ಕೊರೋನಾ ನಂತರ ಇದೀಗ ಮತ್ತೆ ಚಿತ್ರರಂಗ ಮೊದಲಿನ ಹಂತಕ್ಕೆ ಬಂದು ನಿಂತಿದೆ. ಕಳೆದ 2 ವರ್ಷಗಳಿಂದ ಸ್ಥಗಿತಗೊಂಡಿದ್ದ ಸಿನಿಮಾಗಳ (Movies) ಕಾರ್ಯಗಳು ಇದೀಗ ಚುರುಕಿನಲ್ಲಿ ಸಾಗುತ್ತಿದ್ದು, ಸಾಲು ಸಾಲು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಈಗಾಗಲೇ 2022ರ ಅರ್ಧ ಭಾಗ ಮುಗಿಯುವ ಸನಿಹದಲ್ಲಿದೆ. ಈ 6 ತಿಂಗಳಲ್ಲಿ ಅದೆಷ್ಟೋ ಬ್ಲಾಕ್ ಬಸ್ಟರ್ ಚಿತ್ರಗಳು ತೆರೆಕಂಡು ಬಾಕ್ಸ್ ಆಫೀಸ್ (Box Office)ದೂಳಿಪಟ ಮಾಡಿದರೆ, ಕೆಲ ಸಿನಿಮಾಗಳು ಸದ್ದಿಲ್ಲದೇ ಬಿಡುಗಡೆ ಆಗಿ ಮೂಲೆ ಗುಂಪಾಗಿವೆ. ಇವುಗಳ ನಡುವೆ ಇದೀಗ ಒರ್ಮಾಕ್ಸ್ ಸಂಸ್ಥೆ ಜೂನ್ (June) ತಿಂಗಳಲ್ಲಿ ಅತೀ ಜನಪ್ರಿಯರಾದ ಭಾರತದ ಟಾಪ್ 10 ನಟರ ಮತ್ತು ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಿನಿಮಾದ ಮೂಲಕ ಹೆಚ್ಚು ಸದ್ದು ಮಾಡಿದ ನಟ (Hero) ಮತ್ತು ನಟಿಯರ ಪಟ್ಟಿಯಲ್ಲಿ ಕನ್ನಡದವರೂ ಇದ್ದು, ಯಾರು ಯಾವ ಸ್ಥಾನದಲ್ಲಿದ್ದಾರೆ ಎಂದು ನೋಡೋಣ ಬನ್ನಿ.
ಏನಿದು ಒರ್ಮ್ಯಾಕ್ಸ್ ಮೀಡಿಯಾ:
ಹೌದು, ಒರ್ಮ್ಯಾಕ್ಸ್ ಮೀಡಿಯಾ ಕುರಿತು ಕೆಲವರಿಗೆ ತಿಳಿದಲ್ಲ, ಈ ಸಂಸ್ಥೆಯು ಪ್ರತಿ ತಿಂಗಳೂ ಸಹ ನಟ, ನಟಿ, ಸಿನಿಮಾ, ವೆಬ್ ಸಿರೀಸ್ ಸೇರಿದಂತೆ ಮನೋರಂಜನಾ ಕ್ಷೇತ್ರದ ಟಾಪ್ 10 ಲೀಸ್ಟ್ ಮಾಡಿ ಬಿಡುಗಡೆ ಮಾಡುತ್ತದೆ. ಅದರಂತೆ ಇದೀಗ ಬಿಡುಗಡೆ ಆಗಿರುವ ಪಟ್ಟಿಯಲ್ಲಿ ನಟ ಯಶ್ ಮತ್ತು ನಟಿ ರಶ್ಮಿಕಾ ಮಂದಣ್ಣ ಸ್ತಾನ ಪಡೆಯುವ ಮೂಲಕ ಕನ್ನಡ ಚಿತ್ರರಂಗದ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.
ಯಾವ ಸ್ಥಾನದಲ್ಲಿ ಯಾವ ನಟರಿದ್ದಾರೆ?:
ಹೌದು, ಒರ್ಮ್ಯಾಕ್ಸ್ ಮೀಡಿಯಾ ಸರ್ವೇ ವರದಿಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ತಮಿಳಿನ ದಳಪತಿ ವಿಜಯ್ ಸ್ಥಾನದಲ್ಲಿದ್ದಾರೆ. ವಿಜಯ್ ನಟನೆಯ ಕೊನೆಯ ಚಿತ್ರ 'ಬೀಸ್ಟ್' ಸೋತಿದ್ದರೂ, ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಇದಕ್ಕೆ ಕಾರಣ ದಳಪತಿ ವಿಜಯ್ ಟಾಪ್ ಲೀಸ್ಟ್ ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ವಿಜಯ್ ಅವರ 66ನೇ ಸಿನಿಮಾದ ಹೆಸರನ್ನು ಅವರ ಜನ್ಮದಿನದ ಪ್ರಯುಕ್ತ ಬಿಡುಗಡೆ ಮಾಡಲಾಗಿದ್ದು, ಚಿತ್ರಕ್ಕೆ ‘ವಾರಿಸು‘ ಎಂದು ಇಡಲಾಗಿದೆ. ವಿಜಯ್ಗೆ ಇದೇ ಮೊದಲ ಬಾರಿಗೆ ಕನ್ನಡತಿ ರಶ್ಮಿಕಾ ಮಂದಣ್ಣ ಜೊಡಿಯಾಗಲಿದ್ದಾರೆ.
ಇದನ್ನೂ ಓದಿ: Samantha: ಸಮಂತಾ ಬೋಲ್ಡ್ ಅವತಾರಕ್ಕೆ ಸುಸ್ತಾದ ನಿರ್ಮಾಪಕರು, ಇದೆಲ್ಲಾ ಬೇಡಮ್ಮಾ ಅಂತಿದ್ದಾರೆ ಫ್ಯಾನ್ಸ್
ಇನ್ನು, 2ನೇ ಸ್ಥಾನದಲ್ಲಿ ತೆಲುಗಿನ ಡಾರ್ಲಿಂಗ್ ಪ್ರಭಾಸ್ ಇದ್ದು, ಇವರ ಕೊನೆಯ 2 ಚಿತ್ರಗಳೂ ಸಹ ಬಾಕ್ಸ್ ಆಫಿಸ್ ನಲ್ಲಿ ಮಕಾಡೆ ಮಲಗಿದೆ ಆದೃಉ ಅವರ ಸ್ಟಾರ್ ಡಂ ಕಡಿಮೆ ಆಗಿಲ್ಲ. ಇನ್ನು, ಪ್ರಭಾಸ್ ಕೈಯಲ್ಲಿ ಸದ್ಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮತ್ತು ಆದಿಪುರುಷ್ ಚಿತ್ರಗಳಿವೆ. ಇವುಗಳ ಮೇಲೆ ಭಾರತೀಯ ಚಿತ್ರರಂಗದಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿವೆ.
ಯಶ್ ಯಾವ ಸ್ಥಾನದಲ್ಲಿದ್ದಾರೆ?:
ಕೆಜಿಎಫ್ 2 ಬಿಡುಗಡೆ ಆದ ಮೇಲೆ ನಟ ರಾಕಿಂಗ್ ಸ್ಟಾರ್ ಯಶ್ ರೆಂಜ್ ಬದಲಾಗಿದೆ. ನ್ಯಾಷನಲ್ ಮಟ್ಟದಲ್ಲಿ ಗುರುತಿಸಲ್ಪಡುವ ಅವರು, ಇದೀಗ ಒರ್ಮ್ಯಾಕ್ಸ್ ಮೀಡಿಯಾ ಪಟ್ಟಿಯಲ್ಲಿ 3ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದೆರಡು ತಿಂಗಳಿಂದ ಯಶ್ ಟಾಪ್ ಲೀಸ್ಟ್ ನಲ್ಲಿದ್ದರು. ಆದರೆ ಇದೀಗ 3ನೇ ಸ್ಥಾನಕ್ಕೆ ಬಂದಿದ್ದಾರೆ. ಅಲ್ಲದೇ ಕೆಜಿಎಫ್ 2 ಚಿತ್ರ ಬಿಡುಗಡೆಯಾಗಿ ತಿಂಗಳುಗಳೇ ಕಳೆದರೂ ರಾಕಿಭಾಯ್ ಹವಾ ಮಾತ್ರ ಕಡಿಮೆ ಆಗಿಲ್ಲ. ವಿಶೇಷವೆಂದರೆ ಟಾಪ್ 3ರಲ್ಲಿ ದಕ್ಷಿಣದ ನಟರುಗಳೇ ಇದ್ದಾರೆ.
ಟಾಪ್ 10 ಪಟ್ಟಿಯಲ್ಲಿ ಯ್ಯಾರೆಲ್ಲಾ ಇದ್ದಾರೆ:
1. ದಳಪತಿ ವಿಜಯ್
2. ಪ್ರಭಾಸ್
3. ಯಶ್
4. ಅಜಿತ್ ಕುಮಾರ್
5. ಅಕ್ಷಯ್ ಕುಮಾರ್
6. ಅಲ್ಲು ಅರ್ಜುನ್
7. ಜೂ.ಎನ್‌ಟಿಆರ್
8. ಮಹೇಶ್ ಬಾಬು
9. ರಾಮ್ ಚರಣ್
10. ಸೂರ್ಯ
ಟಾಪ್ 10 ನಟಿಯರು:
1. ಸಮಂತಾ
2. ಆಲಿಯಾ ಭಟ್
3. ನಯನತಾರಾ
4. ದೀಪಿಕಾ ಪಡುಕೋಣೆ
5. ಕಾಜಲ್ ಅಗರ್ವಾಲ್
6. ಕೀರ್ತಿ ಸುರೇಶ್
7. ಕತ್ರಿನಾ ಕೈಫ್
8. ರಶ್ಮಿಕಾ ಮಂದಣ್ಣ
9. ಪೂಜಾ ಹೆಗ್ಡೆ
10. ಅನುಷ್ಕಾ ಶೆಟ್ಟಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ