Anushka-Prabhas Wedding: ಪ್ರಭಾಸ್​ ಜೊತೆ ಮದುವೆ ಕುರಿತಂತೆ ಮತ್ತೆ ಮೌನ ಮುರಿದ ಅನುಷ್ಕಾ ಶೆಟ್ಟಿ..!

Anushka-Prabhas Wedding: ದಿನಕ್ಕೊಂದು ಕಡೆ, ದಿನಕ್ಕೊಂದು ರೀತಿ ಅನುಷ್ಕಾ ಹಾಗೂ ಪ್ರಭಾಸ್ ಮದುವೆ ಸುದ್ದಿ ಹರಿದಾಡುತ್ತಿರುತ್ತದೆ. ಪ್ರಭಾಸ್​ ಮದುವೆ ವಿಷಯವಂತೂ ಅವರ ಮನೆಯಲ್ಲಿ ತಮಾಶೆಯಂತೆ ಎಂಜಾಯ್​ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಸ್ವೀಟಿ ಏನಂತಾರೆ ಗೊತ್ತಾ..? 

ಪ್ರಭಾಸ್​ ಹಾಗೂ ಅನುಷ್ಕಾ ಶೆಟ್ಟಿ

ಪ್ರಭಾಸ್​ ಹಾಗೂ ಅನುಷ್ಕಾ ಶೆಟ್ಟಿ

  • Share this:
ಟಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ನಲ್ಲಿ ಪ್ರೇಕ್ಷಕರಿಗೆ ಬೇಸರ ತರಿಸದ ವಿಷಯ ಅಂದರೆ ಅದು ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ. ಇವರ ಪ್ರೀತಿ-ಪ್ರೇಮದ ಕತೆ ಯಾವ ಮೆಗಾ ಧಾರಾವಾಹಿಗೂ ಕಡಿಮೆ ಇಲ್ಲ. ಅದರಲ್ಲೂ ಇತ್ತೀಚೆಗೆ ಅನುಷ್ಕಾ ಶೆಟ್ಟಿ ಮದುವೆ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಹೌದು, ದಿನಕ್ಕೊಂದು ಕಡೆ, ದಿನಕ್ಕೊಂದು ರೀತಿ ಅನುಷ್ಕಾ ಹಾಗೂ ಪ್ರಭಾಸ್ ಮದುವೆ ಸುದ್ದಿ ಹರಿದಾಡುತ್ತಿರುತ್ತದೆ. ಪ್ರಭಾಸ್​ ಮದುವೆ ವಿಷಯವಂತೂ ಅವರ ಮನೆಯಲ್ಲಿ ತಮಾಶೆಯಂತೆ ಎಂಜಾಯ್​ ಮಾಡಲಾಗುತ್ತದೆ. ಆದರೆ ಈ ಬಗ್ಗೆ ಸ್ವೀಟಿ ಏನಂತಾರೆ ಗೊತ್ತಾ..?

ಅನುಷ್ಕಾ ಶೆಟ್ಟಿ ಪ್ರಭಾಸ್​


ಪ್ರಭಾಸ್​ ಹಾಗೂ ಅನುಷ್ಕಾ ಒಳ್ಳೆಯ ಸ್ನೇಹಿತರು ಅನ್ನೋದು ಇಂಡಸ್ಟ್ರಿಯಲ್ಲಿ ಗೊತ್ತೇ ಇದೆ. ಅದರಲ್ಲೂ ಅವರಿಬ್ಬರ ನಡುವಿನ ಪ್ರೇಮ ಸಂಬಂಧದ ವಿಷಯ ಬಂದಾಗಲೆಲ್ಲ ಇಬ್ಬರೂ ಸ್ಟಾರ್​ ಅಂತಹದ್ದೇನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಅಭಿಮಾನಿಗಳಿಗೆ ಡಾರ್ಲಿಂಗ್​-ಸ್ವೀಟಿ ಮದುವೆ ಸುದ್ದಿ ಅಂತ ಅಂದ್ರೆ ಸಾಕು ಕಿವಿಗಳು ನಿಮಿರುತ್ತವೆ.

ಇದನ್ನೂ ಓದಿ: Rashmika Mandanna: ರಶ್ಮಿಕಾ ಮಂದಣ್ಣಗಾಗಿ ಟ್ವಿಟರ್​ನಲ್ಲಿ ಅಭಿಯಾನ ಆರಂಭಿಸಿದ ಅಭಿಮಾನಿಗಳು..!

ಇತ್ತೀಚೆಗೆ ಅನುಷ್ಕಾ ಶೆಟ್ಟಿ ಸಂದರ್ಶನವೊಂದರಲ್ಲಿ ಪ್ರಭಾಸ್ ಜೊತೆಗಿನ ಸಂಬಂಧದ ಕುರಿತಾಗಿ ಪ್ರಶ್ನೆ ಕೇಳಿದಾಗ ಮೌನ ಮುರಿದಿದ್ದಾರೆ. '15 ವರ್ಷಗಳಿಂದ ನಾನು ಪ್ರಭಾಸ್ ಒಳ್ಳೆಯ ಸ್ನೇಹಿತರು. ನಾನು ಮಧ್ಯರಾತ್ರಿ 3 ಗಂಟೆಗೆ ಕರೆ ಮಾಡಿದರೂ ಅವರು ಪೋನ್​ ತೆಗೆಯುತ್ತಾರೆ. ಇಷ್ಟು ಗಾಢವಾದ ಸ್ನೇಹ ನಮ್ಮ ನಡುವೆ ಇದೆ. ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಪ್ರೇಮ ಸಂಬಂಧ ಇತ್ತು ಅಂತಾದರೆ ಅದು ಇಷ್ಟೊತ್ತಿಗೆ ಬಹಿರಂಗವಾಗುತ್ತಿತ್ತು. ​ಆದರೆ ನಮ್ಮಿಬ್ಬರ ನಡುವೆ ಅಂತಹದ್ದೇನೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂನಲ್ಲಿ ಬೋಲ್ಡ್​ ಫೋಟೋ ಪೋಸ್ಟ್ ಮಾಡಿ ಕಮೆಂಟ್​ ಮಾಡದಂತೆ ಸೆಟ್ಟಿಂಗ್​ ಬದಲಾಯಿಸಿದ ಐಂದ್ರಿತಾ ರೇ..!

ಅನುಷ್ಕಾ ನಟನೆಯ 'ನಿಶ್ಯಬ್ಧಂ' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. ಇನ್ನು ಚಿರಂಜೀವಿ ಅವರ 152ನೇ ಸಿನಿಮಾ 'ಆಚಾರ್ಯ'ದಲ್ಲಿ ಅನುಷ್ಕಾ ಚಿರುಗೆ ಜೋಡಿಯಾಗಲಿದ್ದಾರಂತೆ. ಇನ್ನೂ ಪ್ರಭಾಸ್​ ತಮ್ಮ ಹೊಸ ಸಿನಿಮಾದ ಚಿತ್ರೀಕರಣಕ್ಕಾಗಿ ಯುರೋಪ್​ಗೆ ಹೋಗಿದ್ದಾರೆ.

Sara Ali Khan: ಅಪ್ಪ-ಅಮ್ಮನ ಗುಟ್ಟನ್ನು ರಟ್ಟು ಮಾಡಿದ ಸಾರಾ ಅಲಿ ಖಾನ್​..!

First published: