ಕನ್ನಡಿಗರಿಗಾಗಿ ಸಿದ್ಧವಾಗುತ್ತಿದೆ ಕನ್ನಡ ಓಟಿಟಿ; ಏನಿದರ ವಿಶೇಷತೆ?, ಇಲ್ಲಿದೆ ಮಾಹಿತಿ

ಅಪ್ಪಟ ಕನ್ನಡದ ಎಲ್ಲಾ ಅದ್ಭುತವಾದ ನಾಟಕ, ಸಂಗೀತ, ಸಿನಿಮಾ ಹಾಗೂ ಕಿರುಚಿತ್ರ ಹಾಗೂ ಇನ್ನಿತರ ಕಲಾ ಪ್ರಕಾರಗಳಿಗೆ ಅವಕಾಶದ ಜೊತೆಗೆ ಆದಾಯವನ್ನೂಗಳಿಸುವ ವೇದಿಕೆಯನ್ನು ಸೃಷ್ಟಿಸಿದ್ದಾರೆ ಪ್ರಯೋಗ್ ಸ್ಟುಡಿಯೋ ಹಾಗೂ ಮಯೂರ ಮೋಷನ್ ಪಿಕ್ಚರ್ಸ್​.

ಕನ್ನಡಿಗರಿಗಾಗಿ ಸಿದ್ಧವಾಗುತ್ತಿದೆ ಕನ್ನಡ ಓಟಿಟಿ

ಕನ್ನಡಿಗರಿಗಾಗಿ ಸಿದ್ಧವಾಗುತ್ತಿದೆ ಕನ್ನಡ ಓಟಿಟಿ

  • Share this:
ಓನ್ಲಿ ಕನ್ನಡ (O.K) ಕನ್ನಡದ ಹೆಮ್ಮೆಯ ಸಾಫ್ಟ್‌ವೇರ್ ಇಂಜಿನಿಯರ್​ಗಳೇ ಸೃಷ್ಟಿಸಿ, ಕನ್ನಡದವರೇ ನಿರ್ಮಾಣ ಮಾಡಿರುವ ಒಂದು ವಿಶಿಷ್ಟವಾದ ಆನ್​ಲೈನ್  ವೇದಿಕೆ. ಈ ಆನ್ ಲೈನ್ ವೇದಿಕೆ ಕನ್ನಡದ ಯುವ ಕ್ರಿಯಾಶೀಲ ಪ್ರತಿಭೆಗಳಿಗೆ ಎಲ್ಲಾ ಅನುಕೂಲಗಳನ್ನು ಒದಗಿಸುತ್ತದೆ. ನಿರ್ಮಾಣದ ಹಂತದಿಂದ ಹಿಡಿದು ಪ್ರದರ್ಶನ ಹಾಗೂ ಆದಾಯ ಸೃಷ್ಟಿಸುವಲ್ಲಿ ಕನ್ನಡದ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಈ ವಿಭಿನ್ನ ಪ್ರಯೋಗ ಅತಿ ಶೀಘ್ರದಲ್ಲಿ ನಿಮ್ಮ ಮುಂದೆ ಬರಲು ಸಿದ್ಧವಿದೆ.

ವಿಶೇಷವೆಂದರೆ ಈ ಆನ್ ಲೈನ್ ವೇದಿಕೆಯಲ್ಲಿ ಕೇವಲ ಕನ್ನಡ ಭಾಷೆಯ ಚಿತ್ರಗಳು ಮಾತ್ರ ಇರುತ್ತದೆ. ಕನ್ನಡದವರೇ ಆದ ಪ್ರಯೋಗ್ ಸ್ಟುಡಿಯೋ ಹಾಗೂ ಮಯೂರ ಮೋಷನ್ ಪಿಕ್ಚರ್ಸ್ ಅವರ ಸಹಭಾಗಿತ್ವದಲ್ಲಿ ಇದು ನಿರ್ಮಾಣ ಗೊಂಡಿದೆ.

ಅಪ್ಪಟ ಕನ್ನಡದ ಎಲ್ಲಾ ಅದ್ಭುತವಾದ ನಾಟಕ, ಸಂಗೀತ, ಸಿನಿಮಾ ಹಾಗೂ ಕಿರುಚಿತ್ರ ಹಾಗೂ ಇನ್ನಿತರ ಕಲಾ ಪ್ರಕಾರಗಳಿಗೆ ಅವಕಾಶದ ಜೊತೆಗೆ ಆದಾಯವನ್ನೂಗಳಿಸುವ ವೇದಿಕೆಯನ್ನು ಸೃಷ್ಟಿಸಿದ್ದಾರೆ ಪ್ರಯೋಗ್ ಸ್ಟುಡಿಯೋ ಹಾಗೂ ಮಯೂರ ಮೋಷನ್ ಪಿಕ್ಚರ್ಸ್​.

Salman Khan: ಟ್ರ್ಯಾಕ್ಟರ್​ ಹತ್ತಿ ಹೊಲದಲ್ಲಿ ಉಳುಮೆ ಮಾಡಿ ಮತ್ತೆ ಟ್ರೋಲಾದ ಸಲ್ಮಾನ್​: ಓವರ್​ ಆ್ಯಕ್ಷನ್​ ಬೇಡ ಎಂದ ನೆಟ್ಟಿಗರು..!

ಪ್ರಯೋಗ್ ಸ್ಟುಡಿಯೋ ಸಂಸ್ಥಾಪಕ ಹಾಗೂ ನಿರ್ದೇಶಕರಾದ ಪ್ರದೀಪ್ ಮುಳ್ಳೂರು ಅವರು ಈಗಾಗಲೇ 430ಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ತಮ್ಮ ಪ್ರಯೋಗ್ ಸ್ಟುಡಿಯೋದಲ್ಲಿ ಆಯೋಜನೆ ಮಾಡಿ ಸಾಕಷ್ಟು ಪ್ರಮಾಣದಲ್ಲಿ ಕಲಾವಿದರಿಗೆ ವೇದಿಕೆಯನ್ನು ಸೃಷ್ಟಿಸಿದ್ದಾರೆ. ಹಲವು ನಾಟಕ, ಕಿರುಚಿತ್ರ, ಹಾಗೂ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಮಯೂರ ಮೋಷನ್ ಪಿಕ್ಚರ್ಸ್​ನ ಸಂಸ್ಥಾಪಕರು, ಮುಖ್ಯಸ್ಥರು, ನಿರ್ಮಾಪಕರು ಹಾಗೂ ಕಲಾವಿದರು ಆದ ಡಿ. ಮಂಜುನಾಥ ಅವರು ಈಗಾಗಲೇ ಎರಡು ಕನ್ನಡ ಚಲನಚಿತ್ರಗಳು, ವೀಕೆಂಡ್ ಹಾಗೂ ಉದ್ಘರ್ಷ (ಸಹ ನಿರ್ಮಾಣ) ನಿರ್ಮಾಣ ಮಾಡಿದ್ದಾರೆ. ಹಾಗೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾ ನಿರ್ಮಾಣದಲ್ಲಿ ಕನ್ನಡದ ಪ್ರತಿಭೆಗಳಿಗೆ ಹೆಚ್ಚೆಚ್ಚು ಅವಕಾಶ ಮಾಡಿಕೊಟ್ಟಿದ್ದಾರೆ.

ಅವರನ್ನು ತಬ್ಬಿಕೊಳ್ಳುತ್ತೇನೆ; ನನ್ನನ್ನು ಕ್ವಾರಂಟೈನ್ ಮಾಡಿದ್ರು ಪರವಾಗಿಲ್ಲ ಎಂದ ಖ್ಯಾತ ನಟ!

ಈ ಇಬ್ಬರು ಕನ್ನಡದ ಪ್ರೇಮಿಗಳು ಒಟ್ಟಿಗೆ ಸೇರಿ ಕನ್ನಡದ ಪ್ರತಿಭೆಗಳಿಗೆ ಆದಾಯ ತರುವ ವೇದಿಕೆಯನ್ನು ಸೃಷ್ಟಿಸಿದ್ದಾರೆ. ಇವರ ಜೊತೆಗೆ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಇವರ ಜೊತೆ ಕೈ ಜೋಡಿಸಿ, ಕನ್ನಡದ ಸಿನಿಮಾ, ನಾಟಕ, ಸಂಗೀತ, ನೃತ್ಯ ಹಾಗೂ ಎಲ್ಲಾ ಪ್ರಕಾರಗಳನ್ನು ವಿದೇಶಗಳಲ್ಲೂ ನಮ್ಮ ಕನ್ನಡಿಗರಿಗೆ ತಲುಪಿಸಲು ಮುಂದೆ ಬಂದಿದ್ದಾರೆ.

ಸಾಕಷ್ಟು ಕನ್ನಡದ ಕಿರುಚಿತ್ರ, ಚಲನಚಿತ್ರ, ನಾಟಕಗಳನ್ನು ನಿರ್ಮಾಣ ಮಾಡಲು ಇವರ ಜೊತೆ ಮಾತುಕತೆ ನಡಿಸುತ್ತಿದ್ದಾರೆ. ಈಗಾಗಲೇ ಕನ್ನಡದ ಸಾಕಷ್ಟು ಪ್ರತಿಭಾನ್ವಿತ ಯುವ ನಿರ್ದೇಶಕ/ಕಿಯರ ಜೊತೆಯಲ್ಲಿ ಮಾತುಕತೆ ನಡೆಸಿ ಕನ್ನಡದಲ್ಲಿ ಉತ್ಕೃಷ್ಟವಾದ ಸಿನಿಮಾಗಳನ್ನು ನಿರ್ಮಾಣ ಮಾಡಲು ಯೋಜಿಸುತ್ತಿದ್ದಾರೆ.
Published by:Vinay Bhat
First published: