HOME » NEWS » Entertainment » ONCE A SOUTH INDIAS BEAUTY QUEEN MADHAVI IS HOW LEADING LIFE NOW WHERE IS MADHAVI HG

Madhavi: ಒಂದು ಕಾಲದ ಮಾದಕ ನಟಿ ಮಾಧವಿ ಈಗ ಎಲ್ಲಿದ್ದಾರೆ ಗೊತ್ತಾ? ಏನು ಮಾಡುತ್ತಿದ್ದಾರೆ?

Madhavi Sharma: ದಾಸರಿ ನಾರಾಯಣ್ ರಾವ್ ಅವರ ತೂರುಪು ಪದಮಾರ ಎಂಬ ತೆಲುಗು ಚಿತ್ರದ ಮೂಲಕ ಮಾಧವಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾವು ಮಾಧವಿ ಅವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು. ಅಲ್ಲದೆ, ಸ್ಟಾರ್​ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಗಲು ಕಾರಣವಾಯಿತು.

news18-kannada
Updated:November 23, 2020, 9:29 PM IST
Madhavi: ಒಂದು ಕಾಲದ ಮಾದಕ ನಟಿ ಮಾಧವಿ ಈಗ ಎಲ್ಲಿದ್ದಾರೆ ಗೊತ್ತಾ? ಏನು ಮಾಡುತ್ತಿದ್ದಾರೆ?
ಮಾಧಮಿ ಶರ್ಮ
  • Share this:
ಕನ್ನಡದ ನಟಿಯೊಬ್ಬರು ಇಂದು  ಒಂದು ದೇಶವನ್ನು ಖರೀದಿ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದರೆ ನಂಬುತ್ತೀರಾ?. ಹೌದು. 70-80ರ ದಶಕದಲ್ಲಿ ಭಾರತದ ಚಿತ್ರರಂಗವನ್ನು ಆಳಿದ ನಟಿ ಮಾಧವಿ ಶರ್ಮ ಇಂದು ಒಂದು ದೇಶವನ್ನೇ ಖರೀದಿ ಮಾಡುವಷ್ಟು ಸಾಮರ್ಥ್ಯ ಹೊಂದಿದ್ದಾರಂತೆ!. ಮಾಧಮಿ ಶರ್ಮ ಆಗಸ್ಟ್​​ 12, 1962ರಂದು ಹೈದರಾಬಾದ್​ನಲ್ಲಿ ಜನಿಸಿದರು. ಇವರ ಮೂಲ ಹೆಸರು ವಿಜಯಲಕ್ಷ್ಮೀ. ಗೋವಿಂದಸ್ವಾಮಿ ಮತ್ತು ಶಶಿರೇಖಾ ದಂಪತಿಗಳಿಗೆ ಜನಿಸಿದರು. ಬಡ ಕುಟುಂಬದಲ್ಲಿ ಜನಿಸಿದ ಮಾಧವಿ ಶರ್ಮ ಅವರಿಗೆ ಕೀರ್ತಿ, ಧನಂಜಯ್​ ಎಂಬ ಸದೋದರಿ ಸಹೋದರಿ ಇದ್ದಾರೆ.

ಮಾಧವಿ ಶರ್ಮ ಚಿಕ್ಕ ವಯಸ್ಸಿನಿಂದಲೇ ಕಲೆ ಮತ್ತು ನಾಟ್ಯದ ಮೇಲೆ ಸಾಕಷ್ಟು ಒಲವು ಹೊಂದಿದ್ದರು. ಹಾಗಾಗಿ ಉಮಾ ಮಹೇಶ್ವರಿ ಅವರಿಂದ ಭರತನಾಟ್ಯ ಮತ್ತು ಶ್ರೀ ಭಟ್ ಅವರಿಂದ ಜಾನಪದ ನೃತ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಕಲಿತರು. ನಂತರ ಭರತನಾಟ್ಯದಲ್ಲಿ ಪ್ರಾವೀಣ್ಯತೆ ಪಡೆದು ಸುಮಾರು ಸಾವಿರಕ್ಕೂ ಹೆಚ್ಚು ಸ್ಟೇಜ್ ಶೋ ಕೊಟ್ಟರು. ಆದರೆ ಅವರ ಕೈಯಲ್ಲಿ ಹೇಳಿಕೊಳ್ಳುವಷ್ಟು ಹಣ ಇರಲಿಲ್ಲ. ಬಂದ ಹಣವನ್ನು ಮನೆಯ ಖರ್ಚಿಗೆ ಸರಿಯಾಗುತಿತ್ತು. ಹೀಗೆ ಕಾರ್ಯಕ್ರಮ ಕೊಡುತ್ತಿದ್ದ ಮಾಧವಿ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.

ದಾಸರಿ ನಾರಾಯಣ್ ರಾವ್ ಅವರ ತೂರುಪು ಪದಮಾರ ಎಂಬ ತೆಲುಗು ಚಿತ್ರದ ಮೂಲಕ ಮಾಧವಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಸಿನಿಮಾವು ಮಾಧವಿ ಅವರಿಗೆ ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿತು. ಅಲ್ಲದೆ, ಸ್ಟಾರ್​ ನಟರೊಂದಿಗೆ ಅಭಿನಯಿಸುವ ಅವಕಾಶ ಸಿಗಲು ಕಾರಣವಾಯಿತು.ತೆಲುಗು ಮಾತ್ರವಲ್ಲದೆ ಕನ್ನಡ , ತಮಿಳು, ಮಲಯಾಳಂ, ಹಿಂದಿ, ಒರಿಯಾ ಭಾಷೆಯಲ್ಲಿ ನಟಿಸಿದ್ದಾರೆ. 300 ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಖ್ಯಾತಿಯನ್ನು ಪಡೆದಕೊಂಡರು. ಒಂದು ಸಮಯದಲ್ಲಿ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡರು.ಅಚ್ಚರಿ ವಿಚಾರವೆಂದರೆ, 20ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಮಾಧವಿ ಶರ್ಮ. ವರನಟ ಡಾಕ್ಟರ್ ರಾಜಕುಮಾರ್,ವಿಷ್ಣುವರ್ಧನ್,ಅನಂತ್ ನಾಗ್ ಮತ್ತು ಅಂಬರೀಶ್​ ಸೇರಿದಂತೆ ಅನೇಕ ಜನಪ್ರಿಯ ನಟರೊಂದಿಗೆ ನಟಿಸುವ ಮೂಲಕ ಪರದೆ ಮೇಲೆ ಮಿಂಚಿದ್ದರು. ಕನ್ನಡಿಗರ ನೆಚ್ಚಿನ ನಟಿಯಾಗಿ ಗುರುತಿಸಿಕೊಂಡಿದ್ದರು.

ಸಿನಿಮಾ ನಟಿಸುತ್ತಿದ್ದ ಮಾಧವಿ ಅವರು ಹಿಂದೂ ಆಧ್ಯಾತ್ಮಿಕ ಶಿಕ್ಷಣ ಸ್ವಾಮಿರಾಮ ಅವರ ಅನುಯಾಯಿಗಳಲ್ಲಿ ಒಬ್ಬರಾದ ರಾಲ್ಫ್ ಶರ್ಮ ಅವರನ್ನು ವಿವಾಹವಾಗುತ್ತಾರೆ. ಫೆಬ್ರವರಿ 12,1996 ರಂದು ಮಾಧವಿ ಮತ್ತು ರಾಲ್ಫ್ ಶರ್ಮ ಜೊತೆಗೆ ಹಸೆಮಣೆ ಏರುತ್ತಾರೆ. ರಾಲ್ಫ್ ಶರ್ಮ ಉದ್ಯಮಿಯಾಗಿದ್ದು ಅಮೇರಿಕಾದಲ್ಲಿ ದೊಡ್ಡ ಔಷಧಿ ಕಂಪನಿ ಇಟ್ಟಿದ್ದಾರೆ.ವಿವಾಹವಾದ ನಂತರ ಸಿನಿಮಾದಿಂದ ದೂರ ಉಳಿದ ಮಾಧವಿ ಶರ್ಮ ಪತಿಯೊಂದಿಗೆ ಅಮೆರಿಕಾ ಹಾರಿದರು. ಸದ್ಯ ಪತಿ ಔಷಧಿ ಕಂಪನಿಯನ್ನು ನೋಡಿಕೊಳ್ಳುತ್ತಿದ್ದಾರೆ. ಸದ್ಯ ಹರಿದಾಡುತ್ತಿರುವ ಮಾಹಿತಿಗಳ ಪ್ರಕಾರ ಮಾಧವಿ ಸಾವಿರಾರು ಕೋಟಿಗಳ ಒಡತಿಯಾಗಿದ್ದಾರೆ. ಕಷ್ಟದ ಜೀವನದಲ್ಲಿ ಬದುಕಿ ಬೆಳೆದ ಮಾಧವಿ ಇದೀಗ ಸುಮಾರು ಹತ್ತು ಸಾವಿರ ಕೋಟಿಗಿಂತಲೂ ಅಧಿಕ ಹಣದ ಒಡತಿಯಾಗಿದ್ದಾರಂತೆ.
Published by: Harshith AS
First published: November 23, 2020, 9:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading