ಶಿವಮೊಗ್ಗ((Shivamogga) ದಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ಬಜರಂಗದಳ ಕಾರ್ಯಕರ್ತ ಹರ್ಷ(Harsha) ಕುಟುಂಬಕ್ಕೆ ಒಳ್ಳೆ ಹುಡ್ಗ ಪ್ರಥಮ್(Pratham) ನೆರವಾಗಿದ್ದಾರೆ. ವೈಯಕ್ತಿಕವಾಗಿ 25 ಸಾವಿರ ರೂ. ನೆರವು ಕೊಟ್ಟಿದ್ದಾರೆ. ಅಲ್ಲಾ ಹೋ ಅಕ್ಬರ್ ಅಂತಾ ಕೂಗಿದ್ರೆ 5 ಲಕ್ಷ ಕೊಡ್ತಾರಂತೆ.ನನ್ನ ಹತ್ತಿರ ಅಷ್ಟು ದುಡ್ಡಿಲ್ಲ. ಸದ್ಯಕ್ಕೆ ನಟ ಭಯಂಕ(Nata Bayankara)ರ ಚಿತ್ರದಿಂದ ಸಾಲದಲ್ಲಿದ್ದೆನೆ. ನನ್ನ ಹತ್ತಿರ ಕೊಡೋಕೆ ಆಗೋದು 25 ಸಾವಿರ ಅಷ್ಟೆ. ಇದ್ದಿದ್ದರೆ ಖಂಡಿತಾ ಕೊಡುತ್ತಿದ್ದೆ ಎಂದಿದ್ದಾರೆ ಪ್ರಥಮ್. ಸರ್ಕಾರವನ್ನು ನಂಬಿಕೊಂಡು ಕೂರಬೇಡಿ. ಹರ್ಷ ಕುಟುಂಬಕ್ಕೆ ನಿಮ್ಮಿಂದ ಸಾಧ್ಯವಾದಷ್ಟೂ ನೆರವಾಗಿ ಎಂದೂ ಕರೆ ಕೊಟ್ಟಿದ್ದಾರೆ ಪ್ರಥಮ್. ನನ್ನ ಹತ್ತಿರ ದುಡ್ಡಿದ್ದಿದ್ರೆ ಖಂಡಿತಾ ಇನ್ನಷ್ಟು ಪ್ರಯತ್ನ ಮಾಡ್ತಿದ್ದೆ. ನನ್ನ ಬಳಿ ದುಡ್ಡಿದ್ದಿದ್ರೆ ಖಂಡಿತವಾಗಿಯೂ ₹1 ಲಕ್ಷ ಕೊಡ್ತಿದ್ದೆ. ನಟಭಯಂಕರ ಚಿತ್ರ ರಿಲೀಸ್ ಆದ ನಂತರ ಮತ್ತಷ್ಟು ಸಹಾಯ(Help) ಮಾಡುತ್ತೇನೆ’ ಎಂದು ತಿಳಿಸಿದ್ದಾರೆ. ಪ್ರಥಮ್ ಅವರ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನಿಜಕ್ಕೂ ನೀವು ಇನ್ನೊಬ್ಬರಿಗೆ ಮಾದರಿಯಾಗಿದ್ದೀರ ನಿಮಗೆ ನಮ್ಮದೊಂದು ಸಲಾಂ ಪ್ರಥಮ್. ನೀವು ನಿಜವಾದ ಹೀರೋ’ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಎಲ್ಲರೂ ನಿಮ್ಮ ಹಾಗೇ ಯೋಚಿಬೇಕು ಎಂದ ನೆಟ್ಟಿಗರು!
ಭೋಸ್, ಭಗತ್, ಇನ್ನು ಹಲವಾರು ಕ್ರಾಂತಿವೀರರು ನಿಮ್ಮ ತರಹ ಯೋಚಿಸಿದ್ದಿದ್ದರೆ ನಾವು ಶತಮಾನಗಳ ವರೆಗೂ ಪರಕೀಯರ ಅಧೀನ ದಲ್ಲಿ ಇರುತ್ತಿದ್ದೆವು, ಆತನು ಭರತಮಾತೆಯ ಋಣ ತೀರಿಸಿ ಕೊಂಡಿದ್ದಾನೆ. ನಿಮ್ಮ ತರ ಯೋಚಿಸಿದ್ದರೆ ಕೇವಲ ಅವರ ತಾಯಿ ಋಣ ಮಾತ್ರ ತೀರಿಸ್ತಿದ್ದ. ಜೈ ಹಿಂದ್ ಎಂದು ನೆಟ್ಟಿಗನೊಬ್ಬ ಪ್ರಥಮ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ಜೀವನ ಕಳ್ಕೊಳ್ಳೋ ಬದಲು,ಒಳ್ಳೆ ಕಾಲೇಜ್ ಗೇ ಸೇರಿ ಒಳ್ಳೆ ವಿದ್ಯೇ ಕಲಿತು ತಂದೆ ತಾಯಿಗಳಿಗೆ ಆಸರೇ ಆಗಿರಿ’ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
#ಅಲ್ಲಾಹುಅಕ್ಬರ್ ಕೂಗಿದ್ರೆ 5 ಲಕ್ಷ ಕೊಡ್ತಾರಂತೆ!
ನನ್ನ ಹತ್ತಿರ ಅಷ್ಟೆಲ್ಲಾ ದುಡ್ಡಿಲ್ಲ!#ನಟಭಯಂಕರ ಸಿನಿಮಾದಿಂದ ಸಾಲದಲ್ಲಿದ್ದೀನಿ!
ಸಧ್ಯಕ್ಕೆ #25ಸಾವಿರ ಕೊಡೋಕಷ್ಟೇ ಸಾಧ್ಯ!
ನನ್ನ ಹತ್ತಿರ ದುಡ್ಡಿದ್ದಿದ್ರೆ ಖಂಡಿತಾ ಇನ್ನಷ್ಟು ಪ್ರಯತ್ನ ಮಾಡ್ತಿದ್ದೆ!
ದಯವಿಟ್ಟು ನೀವೆಲ್ಲರೂ ಕೈಲಾದಷ್ಟು ಸಹಾಯ ಮಾಡಿ #ಹರ್ಷ ರ ಕುಟುಂಬಕ್ಕೆ!my request🙏 pic.twitter.com/DcjINBV61c
— Olle Hudga Pratham (@OPratham) February 21, 2022
ಇದನ್ನೂ ಓದಿ: ಹರ್ಷ ಕೊಲೆ ಪ್ರಕರಣ, 7ನೇ ಆರೋಪಿ ಬಂಧನ, ಭಾನುವಾರ ರಾತ್ರಿ ನಡೆದಿದ್ದೇನು ಗೊತ್ತಾ?
5 ಲಕ್ಷ ರೂ. ವೈಯಕ್ತಿಕ ಪರಿಹಾರ ಘೋಷಿಸಿದ ರೇಣುಕಾಚಾರ್ಯ!
ಶಿವಮೊಗ್ಗದಲ್ಲಿ ಭಾನುವಾರ ರಾತ್ರಿ ಭೀಕರವಾಗಿ ಹತ್ಯೆಯಾದ ಬಜರಂಗದಳದ ಕಾರ್ಯಕರ್ತ ಹರ್ಷನ ಕುಟುಂಬಕ್ಕೆ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ವೈಯಕ್ತಿಕವಾಗಿ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರು. ಆದರೆ ಇದೀಗ ಅದನ್ನು 5 ಲಕ್ಷ ರೂ.ಗೆ ಏರಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ ಕೊಲೆ ಪ್ರಕರಣ- ನಾನು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದ ಡಿಕೆ ಶಿವಕುಮಾರ್
ಈ ಕುರಿತು ಟ್ವೀಟ್ ಮಾಡಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ, "ಹರ್ಷನ ಸಾವನ್ನು ನಾವು ವಾಪಾಸ್ ತರಲು ಸಾಧ್ಯವಿಲ್ಲ. ಹರ್ಷ ಕುಟುಂಬಕ್ಕೆ ನಿನ್ನೆ ವೈಯಕ್ತಿಕವಾಗಿ 2 ಲಕ್ಷ ರೂ. ಘೋಷಿಸಿದ್ದೆ. ಈಗ ವೈಯಕ್ತಿಕವಾಗಿ 5 ಲಕ್ಷ ರೂ. ಮತ್ತು ಹೊನ್ನಾಳಿ ಬಿಜೆಪಿಯಿಂದ 1 ಲಕ್ಷ ರೂ. ಒಟ್ಟು 6 ಲಕ್ಷ ರೂಪಾಯಿ ಪರಿಹಾರವನ್ನು ಗುರುವಾರ ಸಂಜೆ ಶಿವಮೊಗ್ಗದ ಹರ್ಷನ ಮನೆಗೆ ಹೋಗಿ ಪರಿಹಾರ ನೀಡಿ, ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುತ್ತೇನೆ'' ಎಂದು ತಿಳಿಸಿದ್ದಾರೆ
ನ್ಯಾಯಕ್ಕಾಗಿ ಬೇಡಿಕೆ ಇಟ್ಟ ರಮ್ಯಾ, ಕಂಗನಾ !
ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಘಟನೆಗೆ ಪ್ರತಿಕ್ರಿಯಿಸಿದ್ದಾರೆ. ಹರ್ಷ ಅವರ ತಾಯಿ ಪದ್ಮ ಮಗನನ್ನು ನೆನದು ದುಃಖಿಸುತ್ತಿರುವ ದೃಶ್ಯವನ್ನು ಹಂಚಿಕೊಂಡಿರುವ ಅವರು, ‘ಕರುಳು ಹಿಂಡುವ ದೃಶ್ಯವಿದು’ ಎಂದು ಬರೆದು ದುಃಖ ತೋಡಿಕೊಂಡಿದ್ದಾರೆ. ಸ್ಯಾಂಡಲ್ವುಡ್ ನಟಿ ರಮ್ಯಾ (Ramya) ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹರ್ಷ ಹತ್ಯೆಯ ಕುರಿತು ಸಂತಾಪ ಸೂಚಿಸಿದ್ದಾರೆ. ‘‘ಒಡೆದು ಆಳುವ ರಾಜಕೀಯಕ್ಕೆ ಇನ್ನೆಷ್ಟು ಜನರನ್ನು ನಾವು ಕಳೆದುಕೊಳ್ಳಬೇಕು?’’ ಎಂದು ಪ್ರಶ್ನಿಸಿರುವ ರಮ್ಯಾ, ‘‘ಶಾಂತಿ, ಏಕತೆ ಹಾಗೂ ಸಾಮರಸ್ಯ ಮಾತ್ರ ಮುಂದಿನ ಆಯ್ಕೆ’’ ಎಂದು ಅವರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ