ಇವರೆಲ್ಲ ಇರುವುದಕ್ಕೆ ನಾನಿಲ್ಲಿರುವುದು..ಬಾಲಿವುಡ್​ ಬೆಡಗಿ ಸನ್ನಿ ಲಿಯೋನ್ ಮನದಾಳದ ಮಾತು!

ನಾನು ಪ್ರತಿನಿತ್ಯ ಎಚ್ಚರಗೊಳ್ಳಲು ಇಬ್ಬರು ತಂಗಿಯರ ಮುದ್ದಿನ ಅಕ್ಕ ನಿಶಾ ಕೂಡ ಕಾರಣ. ಅವಳ ಪ್ರೀತಿ, ಅಪ್ಪುಗೆ, ಸಿಹಿಮುತ್ತು ಎಲ್ಲವೂ ನನ್ನ ಜೀವನದ ಅಮೂಲ್ಯ ಕ್ಷಣಗಳು ಎಂದು  ತಿಳಿಸಿದ್ದಾರೆ.

zahir | news18
Updated:February 11, 2019, 8:32 PM IST
ಇವರೆಲ್ಲ ಇರುವುದಕ್ಕೆ ನಾನಿಲ್ಲಿರುವುದು..ಬಾಲಿವುಡ್​ ಬೆಡಗಿ ಸನ್ನಿ ಲಿಯೋನ್ ಮನದಾಳದ ಮಾತು!
ಸನ್ನಿ ಲಿಯೋನ್
zahir | news18
Updated: February 11, 2019, 8:32 PM IST
ಬಾಲಿವುಡ್​ ಬೆಡಗಿ ಸನ್ನಿ ಲಿಯೋನ್ ಇಂದು ತಮ್ಮ ಅವಳಿ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಶರ್ ಮತ್ತು ನೋಹ್ ಹೆಸರಿನ ಈ ಮುದ್ದು ಕಂದಮ್ಮಗಳ ಮೊದಲ ವರ್ಷದ ಬರ್ತ್​ ಡೇ ಆಚರಿಸಿಕೊಂಡಿರುವ ವಿಡಿಯೋವನ್ನು ಹಾಟ್​ ತಾರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇಡೀ ಕುಟುಂಬದೊಂದಿಗೆ ಕಾಣಿಸಿಕೊಂಡಿರುವ ಸನ್ನಿ, 'ಈ ಸಂತೋಷದ ಕ್ಷಣಗಳನ್ನು ವಿವರಿಸಲು ಸಾಧ್ಯವಿಲ್ಲ. ಕಳೆದೊಂದು ವರ್ಷದಿಂದ ನನ್ನ ಜೀವನದ ಅತ್ಯಂತ ಅಧ್ಭುತ ಕ್ಷಣಗಳನ್ನು ಆನಂದಿಸುತ್ತಿದ್ದೇನೆ. ನನ್ನು ಮಕ್ಕಳ ಪ್ರತಿಯೊಂದು ಮುದ್ದಾದ ಆಟಗಳು ನನಗೆ ಅತೀವ ಸಂತೋಷ ನೀಡುತ್ತಿದೆ. ನನ್ನಿಬ್ಬರು ಪುಟಾಣಿಗಳಿಗೆ ಜನ್ಮದಿನದ ಶುಭಾಶಯಗಳು' ಎಂದು ತಿಳಿಸಿದ್ದಾರೆ.

ಸನ್ನಿ ಲಿಯೋನ್ ಕುಟುಂಬ


37 ರ ಹರೆಯದ ನಟಿ ಸನ್ನಿ ದಂಪತಿಗೆ ಕಳೆದ ವರ್ಷ ಇಬ್ಬರು ಅವಳಿ ಜವಳಿ ಮಕ್ಕಳು ಜನಿಸಿದ್ದರು. 2017ರಲ್ಲಿ ಸನ್ನಿ ಲಿಯೋನ್ ಹಾಗೂ ಪತಿ ಡೇನಿಯಲ್ ವೆಬರ್ ನಿಶಾ ಕೌರ್ ಎಂಬ ಬಾಲಕಿಯನ್ನು ದತ್ತು ಪಡೆದುಕೊಳ್ಳುವ ಆದರ್ಶ ಮೆರೆದಿದ್ದರು. ಇದೀಗ ಮೂವರ ಮಕ್ಕಳ ತಾಯಿಯಾಗಿರುವ ಸನ್ನಿ ತನ್ನ ಮೊದಲ ಬಗ್ಗೆ ನಿಶಾ ಕೌರ್​ ಬಗ್ಗೆಯೂ ಇನ್​ಸ್ಟಾಗ್ರಾಂನಲ್ಲಿ ತಿಳಿಸಿದ್ದಾರೆ.'ನಾನು ಪ್ರತಿನಿತ್ಯ ಎಚ್ಚರಗೊಳ್ಳಲು ಇಬ್ಬರು ತಂಗಿಯರ ಮುದ್ದಿನ ಅಕ್ಕ ನಿಶಾ ಕೂಡ ಕಾರಣ. ಅವಳ ಪ್ರೀತಿ, ಅಪ್ಪುಗೆ, ಸಿಹಿಮುತ್ತು ಎಲ್ಲವೂ ನನ್ನ ಜೀವನದ ಅಮೂಲ್ಯ ಕ್ಷಣಗಳು' ಎಂದು  ತಿಳಿಸಿದ್ದಾರೆ. ಇವರೆಲ್ಲ ಇರುವುದರಿಂದಲೇ ಇಂದಿಗೂ ನಾನಿಲ್ಲಿದ್ದೇನೆ ಎಂದು ಸನ್ನಿ ಲಿಯೋನ್ ಮಕ್ಕಳ ಹುಟ್ಟುಹಬ್ಬದಂದು ತನ್ನ ಮನದಾಳದ ಸಂತಸವನ್ನು ಹಂಚಿಕೊಂಡಿದ್ದಾರೆ. ಸದ್ಯ ಸನ್ನಿ ಲಿಯೋನ್ ಮಳಯಾಲಂನ ಮಧುರೈ ರಾಜ, ತಮಿಳಿನ ಅಯೋಗ್ಯ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಸನ್ನಿ ಅಭಿನಯದ ವೀರಮಹಾದೇವಿ ಚಿತ್ರ ಕನ್ನಡದಲ್ಲೂ ಶೀಘ್ರದಲ್ಲೇ ತೆರೆಕಾಣಲಿದೆ.
First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...