Adipurush ರಿಲೀಸ್ ದಿನಾಂಕ ಪ್ರಕಟ: Akshay Kumar​-Prabhas​ ನಡುವೆ ನಡೆಯಲಿದೆ ಪೈಪೋಟಿ..!

ನಿನ್ನೆಯೇ ಅಕ್ಷಯ್​ ಕುಮಾರ್ ಅವರ ರಕ್ಷಾಬಂಧನ್ ಸಿನಿಮಾದ ರಿಲೀಸ್ ದಿನಾಂಕ ಪ್ರಕಟವಾಗಿದೆ. ಈಗ ಪ್ರಭಾಸ್​ ಅವರ ಆಧಿಪುರುಷ್​ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್​ ಆಗಿದೆ. ಈ ಎರಡೂ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಒಟ್ಟಿಗೆ ರಿಲೀಸ್ ಆಗಲಿವೆ. ಹೌದು, ಮುಂದಿನ ವರ್ಷ ಅಂದರೆ 2022ರ ಆಗಸ್ಟ್​ 11ಕ್ಕೆ ಎರಡೂ ಸಿನಿಮಾಗಳು ತೆರೆಗಪ್ಪಳಿಸಲಿವೆ.

ಅಕ್ಷಯ್​ ಕುಮಾರ್ ಹಾಗೂ ಪ್ರಭಾಸ್​

ಅಕ್ಷಯ್​ ಕುಮಾರ್ ಹಾಗೂ ಪ್ರಭಾಸ್​

  • Share this:
ಕಳೆದ ಕೆಲವು ದಿನಗಳಿಂದ ಎಲ್ಲ ಸಿನಿರಂಗದಲ್ಲೂ ಹೊಸ ಸಿನಿಮಾಗಳ ರಿಲೀಸ್ ದಿನಾಂಕ ಪ್ರಕವಾಗುತ್ತಿದೆ. ಅದರಲ್ಲೂ ನಿನ್ನೆಯಂತೂ ಬಾಲಿವುಡ್​ನಲ್ಲಿ 14 ಸಿನಿಮಾಗಳ ಬಿಡುಗಡೆ ದಿನಾಂಕ ಅನೌನ್ಸ್​ ಆಗಿದೆ. ಬಿಗ್ ಬಜೆಟ್ ಸಿನಿಮಾಗಳ ಚಿತ್ರತಮಂಡಗಳು ಮಹಾರಾಷ್ಟ್ರದಲ್ಲಿ ಅಕ್ಪೋಬರ್ 22ರಿಂದ ಸಿನಿಮಾ ಮಂದಿರಗಳು ಬಾಗಿಲು ತೆರೆಯುತ್ತಿದೆ. ಮಹಾರಾಷ್ಟ್ರದ ರಾಜ್ಯ ಸರ್ಕಾರ  (Maharashtra Government) ಆದೇಶ ಹೊರಡಿಸುತ್ತಿದ್ದಂತೆಯೇ ಬಾಲಿವುಡ್​ನಲ್ಲಿ ಬರೋಬ್ಬರಿ 14 ಸಿನಿಮಾಗಳ ರಿಲೀಸ್ ದಿನಾಂಕ ಹೊರ ಬಿದ್ದಿದೆ. ಅವುಗಳಲ್ಲಿ ಅಕ್ಷಯ್ ಕುಮಾರ್ (Akshay Kumar)​ ಅಭಿನಯದ ಸಾಲು ಸಾಲು ಸಿನಿಮಾಗಳ ಬಿಡುಗಡೆ ದಿನಾಂಕ ಸಹ ಇವೆ. ಹೌದು, ಒಂದು ಕಡೆ ಅಕ್ಷಯ್​ ಕುಮಾರ್ ಅಭಿನಯದ ರಕ್ಷಾ ಬಂಧನ್ (Raksha Bandhan)​ ಸಿನಿಮಾ ಹಾಗೂ ಪ್ರಭಾಸ್​ (Prabhas) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಆದಿಪುರುಷ್​   (Adipurush) ಸಂಕ್ರಾಂತಿಗೆ ತೆರೆ ಕಾಣಲಿವೆ. ಹೌದು, ಈ ಎರಡೂ ಸಿನಿಮಾಗಳು ಪೊಂಗಲ್​ಗೆ ರಿಲೀಸ್ ಆಗಲಿದ್ದು, ಇಬ್ಬರೂ ನಟರ ಚಿತ್ರಗಳ ನಡುವೆ ಬಾಕ್ಸಾಫಿಸ್​ನಲ್ಲಿ ಪೈಪೋಟಿ ನಡೆಯಲಿದೆ. 

ಹೌದು, ನಿನ್ನೆಯೇ ಅಕ್ಷಯ್​ ಕುಮಾರ್ ಅವರ ರಕ್ಷಾಬಂಧನ್ ಸಿನಿಮಾದ ರಿಲೀಸ್ ದಿನಾಂಕ ಪ್ರಕಟವಾಗಿದೆ. ಈಗ ಪ್ರಭಾಸ್​ ಅವರ ಆಧಿಪುರುಷ್​ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್​ ಆಗಿದೆ. ಈ ಎರಡೂ ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಒಟ್ಟಿಗೆ ರಿಲೀಸ್ ಆಗಲಿವೆ. ಹೌದು, ಮುಂದಿನ ವರ್ಷ ಅಂದರೆ 2022ರ ಆಗಸ್ಟ್​ 11ಕ್ಕೆ ಎರಡೂ ಸಿನಿಮಾಗಳು ತೆರೆಗಪ್ಪಳಿಸಲಿವೆ.

ಇನ್ನು, ಈ ಸ್ಟಾರ್​ಗಳ ಸಿನಿಮಾಗಳೂ ಒಂದೇ ದಿನ ರಿಲೀಸ್ ಆಗುತ್ತಿರುವುದೇ ದೊಡ್ಡ ಸುದ್ದಿಯಾಗಿದೆ. ಯಾರ ಸಿನಿಮಾ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸಲಿದೆ ಅನ್ನೋ ಲೆಕ್ಕಾಚಾರ ಈಗಿನಿಂದಲೇ ಆರಂಭವಾಗಲಿದೆ.ಬಾಲಿವುಡ್​ ಸಿನಿಮಾಗಳ ನಿರ್ದೇಶಕ ಓಂ ಪ್ರಕಾಶ್ ರಾವತ್​ ಅವರು ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಆದಿಪುರುಷ್​. ಈ ಸಿನಿಮಾದಲ್ಲಿ ಪ್ರಭಾಸ್​ ಅವರು ರಾಮನಾಗಿ, ಕೃತಿ ಸನೋನ್​ ಸೀತೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸೈಫ್ ಅಲಿ ಖಾನ್​ ರಾವಣನಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ, ಕನ್ನಡ, ಹಿಂದಿ, ತೆಲುಗು, ತಮಿಳುಹಾಗೂ ಮಲಯಾಳಂನಲ್ಲಿ ರಿಲೀಸ್​ ಆಗಲಿದೆ.

ಇದನ್ನೂ ಓದಿ: Prabhas: ರಾಧೆ ಶ್ಯಾಮ್​ ಚಿತ್ರದ ಕಡೆಯಿಂದ ಪ್ರೇಮಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ: ಲವರ್ ಬಾಯ್​ ಆಗಿ ಮಿಂಚಿದ ಪ್ರಭಾಸ್​

ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ಪ್ರಭಾಸ್ ಮೀಸೆ ಬಿಟ್ಟು ರಾಮನ ಪಾತ್ರಕ್ಕೆ ತಯಾರಿ ನಡೆಸಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿನ ಪಾತ್ರಕ್ಕಾಗಿಯೇ ಬಿಲ್ಲು ವಿದ್ಯೆಯ ಅಭ್ಯಾಸ ಸಹ ಮಾಡಿದ್ದಾರಂತೆ.

ಸ್ಟಾರ್​ ವಾರ್​ನಿಂದ ಆದಷ್ಟು ದೂರ ಉಳಿಯುವ ಅಕ್ಷಯ್ ಕುಮಾರ್ ತಮ್ಮ ಸಿನಿಮಾದ ರಿಲೀಸ್​ ದಿನಾಂಕ ಕಡೆಯ ಸಮಯದಲ್ಲಿ ಬದಲಾಯಿಸಿದರೂ ಆಶ್ಚರ್ಯಪಡಬೇಕಿಲ್ಲ. ಕಾರಣ ಈ ಹಿಂದೆ ಬೇರೆ ಸ್ಟಾರ್​ಗಳು ಮನವಿ ಮಾಡಿದಾಗಲೂ ಅಕ್ಷಯ್​ ತಮ್ಮ ಸಿನಿಮಾಗಳ ರಿಲೀಸ್​ ಅನ್ನು ಮುಂದೂಡಿದ್ದೂ ಇದೆ.

ಅಂಕಲ್ ಅಂತ ಟ್ರೋಲ್ ಮಾಡಿದ್ದ ನೆಟ್ಟಿಗರು

ಪ್ರಭಾಸ್​ ಅವರು ಸದ್ಯ ಆದಿಪುರುಷ್​ ಸಿನಿಮಾಗಾಗಿ ತಯಾರಿ ನಡೆಸುತ್ತಿದ್ದಾರೆ. ಅವರು ಹಾಡಿನ ಚಿತ್ರೀಕರಣ ಆರಂಭವಾಗುವ ಮೊದಲು ಕೃತಿ ಸನೋನ್​ ಜತೆ ಡ್ಯಾನ್ಸ್​ ಅಭ್ಯಾಸ ಮಾಡಲು ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಈ ವೇಳೆ ಪಾಪರಾಜಿಗಳ ಕ್ಯಾಮೆರಾಗೆ ಸೆರೆ ಸಿಕ್ಕಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ಪ್ರಭಾಸ್​ ಸದ್ಯ ಮೀಸೆ ಬಿಟ್ಟಿದ್ದು, ಕೊಂಚ ತೂಕ ಹೆಚ್ಚಿಸಿಕೊಂಡಿದ್ದಾರೆ. ಡ್ಯಾನ್ಸ್​ ಪ್ರಾಕ್ಟೀಸ್​ಗೆ ಬಂದಾಗ ಪ್ರಭಾಸ್​ ಅವರು ಮೇಕಪ್​ ಇಲ್ಲದೆ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:  Radhe Shyam: ಕೃಷ್ಣ ಜನ್ಮಾಷ್ಟಮಿಯಂದು ಪ್ರಭಾಸ್ ಅಭಿನಯದ ರಾಧೆ ಶ್ಯಾಮ್​ ಚಿತ್ರತಂಡದ​ ಕಡೆಯಿಂದ ಸಿಕ್ತು ಭರ್ಜರಿ ಗಿಫ್ಟ್​

ಪ್ರಭಾಸ್​ ಅವರ ಈ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಇದನ್ನು ನೋಡಿದ ಟ್ರೋಲಿಗರು ಪ್ರಭಾಸ್​ ಅವರಿಗೆ ವಯಸ್ಸಾಯಿತು, ಅಂಕಲ್​, ವಡಾ ಪಾವ್​ ತರ ಇದ್ದಾರೆ ಎಂದೆಲ್ಲ ಕಮೆಂಟ್​ ಮಾಡುವ ಮೂಲಕ ಟ್ರೋಲ್​ ಮಾಡಿದ್ದರು. ಒಂದು ಕಡೆ ಟ್ರೋಲಿಗರು ಹೀಗೆಲ್ಲ ಹಿಗ್ಗಾಮುಗ್ಗಾ ಟ್ರೋಲ್​ ಮಾಡುತ್ತಿದ್ದರೆ, ಅಭಿಮಾನಿಗಳು ಮಾತ್ರ ಪ್ರಭಾಸ್ ಪರ ನಿಂತಿದ್ದಾರೆ. ಈಗ ಟ್ರೋಲ್ ಮಾಡುವವರು ರಾಧೆ ಶ್ಯಾಮ್​ ರಿಲೀಸ್ ಆದ ನಂತರ ಬಾಯಿ ಮುಚ್ಚಿಕೊಳ್ಳುತ್ತಾರೆ ಎಂದೆಲ್ಲ ಹೇಳುವ ಮೂಲಕ ನೆಚ್ಚಿನ ನಟನ ಬೆಂಬಲಕ್ಕೆ ನಿಂತಿದ್ದರು.

ಪ್ರಭಾಸ್​ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಪೂಜೆ ಹೆಗ್ಡೆ ಜೊತೆ ನಟಿಸುತ್ತಿರುವ ಹಾಗೂ ರಾಧಾಕೃಷ್ಣ ಕುಮಾರ್ ನಿರ್ದೇಶನದ ರಾಧೆ ಶ್ಯಾಮ್​ ತೆರೆಗೆಪ್ಪಳಿಸಲು ಸಿದ್ಧವಾಗಿದೆ. ದೀಪಿಕಾ ಪಡುಕೋಣೆ ಹಾಗೂ ಅಮಿತಾಭ್​ ಅವರ ಜೊತೆಗಿನ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಪ್ರಶಾಂತ್​ ನೀಲ್​ ನಿರ್ದೇಶನದಲ್ಲಿ ಹೊಂಬಾಳೆ ಫಿಲಂಸ್​ ನಿರ್ಮಿಸುತ್ತಿರುವ ಸಲಾರ್​ ಚಿತ್ರೀಕರಣ ಸಹ ನಡೆಯುತ್ತಿದೆ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಶ್ರುತಿ ಹಾಸನ್​ ನಟಿಸಿದ್ದಾರೆ.
Published by:Anitha E
First published: