ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಗೂ ಬಾಲಿವುಡ್ (Bollywood) ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತೊಮ್ಮೆ ಗುಡ್ ನ್ಯೂಸ್ ನೀಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸೋಮವಾರ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮುಂಬೈ ಆಸ್ಪತ್ರೆಯಿಂದ ಹೊರಹೋಗುತ್ತಿರುವುದು ಕ್ಯಾಮರಾ ಕಣ್ಣಿಗೆ ಸೆರೆಯಾಗಿದ್ದು, ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಐಪಿಎಲ್ 2022 ರ ಅಂತ್ಯದ ನಂತರ, ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಮತ್ತು ಅವರ ಮಗಳು ವಮಿಕಾ ರಜೆಯನ್ನು ಆನಂದಿಸಲು ಮಾಲ್ಡೀವ್ಸ್ಗೆ (Maldives) ಹೋಗಿದ್ದರು. ಮಾಲ್ಡೀವ್ಸ್ನಲ್ಲಿ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಅವರ ಫೋಟೋ ಕೂಡ ವೈರಲ್ ಆಗಿತ್ತು. ಇದೀಗ ಅವರಿಬ್ಬರೂ ಮತ್ತೆ ಭಾರತ್ಕಕೆ ವಾಪಸ್ಸಾಗಿದ್ದು, ಮರಳಿದ ನಂತರ ಆಸ್ಪತ್ರಗೆ ತೆರೆಳಿದ್ದಾರೆ. ಇದೀಗ ಅನುಷ್ಕಾ ಶರ್ಮಾ ಮತ್ತೆ ತಾಯಿ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮತ್ತೆ ಗರ್ಭಿಣಿಯಾಗಿದ್ದಾರಾ ಅನುಷ್ಕಾ:
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿಗಳು ತಮ್ಮ ಪ್ರವಾಸವನ್ನು ಮುಗಿಸಿ ಸೋಮವಾರ ಭಾರತಕ್ಕೆ ಮರಳಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ನಂತರ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಆದರೆ, ಸಂಜೆ ಮುಂಬೈನ ಕೋಕಿಲಾ ಬೆನ್ ಅಂಬಾನಿ ಆಸ್ಪತ್ರೆಯಲ್ಲಿ ಅವರು ಕಾಣಿಸಿಕೊಂಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಆಸ್ಪತ್ರೆಯಿಂದ ರೇಂಜ್ ರೋವರ್ ಕಾರಿನಲ್ಲಿ ಬರುತ್ತಿರುವುದನ್ನು ಯಾರೋ ಒಬ್ಬರು ವಿಡಿಯೋ ಮಾಡಿ ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಇವರಿಬ್ಬರು ಯಾಕೆ ಆಸ್ಪತ್ರೆಗೆ ಹೋದರು ಎಂಬುದು ತಿಳಿದುಬಂದಿಲ್ಲ. ಆದರೆ ಕೆಲವು ಅಭಿಮಾನಿಗಳು ಅನುಷ್ಕಾ ಶರ್ಮಾ ಮತ್ತೆ ಗರ್ಭಿಣಿ ಎಂದು ಹೇಳಿಕೊಂಡಿದ್ದಾರೆ. ಸದ್ಯದಲ್ಲೇ ಇದು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Anushka Sharma: ಮಾಲ್ಡೀವ್ಸ್ ಬೀಚ್ನಲ್ಲಿ ಅನುಷ್ಕಾ ಶರ್ಮಾ, ಇಲ್ಲಿವೆ ಸಖತ್ ಫೋಟೋಸ್
ಜೂಲನ್ ಗೋಸ್ವಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನುಷ್ಕಾ ಶರ್ಮಾ:
ಅನುಷ್ಕಾ ಆಗಾಗ ತಮ್ಮ ವಿಚಾರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಆಸ್ಪತ್ರೆಗೆ ಭೇಟಿ ನೀಡಿದ ಕಾರಣವನ್ನು ಬಹಿರಂಗಪಡಿಸಲಿಲ್ಲ. ಇನ್ನು, ಐಪಿಎಲ್ 2022 ರಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನವು ನಿರಾಶಾದಾಯಕವಾಗಿತ್ತು, ನಂತರ ಅವರು ದಕ್ಷಿಣ ಆಫ್ರಿಕಾ ವಿರುದ್ಧದ 5 ಟಿ 20 ಪಂದ್ಯಗಳ ಸರಣಿಯಿಂದ ವಿರಾಮ ತೆಗೆದುಕೊಂಡರು.
ಇದೀಗ ವಿರಾಟ್ ಕೊಹ್ಲಿ ಇದೇ ವಾರ ಇಂಗ್ಲೆಂಡ್ ಗೆ ತೆರಳಲಿದ್ದಾರೆ. ಅನುಷ್ಕಾ ಶರ್ಮಾ ಅವರ ಮುಂಬರುವ ಚಿತ್ರ ಚಕ್ಡಾ ಎಕ್ಸ್ಪ್ರೆಸ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅನುಷ್ಕಾ ಭಾರತದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಡಿಸೆಂಬರ್ 11, 2017 ರಂದು ವಿವಾಹವಾದರು. ಅನುಷ್ಕಾ ಶರ್ಮಾ ಜನವರಿ 11, 2021 ರಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು. ವಿರಾಟ್ ಮತ್ತು ಅನುಷ್ಕಾ ತಮ್ಮ ಮಗಳಿಗೆ ವಾಮಿಕಾ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: Virat Kohli: ಆಡದೇ ದ್ವಿಶತಕ ಸಿಡಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಕೊಹ್ಲಿ! ವಿಶೇಷ ದಾಖಲೆ ಬರೆದ ವಿರಾಟ್
2008 ರಲ್ಲಿ ಚಿತ್ರರಂಗ್ಕಕೆ ಎಂಟ್ರಿ:
2008 ರಲ್ಲಿ 'ರಬ್ ನೆ ಬನಾದಿ ಜೋಡಿ' ಚಿತ್ರದ ಮೂಲಕ ಅನುಷ್ಕಾ ಶರ್ಮಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ ಅನುಷ್ಕಾ ಅಮೀರ್ ಖಾನ್, ಶಾಹಿದ್ ಕಪೂರ್, ಅಕ್ಷಯ್, ರಣಬೀರ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ಅನೇಕ ಸ್ಟಾರ್ ನಟರೊಂದಿಗೆ ನಟಿಸಿದ್ದಾರೆ. ಆದರೆ ಇದೀಗ ಅನುಷ್ಕಾ ಮದುವೆಯ ನಂತರದಲ್ಲಿ ಚಿತ್ರರಂಗದಿಂದ ಸ್ವಲ್ಪ ದೂರವಿದ್ದು, ಇದೀಗ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಮತ್ತೆ ಬಾಲಿವುಡ್ಗೆ ರೀ ಎಂಟ್ರಿ ನೀಡುತ್ತಿದ್ದು, ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ