HOME » NEWS » Entertainment » ONE MORE LYRICAL VIDEO SONG RELEASED FROM SHIVARAJKUMARS MOVIE AAYUSHMANBHAVA AE

Aayushmanbhava: ಶಿವಣ್ಣನ ಅಭಿಮಾನಿಗಳಿಗೆ ದಸರಾ ಉಡುಗೊರೆ ಕೊಟ್ಟ ಆಯುಷ್ಮಾನ್​ಭವ​ ಚಿತ್ರತಂಡ

Shivarajkumar: ದೊಡ್ಡ ಬ್ಯಾನರ್​ ಹಾಗೂ ದೊಡ್ಡ ಸ್ಟಾರ್ ನಟ-ನಟಿಯರಿರುವ ಆಯುಷ್ಮಾನ್​ಭವ ಚಿತ್ರವನ್ನು ಪಿ. ವಾಸು ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ಈ ಸಿನಿಮಾದ ಬಗ್ಗೆ ಮೊದಲಿಂದಲೂ ಸಾಕಷ್ಟು ಕುತೂಹಲ, ನಿರೀಕ್ಷೆಗಳಿವೆ. ಇತ್ತೀಚೆಗಷ್ಟೇ ಸರ ಸರ ಸರ.... ಎಂಬ ಲಿರಿಕಲ್ ಹಾಡು ಬಿಡುಗಡೆಯಾಗಿದೆ.

Anitha E | news18-kannada
Updated:October 9, 2019, 2:13 PM IST
Aayushmanbhava: ಶಿವಣ್ಣನ ಅಭಿಮಾನಿಗಳಿಗೆ ದಸರಾ ಉಡುಗೊರೆ ಕೊಟ್ಟ ಆಯುಷ್ಮಾನ್​ಭವ​ ಚಿತ್ರತಂಡ
ಆಯುಷ್ಮಾನ್​ಭವ ಸಿನಿಮಾದಲ್ಲಿ ರಚಿತಾ ರಾಮ್​ ಹಾಗೂ ಶಿವರಾಜ್​ಕುಮಾರ್​
  • Share this:
'ಆಯುಷ್ಮಾನ್​ಭವ' ಸಿನಿಮಾ ದ್ವಾರಕೀಶ್​ ಚಿತ್ರದ ಬ್ಯಾನರ್​ನಲ್ಲಿ ನಿರ್ಮಾಣವಾಗುತ್ತಿರುವ 52ನೇ ಸಿನಿಮಾ.  ಸೆಂಚುರಿ ಸ್ಟಾರ್ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್​ ಅಭಿನಯದ ಚಿತ್ರ.

ದೊಡ್ಡ ಬ್ಯಾನರ್​ ಹಾಗೂ ದೊಡ್ಡ ಸ್ಟಾರ್ ನಟ-ನಟಿಯರಿರುವ ಈ ಚಿತ್ರವನ್ನು ಪಿ. ವಾಸು ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕೆ ಈ ಸಿನಿಮಾದ ಬಗ್ಗೆ ಮೊದಲಿಂದಲೂ ಸಾಕಷ್ಟು ಕುತೂಹಲ, ನಿರೀಕ್ಷೆಗಳಿವೆ. ಇತ್ತೀಚೆಗಷ್ಟೇ 'ಸರ ಸರ ಸರ....' ಎಂಬ ಲಿರಿಕಲ್ ಹಾಡು ಬಿಡುಗಡೆಯಾಗಿದೆ.ಈ  ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದು,  ಸುಂದರ ಜಲಪಾತದ  ಹಿನ್ನಲೆಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದ್ದು, ವಿಜಯ್ ಪ್ರಕಾಶ್ ಕಂಠದಾನ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಇದೇ ನವೆಂಬರ್​ನಲ್ಲಿ 'ಆಯುಷ್ಮಾನ್​ಭವ' ರಿಲೀಸ್ ಆಗಲಿದೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಕಂಡರೆ ಪ್ರಿನ್ಸ್ ಮಹೇಶ್​ಗೆ ಭಯವಂತೆ: ಕಿರಿಕ್​ ಬ್ಯೂಟಿ ಗ್ಲಾಮರಸ್​ ಪಾತ್ರಕ್ಕೆ ಒಪ್ಪುವುದಿಲ್ಲವಾ..?

ಆರಂಭದಲ್ಲಿ ಈ ಚಿತ್ರಕ್ಕೆ 'ಆನಂದ್' ಅಂತ ಹೆಸರಿಡಲಾಗಿತ್ತಾದರೂ, ಕಾರಣಾಂತರಗಳಿಂದ ಚಿತ್ರತಂಡ ಅದನ್ನು 'ಆಯುಷ್ಮಾನ್​ಭವ' ಎಂದು ಬದಲಿಸಿತ್ತು. ಈ ಚಿತ್ರದ ಮೂಲಕ ನಿಧಿ ಸುಬ್ಬಯ್ಯ ಮತ್ತೆ ಕಮ್​ಬ್ಯಾಕ್ ಮಾಡುತ್ತಿದ್ದಾರೆ. ಬಹಳ ದಿನಗಳಿಂದ ಬೆಳ್ಳಿ ತೆರೆಯಿಂದ ದೂರ ಉಳಿದಿದ್ದ ನಿಧಿ ಈ ಸಿನಿಮಾದಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ.

 Akanksha Singh: ಮಾಲ್ಡೀವ್ಸ್​ನಲ್ಲಿ ಮುತ್ತಿನ ಮಳೆ ಸುರಿಸುತ್ತಿದ್ದಾರೆ ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​..!

First published: October 9, 2019, 2:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories