HOME » NEWS » Entertainment » ONCE JAGGESH SOLD HIS HOUSE TO CLEAR THE LOAN AMOUNT OF HIS MOVIE HG

ಅಂದು ಸಿನಿಮಾ ಸಾಲ ತೀರಿಸಲು ಮನೆ ಮಾರಿದ್ದರು ನಟ ಜಗ್ಗೇಶ್​!

ನವರಸ ನಾಯಕ ಜಗ್ಗೇಶ್​​ ಸಾಕಷ್ಟು ಹಿಟ್​​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟನಾಗಿ, ಹೀರೋ ಆಗಿ ಮಿಂಚಿದ್ದಾರೆ. ಆದರೆ ಅದೊಂದು ಸಿನಿಮಾ ಮಾಡಲು ಹೋಗಿ ಕೈ ಸುಟ್ಟು ಕೊಂಡಿದ್ದರು. ಕೊನೆಗೆ ಮನೆ ಮಾರುವಂತಹ ಸನ್ನಿವೇಷಕ್ಕೆ ಬಂದರು. ಒಂದೆಡೆ ಸಿನಿಮಾ ಮಾಡಿ ನಷ್ಟವಾದರೆ, ಮತ್ತೊಂದೆಡೆ ಸಿನಿಮಾಗಾಗಿ ಮಾಡಿದ ಸಾಲ ತೀರಿಸಲು ಹಣವಿರಲಿಲ್ಲ. ಈ ಸಮಯದಲ್ಲಿ ಸ್ವಂತ ಮನೆಯನ್ನೇ ಮಾರಿದ್ದರು ನವರಸ ನಾಯಕ!

news18-kannada
Updated:June 2, 2020, 7:28 AM IST
ಅಂದು ಸಿನಿಮಾ ಸಾಲ ತೀರಿಸಲು ಮನೆ ಮಾರಿದ್ದರು ನಟ ಜಗ್ಗೇಶ್​!
ಜಗ್ಗೇಶ್​​
  • Share this:
ನವರಸ ನಾಯಕ ಜಗ್ಗೇಶ್​​ ಸಾಕಷ್ಟು ಹಿಟ್​​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟನಾಗಿ, ಹೀರೋ ಆಗಿ ಮಿಂಚಿದ್ದಾರೆ. ಆದರೆ ಅದೊಂದು ಸಿನಿಮಾ ಮಾಡಲು ಹೋಗಿ ಕೈ ಸುಟ್ಟು ಕೊಂಡಿದ್ದರು. ಕೊನೆಗೆ ಮನೆ ಮಾರುವಂತಹ ಸನ್ನಿವೇಷಕ್ಕೆ ಬಂದರು. ಒಂದೆಡೆ ಸಿನಿಮಾ ಮಾಡಿ ನಷ್ಟವಾದರೆ, ಮತ್ತೊಂದೆಡೆ ಸಿನಿಮಾಗಾಗಿ ಮಾಡಿದ ಸಾಲ ತೀರಿಸಲು ಹಣವಿರಲಿಲ್ಲ. ಈ ಸಮಯದಲ್ಲಿ ಸ್ವಂತ ಮನೆಯನ್ನೇ ಮಾರಿದ್ದರು ನವರಸ ನಾಯಕ!

ಹೌದು, ಜಗ್ಗೇಶ್​ ಸ್ವಂತ ನಿರ್ಮಾಣದಲ್ಲಿ ಸಿನಿಮಾ ಮಾಡಲು ಮುಂದಾಗುತ್ತಾರೆ. ಸಿನಿಮಾ ಯಶಸ್ವಿಯಾಗ ಬಹುದು ಎಂದು 1.52 ಕೋಟಿ ರೂಪಾಯಿ ಖರ್ಚು ಮಾಡಿ ‘ಮೇಕಪ್‘​ ಟೈಟಲ್​ ಇಟ್ಟುಕೊಂಡು ಸಿನಿಮಾ ಮಾಡುತ್ತಾರೆ. 2002ರಲ್ಲಿ ಈ ಸಿನಿಮಾ ತೆರೆ ಕಾಣುತ್ತದೆ.

ತಮ್ಮ ಕನಸಿನಂತೆ ಮೇಕಪ್​​ ಸಿನಿಮಾ ಚೆನ್ನಾಗಿ ಮೂಡಿಬಂದಿತ್ತು. ವಿಭಿನ್ನವಾದ ಚಿತ್ರಕಥೆಯನ್ನು ಕನ್ನಡಿಗರಿಗೆ ನೀಡಬೇಕು ಎಂದು ಜಗ್ಗೇಶ್​​ ಹೊಸ ಪ್ರಯತ್ನಕ್ಕೆ ಹಾಕಿದ್ದರು. ಹಾಗಾಗಿ ಮೇಕಪ್​ ಸಿನಿಮಾ ನನ್ನ ಅದೃಷ್ಠವನ್ನು ಬದಲಾಯಿಸಬಲ್ಲದು ಎಂಬುದು ನಂಬಿದ್ದರು. ಈ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ಬಣ್ಣ ಹಚ್ಚಿದ್ದರು. ಲೈಲಾ ಪಟೇಲ್​ ನಾಯಕಿಯಾಗಿ ನಟಿಸಿದ್ದರು. ಆದರೆ ಸಿನಿಮಾದಿಂದ 70 ಲಕ್ಷ ರೂಪಾಯಿ ಬಿಟ್ಟರೆ ಉಳಿದ ಹಣ ಬರಲೇ ಇಲ್ಲ.

ಮೇಕಪ್​ ಸಿನಿಮಾದಿಂದಾಗಿ ಜಗ್ಗೇಶ್​ ಅಂದು 75 ಲಕ್ಷ ರೂಪಾಯಿ ಕಳೆದುಕೊಂಡರು. ಆ ಸಾಲವನ್ನು ತೀರಿಸಲು ಮನೆ ಮಾರಬೇಕಾದ ಪರಿಸ್ಥಿ ತಿ ಬಂದಿತು. ಕೊನೆಗೆ ಮನೆಯನ್ನು ತನ್ನ ಮಿತ್ರರೊಬ್ಬರಿಗೆ ಮಾರಿಯೇ ಬಿಟ್ಟರು ಜಗ್ಗೇಶ್​. ಆದರೆ ಇಂದು ಆ ಮನೆಯ ಬೆಲೆ ಬರೋಬ್ಬರಿ 35 ಕೋಟಿ ರೂಪಾಯಿ. ಆ ಮನೆಯನ್ನು ಕೊಂಡು ಕೊಂಡ ಮಿತ್ರನಿಗೆ ಇಂದು 16 ಲಕ್ಷ ರೂಪಾಯಿ ಬಾಡಿಗೆ ಬರುತ್ತಿದೆಯಂತೆ.

ಈ ವಿಚಾರವನ್ನು ನಟ ಜಗ್ಗೇಶ್​ ಅವರೇ ತಮ್ಮ ಟ್ಬಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಭಿನ್ನಚಿತ್ರ ಕನ್ನಡಿಗರಿಗೆ ನೀಡಬೇಕು ಹಾಗು ಹೊರ ರಾಜ್ಯಕ್ಕೆ ನನ್ನಪ್ರತಿಭೆ ನಿರೂಪಿಸಬೇಕು ಎಂದು ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ಮಾಡಿದ ಚಿತ್ರ!ದೌರ್ಭಾಗ್ಯ 2002ರಲ್ಲೆ 75ಲಕ್ಷ ಕಳೆದುಕೊಂಡೆ!ಆ ಸಾಲ ತೀರಿಸಲು ಅಂದು ಮಾರಿದಮನೆ ಇಂದು 35ಕೋಟಿ ಆಸ್ತಿ!ಅದ ಕೊಂಡ ನನ್ನಮಿತ್ರನಿಗೆ ಇಂದು 16ಲಕ್ಷ ಬಾಡಿಗೆ ಬರುತ್ತಿದೆ! ಕಥೆವ್ಯೆಥೆ! ಎಂದು ಬರೆದುಕೊಂಡಿದ್ದಾರೆ.



ಆದರೆ ​​ ಅಂದು ಮೇಕಪ್​ ಸಿನಿಮಾದಿಂದ ಕಳೆದುಕೊಂಡ ಹಣವನ್ನು ಅದೇ ವರ್ಷ ಮತ್ತೆ ಗಳಿಸುತ್ತಾರೆ ಜಗ್ಗೇಶ್. ಇದು ನನ್ನ ದುರಾದೃಷ್ಠವಲ್ಲ ದೇವರು ಕಲಿಸಿದ ಜೀವನದ ಪಾಠ. ಯಾರದೋ ದುಡ್ಡು, ಕಾಸಿದ್ದವನೆ ಬಾಸ್​. ಈಗ ನಾನು ಎಲ್ಲ ರೀತಿಯ ಕ್ಲಾಸ್​​ ತೆಗೆದುಕೊಳ್ಳುವ ಸಾಮರ್ಥ್ಯವಿದೆ. ಅನುಭವ ಪಾಠ ಕಳಿಸುತ್ತದೆ. ಆಗದು ಎಂದು ಕೈ ಕಟ್ಟಿ ಕೂರುವ ಜಾಯಮಾನ ನನ್ನದಲ್ಲ ಎಂದು ಹೇಳುತ್ತಾರೆ ನಟ ಜಗ್ಗೇಶ್​.
First published: June 2, 2020, 7:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories