'ನಟಸಾರ್ವಭೌಮ'ನಿಗೆ ಮಿಸ್​ ಆಯ್ತು 'ಸಂತೋಷ': ಪವರ್​ ಸ್ಟಾರ್​ಗೂ ಇದು ಬೇಸರದ ಶಾಕ್​..!

ಸಾಮಾನ್ಯ ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಸ್ಟಾರ್​ಗಳ ಸಿನಿಮಾ ತೆರೆ ಕಾಣುತ್ತೆ ಅಂದರೆ ಅದು ಮೆಜೆಸ್ಟಿಕ್​ನ ಕೆ.ಜಿ. ರಸ್ತೆಯಲ್ಲಿರುವ ಸಂತೋಷ್​-ನರ್ತಕಿ ಚಿತ್ರಮಂದಿರದಲ್ಲಿ. ಈ ಚಿತ್ರಮಂದಿರಗಳಲ್ಲೇ ಸಿನಿಮಾ ನೋಡಬೇಕು ಎಂದು ಅಭಿಮಾನಿಗಳು ಮಾಲ್​ಗಳಿಗೂ ಹೋಗುವುದಿಲ್ಲ. ಇದು ಈ ಚಿತ್ರಮಂದಿಗಳಿಗೆ ಇರುವ ಬೇಡಿಕೆ ಹಾಗೂ ಒಂದು ರೀತಿಯ ಸೆಂಟಿಮೆಂಟ್​. ಆದರೆ ಈ ಬಾರಿ ಅಪ್ಪು ಅಭಿನಯದ 'ನಟಸಾರ್ವಭೌಮ' ಸಿನಿಮಾಗೆ ಈ ಎರಡೂ ಚಿತ್ರಮಂದಿರಗಳು ಮಿಸ್​ ಆಗಿದೆ.

Anitha E | news18
Updated:February 2, 2019, 2:54 PM IST
'ನಟಸಾರ್ವಭೌಮ'ನಿಗೆ ಮಿಸ್​ ಆಯ್ತು 'ಸಂತೋಷ': ಪವರ್​ ಸ್ಟಾರ್​ಗೂ ಇದು ಬೇಸರದ ಶಾಕ್​..!
'ನಟಸಾರ್ವಭೌಮ' ಸಿನಿಮಾದಲ್ಲಿ ಪುನೀತ್​-ರಚಿತಾ ರಾಮ್​
Anitha E | news18
Updated: February 2, 2019, 2:54 PM IST
ಪವರ್ ಸ್ಟಾರ್​ ಪುನೀತ್​​ ಯಾವುದಕ್ಕೂ ತಲೆ ಕೆಡಿಸಿಕೊಳ್ಳುವ ವ್ಯಕ್ತಿಯೇ ಅಲ್ಲ. ಸಿನಿಮಾ ಸೋತಾಗಲೂ ಗೆದ್ದಾಗಲೂ ಮುಖದಲ್ಲಿನ ನಗು ಮಾಯವಾಗಲ್ಲ. ಆದರೆ 'ನಟಸಾರ್ವಭೌಮ' ರಿಲೀಸ್ ವಿಚಾರದಲ್ಲಿ ಮಾತ್ರ ಅಪ್ಪುಗೆ ಸಣ್ಣ ಶಾಕ್ ಆಗಿದೆ. ಪವರ್​ ಹೌಸ್​ ಆಗಿರೋ ಪವರ್​ ಸ್ಟಾರ್​ಗೆ ಶಾಕ್​..? ಅದೇನು ಶಾಕ್​? ಪವರ್​ಗೆ ಶಾಕ್ ಕೊಡೋಕೆ ಸಾಧ್ಯಾನೇ ಇಲ್ಲ ಅಂತಿದ್ದೀರಾ..? ಅಷ್ಟು ಅನುಮಾನ ಇದ್ದರೆ ಈ ವರದಿ ಓದಿ...

ಇದನ್ನೂ ಓದಿ: ಪಾಕಿಸ್ತಾನದವರಂತೆ ನಟಿ ತಮನ್ನಾ ಭಾಟಿಯಾ ಗೊತ್ತಾ ನಿಮಗೆ?

ಅಪ್ಪು ಅಭಿಮಾನಿಗಳಿಗೆ ಅದೊಂದು ಅಭ್ಯಾಸವಾಗಿ ಹೋಗಿತ್ತು. ಸಿನಿಮಾ ರಿಲೀಸ್ ಈ ದಿನಾಂಕ ಪ್ರಕಟವಾಗಿದ್ದೇ ತಡ. ಯಾವ್ಯಾವ ಜಾಗದಲ್ಲಿ ನಮ್ಮ ಅಪ್ಪು ಬಾಸ್ ಪೋಸ್ಟರ್ ಹಾಕಬೇಕು... ತಮ್ಮ ಅಭಿಮಾನದ ಬ್ಯಾನರ್​ಗಳು ಎಲ್ಲೆಲ್ಲಿ ರಾರಾಜಿಸಬೇಕು... ಅಂತ ಕೆ.ಜಿ ರಸ್ತೆಯಲ್ಲಿರೋ ಸಂತೋಷ್- ನರ್ತಕಿ ಚಿತ್ರಮಂದಿರದ ಜಾಗವನ್ನು ತಮ್ಮ ವಶಕ್ಕೆ ತೆಗೆದುಕೊಂಡು ಬಿಡುತ್ತಿದ್ದರು. ಪವರ್​ ಸ್ಟಾರ್​ ಪಕ್ಕಾ ಅಭಿಮಾನಿಗಳಿಗಂತೂ ಒಂದು ವಾರ ಈ ಚಿತ್ರಮಂದಿರವೇ ಮನೆಯಾಗಿಬಿಡುತ್ತಿತ್ತು. ಸಂತೋಷ್ ಚಿತ್ರಮಂದಿರವೇ ಪುನೀತ್ ಅಭಿಮಾನಿಗಳ ಸಂತೋಷ ಸಂಭ್ರಮದ ಸ್ಥಳವಾಗುತ್ತಿತ್ತು.

ಆದರೆ ಈ ಬಾರಿ ಮಾತ್ರ ಅದೇ ಸಂತೋಷ ಮಿಸ್ಸಿಂಗ್. 'ನಟಸಾರ್ವಭೌಮ' ಚಿತ್ರಕ್ಕೆ ಸಂತೋಷ್ ಮತ್ತು ನರ್ತಕಿ ಯಾವುದೂ ಸಿಕ್ಕಿಲ್ಲ. ಅಪ್ಪು ಸಿನಿಮಾ ಶಾಕಿಂಗ್ ಅನ್ನೋ ಹಾಗೆ ತ್ರಿವೇಣಿ ಚಿತ್ರಮಂದಿರಕ್ಕೆ ಶಿಫ್ಟ್ ಆಗಿದೆ.  ಪುನೀತ್ ಸಿನಿಮಾ ಅಂದರೆ ಎಷ್ಟೋ ಅಭಿಮಾನಿಗಳು ಥಿಯೇಟರ್ ಯಾವುದು ಅಂತ ಕೂಡ ನೋಡುತ್ತಿರಲಿಲ್ಲ. ಸಂತೋಷ್ ಇರುತ್ತೆ ಇಲ್ಲದಿದ್ದರೆ ನರ್ತಕಿ ಅಂತ ಫಿಕ್ಸಾಗಿ, ಮೆಜೆಸ್ಟಿಕ್ ಬಸ್ ಹತ್ತಿ ಮೈಸೂರ್ ಬ್ಯಾಂಕ್ ಬಳಿ ಬಂದು ಇಳಿದುಬಿಡುತ್ತಿದ್ದರು. ಫೆಬ್ರವರಿ 7ಕ್ಕೆ 'ನಟಸಾರ್ವಭೌಮ' ನೋಡೋಕೆ ಮಾತ್ರ ಅಪ್ಪು ಅಭಿಮಾನಿಗಳಿಗೆ ಏನನ್ನೋ ಕಳೆದುಕೊಂಡ ಅನುಭವ ಆಗುವುದರಲ್ಲಿ ಅನುಮಾನವಿಲ್ಲ.

ಇನ್ನು ನರ್ತಕಿ- ಸಂತೋಷ್ ಚಿತ್ರಮಂದಿರದ ಬ್ಲಾಕ್ ಇದೆಯಲ್ಲ ಅದು ಅಭಿಮಾನಿಗಳು ಕುಣಿದು ಸಂಭ್ರಮಿಸಲು ಹೇಳಿ ಮಾಡಿಸಿದ ಸ್ಥಳ. ಮುಖ್ಯ ರಸ್ತೆಯ ಬದಿಯಲ್ಲೇ ಇರುವುದರಿಂದ ಸಾವಿರಾರು ಅಭಿಮಾನಿಗಳು ಜಮಾಯಿಸಿ ಹಬ್ಬ ಮಾಡುತ್ತಿದ್ದರು. ಆದರೆ ತ್ರಿವೇಣಿ ಚಿತ್ರಮಂದಿರ ಅಣ್ಣಮ್ಮ ದೇವಸ್ಥಾನದ ಬಳಿಯಲ್ಲೇ ಇದ್ದು, ಸದಾ ವಾಹನಗಳ ಕಿರಿಕಿರಿ ಅಲ್ಲಿ ಅಭಿಮಾನಿಗಳ ಹಾಡು, ಕುಣಿತ, ಸಂಭ್ರಮಕ್ಕೆ ಜಾಗ ಸಿಗೋದು ಕಷ್ಟ. ಅಭಿಮಾನಿಗಳಿಗೆ ಈ ಬೇಸರ ಇರುವುದರಿಂದ ಸಹಜವಾಗಿಯೇ ಅಪ್ಪುಗೂ ಈ ಬಾರಿ ರೆಗ್ಯುಲರ್ ಚಿತ್ರಮಂದಿರ ಮಿಸ್ ಆಗಿರೋದ್ರಿಂದ ಬೇಸರವಾಗಿರಬಹುದು.

ಇದನ್ನೂ ಓದಿ: ಟಾಲಿವುಡ್​ನ ಮೋಸ್ಟ್​ ಎಲಿಜಬಲ್​ ಬ್ಯಾಚುಲರ್ಸ್​​ ಪಟ್ಟಿಯಲ್ಲಿ 'ಬಾಹುಬಲಿ' ಪ್ರಭಾಸ್​ಗೆ ಮೊದಲ ಸ್ಥಾನ..!
Loading...

ಪುನೀತ್​ ಪಕ್ಕಾ ಅಭಿಮಾನಿಗಳು ಚಿತ್ರವನ್ನು ಮೊದಲ ದಿನ ಮೊದಲ ಆಟ ನೋಡಬೇಕು ಅಂದುಕೊಳ್ಳುತ್ತಾರೆ. ಮಾತ್ರವಲ್ಲ 'ಫಸ್ಟ್ ಡೇ ಫಸ್ಟ್ ಶೋ' ನೋಡ್ತಾರೆ. ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟನಿಗೆ ಎಲ್ಲಕ್ಕಿಂತ ದೊಡ್ಡ ಥಿಯೇಟರ್ ಸಿಗಬೇಕು ಅನ್ನೋ ಆಸೆ ಇರುತ್ತೆ. ಈ ಬಾರಿ ಈ ಆಸೆ ನಿರಾಸೆಯಾಗುತ್ತೆ. ಆದರೆ ಒಂದು ವರ್ಷವಿಡೀ ಪುನೀತ್ ಸಿನಿಮಾ ರಿಲೀಸ್ ಆಗದೇ ಇರುವುದರಿಂದ ಅಭಿಮಾನಿಗಳು 'ನಟಸಾರ್ವಭೌಮ'ನನ್ನು ನೋಡೋಕೆ ತುದಿಗಾಲಲ್ಲಿ ನಿಂತಿದ್ದಾರೆ.

ಹಾಗೆ ನೋಡಿದರೆ ಸಂತೋಷ್ ಥಿಯೇಟರ್ ಅಂದರೆ ಪುನೀತ್​ಗೆ ಅದೃಷ್ಟದ ಚಿತ್ರಮಂದಿರ. ಅದಕ್ಕೇ ಹೆಚ್ಚು ಸಿನಿಮಾಗಳು ಅಲ್ಲೇ ರಿಲೀಸಾಗುತ್ತವೆ ಎಂದು ಹೇಳಲಾಗುತ್ತಿತ್ತು. ಆದರೆ 'ರಾಜಕುಮಾರ' ಚಿತ್ರ ಸಂತೋಷ್ ಚಿತ್ರಮಂದಿರದ ಆವರಣದಲ್ಲೇ ಇರುವ ನರ್ತಕಿಯಲ್ಲಿ ತೆರೆಕಂಡು ದೊಡ್ಡ ಹಿಟ್ ಆಗಿತ್ತು. ಆಗ ಈ ಜಾಗಾನೇ ಪವರ್​ಸ್ಟಾರ್​ಗೆ ಲಕ್ಕಿ ಅಂತ ಅಭಿಮಾನಿಗಳು ಮಾತಾಡಿಕೊಂಡಿದ್ದರು.

ಇಡೀ ಸಿನಿಮಾ ಆನ್​ಲೈನ್​ನಲ್ಲಿ ಲೀಕಾದರೂ ಸಿನಿಮಾ ಚೆನ್ನಾಗಿದ್ದರೆ ಸಾಕು ಸೂಪರ್ ಹಿಟ್ ಆದ ಉದಾಹರಣೆಗಳಿವೆ. ಹೀಗಿರುವಾಗ, ಯಾವ ಚಿತ್ರಮಂದಿರದ ಸೆಂಟಿಮೆಂಟೂ ಇಲ್ಲದೇ 'ನಟಸಾರ್ವಭೌಮ'ನನ್ನು ನೋಡೋಕೆ ತಯಾರಾಗೋದು ಒಳ್ಳೆಯದು.

PHOTOS: ವೈರಲ್​ ಆಯಿತು ರಣವೀರ್​-ದೀಪಿಕಾ ಕಿಸ್ಸಿಂಗ್​ ಫೋಟೋ..!

First published:February 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...