Om Kannada Movie: ’ಓಂ‘ ಶೂಟಿಂಗ್​ ಜಾಗಕ್ಕೆ ಖ್ಯಾತ ನಟ ಬರುತ್ತಾರೆಂಬ ಸುದ್ದಿ ಕೇಳಿ ರಿಯಲ್​ ರೌಡಿಗಳೇ ಭಯ ಬಿದ್ದಿದ್ದರಂತೆ!

Om Kannada Movie Completes 25th Year: ಶಿವರಾಜ್​ ಕುಮಾರ್​ ನಟನೆ, ಪ್ರೇಮ ಅವರ ಅಭಿನಯ ಪ್ರೇಕ್ಷರನ್ನು ಮನರಂಜಿಸಿತ್ತು. ಇದರ ಜೊತೆಗೆ ರಿಯಲ್​ ಸ್ಟಾರ್​ ಉಪ್ಪಿ ‘ಓಂ‘ ಸಿನಿಮಾ ರಿಯಲ್​ ಆಗಿ ಮೂಡಿಬರಲೆಂದು ಅಂದಿನ ರೌಡಿಗಳನ್ನು ಅಭಿನಯಸಲು ಅವಕಾಶಕೊಟ್ಟರು. ಅದರಂತೆ ಜೇಡರಹಳ್ಳಿ ಕೃಷ್ಣಯ್ಯ, ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್​, ಕೊರಂಗು ಕೃಷ್ಣ ಸಿನಿಮಾದಲ್ಲಿ ನಟಿಸಿದ್ದರು. ಹಾಗಾಗಿ ‘ಓಂ‘ ಸಿನಿಮಾ ಮತ್ತಷ್ಟು ರಿಯಲಿಸ್ಟಿಕ್​​ ಆಗಿ ಮೂಡಿ ಬರಲು ಸಾಧ್ಯವಾಯಿತು.

news18-kannada
Updated:May 22, 2020, 9:25 AM IST
Om Kannada Movie: ’ಓಂ‘ ಶೂಟಿಂಗ್​ ಜಾಗಕ್ಕೆ ಖ್ಯಾತ ನಟ ಬರುತ್ತಾರೆಂಬ ಸುದ್ದಿ ಕೇಳಿ ರಿಯಲ್​ ರೌಡಿಗಳೇ ಭಯ ಬಿದ್ದಿದ್ದರಂತೆ!
ಓಂ
  • Share this:
ರಿಯಲ್​ ಸ್ಟಾರ್​ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ನಟನೆಯ ‘ಓಂ‘ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ತೆರೆಕಂಡು 25 ವರ್ಷಗಳನ್ನು ಪೂರೈಸಿದೆ. 1995ರಲ್ಲಿ ಬಿಡುಗಡೆಗೊಂಡ ಸಿನಿಮಾ ಅಂದಿಗೆ ದೊಡ್ಡ ಹಿಟ್​​ ನೀಡಿತ್ತಲ್ಲದೆ, ಬಹುದಿನಗಳ ಕಾಲ ಥಿಯೇಟರ್​ನಲ್ಲಿ ಪ್ರದರ್ಶನ ಕಂಡಿತ್ತು. ಅಷ್ಟೇ ಏಕೆ ಸ್ಯಾಂಡಲ್​ವುಡ್​ನಲ್ಲಿ ಗ್ಯಾಂಗ್​ಸ್ಟರ್​ ಸಿನಿಮಾದ ತಳಹದಿಗೆ ‘ಓಂ‘ ಸಿನಿಮಾ ಕಾರಣವಾಯಿತು. ಶಿವರಾಜ್​ ಕುಮಾರ್​ ನಟನೆ, ಪ್ರೇಮ ಅವರ ಅಭಿನಯ ಪ್ರೇಕ್ಷರನ್ನು ಮನರಂಜಿಸಿತ್ತು. ಇದರ ಜೊತೆಗೆ ರಿಯಲ್​ ಸ್ಟಾರ್​ ಉಪ್ಪಿ ‘ಓಂ‘ ಸಿನಿಮಾ ರಿಯಲ್​ ಆಗಿ ಮೂಡಿಬರಲೆಂದು ಅಂದಿನ ರೌಡಿಗಳನ್ನು ಅಭಿನಯಸಲು ಅವಕಾಶಕೊಟ್ಟರು. ಅದರಂತೆ ಜೇಡರಹಳ್ಳಿ ಕೃಷ್ಣಯ್ಯ, ಬೆಕ್ಕಿನ ಕಣ್ಣು ರಾಜೇಂದ್ರ, ತನ್ವೀರ್​, ಕೊರಂಗು ಕೃಷ್ಣ ಸಿನಿಮಾದಲ್ಲಿ ನಟಿಸಿದ್ದರು. ಹಾಗಾಗಿ ‘ಓಂ‘ ಸಿನಿಮಾ ಮತ್ತಷ್ಟು ರಿಯಲಿಸ್ಟಿಕ್​​ ಆಗಿ ಮೂಡಿ ಬರಲು ಸಾಧ್ಯವಾಯಿತು.

‘ಓಂ‘ ಸಿನಿಮಾದ ಶೂಟಿಂಗ್​ ವೇಳೆ ಖ್ಯಾತ ನಟರೊಬ್ಬರು ಸೆಟ್​​ಗೆ ಬರುತ್ತಾರೆಂಬ ವಿಚಾರ ಕೇಳಿ ರಿಯಲ್​ ರೌಡಿಗಳು ಭಯ ಬಿದ್ದಿದ್ದರಂತೆ!. ಹೌದು. ವರನಟ ರಾಜ್​ ಕುಮಾರ್​ ಅವರು ಸಿನಿಮಾ ಶೂಟಿಂಗ್​ ನೋಡಲು ಬರುತ್ತಾರೆಂಬ ಸುದ್ದಿ ಕೇಳಿದಂತೆ ರಿಯಲ್​ ರೌಡಿಗಳು ಹೆದರಿದ್ದರಂತೆ. ಅಣ್ಣಾವ್ರು ನಮ್ಮ ಅಭಿನಯ ನೋಡಿ ಏನನ್ನುತ್ತಾರೋ ಎಂದು ಕೊಂಡಿದ್ದರಂತೆ.

ಅಂದಹಾಗೇ ಈ ಸಿನಿಮಾದ ಕಥೆಗೆ ತಕ್ಕಂತೆ ಶಿವರಾಜ್​ ಕುಮಾರ್​ ಸರಿಹೊಂದುತ್ತಾರೆ ಎಂದು ಉಪ್ಪಿಯ ಮನದಲ್ಲಿ ಮೂಡಿಬಂದಿತ್ತು, ಅದರಂತೆ ಉಪೇಂದ್ರ ಅವರು ಹೊನ್ನವಳ್ಳಿ ಕೃಷ್ಣ ಅವರ ಮೂಲಕ ರಾಜ್​ ಕುಮಾರ್​ ಅವರನ್ನು ಭೇಟಿ ಮಾಡಿದರು.  ಕೇವಲ 10 ನಿಮಿಷದಲ್ಲಿ ಉಪ್ಪಿ ಹೇಳಿದ ಕಥೆಯನ್ನ ಡಾ.ರಾಜ್ ಓಕೆ ಮಾಡಿದರು. ‌ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟರು. ನಮ್ಮದೆ ಬ್ಯಾನರ್ ನಲ್ಲಿ ಸಿನಿಮಾ‌ ಮಾಡಿ ಅಂತ ಆ ಕಾಲಕ್ಕೆ 50 ಸಾವಿರ ಅಡ್ವಾನ್ಸ್ ನೀಡಿದರು.

ಮೇ 19, 1995ರಲ್ಲಿ ತೆರೆಕಂಡ ‘ಓಂ‘ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ, ಪ್ರೇಕ್ಷಕರ ಒತ್ತಾಯದ ಮೇರೆಗೆ ಸಾಕಷ್ಟು ಭಾರಿ ರಿಲೀಸ್​ ಕೂಡ ಆಗಿದೆ. ಇಂದಿಗೆ ಸಿನಿಮಾ ಬಿಡುಗಡೆಗೊಂದು 25 ವರ್ಷಗಳು ಸಂದಿವೆ.

 

ಖ್ಯಾತ ನಟಿ ಮಂಜು ವಾರಿಯರ್​ಗೆ 17 ವರ್ಷದ ಮಗಳಿದ್ದಾಳೆ; ಆದರೆ ಆಕೆ ಅಮ್ಮನ ಜೊತೆಗಿಲ್ಲ!
First published: May 19, 2020, 1:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading