Akshay Nayak: ಒಲವಿನ ನಿಲ್ದಾಣದಲ್ಲಿ ಮಲೆನಾಡ ಕಥೆ ಹೇಳ ಹೊರಟ ಅಕ್ಷಯ್, ಇದು ನವನಟನ ಲೈಫ್​ಸ್ಟೋರಿ

Olavina Nildana: ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡಿದವರಿಗೆ ಇವರ ನೆನಪಿರಬಹುದು. ಧಾರಾವಾಹಿಯ ಅಂತ್ಯದಲ್ಲಿ ರೇಡಿಯೋ ಜಾಕಿ ಯಶ್​ ಪಾತ್ರದಲ್ಲಿ ನಟಿಸಿದ್ದ ಅಕ್ಷಯ್​ ಜನರಿಂದ ಮೆಚ್ಚುಗೆ ಪಡೆದಿದ್ದಾರೆ. 

ಅಕ್ಷಯ್ ನಾಯಕ್

ಅಕ್ಷಯ್ ನಾಯಕ್

  • Share this:
ಸದ್ಯ ಕಲರ್ಸ್​ ಕನ್ನಡದಲ್ಲಿ (colors Kannada) ಹೊಸ ಧಾರಾವಾಹಿಯೊಂದು (serial)  ಆರಂಭವಾಗಿದೆ. ಅದು ಒಲವಿನ ನಿಲ್ದಾಣ (Olavina Nildana) ಎನ್ನುವ ಧಾರಾವಾಹಿ. ಈಗಾಗಲೇ ಈ ಧಾರಾವಾಹಿಯ ಪ್ರೋಮೋಗಳು ಈಗಾಗಲೇ ಸದ್ದು ಮಾಡುತ್ತಿದ್ದೆ. ಅದರ ಟೈಟಲ್​ ಟ್ರ್ಯಾಕ್​ ಕೂಡ ಜನರಿಗೆ ಬಹಳ ಇಷ್ಟವಾಗಿದೆ. ಈ ಧಾರಾವಾಹಿಯು ಬಹಳ ಅದ್ಭುತ ಧಾರಾವಾಹಿ ಹಾಗೂ ಸಿನಿಮಾ ನೀಡಿದ ಶ್ರುತಿ ನಾಯ್ಡು ಅವರ ಪ್ರೊಡಕ್ಷನ್​ ಹೌಸ್​ ಅಡಿಯಲ್ಲಿ ರಮೇಶ್​ ಇಂದಿರಾ ನಿರ್ದೇಶನದಲ್ಲಿ ಮೂಡಿಬರುತ್ತಿದೆ. ಈಗಾಗಲೇ ಈ ಧಾರಾವಾಹಿ ಮುಖ್ಯ ಪಾತ್ರಧಾರಿಗಳ ಬಗ್ಗೆ ಪರಿಚಯವಾಗಿದೆ. ಹಾಗೆಯೇ ಹೀರೋ ಎಂಟ್ರಿಯ ಪ್ರೋಮೋ ಕೂಡ ಬಿಡುಗಡೆಯಾಗಿದೆ. ಈ ಧಾರಾವಾಹಿಯಲ್ಲಿ ಸಿದ್ದಾಂತ್ ಪಾತ್ರದಲ್ಲಿ ಮಾಡುತ್ತಿರುವ ನಟ ಅಕ್ಷಯ್ (Akshay Nayak) ​. ಕೆಲವರಿಗೆ ಈ ಮುಖ ಸ್ವಲ್ಪ ಹೊಸದಾಗಿರಬಹುದು, ಆದರೆ ಈಗಾಗಲೇ ಕೆಲ ಧಾರಾವಾಗಿಗಳಲ್ಲಿ ನಟಿಸಿದ್ದಾರೆ. ನಟ ಅಕ್ಷಯ್ ನ್ಯೂಸ್​ 18 ಕನ್ನಡ ಜೊತೆ ಮಾತನಾಡಿದ್ದು ಅವರು ಬೆಳೆದು ಬಂದ ಹಾದಿಯನ್ನು ವಿವರಿಸಿದ್ದಾರೆ.

ಮಂಡ್ಯ ಮೂಲದ ನಟ ಅಕ್ಷಯ್

ಅಕ್ಷಯ್​ ಮೂಲತಃ ಮಂಡ್ಯದವರು. ಮಂಡ್ಯ, ಮೈಸೂರು ಹಾಗೂ ಮೂಡುಬಿದಿರೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದು ಕಾಲೇಜು ದಿನಗಳಲ್ಲಿ ಬಾಡಿ ಬಿಲ್ಡಿಂಗ್ ಕುರಿತಾಗಿ ಆಸಕ್ತಿ ಬೆಳೆಸಿಕೊಂಡಿದ್ದರು. ಅಕ್ಷಯ್​ ಆ ದಿನಗಳಲ್ಲಿಯೇ ಬಾಲಿ ಬಿಲ್ಡಿಂಗ್ ಬಗ್ಗೆ ಬಹಳ ಆಸಕ್ತಿವಹಿಸಿ ತರಬೇತಿಯನ್ನು ಸಹ ಪಡೆದಿದ್ದಾರೆ. ನಂತರ ಕೆಲ ಕಾಲ ಮನೆಯಲ್ಲಿದ್ದ ಅಕ್ಷಯ್​ಗೆ ಆ ಸಮಯದಲ್ಲಿ ಬಂದ ಡಬ್​ಸ್ಮ್ಯಾಶ್​ ಆ್ಯಪ್​ ವರವಾಗಿ ಪರಿಣಮಿಸಿದೆ. ಈ ಶ್ಯಪ್​ನಲ್ಲಿ ವಿಡಿಯೋ ಮಾಡುತ್ತಿದ್ದ ಅಕ್ಷಯ್​ಗೆ ಹಲವಾರು ಜನರು ಚೆನ್ನಾಗಿ ಆಕ್ಟಿಂಗ್ ಮಾಡುತ್ತೀಯ. ನೀನ್ಯಾಕೆ ಸಿನಿಮಾದಲ್ಲಿ ಮಾಡಬಾರದು ಎಂಬ ಸಲಹೆ ನೀಡುತ್ತಿದ್ದರಂತೆ. ಆದರೆ ಅದಕ್ಕೆ ಸಾಥ್​​ ನೀಡಿದ್ದು ಅವರ ಅಣ್ಣ- ಅತ್ತಿಗೆ.

ಇದನ್ನೂ ಓದಿ: ನಯನತಾರಾ ಮದುವೆ ಲುಕ್​ ರೀ ಕ್ರಿಯೇಟ್ ಮಾಡಿದ ಗೌತಮಿ ಜಾದವ್, ಹೇಗಿದೆ ನೀವೂ ನೋಡಿ

ಅಣ್ಣ ಅತ್ತಿಗೆಯ ಸಲಹೆ ಮೇರೆಗೆ ಬೆಂಗಳೂರಿಗೆ ಬಂದ ಅಕ್ಷಯ್​ ಕೆಲ ಕಾಲ ಜಿಮ್​ ಟ್ರೈನರ್​ ಆಗಿ ಕೆಲಸ ಮಾಡುತ್ತಾ, ಆಡಿಷನ್​ ಕೊಡುತ್ತಿದ್ದರಂತೆ. ಆದರೆ ಎಲ್ಲಿಯೋ ಸೆಲೆಕ್ಟ್​ ಆಗಿರಲಿಲ್ಲ. ನಂತರ, ಅವರು ತಮಿಳಿನ ಚಂದ್ರಕುಮಾರಿ ಎನ್ನುವ ಧಾರಾವಾಹಿಯಲ್ಲಿ ಮೊದಲ ಅವಕಾಶ ಲಭಿಸಿತು. ಈ ಧಾರಾವಾಹಿಯಲ್ಲಿ ಹೀರೋಯಿನ್ ಅಣ್ಣನ ಪಾತ್ರದಲ್ಲಿ ಮಿಂಚಿದ್ದರು. ನಂತರ ಅವರಿಗೆ ಕನ್ನಡದ ಉದಯ ಚಾನೆಲ್​ನಲ್ಲಿ ಬರುತ್ತಿದ್ದ ಕಸ್ತೂರಿ ನಿವಾಸದಲ್ಲಿ ಅಭಿನಯಿಸಲು ಚಾನ್ಸ್​ ಸಿಕ್ಕಿತ್ತು. ಇದರ ನಂತರ ಕಲರ್ಸ್ ವಾಹಿನಿಯ ಪ್ರಸಿದ್ದ ಹಾಗು ಜನರ ಮೆಚ್ಚಿನ ಧಾರಾವಾಹಿ ಲಕ್ಷ್ಮಿ ಬಾರಮ್ಮದಲ್ಲಿ ಬಹಳ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ಚಾನ್ಸ್​​ ಸಿಕ್ಕಿದ್ದೇ ರೋಚಕ

ಹೌದು, ಲಕ್ಷ್ಮಿ ಬಾರಮ್ಮ ಸೀರಿಯಲ್ ನೋಡಿದವರಿಗೆ ಇವರ ನೆನಪಿರಬಹುದು. ಧಾರಾವಾಹಿಯ ಅಂತ್ಯದಲ್ಲಿ ರೆಡಿಯೋ ಜಾಕಿ ಯಶ್​ ಪಾತ್ರದಲ್ಲಿ ನಟಿಸಿದ್ದ ಅಕ್ಷಯ್​ ಜನರಿಂದ ಮೆಚ್ಚುಗೆ ಪಡೆದಿದ್ದಾರೆ. ಇನ್ನು ಅಕ್ಷಯ್​ ಈ ಧಾರಾವಾಹಿಗೆ ಆಯ್ಕೆಯಾಗಿದ್ದೇ ಒಂದು ಸ್ವಾರಸ್ಯಕರ ಘಟನೆ.  ಈ ಸೀರಿಯಲ್ ಆರಂಭಿಸಬೇಕು ಎಂದು ನಿರ್ಧರಿಸಿದಾಗ, ರಮೇಶ್​ ಇಂದಿರಾ ಅವರ ಮ್ಯಾನೇಜರ್ ಇವರನ್ನು ಸಂಪರ್ಕಿಸಿದ್ದರಂತೆ. ಆದರೆ ಆ ಸಮಯದಲ್ಲಿ ಅನಿವಾರ್ಯ ಕಾರಣದಿಂದ ಬೇಸರದಿಂದಲೇ ಅಕ್ಷಯ್​ ಒಪ್ಪಿಕೊಂಡಿರಲಿಲ್ಲವಂತೆ. ಆದರೆ ಮತ್ತೆ 2 ತಿಂಗಳ ನಂತರ ಅವರ ಮ್ಯಾನೇಜರ್ ಈ ಧಾರಾವಾಹಿಗೆ ನಾಯಕನ ಹುಡುಕಾಟದಲ್ಲಿರುವ ಬಗ್ಗೆ ಪೋಸ್ಟರ್​ ಹಾಕಿದ್ದರಂತೆ. ಅದನ್ನು ನೋಡಿ ಅಕ್ಷಯ್​ ಕರೆ ಮಾಡಿ ಸಂಪರ್ಕಿಸಿದ್ದಾರೆ. ಅಕ್ಷಯ್​,  ಈ ಅವಕಾಶ ತನಗಾಗಿ ಕಾದು ಕುಳಿತಿತ್ತು ಎನ್ನುತ್ತಾರೆ. ನಂತರ ಅವರ ಲುಕ್​ ಟೆಸ್ಟ್​ ಆಗಿ ನಾಯಕನಾಗಿ ಸೆಲೆಕ್ಟ್​ ಆಗುತ್ತಾರೆ.

ಅಕ್ಷಯ್​ ಸದ್ಯ ಕಿರುತೆರೆಯ ಬಹುಮುಖ್ಯ ತಂಡದ ಧಾರಾವಾಹಿಯಲ್ಲಿ ನಾಯಕರಾಗಿದ್ದಾರೆ. ಆದರೆ ಈ ಮೊದಲು ಅವರು ಬಹಳಷ್ಟು ಅವಮಾನ, ಹಿಂಸೆಗಳನ್ನು ಸಹ ಅನುಭವಿಸಿದ್ದರು. ಅಕ್ಷಯ್ ಹೇಳುವಂತೆ ಕೆಲವೊಂದು ಧಾರಾವಾಹಿಗಳಿಗೆ ಶೂಟಿಂಗ್ ಎಂದು ಕರೆದು ನಂತರ ಅಂದು ಇಲ್ಲ ಅಂತ ವಾಪಸ್​ ಕಳಿಸಿದ್ದು ಇದೆಯಂತೆ. ಅಲ್ಲದೇ, ಕಾಸ್ಟೂಮ್​ ಸಹ ರೆಡಿ ಮಾಡಿಸಿ ನಂತರ ರಿಜೆಕ್ಟ್​ ಮಾಡಿದ ಕಹಿ ಘಟನೆಗಳಿದೆ.

ಇದನ್ನೂ ಓದಿ: ಫುಡ್​ ಡೆಲಿವರಿ ಬಾಯ್ ಆದ ಸತೀಶ್​ ನೀನಾಸಂ, ಈ ಹೊಸ ಅವತಾರ ಇದಕ್ಕಂತೆ

ಅಕ್ಷಯ್​ ಧಾರಾವಾಹಿ ಮಾತ್ರವಲ್ಲದೇ ಸಿನಿಮಾದಲ್ಲಿ ಸಹ ನಟಿಸಿದ್ದು ಫೆಬ್ರವರಿ 30 ಎನ್ನುವ ಸಿನಿಮಾವನ್ನು ಈಗಾಗಲೇ ಮುಗಿಸಿದ್ದಾರೆ. ಈ ವರ್ಷ ಆ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹಾಗೆಯೇ ಅದೇ ನಿರ್ದೇಶಕರ ಜೊತೆ ಮತ್ತೊಂದು ಸಿನಿಮಾವನ್ನು ಸಹ ಮಾಡುತ್ತಿದ್ದಾರಂತೆ. ಒಟ್ಟಾರೆಯಾಗಿ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಅಕ್ಷಯ್​ ಮಿಂಚಲು ಸಿದ್ದವಾಗಿದ್ದು, ಇದೇ ಜುಲೈ 11 ರಿಂದ ಒಲವಿನ ನಿಲ್ದಾಣ ಧಾರಾವಾಹಿ ಪ್ರಸಾರವಾಗುತ್ತದೆ. ಈ ವಿಭಿನ್ನ ಕಥಾಹಂದರವಿರುವ ಧಾರಾವಾಹಿಗೆ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Published by:Sandhya M
First published: