ರಷ್ಯನ್​ ಗಂಡನಿಂದಾಗಿ ಸುದ್ದಿಯಲ್ಲಿದ್ದ ನಟ ರಜನಿ ಅವರ ನಾಯಕಿಯಾಗಿದ್ದ ಆ ನಟಿ ಯಾರು ಗೊತ್ತಾ?

news18
Updated:September 11, 2018, 1:43 PM IST
ರಷ್ಯನ್​ ಗಂಡನಿಂದಾಗಿ ಸುದ್ದಿಯಲ್ಲಿದ್ದ ನಟ ರಜನಿ ಅವರ ನಾಯಕಿಯಾಗಿದ್ದ ಆ ನಟಿ ಯಾರು ಗೊತ್ತಾ?
news18
Updated: September 11, 2018, 1:43 PM IST
ನ್ಯೂಸ್​ 18 ಕನ್ನಡ 

ಸಿನಿಮಾ ರಂಗವೇ ಹಾಗೇ... ಅಲ್ಲಿ ಸೆಲೆಬ್ರಿಟಿಗಳು ಏನೇ ಮಾಡಿದರೂ ಸುದ್ದಿಯಾಗುತ್ತೆ. ಅದರಲ್ಲೂ ಅವರ ವಿವಾಹದ ವಿಷಯ ಬಂದ ಕೂಡಲೇ ಅದು ವೈರಲ್​ ಸಹ ಆಗುತ್ತದೆ. ಬಿ-ಟೌನ್​ ಸೇರಿದಂತೆ ಟಾಲಿವುಡ್​, ಕಾಲಿವುಡ್ ಹಾಗೂ ಸ್ಯಾಂಡಲ್​ವುಡ್​ನ ನಟ-ನಟಿಯರು ವಿದೇಶಿಗರನ್ನು ವಿವಾಹವಾಗಿ ಸುದ್ದಿಯಾಗಿದ್ದಾರೆ.

ಬಿ-ಟೌನ್​ನ ಪ್ರಿಯಾಂಕಾ ಚೋಪ್ರಾ ಅಮೆರಿಕನ್​ ಗಾಯಕ ನಿಕ್​ ಜೋನಸ್​ ಅವರನ್ನು ಸದ್ಯದಲ್ಲೇ ವರಿಸಲಿದ್ದರೆ, ಕಾಲಿವುಡ್​ನ ನಟ ಜೋಸೆಫ್​ ವಿಜಯ್​ ವಿದೇಶಿ ಹುಡುಗಿಯನ್ನು ವಿವಾಹವಾಗಿ ಈ ಹಿಂದೆಯೇ ಸುದ್ದಿಯಾಗಿದ್ದರು. ಇನ್ನೂ ಬಾಲಿವುಡ್​ನಲ್ಲಿ ಕಪೂರ್​ ಕುಟುಂಬದ ಶಶಿ ಕಪೂರ್​ ಸಹ ಬಹಳ ಹಿಂದೆಯೇ ವಿದೇಶಿ ಹುಡುಗಿಯನ್ನು ವಿವಾಹವಾಗಿದ್ದರು. ಇನ್ನೂ ಕನ್ನಡದಲ್ಲಿ ಜಗ್ಗೇಶ್​ ಅವರ ಮಗ ಸಹ ವಿದೇಶಿ ಯುವತಿಯನ್ನು ವಿವಾಹವಾಗಿದ್ದಾರೆ. ಇವರ ಸಾಲಿಗೆ ಇತ್ತೀಚೆಗಷ್ಟೆ ರಷ್ಯನ್​ ಗೆಳೆಯನನ್ನು ವರಿಸಿದ್ದ ಬಹುಭಾಷಾ ನಟಿ ಶ್ರೇಯಾ ಸರಣ್​ ಸಹ ಸುದ್ದಿಯಾಗಿದ್ದರು.

ಹೌದು ಇದ್ದಕ್ಕಿದ್ದಂತೆ ಈಗ ಏಕೆ ಈ ಬಳಕುವ ಬಳ್ಳಿಯ ಸುದ್ದಿ ಅಂತೀರಾ? ಇಂದು ಈ ಚೆಂದುಳ್ಳಿ ಚೆಲುವೆಯ ಹುಟ್ಟುಹಬ್ಬ. ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಸದ್ಯ ರಷ್ಯನ್​ ಗಂಡನೊಂದಿಗೆ ಕಾಲ ಕಳೆಯುತ್ತಿದ್ದಾರೆ.

1982 ಸೆಪ್ಟೆಂಬರ್​ 11ರಲ್ಲಿ ಜನಿಸಿರುವ  ಈ ಚೆಲುವೆ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಶ್ರೇಯಾ ತೆಲುಗಿನ 'ಇಷ್ಟಂ' ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಾಗಾರ್ಜುನ ಜತೆ ಅಭಿನಯಿಸಿದ 'ಸಂತೋಷಂ' ಸಿನಿಮಾದಿಂದಾಗಿ ರಾತ್ರೋರಾತ್ರಿ ಸಿಕ್ಕ ಸ್ಟಾರ್​ಡಮ್​ನಿಂದ ಶ್ರೇಯಾಗೆ ಸಾಕಷ್ಟು ಅವಕಾಶಗಳು ಅರಸಿ ಬಂದಿದ್ದವು.

ರಜನಿ ಕಾಂತ್​ ಸೆರಿದಂತೆ ಹಲವಾರು ಜನಪ್ರಿಯ ನಾಯಕರೊಂದಿಗೆ ತೆರೆ ಹಂಚಿಕೊಂಡಿದ್ದ ಶ್ರೇಯಾ 2018 ಮಾರ್ಚ್​ 12ರಂದು ರಷ್ಯನ್​ ಗೆಳೆಯ ಆ್ಯಂಡ್ರಿ ಕೋಸ್ಚೀವ್​ ಅವರನ್ನು ವಿವಾಹವಾಗುವ ಮೂಲಕ ಸುದ್ದಿಯಲ್ಲಿದ್ದರು. ​
Loading...

 First published:September 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626