• Home
  • »
  • News
  • »
  • entertainment
  • »
  • Upendra: ಉಪೇಂದ್ರ ಕಾಲೇಜು ದಿನಗಳಲ್ಲಿ ಬರೆದ ಕಥೆ ‘ಓಂ‘ ಸಿನಿಮಾವಾಗಿ ಮೂಡಿ ಬಂದಾಗ..!

Upendra: ಉಪೇಂದ್ರ ಕಾಲೇಜು ದಿನಗಳಲ್ಲಿ ಬರೆದ ಕಥೆ ‘ಓಂ‘ ಸಿನಿಮಾವಾಗಿ ಮೂಡಿ ಬಂದಾಗ..!

 ‘ಓಂ‘

‘ಓಂ‘

OM Kannada Movie: ‘ಓಂ‘ ಸಿನಿಮಾದ ಚಿತ್ರಕಥೆಯನ್ನು ಉಪ್ಪಿ ಕಾಲೇಜ್ ಡೇಸ್ ನಲ್ಲೇ ಬರೆದು ಕೊಂಡಿದರಂತೆ. ಆಗಿನ್ನೂ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಯೇ ಇರಲಿಲ್ಲ. ಇನ್ನು 1989ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಶಿವ‘ ಸಿನಿಮಾ ರಿಲೀಸ್ ಆಗಿತ್ತು.

  • Share this:

ಕನ್ನಡ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಸಾವಿರಾರು ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ನೂರಾರು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿವೆ. ಆದರೆ ಅವುಗಳಲ್ಲಿ 'ಓಂ' ಚಿತ್ರ ಮಾತ್ರ ಸ್ಯಾಂಡಲ್​ವುಡ್​ನ ದಿಕ್ಕನ್ನೇ ಬದಲಾಯಿಸಿದ ಸಿನಿಮಾ. ಕನ್ನಡದ ಕಲ್ಟ್ ಕ್ಲಾಸಿಕ್ ಎಂಬ ಹಣೆ ಪಟ್ಟಿ ಪಡೆದಿರೋ ಈ ಸಿನಿಮಾ ಮೇ 19ಕ್ಕೆ 25 ವರ್ಷಗಳನ್ನು ಪೂರೈಸುತ್ತಿದೆ. ಈ ಸುವರ್ಣ ಸಂದರ್ಭದಲ್ಲಿ ಸಿನಿಮಾ ಬಗ್ಗೆ ಒಂದಷ್ಟು ಎಕ್ಸ್ ಕ್ಲೂಸಿವ್ ಮಾಹಿತಿ ಇಲ್ಲಿದೆ...

‘ಓಂ‘ ಸಿನಿಮಾದ ಚಿತ್ರಕಥೆಯನ್ನು ಉಪ್ಪಿ ಕಾಲೇಜ್ ಡೇಸ್ ನಲ್ಲೇ ಬರೆದು ಕೊಂಡಿದರಂತೆ. ಆಗಿನ್ನೂ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಯೇ ಇರಲಿಲ್ಲ. ಇನ್ನು 1989ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಶಿವ‘ ಸಿನಿಮಾ ರಿಲೀಸ್ ಆಗಿತ್ತು. ಆ ಸಿನಿಮಾ ನೋಡಿದ ಉಪ್ಪಿಗೆ ಶಾಕ್ ಆಗಿತ್ತಂತೆ! ಯಾಕೆಂದರೆ ತಾವು ಬರೆದುಕೊಂಡಿರೋ ಕಥೆಗೂ ಶಿವ ಸಿನಿಮಾಗೂ ಸಾಮ್ಯತೆ ಇದ್ದದ್ದೇ ಇದಕ್ಕೆ ಕಾರಣ. ಒಂದಷ್ಟು ಸಮಯ ಉಪ್ಪಿಗೆ ದಿಕ್ಕೇ ತೋಚದಂತಾಗಿತ್ತಂತೆ. ಆದರೆ ಬುದ್ದಿವಂತ ಉಪ್ಪಿ ಇಡೀ ಚಿತ್ರಕತೆಯನ್ನ ರಿವರ್ಸ್ ಫಾರ್ಮೆಟ್ ನಲ್ಲಿ ಹೆಣೆದರಂತೆ.

ಆ ನಂತರ ಉಪ್ಪಿ ಕಾಶಿನಾಥ್ ಗರಡಿಯ ಮೂಲಕ ಸಿನಿರಂಗಕ್ಕೆ ಎಂಟ್ರಿಯಾದರು. ಡೈಲಾಗ್, ಸಾಂಗ್ಸ್ ಬರೆದು ಗುರುತಿಸಿಕೊಂಡರು. ‘ತರ್ಲೆ ನನ್ಮಗ‘ ಸಿನಿಮಾದಿಂದ ಡೈರೆಕ್ಟರ್ ಆದರು. ಆದಾದ ಮೇಲೆ ‘ಶ್‘ ಸಿನಿಮಾಗೆ ಹೊಸ ಭಾಷ್ಯ ಬರೆದರು. ‘ಶ್‘ ನಂತರ ಮೂರನೇ ಸಿನಿಮಾ ಯಾವ ರೀತಿ ಇರಬಹುದು ಎಂಬ ನಿರೀಕ್ಷೆ ಚಿತ್ರರಂಗಕ್ಕಿತ್ತು.

‘ಓಂ‘ ಮೂಲಕ ಅಂಡರ್ ವರ್ಲ್ಡ್ ಚಿತ್ರಗಳಿಗೆ ಓಂಕಾರ ಹಾಡಲು ಉಪೇಂದ್ರ ಸಿದ್ದರಾದರು. ಅಂದಹಾಗೆ ಮೊದಲಿಗೆ ಸತ್ಯ ಅನ್ನೋ ಟೈಟಲ್ ನಲ್ಲಿ ಸಿನಿಮಾ ಮಾಡಲು ಹೊರಟಾಗ, ಉಪ್ಪಿಯ ಆಯ್ಕೆ ಕುಮಾರ್ ಗೋವಿಂದ್ ಆಗಿತ್ತಂತೆ. ಯಾಕೆಂದರೆ ಆಲ್ ರೆಡಿ ಕುಮಾರ್ ಗೋವಿಂದ್ ಜೊತೆ ‘ಶ್‘ ಸಿನಿಮಾ ಮಾಡಿ ದೊಡ್ಡ ಗೆಲುವು ಕಂಡಿಕೊಡಿದ್ದರು. ಆದರೆ ಸ್ಕ್ರಿಪ್ಟ್ ಗೆ ಪೂರ್ಣ ಟಚ್ ಕೊಡ್ತಾ ಕೊಡ್ತಾ. ಶಿವರಾಜ್ ಕುಮಾರ್ ಸತ್ಯನಾಗಿ ಕಾಣಿಸ್ಕೊಂಡರೆ ಚೆನ್ನಾಗಿರುತ್ತೆ ಅಂತ ಅನಿಸಿದೆ.

ಶಿವರಾಜ್ ಕುಮಾರ್ ಈ ಸಿನಿಮಾದಲ್ಲಿ ನಟಿಸಿದರೆ ಚೆನ್ನಾಗಿರುತ್ತದೆ ಅಂತ ಅನಿಸಿದ್ದೇ ತಡ, ಹೊನ್ನವಳ್ಳಿ ಕೃಷ್ಣ‌ ಮೂಲಕ ಡಾ.ರಾಜ್  ಕುಮಾರ್ ಅವರನ್ನ ಉಪ್ಪಿ ಭೇಟಿಯಾಗಿ ಕಥೆ ಹೇಳಿದರು. ಕೇವಲ 10 ನಿಮಿಷದಲ್ಲಿ ಉಪ್ಪಿ ಹೇಳಿದ ಕಥೆಯನ್ನ ಡಾ.ರಾಜ್ ಓಕೆ ಮಾಡಿದರು. ‌ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟರು. ನಮ್ಮದೆ ಬ್ಯಾನರ್ ನಲ್ಲಿ ಸಿನಿಮಾ‌ ಮಾಡಿ ಅಂತ ಆ ಕಾಲಕ್ಕೆ 50 ಸಾವಿರ ಅಡ್ವಾನ್ಸ್ ನೀಡಿದರು.

ಸಿನಿಮಾ‌ ಅನೌನ್ಸ್ ಆದ ನಂತರ ನಾಯಕಿ ಹುಡುಕಾಟ ಶುರುವಾಗಿತ್ತು. ಮೊದಲಿಗೆ ಬಾಲಿವುಡ್ ಖ್ಯಾತ  ನಟಿ ಜೂಹಿ ಚಾವ್ಲಾರನ್ನ ಆಯ್ಕೆ ಮಾಡುವ ಬಗ್ಗೆ ಯೋಚನೆ ನಡೆದಿತ್ತು. ಆದರೆ ಅದಾಗಲೇ ಶಿವರಾಜ್ ಕುಮಾರ್ ಜೊತೆ ನಟಿಸಿದ್ದ ಪ್ರೇಮಾ ಅವರನ್ನ ನಾಯಕಿಯಾಗಿಸಲು ಸ್ವತಃ ಪಾರ್ವತಮ್ಮ ಸೂಚಿಸಿದ್ದರಂತೆ.

ಹಾಗೆಯೇ ಸತ್ಯ ಅಂಡರ್ ವರ್ಲ್ಡ್ ರಿಯಲ್ ಕಥೆಯನ್ನ ಆಧರಿಸಿ ಬರೆದ ಸಿನಿಮಾ ಆಗಿದ್ದರಿಂದ ರಿಯಾಲಿಸ್ಟಿಕ್ ಆಗಿ ಸಿನಿಮಾ ಮೂಡಿಬರಲು, ರಿಯಲ್ ರೌಡಿಗಳನ್ನೇ ಹಾಕಿಕೊಳ್ಳಲು ಉಪ್ಪಿ ಯೋಚಿಸಿದರು. ಅದರಂತೆ ಜೇಡರಹಳ್ಳಿ ಕೃಷ್ಣಪ್ಪ, ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್, ಕೊರಂಗು ಕೃಷ್ಣ ಅವರ ನ್ನ ಚಿತ್ರದಲ್ಲಿ ಪಾತ್ರ ಮಾಡಲು ಒಪ್ಪಿಸಲಾಯಿತು.

ಸತ್ಯ ಎಂಬ ವರ್ಕಿಂಗ್ ಟೈಟಲ್ ನಲ್ಲಿಯೇ ಪ್ರೀ ಪ್ರೊಡಕ್ಷನ್  ಶುರುವಾಗಿದ್ದ ಈ ಸಿನಿಮಾ ಆ ನಂತರ ‘ಓಂ‘ ಎಂಬ ಟೈಟಲ್ ನಲ್ಲಿ ಶುರುವಾಯ್ತು.  ‘ಓಂ‘ ಸಿನಿಮಾ ರಿಲೀಸ್ ಆದಮೇಲೆ ಸೂಪರ್ ಡ್ಯೂಪರ್ ಹಿಟ್ ಆಯಿತು. 600 ಕ್ಕೂ ಹೆಚ್ಚು ಬಾರಿ ರಿ-ರಿಲೀಸ್ ಆಗಿದೆ. ಹಾಗೆಯೇ ತೆಲುಗು-ತಮಿಳಿಗೂ ರಿಮೇಕ್ ಆಯಿತು. ತೆಲುಗಿನಲ್ಲಿ ಸ್ವತಃ ಉಪೇಂದ್ರ ಅವರೇ ನಿರ್ದೇಶನ ಮಾಡಿದ್ದರು.

 

98 ರೂ ಪ್ರಿಪೇಯ್ಡ್​ ಪ್ಯಾಕ್​ನಲ್ಲಿ ಡಬಲ್​ ಡೇಟಾ ಬೆನಿಫಿಟ್​ ನೀಡಿದ ಏರ್​​ಟೆಲ್​!

First published: