kannadiga of the 2018

ಮತ್ತೆ ಕಮಾಲ್​ ಮಾಡಲಿರುವ ಸಲ್ಲು-ಜಫರ್ ಜೋಡಿ

news18
Updated: February 13, 2018, 5:43 PM IST
ಮತ್ತೆ ಕಮಾಲ್​ ಮಾಡಲಿರುವ ಸಲ್ಲು-ಜಫರ್ ಜೋಡಿ
news18
Updated: February 13, 2018, 5:43 PM IST
ನ್ಯೂಸ್ 18 ಕನ್ನಡ

‘ಟೈಗರ್​ ಜಿಂದಾ ಹೈ’ ಸಿನಿಮಾದ ನಿರ್ದೇಶಕ ಅಲಿ ಅಬ್ಬಾಸ್ ಜಫರ್ ನಿರ್ದೇಶನದ ‘ಭರತ್​’ ಸಿನಿಮಾದಲ್ಲಿ ಸಲ್ಮಾನ್​ ಅಭಿನಯಿಸಲಿದ್ದಾರೆ.

ಈ ಹಿಂದೆ ಸಹ ಅಲಿ ಅಬ್ಬಾಸ್​ ಸಲ್ಮಾನ್ ಖಾನ್​ ಅಭಿನಯದ ‘ಸುಲ್ತಾನ್’, ‘ಟೈಗರ್ ಜಿಂದಾ ಹೈ’ ಸಿನಿಮಾಗಳ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಈಗ ಮತ್ತೆ ಈ ಜೋಡಿ ‘ಭರತ್’ ಚಿತ್ರದ ಮೂಲಕ ಮೋಡಿ ಮಾಡಲು ತಯಾರಾಗಿದೆ.

 




ಜಫರ್ ನಿರ್ದೇಶನ ಹಾಗೂ ಸಲ್ಮಾನ್ ಖಾನ್ ನಟನೆಯಲ್ಲಿ ಮೂಡಿ ಬರುತ್ತಿರುವ 3ನೇ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಅಭಿನಯಿಸಲಿರುವ ತಾರೆಗಳ ಬಗ್ಗೆ ಯಾವುದೇ ಮಾಹಿತಿ ನೀಡಿದ ಜಫರ್​ ‘ಭರತ್​’ ಸಿನಿಮಾದಲ್ಲಿ ಸಲ್ಮಾನ್​ ಅಭಿನಯಿಸಲಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಕತ್ರಿನಾ ಕೈಫ್ ಹಾಗೂ ಬಾಬಿ ದೇವುಲ್​ ಸಹ ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರಿಉತ್ತಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ.

ದಕ್ಷಿಣ ಕೊರಿಯಾದಲ್ಲಿ 2014ರಲ್ಲಿ ತೆರೆಕಂಡ ‘ಒಡ್ ಟು ಮೈ ಫಾದರ್’ ಚಿತ್ರದಿಂದ ಪೇರಣೆ ಪಡೆದ ಚಿತ್ರ ಇದಾಗಿದೆ. ‘ಭರತ್​’ ಸಿನಿಮಾ ಮುಂದಿನ ವರ್ಷ ತೆರೆ ಮೇಲೆ ಅಪ್ಪಳಿಸುವ ನಿರೀಕ್ಷೆ ಇದೆ.
First published: February 13, 2018
ಮತ್ತಷ್ಟು ವೀಕ್ಷಿಸಿ ಮುಂದಿನ ಸುದ್ದಿ