HOME » NEWS » Entertainment » ON INTERNATIONAL YOGA DAY KANGANA RANAUT SHARES HER SISTER RANGOLI CHANDELS ACID ATTACK STORY AE

Kangana Ranaut: ಒಂದು ವರ್ಷದಲ್ಲಿ 53 ಸರ್ಜರಿಗಳಾಗಿದ್ದವು: ಸಹೋದರಿ ರಂಗೋಲಿ ಮೇಲಾದ ಆ್ಯಸಿಡ್​ ದಾಳಿ ಬಗ್ಗೆ ಮೌನ ಮುರಿದ ಕಂಗನಾ

Acid Attack On Rangoli Chandel: ಆ್ಯಸಿಡ್​ನಿಂದಾಗಿ ರಂಗೋಲಿ ಅವರ ಮುಖದ ಅರ್ಧ ಭಾಗ ಸುಟ್ಟು ಹೋಗಿತ್ತು. ಒಂದು ಕಣ್ಣಿನ ದೃಷ್ಟಿ ಸಹ ಕಳೆದುಕೊಂಡಿದ್ದರು ರಂಗೋಲಿ. ಒಂದು ಕಿವಿ ಸಹ ಮುಖದ ಜತೆ ಸುಟ್ಟು ಸೇರಿಕೊಂಡಿತ್ತು ಹಾಗೂ ಸ್ತನಗಳು ಸಹ ಗಂಭೀರವಾಗಿ ಗಾಯಗೊಂಡಿದ್ದವು. ಆಗ ರಂಗೋಲಿ ಅವರಿಗೆ ಒಂದು ವರ್ಷದಲ್ಲಿ 53 ಸರ್ಜರಿಗಳನ್ನು ಮಾಡಲಾಗಿತ್ತಾದರೂ ಅದು ಸಾಕಾಗಲಿಲ್ಲ ಎಂದು ಕಂಗನಾ ಹಳೇ ಘಟನೆ ಬಗ್ಗೆ ವಿವರಿಸಿದ್ದಾರೆ.

Anitha E | news18-kannada
Updated:June 21, 2021, 1:33 PM IST
Kangana Ranaut: ಒಂದು ವರ್ಷದಲ್ಲಿ 53 ಸರ್ಜರಿಗಳಾಗಿದ್ದವು: ಸಹೋದರಿ ರಂಗೋಲಿ ಮೇಲಾದ ಆ್ಯಸಿಡ್​ ದಾಳಿ ಬಗ್ಗೆ ಮೌನ ಮುರಿದ ಕಂಗನಾ
ಸಹೋದರಿ ರಂಗೋಲಿ ಜತೆ ಕಂಗನಾ ರನೋತ್​
  • Share this:
ಬಾಲಿವುಡ್ ಕ್ವೀನ್​ ಕಂಗನಾ ರನೋತ್​  (Kangana Ranaut)ಅಂತರರಾಷ್ಟ್ರೀಯ ಯೋಗ  (International Yoga Day) ದಿನದಂದು ತಮ್ಮ ಸಹೋದರಿ ರಂಗೋಲಿ ಚಾಂದೇಲ್  (Rangoli Chandel)ಅವರ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಜೊತೆಗೆ ಯೋಗ ಜೀವನಕ್ಕೆ ಎಷ್ಟು ಮುಖ್ಯ ಎಂದು ಕಂಗನಾ ತಿಳಿಸಿದ್ದಾರೆ. ರೋಗ ಯಾವುದೇ ಇದ್ದರೂ ಎಲ್ದಕ್ಕೂ ಯೋಗ ಮದ್ದು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.ಇದಕ್ಕೂ ಮೊದಲು ಕಂಗನಾ ತಮ್ಮ ತಂದೆ, ತಾಯಿ, ಸಹೋದರ ಅಕ್ಷತ್​ ಹಾಗೂ ಅವರ ಪತ್ನಿ ಕ್ಷತ್ರು ಅವರ ಯೋಗ ಮಾಡುತ್ತಿರುವ ಫೋಟೋಗಳನ್ನೂ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಕಂಗನಾ ರನೋತ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಸಹೋದರಿ (Kangana Ranaut Sister) ರಂಗೋಲಿ ಚಾಂದೇಲ್​ ಅವರು ಯೋಗಾಭ್ಯಾಸದ ಸ್ಟೋರಿ ಪ್ರೇರಣಾದಾಯಕವಾಗಿದೆ ಎಂದು ಬರೆದುಕೊಂಡಿದ್ದಾರೆ. ಆ್ಯಸಿಡ್ ದಾಳಿನಿಂದ ಚೇತರಿಸಿಕೊಳ್ಳಲು ಯೋಗ ಸಹ ರಂಗೋಲಿಗೆ ಒಂದು ರೀತಿ ಸಹಕಾರಿಯಾಯಿತು ಎಂದು ಕಂಗನಾ ತಿಳಿಸಿದ್ದಾರೆ.

ತಲೆಕೆಟ್ಟ ಪ್ರೇಮಿಯೊಬ್ಬ ತನ್ನ ಸಹೋದರಿ ರಂಗೋಲಿ ಚಾಂದೇಲ್​ ಅವರಿಗೆ 21ವರ್ಷವಿದ್ದಾಗ ಆ್ಯಸಿಡ್​ ದಾಳಿ ಮಾಡಿದ್ದ. ಆಗಿನ್ನೂ ಆಗಿನ್ನೂ ರಂಗೋಲಿ ವ್ಯಾಸಂಗ ಮಾಡುತ್ತಿದ್ದರು. ಆ್ಯಸಿಡ್​ ದಾಳಿಯಿಂದಾಗಿ ರಂಗೋಲಿ ಅವರಿಗೆ ಥರ್ಟ್​ ಡಿಗ್ರಿ ಬರ್ನಿಂಗ್​ ಆಗಿತ್ತು.

Kangana Ranaut, Rangoli chandel, International Yoga Day, #InternationalYogaDay, Acid Attack on Rangoli Chandel, Bollywood, ರಂಗೋಲಿ ಚಾಂದೇಲ್​, ಕಂಗನಾ ರನೋತ್​, ಬಾಲಿವುಡ್​ ಕ್ವೀನ್ ಕಂಗನಾ ರನೌತ್​, ರಂಗೋಲಿ ಚಾಂದೇಲ್​ ಮೇಲೆ ಆ್ಯಸಿಡ್​ ದಾಳಿ, ಅಂತರರಾಷ್ಟ್ರೀಯ ಯೋಗ ದಿನ,On International Yoga Day Kangana Ranaut shares her sister Rangoli Chandels acid attack story ae
ರಂಗೋಲಿ ಬಗ್ಗೆ ಕಂಗನಾ ಮಾಡಿರುವ ಇನ್​ಸ್ಟಾಗ್ರಾಂ ಪೋಸ್ಟ್​


ಒಂದು ವರ್ಷದಲ್ಲಿ 53 ಸರ್ಜರಿ ಮಾಡಿದ್ದರೂ ಅದು ಸಾಕಾಗಲಿಲ್ಲ

ಆ್ಯಸಿಡ್​ನಿಂದಾಗಿ ರಂಗೋಲಿ ಅವರ ಮುಖದ ಅರ್ಧ ಭಾಗ ಸುಟ್ಟು ಹೋಗಿತ್ತು. ಒಂದು ಕಣ್ಣಿನ ದೃಷ್ಟಿ ಸಹ ಕಳೆದುಕೊಂಡಿದ್ದರು ರಂಗೋಲಿ. ಒಂದು ಕಿವಿ ಸಹ ಮುಖದ ಜತೆ ಸುಟ್ಟು ಸೇರಿಕೊಂಡಿತ್ತು ಹಾಗೂ ಸ್ತನಗಳು ಸಹ ಗಂಭೀರವಾಗಿ ಗಾಯಗೊಂಡಿದ್ದವು. ಆಗ ರಂಗೋಲಿ ಅವರಿಗೆ ಒಂದು ವರ್ಷದಲ್ಲಿ 53 ಸರ್ಜರಿಗಳನ್ನು ಮಾಡಲಾಗಿತ್ತಾದರೂ ಅದು ಸಾಕಾಗಲಿಲ್ಲ ಎಂದು ಕಂಗನಾ ಹಳೇ ಘಟನೆ ಬಗ್ಗೆ ವಿವರಿಸಿದ್ದಾರೆ.

ಇದನ್ನೂಓದಿ: ಸೀರೆಗೂ ಸೈ ಮಾಡರ್ನ್ ಉಡುಗೆಗೂ ಜೈ ಅನ್ನೋ ಸಿಂಪಲ್​ ನಟಿ ಶ್ವೇತಾ ಶ್ರೀವಾತ್ಸವ್​

ರಂಗೋಲಿ ಅವರ ಮೇಲೆ ಆ್ಯಸಿಡ್​ ದಾಳಿ ನಡೆದಾಗ ತನಗೆ ಸಹೋದರಿಯ ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚಾಗಿ ಚಿಂತೆ ಇತ್ತು. ಇಂತಹ ಘಟನೆಗಳು ವ್ಯಕ್ತಿಯನ್ನು ಮಾನಸಿಕವಾಗಿ ಕುಗ್ಗಿಸಿ ಬಿಡುತ್ತವೆ. ಆಗ ರಂಗೋಲಿ ಮಾತನಾಡುವುದನ್ನೇ ನಿಲ್ಲಿಸಿ ಬಿಟ್ಟಿದ್ದರು. ಏನೇ ಆದರೂ ಆಗ ರಂಗೋಲಿ ಒಂದು ಪದ ಕೂಡ ಮಾತನಾಡುತ್ತಿರಲಿಲ್ಲ. ಕೇವಲ ವಸ್ತುಗಳನ್ನು ನೋಡುತ್ತಲೇ ಇರುತ್ತಿದ್ದರು. ಆ್ಯಸಿಡ್​ ದಾಳಿ ನಡೆಯುವ ಮುನ್ನ ರಂಗೋಲಿ ವಾಯುಪಡೆಯ ಅಧಿಕಾರಿಯೊಬ್ಬರ ಜತೆ ಎಂಗೇಜ್​ ಆಗಿದ್ದರು ಎಂದು ಕಂಗನಾ ಹೇಳಿದ್ದಾರೆ.ಇದನ್ನೂ ಓದಿ: Kannada Bigg Boss 8: ಬುಧವಾರದಿಂದ ಬಿಗ್​ ಬಾಸ್ 8ರ 2ನೇ ಇನ್ನಿಂಗ್ಸ್​ ಆರಂಭ: ಕಾರ್ಯಕ್ರಮದಲ್ಲಿ ಹೊಸ ಟ್ವಿಸ್ಟ್​..!

ಆ್ಯಸಿಡ್ ದಾಳಿ ನಂತರ ರಂಗೋಲಿ ಅವರ ಮುಖ ನೋಡಿ ಹೋದ ಆವ್ಯಕ್ತಿ ಮತ್ತೆ ಮರಳಲೇ ಇಲ್ಲ, ಆಗಲೂ ರಂಗೋಲಿ ಕಣ್ಣಲ್ಲಿ ಒಂದು ಹನಿ ನೀರು ಬರಲಿಲ್ಲ ಹಾಗೂ ಒಂದು ಶಬ್ದವೂ ಮಾತನಾಡಿರಲಿಲ್ಲ. ಹೇಗಾದರೂ ಮಾಡಿ ರಂಗೋಲಿ ನನ್ನ ಜತೆ ಮಾತನಾಡಲಿ ಎಂಧು ನಾನು ಹೋದ ಕಡೆಗಳಲೆಲ್ಲ ರಂಗೋಲಿಯನ್ನು ಕರೆದುಕೊಂಡು ಹೋಗಲು ಆರಂಭಿಸಿದೆ. ನನ್ನ ಜೊತೆ ಯೋಗ ತರಗತಿಗಳಿಗೂ ಕರೆದುಕೊಂಡು ಹೋಗುತ್ತಿದೆ. ರಂಗೋಲಿ ಯೋಗ ಮಾಡಲು ಆರಂಭಿಸಿದಾಗಿನಿಂದ ಅವರಲ್ಲಿ ತುಂಬಾ ಬದಲಾವಣೆಗಳಾವು. ತನ್ನ ನೋವು ಹಾಗೂ ನನ್ನ ಕೆಟ್ಟ ಜೋಕ್ಸ್​ಗಳಿಗೂ ಪ್ರತಿಕ್ರಿಯಲಾರಂಭಿಸಿದರು. ಕಳೆದುಕೊಂಡಿದ್ದ ಕಣ್ಣು ಸಹ ಕಾಣಲಾರಂಭಿಸಿತ್ತು. ಅದಕ್ಕೆ ಯೋಗ ಎಲ್ಲದಕ್ಕೂ ಉತ್ತರ ಎಂದು ನಾನು ನಂಬುತ್ತೇನೆ ಎಂದು ವಿವರಿಸಿದ್ದಾರೆ.
Published by: Anitha E
First published: June 21, 2021, 1:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories