ಅತಿಲೋಕ ಸುಂದರಿ ಶ್ರೀದೇವಿ ಪಾತ್ರದಲ್ಲಿ ಪ್ರಿಯಾ ವಾರಿಯರ್​: ಇಲ್ಲಿದೆ ಶ್ರೀದೇವಿ ಬಂಗ್ಲೊ ಟ್ರೈಲರ್​..!

ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದೆ ಶ್ರೀದೇವಿ ಜೀವನಾಧಾರಿತ ಸಿನಿಮಾ. ಬಾಲಿವುಡ್​ನಲ್ಲಿ ಖಾತೆ ತೆರೆದ ಮಲಯಾಳಂನ ಪ್ರಿಯಾ ಪ್ರಕಾಶ್​ ವಾರಿಯರ್​ ಶ್ರೀದೇವಿ ಬಂಗ್ಲೊ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ.

Anitha E | news18
Updated:January 15, 2019, 3:16 PM IST
ಅತಿಲೋಕ ಸುಂದರಿ ಶ್ರೀದೇವಿ ಪಾತ್ರದಲ್ಲಿ ಪ್ರಿಯಾ ವಾರಿಯರ್​: ಇಲ್ಲಿದೆ ಶ್ರೀದೇವಿ ಬಂಗ್ಲೊ ಟ್ರೈಲರ್​..!
ಪ್ರಿಯಾ ಪ್ರಕಾಶ್​ ವಾರಿಯರ್​
  • News18
  • Last Updated: January 15, 2019, 3:16 PM IST
  • Share this:
ಬೆಳ್ಳಿ ತೆರೆಯಲ್ಲಿ ಮಿಂಚಿ ಮರೆಯಾದ ಅತಿಲೋಕ ಸುಂದರಿ ಶ್ರೀದೇವಿ ಅವರ ಜೀವನಾಧಾರಿತ ಸಿನಿಮಾ ಬರುತ್ತೆ ಅಂತ ಎಲ್ಲೋ ಕೇಳಿದ ನೆನಪು. ಆದರೆ ಆ ಸಿನಿಮಾ ಕುರಿತು ಎಲ್ಲೂ ಯಾವ ಸುದ್ದಿಯೂ ಆಗಲಿಲ್ಲ. ಆದರೆ ಈಗ ಸದ್ದಿಲ್ಲದೆಯೇ ನಟಿ ಶ್ರೀದೇವಿ ಜೀವನಾಧಾರಿತ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ.

ಶ್ರೀದೇವಿ ಪಾತ್ರದಲ್ಲಿ ಪ್ರಿಯಾ ವಾರಿಯರ್


ಹೌದು, ಶ್ರೀದೇವಿ ಪಾತ್ರದಲ್ಲಿ ನಟಿಸಿರುವ ಕಲಾವಿದೆ ಯಾರು ಅನ್ನೋ ವಿಷಯಕ್ಕೆ ಬಂದರೆ, ಅಂದು ರಾತ್ರೋರಾತ್ರಿ ಕೇವಲ ಕಣ್​ ಸನ್ನೆ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸೆಲೆಬ್ರಿಟಿಯಾಗಿದ್ದ ಪ್ರಿಯಾ ವಾರಿಯರ್​ ಈಗ ಶ್ರೀದೇವಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಇದನ್ನೂ ಓದಿ: ಸಂಕ್ರಾಂತಿಗೆ ಡಿ-ಬಾಸ್​ ಉಡುಗೊರೆ: ಹೇಗಿದೆ ಗೊತ್ತಾ 'ಯಜಮಾನ'ನ 'ಶಿವನಂದಿ'

ಪ್ರಿಯಾ ಅಭಿನಯಿಸಿರುವ 'ಒರು ಆಡರ್​ ಲವ್​' ಸಿನಿಮಾ ಇನ್ನೂ ಬಿಡುಗಡೆಯಾಗುವ ಮೊದಲೇ, ಎರಡನೇ ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ. ಹೌದು, ಶ್ರೀದೇವಿ ಪಾತ್ರದಲ್ಲಿ ಪ್ರಿಯಾ ಹೇಗಿದ್ದಾರೆ ಎಂದು ಈ ಟ್ರೈಲರ್​ನಲ್ಲಿ ನೋಡಬಹುದು.ಸದ್ದಿಲ್ಲದೆ ತೆರೆಗಪ್ಪಳಿಸಲು ಸಜ್ಜಾಗುತ್ತಿರುವ 'ಶ್ರೀದೇವಿ ಬಂಗ್ಲೊ' ಸಿನಿಮಾ ಬಗ್ಗೆ ಈಗ ಅಭಿಮಾನಿಗಳಿಗೆ ಸಾಕಷ್ಟು ಅನುಮಾಗಳು ಹುಟ್ಟುತ್ತಿವೆ. ಅರಾತ್​ ಎಂಟರ್​ಟೈನ್​ಮೆಂಟ್​ ಬ್ಯಾನ್​ರ್​ ಅಡಿ ನಿರ್ಮಾಣವಾಗುತ್ತಿರುವ ಈ ಸಿನಿಮಾಗೆ ಎಸ್​.ಕೆ.  ಚಂದ್ರಶೇಖರ್​ ಹಾಗೂ ಎಂ.ಎನ್​. ಪಿಂಪ್ಲೆ ಹಣ ಹೂಡಿದ್ದಾರೆ.ಪ್ರಶಾಂತ್​ ಮಾಂಬುಲ್ಲಿ ಅವರು ಕತೆ ಬರೆದು ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ಪ್ರಿಯಾ ಹೆಸರು ಶ್ರೀದೇವಿ. ಪುಟ್ಟ ಮಗುವೊಂದು ಪ್ರಿಯಾರ ಆಟೋಗ್ರಾಫ್​ ಪಡೆಯುವ ಮೂಲಕ ಟ್ರೈಲರ್​ ಆರಂಭವಾಗುತ್ತದೆ. ಒಂದು ನಿಮಿಷ 49 ಸೆಕೆಂಡ್​ ಟ್ರೈಲರ್​ನಲ್ಲಿ ಕೇವಲ ಇಂಗ್ಲಿಷ್ ಸಂಭಾಷಣೆ ಮಾತ್ರ ಕೇಳಬಹುದಾಗಿದೆ.

 

ಕಿರಿಕ್​ ಹುಡುಗಿ ರಶ್ಮಿಕಾರ ಒಂದೊಳ್ಳೆ ಕೆಲಸ

First published:January 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading