Kurukshetra: ಒಂದು ದಿನ ಮುಂಚಿತವಾಗಿಯೇ ಕುರುಕ್ಷೇತ್ರ ನೋಡಲು ಇಲ್ಲಿದೆ ಅವಕಾಶ..!

Darshans Kurukshetra: ದರ್ಶನ್​ ಅವರ ಈ ಸಿನಿಮಾ ರಾಜ್ಯದಲ್ಲಿ ಚಿತ್ರಮಂದಿರಗಳಿಗೆ ಬಿಡುಗಡೆಯಾಗುವ ಮೊದಲೇ ನೋಡಲು ಈ ಸಲ ಒಂದು ಅವಕಾಶವಿದೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ.

Anitha E | news18
Updated:August 3, 2019, 4:16 PM IST
Kurukshetra: ಒಂದು ದಿನ ಮುಂಚಿತವಾಗಿಯೇ ಕುರುಕ್ಷೇತ್ರ ನೋಡಲು ಇಲ್ಲಿದೆ ಅವಕಾಶ..!
ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನನಾಗಿ ದರ್ಶನ್​
  • News18
  • Last Updated: August 3, 2019, 4:16 PM IST
  • Share this:
- ಅನಿತಾ ಈ, 

ದರ್ಶನ್​ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಕದನಕ್ಕೆ ಮುಂದಿನ ಶುಕ್ರವಾರ ರಣರಂಗ ಸಿದ್ಧವಾಗಿದೆ. ಮುನಿರತ್ನ ನಿರ್ಮಾಣದ ಈ ಚಿತ್ರ ದೇಶದಾದ್ಯಂತ ಆ.9ಕ್ಕೆ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಲಿದೆ.

ದರ್ಶನ್​ ಅವರ ಈ ಸಿನಿಮಾ ರಾಜ್ಯದಲ್ಲಿ ಚಿತ್ರಮಂದಿರಗಳಿಗೆ ಬಿಡುಗಡೆಯಾಗುವ ಮೊದಲೇ ನೋಡಲು ಈ ಸಲ ಒಂದು ಅವಕಾಶವಿದೆ. ಅದೇನು ಅಂತ ತಿಳಿಯೋಕೆ ಮುಂದೆ ಓದಿ.'ಕುರುಕ್ಷೇತ್ರ' ಚಿತ್ರ ಇಡೀ ದೇಶದಲ್ಲಿ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳದಲ್ಲಿ ಒಂದೇ ದಿನ ಬಿಡುಗಡೆಯಾಗಲಿದೆ. ಅದರಲ್ಲೂ ಭಾರತದಲ್ಲಿ 2D ಹಾಗೂ 3D ಎರಡರಲ್ಲೂ ಇದು ತೆರೆಕಾಣಲಿದ್ದು, ತಮ್ಮ ಅಭಿರುಚಿಯಂತೆ ಪ್ರೇಕ್ಷಕರು ಈ ಸಿನಿಮಾವನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: Rashmika Mandanna: ಸಿನಿಮಾಗಾಗಿ ಮೈ ಚಳಿ ಬಿಟ್ಟ ರಶ್ಮಿಕಾ ಮಂದಣ್ಣ

ಈ ಸಿನಿಮಾ ಈಗ ಮೂರು ಸಾವಿರ ಸ್ಕ್ರೀನ್​ಗಳಲ್ಲಿ ಬಿಡುಗಡೆಯಾಗಲಿದ್ದು, ದುರ್ಯೋಧನನ ಸ್ವಾಗತಕ್ಕೆ ಸಿಕ್ಕಾಪಟ್ಟೆ ಜೋರಾದ ತಯಾರಿ ನಡೆದಿದೆ. ಆದರೆ ದರ್ಶನ್​ ಅವರ ಈ ಸಿನಿಮಾವನ್ನು ರಾಜ್ಯದಲ್ಲಿ ತೆರೆ ಮೇಲೆ ಬರುವ ಮೊದಲೇ ನೋಡುವ ಅವಕಾಶ ಈ ಸಲ ನಿಮ್ಮದಾಗಬಹುದು.ಹೌದು, ಭಾರತದಲ್ಲಿ ಆ.9ಕ್ಕೆ ಬಿಡುಗಡೆಯಾಗಲಿರುವ 'ಕುರುಕ್ಷೇತ್ರ' ವಿದೇಶಗಳಲ್ಲಿ ಮಾತ್ರ ಒಂದು ದಿನ ಮುಂಚಿತವಾಗಿಯೇ ತೆರೆ ಕಾಣಲಿದೆ. ಗ್ರ್ಯಾಂಡ್​ ಇಂಡಿಯಾ ಫಿಲ್ಮ್​ ಸಂಸ್ಥೆ ವಿದೇಶಗಳಲ್ಲಿ ಈ ಚಿತ್ರ ವಿತರಣಾ ಹಕ್ಕನ್ನು ಪಡೆದಿದ್ದು, ಆ.8ಕ್ಕೆ ಸಿನಿಮಾ ರಿಲೀಸ್​ ಮಾಡಲು ಆಲೋಚನೆ ಮಾಡಿದೆಯಂತೆ.

ಇದನ್ನೂ ಓದಿ: Sunny Leone: 500ಕ್ಕೂ ಹೆಚ್ಚು ಅಶ್ಲೀಲ ಪೋನ್​ ಕಾಲ್​: ದೆಹಲಿ ವ್ಯಕ್ತಿಯ ಕ್ಷಮೆ ಯಾಚಿಸಿದ ಸನ್ನಿ ಲಿಯೋನ್..!

ರಾಜ್ಯದಲ್ಲಿ ಈ ಸಿನಿಮಾದ ವಿತರಣಾ ಹಕ್ಕನ್ನು ರಾಕ್​ಲೈನ್​ ವೆಂಕಟೇಶ್​ ಅವರು ಪಡೆದುಕೊಂಡಿದ್ದು, ಬೆಂಗಳೂರಿನಲ್ಲಿ ನರ್ತಕಿ ಚಿತ್ರ ಮಂದಿರ ಪ್ರಮುಖವಾಗಲಿದೆ. ಇದು ದರ್ಶನ್​ ಅವರ 50ನೇ ಸಿನಿಮಾ ಆಗಿರುವ ಕಾರಣಕ್ಕೆ ಸಿನಿಮಾದ ಮೊದಲ ಆಟ ಆ.9ರಂದು ಬೆಳಿಗ್ಗೆ ಎಷ್ಟು ಗಂಟೆಗೆ ಆರಂಭವಾಗಲಿದೆ ಎಂದು ಇನ್ನೂ ನಿರ್ಧರಿಸಲಾಗಿಲ್ಲ. ಅಲ್ಲದೆ ಅಭಿಮಾನಿಗಳ ಒತ್ತಾಯದ ಮೇರೆಗೆ ಮಧ್ಯರಾತ್ರಿಯೇ ಚಿತ್ರ ತೆರೆಕಂಡರೆ ಆಶ್ಚರ್ಯ ಪಡಬೇಕಿಲ್ಲ.

'ಕುರುಕ್ಷೇತ್ರ' ಪೈರಸಿ ಕಾಟ

ಸಿನಿಮಾ ವಿದೇಶಗಳಲ್ಲಿ ಒಂದು ದಿನ ಮೊದಲೇ ಬಿಡುಗಡೆಯಾಗಲಿದ್ದರೂ ಈ ಸಲ ಪೈರಸಿಯ ಭಯವಿಲ್ಲ. ಕಾರಣ ವಿದೇಶಗಳಲ್ಲಿ 'ಕುರುಕ್ಷೇತ್ರ' 3D ಮಾತ್ರ ಬಿಡುಗಡೆಯಾಗಲಿದ್ದು, ಅದನ್ನು ಥಿಯೇಟರ್​ನಲ್ಲಿ ರೆಕಾರ್ಡ್ ಮಾಡಿ ಆನ್​ಲೈನ್​ ವೆಬ್​ಗಳಲ್ಲಿ ರಾತ್ರೋರಾತ್ರಿ ಬಿಡುಗಡೆ ಮಾಡುವ ಭಯವಿಲ್ಲ.  ಹೀಗಾಗಿಯೇ 'ಕುರುಕ್ಷೇತ್ರ' ಹಾಗೂ ದರ್ಶನ್​ ಅಭಿಮಾನಿಗಳು ನೆಮ್ಮದಿಯಾಗಿ ಚಿತ್ರಮಂದಿರದಲ್ಲೇ ಈ ಸಿನಿಮಾ ನೋಡಿ ಎಂಜಾಯ್​ ಮಾಡಬಹುದು.

ಇದನ್ನೂ ಓದಿ: Dear Comrade: ಕರಣ್​ ಜೋಹರ್​ ಕೊಟ್ಟ 40 ಕೋಟಿ ಆಫರ್​ ನಿರಾಕರಿಸಿದ ಅರ್ಜುನ್​ ರೆಡ್ಡಿ: ನಾಟ್​ ಇಂಟರೆಸ್ಟೆಡ್​ ಎಂದಿದ್ದೇಕೆ ದೇವರಕೊಂಡ..!

ಬೆಂಗಳೂರಿನ ಚಿತ್ರಮಂದಿರ ಬಳಿ ಈಗಾಗಲೇ ದರ್ಶನ್ ಹಾಗೂ ಅಂಬರೀಷ್​ ಅವರ ಕಟೌಟ್​ಗಳು ಎದ್ದು ನಿಂತಿವೆ. ಮೊದಲ ಅಂಬಿ ಅವರ ಕೆಳಗೆ ದರ್ಶನ್​ ಅವರ ಕಟೌಟ್​ ಅನ್ನು ಪ್ರಸನ್ನ ಚಿತ್ರಮಂದಿರ ಬಳಿ ನಿಲ್ಲಿಸಲಾಗಿದೆ. ಉಳಿದವರ ಪೋಸ್ಟರ್​ಗಳನ್ನೂ ಚಿತ್ರಮಂದಿರ ಮೇಲೆ ಚಿಕ್ಕದಾಗಿ ಹಾಕಲಾಗಿದೆ.  ​

Katrina Kaif: ಮಾಲ್ಡೀವ್ಸ್​ನ ಬೀಚ್​ಗಳಲ್ಲಿ ಬಿಕಿನಿಯಲ್ಲಿ ನೀರಾಟವಾಡಿದ ಕತ್ರಿನಾ..!

First published:August 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading