ಒಂದಲ್ಲಾ ಎರಡೆಲ್ಲಾ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯ!

news18
Updated:July 24, 2018, 12:57 PM IST
ಒಂದಲ್ಲಾ ಎರಡೆಲ್ಲಾ ಸಿನಿಮಾದ ಚಿತ್ರೀಕರಣ ಬಹುತೇಕ ಮುಕ್ತಾಯ!
news18
Updated: July 24, 2018, 12:57 PM IST
ನ್ಯೂಸ್ 18 ಕನ್ನಡ

'ರಾಮ ರಾಮ ರೇ' ಸಿನಿಮಾದ ನಂತರ ನಿರ್ದೇಶಕ ಸತ್ಯಪ್ರಕಾಶ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಇಂತಹ ಅದ್ಭುತ ಸಿನಿಮಾ ನೀಡಿದ ನಿರ್ದೇಶಕ ಮುಂದೆ ಯಾವ ಸಿನಿಮಾ ಮಾಡಬಹುದು ಅಂತ. ಅದಕ್ಕೆಲ್ಲ ಸದ್ಯ ಉತ್ತರವಾಗಿ ನಿಂತಿರೋದು 'ಒಂದಲ್ಲಾ ಎರೆಡಲ್ಲಾ' ಸಿನಿಮಾ.

ನಿರ್ದೇಶಕ ಸತ್ಯಪ್ರಕಾಶ್ ಸದ್ಯ ಕೈಗೆತ್ತಿಕೊಂಡಿರೋ 'ಒಂದಲ್ಲಾ ಎರೆಡಲ್ಲಾ ಸಿನಿಮಾ ಒಬ್ಬ 7 ವರ್ಷದ ಯುವಕನ ಸುತ್ತ ಈ ಕಥೆ ನಡೆಯಲಿದೆ. ಇದರ ಚಿತ್ರೀಕರಣದ ಬಹುತೇಕ ಮುಗಿದಿದ್ದು, ಮಂಗಳೂರಿನಲ್ಲಿ ನಡೆಯುತ್ತಿರುವ ಕೊನೆಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಹೀಗಾಗಿ ಇತ್ತೀಚೆಗೆ ಚಿತ್ರದ ಧ್ವನಿ ಸುರುಳಿ ಕಾರ್ಯಕ್ರಮವನ್ನ ಹಮ್ಮಿಕೊಂಡಿದ್ದ ತಂಡ, ಚಿತ್ರದ ಹಾಡುಗಳನ್ನ ಹೊರಬಿಟ್ಟಿದೆ. ವಾಸುಕಿ ವೈಭವ್ ಮತ್ತು ನಾಬಿನ್ ಪಾಲ್ ಸೊಗಸಾಗಿ ಸಂಗೀತ ನಿರ್ದೇಶನ ಮಾಡಿದ್ದು, ನೋಡುಗರ ಮನಗೆಲ್ಲುವಂತೆ ಮಾಡಿದ್ದಾರೆ.

ಇನ್ನು 'ಹೆಬ್ಬುಲಿ' ಚಿತ್ರ ಖ್ಯಾತಿಯ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ್ ಚಿತ್ರ ನಿರ್ಮಾಣ ಮಾಡುತ್ತಿದ್ದು, ಮುಂದಿನ ತಿಂಗಳ ಕೊನೆ ವಾರದಲ್ಲಿ ಸಿನಿಮಾ ರಿಲೀಸ್ ಮಾಡೋ ಯೋಚನೆಯಲ್ಲಿದ್ದಾರೆ.

 
Loading...

 
First published:July 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...