ಮೊದಲ ದಿನ 200 ಚಿತ್ರ ಮಂದಿರಗಳಲ್ಲಿ ಯಶ್ವಸಿ ಪ್ರದರ್ಶನ ಕಂಡ 'ನಾಗರಹಾವು'!

news18
Updated:July 20, 2018, 5:58 PM IST
ಮೊದಲ ದಿನ 200 ಚಿತ್ರ ಮಂದಿರಗಳಲ್ಲಿ ಯಶ್ವಸಿ ಪ್ರದರ್ಶನ ಕಂಡ 'ನಾಗರಹಾವು'!
news18
Updated: July 20, 2018, 5:58 PM IST
ನ್ಯೂಸ್​ 18 ಕನ್ನಡ 

ದಶಕಗಳ ಹಿಂದಿನ 'ನಾಗರಹಾವು' ಸಿನಿಮಾ ಇಂದು ಹೊಸ ರೂಪಿನೊಂದಿಗೆ ರಾಜ್ಯದಾದ್ಯಂತ ಬಿಡುಗಡೆಯಾಗಿದೆ. ಸುಮಾರು 200 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರೋ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿದೆ.

ಡಾ. ಸಾಹಸ ಸಿಂಹ ಹಾಗೂ ರೆಬಲ್ ಸ್ಟಾರ್ ಅಭಿನಯದ 'ನಾಗರಹಾವು' ಸಿನಿಮಾದ ಮೊದಲ ದಿನ ಮೊದಲ ಪ್ರದರ್ಶನ ನೋಡಿದ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್​ ನೀಡಿದ್ದಾರೆ. ಸಾಲದಕ್ಕೆ ರವಿಚಂದ್ರನ್​, ಯಶ್​, ಉಪೇಂದ್ರ ಸೇರಿದಂತೆ ಹಲವಾರು ಚಿತ್ರ ನಟರು ಸಹ ಈ ಸಿನಿಮಾಗೆ ಶುಭ ಹಾರೈಸಿದ್ದಾರೆ.

ಸ್ಯಾಂಡಲ್‍ವುಡ್​ನ ವಿಷ್ಣು ಅಭಿಮಾನಿಗಳು ಅಂಬಿರೀಷ್​, ಶಿವಣ್ಣ, ಯಶ್, ಉಪೇಂದ್ರ ಹಾಗು ಇನ್ನೂ ಅನೇಕ ನಟ- ನಟಿಯರು ಈ ಚಿತ್ರವನ್ನು ನೋಡಲು ಕಾದು ನಿಂತಿದ್ದಾರೆ. ಒಂದು ವಾರದ ಮುಂಚೆನೇ ಅಭಿಮಾನಿಗಳಿಗೆ ಟಿಕೆಟ್‍ನ್ನು ಆನ್‍ಲೈನ್​ನಲ್ಲಿ ಹಂಚಿಮಾಡಿದ್ದು. ಡಾ. ವಿಷ್ಣುವರ್ಧನ್ ಅಭಿಮಾನಿಗಳ ಜೊತೆ ಸ್ಯಾಂಡಲ್‍ವುಡ್ ತಾರೆಯರು ಕೊಡ ವಿಷ್ಣು ಮತ್ತು ಅಂಬಿಯನ್ನು ಬೆಳ್ಳಿ ಪರದೆಯಮೇಲೆ ನೋಡಲು ಮುಗುಬಿದ್ದಿದ್ದಾರಂತೆ.
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ