Kurukshetra: ಲಕ್ಷ್ಮಿ ಹಬ್ಬದಂದು ನಡೆಯುತ್ತೆ ದೋಸ್ತಿ ಕಾಳಗ : ದುರ್ಯೋಧನ ಎದುರು ತೊಡೆತಟ್ಟೋಕೆ ಪೈಲ್ವಾನ್ ಸಜ್ಜು !

Kurukshetra: ವರಮಹಾಲಕ್ಷ್ಮಿ ಹಬ್ಬದಂದು ಇಬ್ಬರು ದಿಗ್ಗಜ ಸ್ಟಾರ್​ಗಳು ಬೇರೆ ಬೇರೆ ರೀತಿಯಲ್ಲಿ ಗಮನ ಸೆಳೆಯಲು ಸಜ್ಜಾಗ್ತಿದ್ದಾರೆ. ದರ್ಶನ್ ಕುರುಕ್ಷೇತ್ರ ಲಕ್ಷ್ಮಿ ಕಟಾಕ್ಷವನ್ನ ಅರಸಿ, ಹಬ್ಬದ ಕೊಡುಗೆಯಾಗಿ ಬಿಡುಗಡೆಯಾಗಲಿದೆ. ಇನ್ನು ಅದೇ ದಿನ ಪೈಲ್ವಾನ ಹಾಡುಗಳನ್ನ ಹೊತ್ತು ಬರಲಿದ್ದಾನೆ.

news18
Updated:August 3, 2019, 12:00 PM IST
Kurukshetra: ಲಕ್ಷ್ಮಿ ಹಬ್ಬದಂದು ನಡೆಯುತ್ತೆ ದೋಸ್ತಿ ಕಾಳಗ : ದುರ್ಯೋಧನ ಎದುರು ತೊಡೆತಟ್ಟೋಕೆ ಪೈಲ್ವಾನ್ ಸಜ್ಜು !
ಇಂದಾದರೂ ಅಂತ್ಯವಾಗುತ್ತಾ ದಚ್ಚು-ಕಿಚ್ಚನ ನಡುವಿನ ದೂರ
  • News18
  • Last Updated: August 3, 2019, 12:00 PM IST
  • Share this:
ಸ್ಯಾಂಡಲ್‍ವುಡ್‍ನಲ್ಲಿ ದೋಸ್ತಿ ಕಾಳಗಕ್ಕೆ ಮತ್ತೊಂದು ವೇದಿಕೆ ಸಿದ್ದವಾಗ್ತಿದೆ. ವರಮಹಾಲಕ್ಷ್ಮಿ ಹಬ್ಬದಂದು 'ದುರ್ಯೋಧನ'ನ ಘರ್ಜನೆಯನ್ನ ಅಡಗಿಸೋಕೆ 'ಪೈಲ್ವಾನ್' ತೊಡೆ ತಟ್ಟಿ ನಿಂತಿದ್ದಾನೆ.

ಕಿಚ್ಚ-ದಚ್ಚು ಒಂದು ಕಾಲದ ದೋಸ್ತಿಗಳು. ಆದರೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ. ಸದ್ಯ ಇಬ್ಬರು ಸ್ಟಾರ್​ಗಳು ಆಗಾಗ ಜಿದ್ದಿಗೆ ಬೀಳ್ತಾನೆ ಇರ್ತಾರೆ. ಈಗ ಮತ್ತೊಂದು ಅಂತಹದ್ದೇ ವೇದಿಕೆ ವರಲಕ್ಷ್ಮಿ ಹಬ್ಬದಂದು ಸೃಷ್ಟಿಯಾಗ್ತಿದೆ.

darshan-sudeep
ದರ್ಶನ್ ಹಾಗೂ ಸುದೀಪ್​


ವರಮಹಾಲಕ್ಷ್ಮಿ ಹಬ್ಬದಂದು ಇಬ್ಬರು ದಿಗ್ಗಜ ಸ್ಟಾರ್​ಗಳು ಬೇರೆ ಬೇರೆ ರೀತಿಯಲ್ಲಿ ಗಮನ ಸೆಳೆಯಲು ಸಜ್ಜಾಗ್ತಿದ್ದಾರೆ. ದರ್ಶನ್ 'ಕುರುಕ್ಷೇತ್ರ' ಲಕ್ಷ್ಮಿ ಕಟಾಕ್ಷವನ್ನ ಅರಸಿ, ಹಬ್ಬದ ಕೊಡುಗೆಯಾಗಿ ಬಿಡುಗಡೆಯಾಗಲಿದೆ. ಇನ್ನು ಅದೇ ದಿನ 'ಪೈಲ್ವಾನ' ಹಾಡುಗಳನ್ನ ಹೊತ್ತು ಬರಲಿದ್ದಾನೆ.

ಸಂಕ್ರಾಂತಿ ಹಬ್ಬದಂದು ನಡೆದಿತ್ತು ಕುಚಿಕು ಫೈಟ್ : `ಶಿವನಂದಿ'ಗೆ ಸವಾಲೆಸೆದಿದ್ದ `ಪೈಲ್ವಾನ'ನ ಟೀಸರ್ !

ಕಳೆದ ಕೆಲವು ತಿಂಗಳುಗಳಿಂದ ಇದು ಹೀಗೇ ನಡೀತಾನೆ ಇದೆ. ಇದಕ್ಕೆ ಮುನ್ನುಡಿಯಿಟ್ಟಿದ್ದು ಈ ಬಾರಿಯ ಸಂಕ್ರಾಂತಿ ಹಬ್ಬ. ಸಂಕ್ರಾಂತಿ ಸಂಭ್ರಮಕ್ಕೆ ದರ್ಶನ್ ನಟನೆಯ ಯಜಮಾನ ಚಿತ್ರದ ಶಿವನಂದಿ ಹಾಡು ಬಿಡುಗಡೆಯಾದ್ರೆ, ಇದಾದ ಒಂದು ದಿನಕ್ಕೆ ಸುದೀಪ್ ನಟನೆಯ 'ಪೈಲ್ವಾನ್' ಟೀಸರ್ ಬಿಡುಗಡೆಯಾಗಿತ್ತು.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಪೈಪೋಟಿ: ದಚ್ಚು-ಕಿಚ್ಚ ಫ್ಯಾನ್ಸ್ ನಡುವೆ ಟ್ರೆಂಡಿಂಗ್ ವಾರ್ !ಈ ವೇಳೆ ಎರಡು ಸಿನಿಮಾಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ವಾರ್ ಶುರುವಾಗಿತ್ತು. ಇಬ್ಬರು ನಟರ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ನಟನ ಚಿತ್ರವೇ ಟಾಪ್ ಟ್ರೆಂಡಿಂಗ್‍ನಲ್ಲಿರಬೇಕು, ಹೆಚ್ಚು ಲೈಕ್ಸ್ ಪಡೆಯಬೇಕು, ಹೆಚ್ಚು ಶೇರ್ ಆಗಬೇಕು ಅಂತ ಜಿದ್ದಿಗೆ ಬಿದ್ದಿದ್ದರು.

ಇನ್ನು ಮೊನ್ನೆ 'ಪೈಲ್ವಾನ್' ಚಿತ್ರದ 'ಬಾರೋ ಪೈಲ್ವಾನ....' ಹಾಗೂ 'ಕುರುಕ್ಷೇತ್ರ' ಚಿತ್ರದ 'ಜುಮ್ಮ ಜುಮ್ಮಾ...' ಹಾಡುಗಳು ಸಹ ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗಿದ್ದವು ಅನ್ನೋದು ಗಮನಿಸಬೇಕಾದ ಅಂಶ.

ಇದನ್ನೂ ಓದಿ: ಕೋಟಿಗಳ ಒಡತಿ ದೀಪಿಕಾ ಪಡುಕೋಣೆ ಹೋಟೆಲ್​ಗಳಲ್ಲಿ ಏನು​ ಕದಿಯುತ್ತಾರೆ ಗೊತ್ತಾ..?

ಹೀಗೆ ಕಾಕತಾಳಿಯವೋ ? ಅಥವಾ ಗಮನ ಸೆಳೆಯುವ ತಂತ್ರವೋ ಗೊತ್ತಿಲ್ಲ, ಇಬ್ಬರು ನಟರು ಬೇರೆ ಬೇರೆ ರೀತಿಯಲ್ಲಿ ಎದುರಾಗೋದು, ಪೈಪೋಟಿ ನಡೆಸೋದು ಇತ್ತೀಚೆಗೆ ಸಾಮಾನ್ಯವಾಗ್ತಿದೆ.

ಅಂದಹಾಗೆ, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಒಂದೇ ದಿನ,  ವರಮಹಾಲಕ್ಷ್ಮಿ ಹಬ್ಬದಂದೇ ಇಬ್ಬರೂ ದಿಗ್ಗಜರು ಬಾಕ್ಸಾಫಿಸ್‍ನಲ್ಲಿ ಪೈಪೋಟಿ ನಡೆಸಬೇಕಿತ್ತು. ನಾನಾ... ನೀನಾ... ಅಂತ ತೊಡೆ ತಟ್ಟಿ ಅಖಾಡದಲ್ಲಿ ನಿಲ್ಲಬೇಕಿತ್ತು. ಆದರೆ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇರೋದ್ರಿಂದ 'ಪೈಲ್ವಾನ್' ಸಿನಿಮಾ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿದೆ.

ಇದನ್ನೂ ಓದಿ: Rashmika Mandanna: ಸಿನಿಮಾಗಾಗಿ ಮೈ ಚಳಿ ಬಿಟ್ಟ ರಶ್ಮಿಕಾ ಮಂದಣ್ಣ

ಆದರೆ ಏನಂತೆ ಇಬ್ಬರ ಸಿನಿಮಾ ಒಟ್ಟಿಗೆ ಬಿಡುಗಡೆಯಾಗದಿದ್ದರೂ, ಇಬ್ಬರ ಸಿನಿಮಾಗಳು ಒಂದೇ ದಿನ ಬೇರೆ ಬೇರೆ ರೀತಿಯಲ್ಲಿ ತಮ್ಮ ಅಭಿಮಾನಿಗಳಿಗೆ ಖುಷಿ ಕೊಡಲು ಸಜ್ಜಾಗಿವೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬದಂದು ದರ್ಶನ್ ಅಭಿಮಾನಿಗಳು ದುರ್ಯೋಧನನ ದರ್ಶನಕ್ಕಾಗಿ ಕಾತರಾಗಿದ್ದಾರೆ. ಸುದೀಪ್ ಅಭಿಮಾನಿಗಳು ಪೈಲ್ವಾನನ ಹಾಡುಗಳನ್ನ ಕೇಳೋ ಆತುರದಲ್ಲಿದ್ದಾರೆ.

Katrina Kaif: ಮಾಲ್ಡೀವ್ಸ್​ನ ಬೀಚ್​ಗಳಲ್ಲಿ ಬಿಕಿನಿಯಲ್ಲಿ ನೀರಾಟವಾಡಿದ ಕತ್ರಿನಾ..!

First published:August 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading