• Home
  • »
  • News
  • »
  • entertainment
  • »
  • CNN-News18 Indian of the Year 2022: ರಣವೀರ್ ಸಿಂಗ್, ನೀರಜ್ ಚೋಪ್ರಾ ಭರ್ಜರಿ ಡಾನ್ಸ್​, ವೈರಲ್ ಆಯ್ತು ವಿಡಿಯೋ

CNN-News18 Indian of the Year 2022: ರಣವೀರ್ ಸಿಂಗ್, ನೀರಜ್ ಚೋಪ್ರಾ ಭರ್ಜರಿ ಡಾನ್ಸ್​, ವೈರಲ್ ಆಯ್ತು ವಿಡಿಯೋ

ರಣವೀರ್ ಸಿಂಗ್, ನೀರಜ್ ಚೋಪ್ರಾ ಭರ್ಜರಿ ಡಾನ್ಸ್

ರಣವೀರ್ ಸಿಂಗ್, ನೀರಜ್ ಚೋಪ್ರಾ ಭರ್ಜರಿ ಡಾನ್ಸ್

ನೀರಜ್ ಚೋಪ್ರಾ ಮತ್ತು ರಣವೀರ್ ಸಿಂಗ್ ಅವರ ಡ್ಯಾನ್ಸ್ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. CNN-News18 Indian of The Year 2022 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಮೇರಾ ವಾಲಾ ಡ್ಯಾನ್ಸ್ ಹಾಡಿಗೆ ಇಬ್ಬರೂ ಅದ್ಭುತವಾಗಿ ನೃತ್ಯ ಮಾಡಿದ್ದಾರೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ(ಅ.13): CNN-News18 Indian of the Year 2022 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲು ನಟ ರಣವೀರ್ ಸಿಂಗ್ (Ranveer Singh) ಬುಧವಾರ ದೆಹಲಿಯಲ್ಲಿದ್ದರು. ಅವರನ್ನು ಮಾಜಿ ನಾಯಕ ಮತ್ತು 1983 ರ ವಿಶ್ವಕಪ್ ವಿಜೇತ ಕಪಿಲ್ ದೇವ್ (Kapil Dev) ಅವರು ಪ್ರಶಸ್ತಿ ನೀಡಿ ಗೌರವಿಸಿದರು. 1983 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ (World Cup) ಭಾರತದ ಐತಿಹಾಸಿಕ ಗೆಲುವಿನ ಆಧಾರದ ಮೇಲೆ 83 ಚಿತ್ರದಲ್ಲಿ ಕಪಿಲ್ ದೇವ್ ಅವರ ಅದ್ಭುತ ಪಾತ್ರಕ್ಕಾಗಿ ರಣವೀರ್ ಅವರನ್ನು ಗೌರವಿಸಲಾಯಿತು. ನಟ ರಣವೀರ್ ಎಂದಿನಂತೆ ಉತ್ಸಾಹಭರಿತರಾಗಿ ಕಾಣಿಸಿಕೊಂಡರು.


ಇದನ್ನೂ ಓದಿ:  Shah Rukh Khan: ಗೌರಿ ಖಾನ್ ತನ್ನನ್ನು ಬಿಟ್ಟು ಹೋಗ್ತೇನೆ ಅಂತ ಹೆದರಿಸಿದ್ರೆ ಶಾರುಖ್ ಖಾನ್ ಸಿಟ್ಟಲ್ಲಿ ಏನ್ ಮಾಡ್ತಾರಂತೆ ಗೊತ್ತಾ?


ಇನ್ನು ಕೆಲ ದಿನಗಳಿಂದ ಬಾಲಿವುಡ್ ನಟರಾದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವಿನ ಭಿನ್ನಾಭಿಪ್ರಾಯದ ಸುದ್ದಿ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿತ್ತು. ಬಾಲಿವುಡ್​ನ ಸ್ಟಾರ್​ ದಂಪತಿ ನಡುವಿನ ಕಲಹದ ವಿಚಾರ ಅವರ ಅಭಿಮಾನಿಗಳನ್ನು ಬೇಸರಗೊಳಿಸಿತ್ತು. ಈ ಬಗ್ಗೆ ನಟಿ ಮೌನ ಮುರಿದು ಪತಿ ಒಂದು ವಾರ ಬ್ಯುಸಿಯಾಗಿದ್ದರು ಎಂದು ಹೇಳಿದ್ದರು. ಹೀಗಿರುವಾಗಲೇ ಈಗ ರಣವೀರ್​ ಸಿಂಗ್ ವಿಡಿಯೋ ಭಾರೀ ವೈರಲ್ ಆಗಿದೆ. ಇದರಲ್ಲಿ, ಅವರು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರೊಂದಿಗೆ ಭರ್ಜರಿ ಸ್ಟೆಪ್ಸ್​ ಹಾಕಿದ್ದಾರೆ.


2022ರ ವರ್ಷದ ಭಾರತೀಯ ಪ್ರಶಸ್ತಿಯನ್ನು ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಅವರಿಗೆ ಹಸ್ತಾಂತರಿಸಲು ರಣವೀರ್ ಮತ್ತು ಕಪಿಲ್ ದೇವ್ ವೇದಿಕೆಯಲ್ಲಿಯೇ ಉಳಿದರು. ಇಬ್ಬರು ಕ್ರೀಡಾಪಟುಗಳು ಮತ್ತು ಚಲನಚಿತ್ರ ತಾರೆಯರು ವೇದಿಕೆಯ ಮೇಲೆ ಕಾಣಿಸಿಕೊಂಡಿದ್ದು, ಇದೇ ವೇಳೆ ರಣವೀರ್ ಸಿಂಗ್, ಚಿನ್ನದ ಹುಡುಗ ನೀರಜ್‌ಗೆ ತನ್ನದೇ ಆದ ಹಾಡುಗಳ ಸ್ಟೆಪ್ಸ್​ ಕಲಿಸಿದ್ದಾರೆ. ನೀರಜ್, ಮೊದಲಿಗೆ ಹಿಂಜರಿದರೂ ಬಳಿಕ ರಣವೀರ್​ ಜೊತೆ ಬಿಂದಾಸ್​ ಆಗಿ ಸ್ಟೆಪ್ಸ್​ ಹಾಕಿದ್ದಾರೆ.


ನೀರಜ್ ಚೋಪ್ರಾ ಜೊತೆ ರಣವೀರ್ ಡ್ಯಾನ್ಸ್


ವಿಡಿಯೋದಲ್ಲಿ ಮೇರಾ ವಾಲಾ ಹಾಡಿಗೆ ಇಬ್ಬರೂ ಅದ್ಭುತವಾಗಿ ನೃತ್ಯ ಮಾಡಿದ್ದಾರೆ. ರಣವೀರ್ ಸ್ಟೈಲಿಶ್ ಲುಕ್‌ನಲ್ಲಿ ತುಂಬಾ ಸ್ಮಾರ್ಟ್ ಆಗಿ ಕಾಣುತ್ತಿದ್ದರೆ, ನೀರಜ್ ಪ್ಯಾಂಟ್ ಶರ್ಟ್‌ನಲ್ಲಿ ಡ್ಯಾಶಿಂಗ್ ಆಗಿ ಕಾಣುತ್ತಿದ್ದಾರೆ. ಈ ವಿಡಿಯೋ ಅಂತರ್ಜಾಲದಲ್ಲಿ ಹೆಚ್ಚು ವೈರಲ್ ಆಗುತ್ತಿದೆ.


ಇದನ್ನೂ ಓದಿ: Samantha Fitness: ನಟಿ ಸಮಂತಾ ಫಿಟ್ನೆಸ್ ಸೀಕ್ರೆಟ್​ ಈ ಸ್ಪೆಷಲ್ ಇಡ್ಲಿಯಂತೆ


ಅಲ್ಲು ಅರ್ಜುನ್ ಜೊತೆ ನೀರಜ್ ಚೋಪ್ರಾ


ಅದೇ ಸಮಯದಲ್ಲಿ, ನೀರಜ್ ಚೋಪ್ರಾ ಅವರು ದಕ್ಷಿಣ ಭಾರತದ ಖ್ಯಾತ ನಟ ಅಲ್ಲು ಅರ್ಜುನ್ ಅವರೊಂದಿಗೆ ಈವೆಂಟ್‌ನಲ್ಲಿ ಕಾಣಿಸಿಕೊಂಡರು. ಇದರಲ್ಲಿ ನೀರಜ್ ಅವರಿಗೆ ಕೈಕುಲುಕುತ್ತಿರುವುದು ಕಂಡು ಬಂತು.ವಿಡಿಯೋದಲ್ಲಿ, ನೀರಜ್ ಹಿಂದಿಯಲ್ಲಿ ಮಾತನಾಡುತ್ತಾ, ನೀವು ಜಾವೆಲಿನ್ ಎಸೆತಗಾರನ ಶೈಲಿ ಮಾಡಿ, ನಾನು ಪುಷ್ಪಾ ಶೈಲಿಯನ್ನು ಮಾಡುತ್ತೇನೆ ಎಂದು ಹೇಳುತ್ತಿರುವುದನ್ನು ಕಾಣಬಹುದು. ಅದರ ನಂತರ ಇಬ್ಬರೂ ಪಾಪರಾಜಿಗಳ ಮುಂದೆ ಪೋಸ್ ನೀಡಿದ್ದಾರೆ.

Published by:Precilla Olivia Dias
First published: