ್ರಶಸ್ತಿ ಲಭಿಸಿದೆ. ಇವರು ಇದೇ ಮೊದಲ ಬಾರಿಗೆ ಆಸ್ಕರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರೆನೀ ಜೆಲ್ವೆಗರ್​ಗೆ ‘ಜೂಡಿ’ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.

ಅತ್ಯುತ್ತಮ ಡಾಕ್ಯುಮೆಂಟರಿ: 'ಅಮೇರಿಕನ್ ಫ್ಯಾಕ್ಟರಿ'

ಅತ್ಯುತ್ತಮ ಚಿತ್ರ: 'ಪ್ಯಾರಸೈಟ್'

 ಅತ್ಯುತ್ತಮ ನಿರ್ದೇಶಕ: ಬಾಂಗ್​ ಜೂನ್​ (ಪ್ಯಾರಸೈಟ್ ಸಿನಿಮಾ ಚಿತ್ರ)

ಅತ್ಯತ್ತಮ ವಿಎಫ್​ಎಕ್ಸ್​: 1917

ಅತ್ಯುತ್ತಮ ಎಡಿಟಿಂಗ್​: ಫೋರ್ಡ್​ vs ಫೆರಾರಿ ಅತ್ಯುತ್ತಮ ಪೋಷಕ ನಟಿ: ಲೌರಾ ಡೆರ್ನ್, (ಮ್ಯಾರೇಜ್​ ಸ್ಟೋರಿ ಚಿತ್ರ)

ಆಸ್ಕರ್​ ಪ್ರಶಸ್ತಿಗೆ ಈ ಮೊದಲು ಭಾರತದಿಂದ ರಣವೀರ್​ ಸಿಂಗ್​ ಹಾಗೂ ಆಲಿಯಾ ಭಟ್​ ಅಭಿನಯದ 'ಗಲ್ಲಿ ಬಾಯ್​' ಸಿನಿಮಾ ಆಯ್ಕೆ ಆಗಿತ್ತು. ಆದರೆ, ಆಸ್ಕರ್​ ಶಾರ್ಟ್​ ಲಿಸ್ಟ್​ನಿಂದ ಸಿನಿಮಾ ಕೈ ಬಿಡಲಾಗಿತ್ತು.

ಇದನ್ನೂ ಓದಿ:  ಆಸ್ಕರ್ ಪ್ರಶಸ್ತಿ ಗೆಲ್ಲುವ ಭಾರತದ ಗಲ್ಲಿ ಬಾಯ್​ ಕನಸು ಭಗ್ನ
First published: February 10, 2020, 10:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading