ಎಸ್ಎಸ್ ರಾಜಮೌಳಿ (SS Rajamouli) ನಿರ್ದೇಶನದ ಆರ್‌ಆರ್‌ಆರ್ (RRR) ಸಿನಿಮಾದ ಸೂಪರ್ ಹಿಟ್ ಹಾಡು ನಾಟು ನಾಟು (Naatu Naatu) ಆಸ್ಕರ್ ಪ್ರಶಸ್ತಿ (Oscar Award) ಗೆದ್ದುಕೊಂಡಿದೆ. ಬೆಸ್ಟ್ ಒರಿಜಿನಲ್ ಸಾಂಗ್ (Original Song) ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಸೌತ್ ಬ್ಲಾಕ್ ಬಸ್ಟರ್ ಸಿನಿಮಾದ (Cinema) ಹಾಡಿಗೆ ರೀಲ್ಸ್ ಮಾಡದವರೇ ಇಲ್ಲ. ಈ ಸಿನಿಮಾದ ಹಾಡುಗಳೆಲ್ಲ ಹಿಟ್ ಆಗಿವೆ. ನಾಟು ನಾಟು (Naatu Naatu) ಹಾಡಿಗೆ ಹಾಗೂ ಕೊರಿಯೋಗ್ರಫಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇತ್ತೀಚೆಗೆ ನಾಟು ನಾಟು ಹಾಡಿನಲ್ಲಿ ಕಂಡಿರುವ ಸ್ಟೆಪ್ಸ್ ಟಾಮ್ & ಚೆರ್ರಿಯಲ್ಲಿಯೂ ಕಾಣಿಸಿಕೊಂಡಿದ್ದು ಇವೆರಡನ್ನು ಹೋಲಿಸುವ ವಿಡಿಯೋ ವೈರಲ್ (Viral) ಆಗಿದೆ. ಈಗ ಇನ್ನೊಂದು ವಿಡಿಯೋ (Video) ಇದೇ ಕಾರಣದಿಂದ ಚರ್ಚೆಯಲ್ಲಿದೆ.
ಹಳೆಯ ಬ್ಲಾಕ್ ಶ್ರ& ವೈಟ್ ಸಿನಿಮಾದಲ್ಲಿದೆ ನಾಟು ನಾಟು ಸ್ಟೆಪ್ಸ್
ನೋಡಿದರೆ ಮೂಕಿ ಸಿನಿಮಾದಂತೆ ಕಾಣುವ ಬ್ಲಾಕ್ & ವೈಟ್ ಸಿನಿಮಾದ ವಿಡಿಯೋ ತುಣುಕೊಂದು ಟ್ವಿಟರ್ನಲ್ಲಿ ವೈರಲ್ ಆಗುತ್ತಿದೆ. ಹಾಲಿವುಡ್ ಸಿನಿಮಾ ಕ್ಲಿಪ್ನಂತಿದೆ. ಡ್ಯಾನ್ಸ್ ವಿಡಿಯೋ ಇರುವ ಈ ವೈರಲ್ ಕ್ಲಿಪ್ನಲ್ಲಿ ಇಬ್ಬರು ಡ್ಯಾನ್ಸ್ ಮಾಡುತ್ತಾರೆ.
Who did this #NatuNatu 😉❤️👇
Via WA pic.twitter.com/BE58LHCEGj
— Devasis Sarangi 🚴♂️ (@devasissarangi) March 15, 2023
ಇದನ್ನೂ ಓದಿ: RRR Cinema: ಟಾಮ್ ಆ್ಯಂಡ್ ಜೆರ್ರಿಯನ್ನೇ ಕಾಪಿ ಮಾಡಿದ್ರಾ ಆರ್‌ಆರ್‌ಆರ್! ವೈರಲ್ ಆಗ್ತಿದೆ ಸೇಮ್ ಟು ಸೇಮ್ ವಿಡಿಯೋ!
ಕೀರವಾಣಿ ಸಂಗೀತದ ಹಾಡು
ಕೀರವಾಣಿ ಸಂಗೀಯ ಸಂಯೋಜನೆ ಮಾಡಿದ ಈ ಹಾಡನ್ನು ಚಂದ್ರಬೋಸ್ ಅವರು ಬರೆದಿದ್ದಾರೆ. ಇದು ರಾಜಮೌಳಿ ಅವರ ಅದ್ಭುತ ಸಿನಿಮಾಗಳ ಲಿಸ್ಟ್ನಲ್ಲಿ ಟಾಪ್ನಲ್ಲಿರುವ ತ್ರಿಬಲ್ ಆರ್ ಸಿನಿಮಾದ ಹಾಡು.ಈ ಹಾಡು ಹಿಂದಿಯಲ್ಲಿ ನಾಟು ನಾಟು, ತಮಿಳಿನಲ್ಲಿ ನಾಟು ಕುತ್ತು, ಕನ್ನಡದಲ್ಲಿ ಹಳ್ಳಿ ನಾಟು, ಮಲಯಾಳಂನಲ್ಲಿ ಕರಿಂತೋಳ್ ಎಂದು ರಿಲೀಸ್ ಆಗಿದೆ.
ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ಅವರು ಲಾಸ್ ಏಂಜಲೀಸ್ನ ಡೋಲ್ಬಿ ಥಿಯೇಟರ್ನಲ್ಲಿ ಲೈವ್ ಆಗಿ ಹಾಡಿದ್ದಾರೆ.
ಉಕ್ರೈನ್ನ ರಾಷ್ಟ್ರಪತಿ ಭವನದ ಬಳಿ ಶೂಟಿಂಗ್
ಉಕ್ರೈನ್ನ ರಾಷ್ಟ್ರಪತಿ ಭವನದ ಬಳಿ ಈ ಹಾಡನ್ನು ಶೂಟಿಂಗ್ ಮಾಡಲಾಗಿದೆ. ರಷ್ಯಾದ ಮಿಲಿಟರಿ ದಾಳಿಗೆ ಕೆಲವೇ ತಿಂಗಳು ಮೊದಲು ಶೂಟಿಂಗ್ ನಡೆದಿತ್ತು. ವೈರಲ್ ಆ ಈ ಹಾಡಿಗೆ ಯೂಟ್ಯೂಬ್ನಲ್ಲಿ 122 ಮಿಲಿಯನ್ ವ್ಯೂಸ್ ಬಂದಿದೆ.
ನಾಟು ನಾಟು ಹಾಡು ಟಾಮ್ ಆ್ಯಂಡ್ ಜೆರ್ರಿಯನ್ನೇ (Tom And Jerry) ಹೋಲುತ್ತಿದೆ ಎಂದು ಹಲವರು ಹೇಳುತ್ತಿದ್ದಾರೆ. ಜೊತೆಗೆ ಇದರ ಒಂದು ಎಡಿಟೆಡ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ.
ತ್ರಿಬಲ್ ಆರ್ ಚಿತ್ರದ ಕೆಲವೊಂದು ಸೀನ್ಗಳು ಥೇಟ್ ಟಾಮ್ ಆ್ಯಂಡ್ ಜೆರ್ರಿಯ ಸೀನ್ಗಳನ್ನೇ ಹೋಲಿಕೆಯಾಗುತ್ತಿದ್ದು, ಸದ್ಯ ಎಡಿಟ್ ಮಾಡಿದ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಈ ಸಿನಿಮಾದ ಸೀನ್ಗಳನ್ನು ಮತ್ತು ಟಾಮ್ ಆಂಡ್ ಜೆರ್ರಿಯ ಕೆಲವೊಂದು ಸೀನ್ಗಳನ್ನು ಒಟ್ಟುಗೂಡಿಸಿ ಎಡಿಟ್ ಮಾಡಿದ್ದು ನೋಡುಗರನ್ನೇ ಅಚ್ಚರಿ ಮೂಡಿಸುವಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ