ಬಹಳ ಕುತೂಹಲದಿಂದ ಕಾಯ್ತಿದ್ದ ಆಸ್ಕರ್ ಪ್ರಶಸ್ತಿ (Oscar Award) ನಾಮಿನೇಷನ್ ಪಟ್ಟಿ ಹೊರಬಿದ್ದಿದೆ. ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್ ನಲ್ಲಿ ಆಸ್ಕರ್ (Oscar) ಪ್ರಶಸ್ತಿಯ ನಾಮಿನೇಷನ್ ಲಿಸ್ಟ್ (Nomination List) ಘೋಷಣೆ ಮಾಡಲಾಗಿದೆ. ಎಸ್ ಎಸ್ ರಾಜಮೌಳಿ ನಿರ್ದೇಶನ ಆರ್ಆರ್ಆರ್ ಸಿನಿಮಾದ (RRR Movie) 'ನಾಟು ನಾಟು' ಹಾಡು ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ 2023ಕ್ಕೆ (Oscar 2023) ನಾಮನಿರ್ದೇಶನಗೊಂಡಿದೆ. ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ RRR ಸಿನಿಮಾ ನಾಟು ನಾಟು ಹಾಡು (Naatu Naatu Song) ಇದೀಗ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆಗಿದೆ. ಲಿಸ್ಟ್ ಹೊರಬೀಳ್ತಿದ್ದಂತೆ ಚಿತ್ರತಂಡ ಕೂಡ ಫುಲ್ ಖುಷ್ ಆಗಿದೆ.
This year's Original Song nominees are music to our ears. #Oscars #Oscars95 pic.twitter.com/peKQmFD9Uh
— The Academy (@TheAcademy) January 24, 2023
RRR ಈಗ 95 ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ನಾಮನಿರ್ದೇಶನಗೊಂಡ ದಕ್ಷಿಣ ಭಾರತದ ಮೊದಲ ಚಿತ್ರ ಎಂಬ ದಾಖಲೆಯನ್ನು ಸೃಷ್ಟಿಸಿದೆ. ಮದರ್ ಇಂಡಿಯಾ (1957), ಸಲಾಮ್ ಬಾಂಬೆ (1988) ಮತ್ತು ಲಗಾನ್ (2001) ಆಸ್ಕರ್ ನಾಮನಿರ್ದೇಶನ ಹೊಂದಿರುವ ಇತರ ಭಾರತೀಯ ಚಲನಚಿತ್ರಗಳು. ಆರ್ಆರ್ಆರ್ನ ಈ ಅದ್ಭುತ ಸಾಧನೆಗೆ ನೆಟಿಜನ್ಗಳು ಆರ್ಆರ್ಆರ್ ತಂಡವನ್ನು ಅಭಿನಂದಿಸುತ್ತಿದ್ದಾರೆ. ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂದು ಶುಭಕೋರಿದ್ದಾರೆ.
WE CREATED HISTORY!! 🇮🇳
Proud and privileged to share that #NaatuNaatu has been nominated for Best Original Song at the 95th Academy Awards. #Oscars #RRRMovie pic.twitter.com/qzWBiotjSe
— RRR Movie (@RRRMovie) January 24, 2023
ಲಿಸನ್ ವಿಲಿಯಮ್ಸ್ ಮತ್ತು ರಿಝ್ ಅಹ್ಮದ್ ಅವರು ಈ ಬಾರಿಯ ಆಸ್ಕರ್ ನಾಮಿನೇಷನ್ ಲಿಸ್ಟ್ ಪ್ರಕಟಿಸಿದರು. ನಾಟು ನಾಟು ಹಾಡು, ಆಲ್ ದಟ್ ಬ್ರೀಥ್ಸ್’, ‘ದಿ ಎಲೆಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಗಳು ಭಾರತದಿಂದ ನಾಮಿನೇಟ್ ಆಗಿವೆ.
ಈಡೇರಲಿಲ್ಲ ಕಾಂತಾರ ಚಿತ್ರದ ಆಸ್ಕರ್ ಕನಸು
ಆಸ್ಕರ್ ಪ್ರಶಸ್ತಿ ಸ್ಪರ್ಧೆಯಲ್ಲಿ ಈ ಬಾರಿ ವಿಶ್ವದ 300ಕ್ಕೂ ಅಧಿಕ ಸಿನಿಮಾಗಳು ಅರ್ಹತೆ ಪಡೆದಿದ್ದವು. ಆ ಪೈಕಿ ಕನ್ನಡದ ಸಿನಿಮಾಗಳಾದ ‘ಕಾಂತಾರ’, ‘ವಿಕ್ರಾಂತ್ ರೋಣ’ ಚಿತ್ರಗಳು ಕೂಡ ಇದ್ದವು. ಕಾಂತಾರ ಸಿನಿಮಾ ಬಗ್ಗೆ ಅನೇಕರಲ್ಲಿ ನಿರೀಕ್ಷೆಯಿತ್ತು ಯಾವುದಾದರೂ ವಿಭಾಗದಲ್ಲಿ ನಾಮಿನೇಟ್ ಆಗುತ್ತದೆ ಎಂದು ಕಾಯುತ್ತಿದ್ರು. ಆದ್ರೆ ನಿರೀಕ್ಷೆ ಹುಸಿಯಾಗಿದೆ.
ದಿ ಕಾಶ್ಮೀರ್ ಫೈಲ್ಸ್, ಚೆಲ್ಲೋ ಶೋಗೂ ನಿರಾಸೆ
ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕೂಡ ಯಾವುದೇ ವಿಭಾಗದಲ್ಲೂ ನಾಮಿನೇಟ್ ಆಗಿಲ್ಲ. ಗುಜರಾತಿ ಭಾಷೆಯ ‘ಚೆಲ್ಲೋ ಶೋ’ ಸಿನಿಮಾ ಆಸ್ಕರ್ನ ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ವಿಭಾಗಕ್ಕೆ ಆಯ್ಕೆಯಾಗಿತ್ತು. ಆದ್ರೆ ಕೊನೆ ಹಂತದಲ್ಲಿ ನಾಮಿನೇಟ್ ಆಗಲು ವಿಫಲವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ