ಹಾರರ್ ಸಿನಿಮಾಗಳನ್ನು ನೋಡುವುದು ಒಂದು ಥ್ರಿಲ್. ಹಾರರ್ ಸಿನಿಮಾ ನೋಡಲು ಇಷ್ಟಪಡುವವರ ಒಂದು ಗುಂಪಿದ್ದರೆ ಭಯಪಟ್ಟುಕೊಂಡು ಬೇಡ ಬೇಡ ಎನ್ನುತ್ತಲೇ ಹಾರರ್ ಸಿನಿಮಾ ನೋಡುವ ಇನ್ನೊಂದಷ್ಟು ಜನರಿದ್ದಾರೆ. ಅಂತೂ ಹಿಂದಿನಿಂದಲೂ ಹಾರರ್ ಸಿನಿಮಾಗಳತ್ತ ಪ್ರೇಕ್ಷಕರ ಒಲವು ಹೆಚ್ಚಿದೆ. ಇನ್ನು ನಾರ್ತ್ ಬೆಲ್ಟ್ಗೆ ಹೋಲಿಸಿದಲ್ಲಿ ದಕ್ಷಿಣ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ದೆವ್ವದ ಸಿನಿಮಾಗಳನ್ನು ಮಾಡುತ್ತಾರೆ. ಪುನರ್ಜನ್ಮ, ಸೇಡಿನ ದೆವ್ವ, ದುರ್ಮರಣಕ್ಕೀಡಾದ ಆತ್ಮ ಹೀಗೆ ಸೌತ್ ಸಿನಿಮಾಗಳ ದೆವ್ವದ ಕಥೆ ನಿಜಕ್ಕೂ ಇಂಟ್ರೆಸ್ಟಿಂಗ್ ಆಗಿರುತ್ತದೆ. ಕನ್ನಡ, ಮಲಯಾಳಂ, ತಮಿಳು, ತೆಲುಗು ಭಾಷೆಗಳಲ್ಲಿ ಅತ್ಯಧಿಕ ಹಾರರ್ ಸಿನಿಮಾಗಳನ್ನು ಮಾಡಲಾಗಿದೆ.
ಕನ್ನಡದಲ್ಲಿ ಹಿಂದನಿಂದಲೂ ದೆವ್ವದ ಸಿನಿಮಾಗಳು ಬರುತ್ತಲೇ ಇವೆ. ಅವು ಥಿಯೇಟರ್ನಲ್ಲಿ ಸೂಪರ್ ಹಿಟ್ ಆಗಿವೆ ಕೂಡಾ. ಆಪ್ತಮಿತ್ರ ಸಿನಿಮಾ ಅಂತೂ ಭರ್ಜರಿ ಹಿಟ್ ಆಯಿತು. ಈ ಸಿನಿಮಾದ ನಂತರ ಬಂದ ದೆವ್ವದ ಸಿನಿಮಾಗಳನ್ನು ಬಹುತೇಕ ಎಲ್ಲರೂ ನೋಡಿದ್ದಾರೆ.
ಆದರೆ ಕನ್ನಡ ಚಿತ್ರರಂಗದಲ್ಲಿ ದೆವ್ವದ ಸಿನಿಮಾ ಮಾಡಲು ಶುರು ಮಾಡಿದ್ದು ಇಂದು ನಿನ್ನೆಯಲ್ಲ. ಬಹಳ ಹಿಂದಿನಿಂದಲೇ ವಿಭಿನ್ನ ಕಥೆಗಳನ್ನು ಹೊಂದಿರುವಂತಹ ಸಿನಿಮಾಗಳನ್ನು ಮಾಡಿದ್ದಾರೆ. ಆ ಸಿನಿಮಾಗಳು ಪ್ರೇಕ್ಷಕರಿಗೆ ಕುಳಿತಲ್ಲೇ ಚಳಿ ಹಿಡಿಸಿವೆ. ಅಂಥಹ ದೆವ್ವದ ಸಿನಿಮಾಗಳು ಕನ್ನಡದಲ್ಲಿ ತಯಾರಾಗಿವೆ. ನೀವು ಕೂಡಾ ಹಾರರ್ ಸಿನಿಮಾ ಇಷ್ಟಪಡುವವರಾಗಿದ್ದರೆ ಕನ್ನಡದಲ್ಲಿ ನೋಡಲೇಬೇಕಾದ ದೆವ್ವದ ಸಿನಿಮಾಗಳ ಲಿಸ್ಟ್ ಇಲ್ಲಿದೆ.
ಶ್..
ಶ್ ಸಿನಿಮಾ 1993ರ ಕನ್ನಡದ ಹಾರರ್ ಥ್ರಿಲ್ಲರ್ ಸಿನಿಮಾ. ಇದನ್ನು ನಟ ಉಪೇಂದ್ರ ಬರೆದು ನಿರ್ದೇಶಿಸಿದ್ದಾರೆ. ಇದರಲ್ಲಿ ಕುಮಾರ್ ಗೋವಿಂದ್, ಕಾಶೀನಾಥ್, ಸುರೇಶ್ ಹೆಬ್ಳಿಕಾರ್, ಎನ್.ಬಿ ಜಯಪ್ರಕಾಶ್ ನಟಿಸಿದ್ದಾರೆ. ಇದು ಕನ್ನಡ ಚಿತ್ರರಂಗದ ಹಾರರ್ ಮೂವಿಗಳಲ್ಲಿ ಹೊಸ ಟ್ರೆಂಡ್ ಸೆಟ್ ಮಾಡಿತು.
ಮೋಹಿನಿ
ರಾಜೇಶ್ ಎನ್ನುವ ಉದ್ಯಮಿ ಮೋಹಿನಿಯನ್ನು ತಿರಸ್ಕರಿಸಿ ತನ್ನ ಕುಟುಂಬದ ಜೊತೆಗಿರಲು ನಿರ್ಧರಿಸುತ್ತಾನೆ. ಮೋಹಿನಿ ಸತ್ತಾಗ ಆಕೆಯ ಆತ್ಮ ರಾಜೇಶ್ನನ್ನು ಹಿಂಬಾಲಿಸಿ ತೊಂದರೆ ಕೊಡಲಾರಂಭಿಸುತ್ತದೆ. ಮೋಹಿನಿ 9886788888 2006 ರಲ್ಲಿ ರಿಲೀಸ್ ಆಯಿತು. ಹಾರರ್ ಥ್ರಿಲ್ಲರ್ ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿ ಸಹ-ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಆದಿತ್ಯ ಮತ್ತು ಸದಾ ನಟಿಸಿದ್ದು , ಸುಹಾಸಿನಿ , ಅನು ಪ್ರಭಾಕರ್ ಮತ್ತು ಆದಿ ಲೋಕೇಶ್ ಇತರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನೀಲಾಂಬರಿ
ಪತ್ರಕರ್ತ ವಿನೋದ್ ಹಾಗೂ ಅವರ ತಂಡ ನೀಲ ಬೆಟ್ಟಕ್ಕೆ ಬರುತ್ತದೆ. ಅಲ್ಲಿರುವ ಅತಿಮಾನುಷ ಶಕ್ತಿಯ ವಿಡಿಯೋ ಮಾಡಲು ಅಲ್ಲಿಗೆ ಬಂದಿರುತ್ತಾರೆ. ಆದರೆ ಆ ಊರಿನ ಅಖಿಲಾನನ್ನು ಸಂದರ್ಶನ ಮಾಡಿದ ನಂತರ ಇಡೀ ತಂಡವೇ ಕಾಣೆಯಾಗುತ್ತದೆ. ಸೌಂದರ್ಯ, ಪ್ರೀತಿ, ಕುರೂಪ, ಮಾಂತ್ರಿಕ ವಿದ್ಯೆ ಕುರಿತು ಭಯನಾಕ ಫ್ಲಾಶ್ ಬ್ಯಾಕ್ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸುತ್ತದೆ.
ದುರ್ಗಾಶಕ್ತಿ
ತನ್ನ ಮೊದಲ ಜನ್ಮದಲ್ಲಿ ಮಾಡಿದ ಪಾಪ ಕೃತ್ಯಗಳಿಂದಾಗಿ ತನ್ನನ್ನು ದೆವ್ವವೊಂದು ಹಿಂಬಾಲಿಸುತ್ತಿದೆ ಎನ್ನುವುದನ್ನು ಜಯಕೃಷ್ಣ ತಿಳಿಯುತ್ತಾನೆ. ಹೂವಾಡಗಿತ್ತಿ ಮೇಲೆ ಕಣ್ಣು ಹಾಕಿ ಆಕೆಯನ್ನು ನಾಶ ಮಾಡುತ್ತಾನೆ. ನಂತರ ಪುನರ್ಜನ್ಮದಲ್ಲಿ ಯಾವ ರೀತಿ ಅದರ ಫಲದಿಂದ ಕಷ್ಟಪಡುತ್ತಾನೆ ಎನ್ನುವುದನ್ನು ಹೇಳಿದ್ದಾರೆ.
ಆತ್ಮಬಂಧನ
ಆತ್ಮ ಬಂಧನ ಸಿನಿಮಾ 1992ರಲ್ಲಿ ರಿಲೀಸ್ ಆಯಿತು. ಶ್ರೀಕಾಂತ್ ನಿರ್ದೇಶಿಸಿದ ಈ ಸಿನಿಮಾವನ್ನು ಎಂ ರಾಜಗೋಪಾಲ್ ನಿರ್ಮಿಸಿದ್ದರು. ಇದರಲ್ಲಿ ಶಶಿಕುಮಾರ್, ಜಯಪ್ರದಾಮ ವೈಷ್ಣವಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೊಂದು ಪ್ರತೀಕಾರ ತೀರಿಸುವ ದೆವ್ವದ ಕಥೆ.
ಅತ್ತೆ ಮನೆಯವರಿಂದ ಕೊಲ್ಲಲ್ಪಟ್ಟ ವೈಷ್ಣವಿ ಗೊಂಬೆ ದೇಹದೊಳಗೆ ಆತ್ಮವಾಗಿ ಸೇರುತ್ತಾಳೆ. ನಂತರ ಪ್ರತೀಕಾರ ತೀರಿಸುತ್ತಾಳೆ. ಇದು ತಮಿಳಿನ ವಾ ಅರುಗಿಲ್ ವಾ ಸಿನಿಮಾದ ರಿಮೇಕ್. ಇದು ಅಮೆರಿಕಾದ 1988ರ ಚೈಲ್ಡ್ಸ್ ಪ್ಲೇನಿಂದ ಪ್ರೇರೇಪಿತವಾಗಿದೆ.
ಚಂದ್ರಲೇಖಾ
ಚಂದು, ಐಶು, ಮಹಾರಾಹ್, ಪ್ರವೀಣ್ ಒಂದು ರೆಸಾರ್ಟ್ಗೆ ಹೋಗುತ್ತಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳಲೆಂದು ಅಲ್ಲಿಗೆ ಹೋಗಿರುತ್ತಾರೆ. ಆದರೆ ನಂತರ ಚಂದ್ರಲೇಖಾಳ ಆತ್ಮ ಆಕೆಯನ್ನು ಕೊಂದವರನ್ನು ಕೊಲ್ಲಲು ಚಂದುನನ್ನು ಪ್ರೇರೇಪಿಸುತ್ತಿದೆ ಎಂದು ಅರ್ಥಮಾಡಿಕೊಳ್ಳುತ್ತಾರೆ.
ಮರ್ಮ
ಒಂದು ಪಾರ್ಟಿಯಲ್ಲಿ ಮಹಿಳೆ ಕಾಣೆಯಾಗುತ್ತಾಳೆ. ಆದರೆ ಮೂರು ದಿನ ಕಳೆದು ಮನೆಗೆ ಬಂದಾಗ ಆಕೆಯ ವರ್ತನೆ ಸಂಪೂರ್ಣವಾಗಿ ಬದಲಾಗಿರುತ್ತದೆ.
ನಾ ನಿನ್ನ ಬಿಡಲಾರೆ
ನಾ ನಿನ್ನ ಬಿಡಲಾರೆ ಸಿನಿಮಾ 1979 ರಲ್ಲಿ ರಿಲೀಸ್ ಆಯಿತು. ಇದು ಕನ್ನಡದ ಪ್ರಮುಖ ಹಾರರ್ ಸಿನಿಮಾಗಳಲ್ಲಿ ಒಂದಾಗಿದ್ದು ವಿಜಯ್ ನಿರ್ದೇಶಿಸಿದ್ದಾರೆ. ಸಿ. ಜಯರಾಮ್ ಈ ಸಿನಿಮಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅನಂತ್ನಾಗ್ ಮತ್ತು ಲಕ್ಷ್ಮಿ ನಟಿಸಿದ್ದಾರೆ. ಈ ಚಿತ್ರವನ್ನು ಹಿಂದಿಯಲ್ಲಿ ಮಂಗಳಸೂತ್ರ ಎಂದು ರೀಮೇಕ್ ಮಾಡಲಾಯಿತು.ಇದು ಕನ್ನಡದದಲ್ಲಿ ಆಲ್ ಟೈಮ್ ಬೆಸ್ಟ್ ಹಾರರ್ ಸಿನಿಮಾ ಆಗಿದೆ. ನಾ ನಿನ್ನ ಬಿಡಲಾರೆ ಅನಂತ್ ನಾಗ್ ಮತ್ತು ಲಕ್ಷ್ಮಿ ಒಟ್ಟಿಗೆ ನಟಿಸಿದ ಮೊದಲ ಚಿತ್ರ. ನಂತರದಲ್ಲಿ ಈ ಜೋಡಿ ಸ್ಯಾಂಡಲ್ವುಡ್ನ ಬೆಸ್ಟ್ ಆನ್‌ಸ್ಕ್ರೀನ್ ಜೋಡಿಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ