ನಟಿ ಸಮಂತಾಗೆ 25 ವರ್ಷ!; ಬಯಲಾಯ್ತು ಟಾಲಿವುಡ್ ನಟಿಯ ಅಸಲಿ ವಯಸ್ಸು

ಓಹ್​ ಬೇಬಿ’ ಚಿತ್ರದ ಟ್ರೈಲರ್​ ಇಂದು ಬಿಡುಗಡೆಗೊಂಡಿದೆ. ಕಥಾ ನಾಯಕಿ 70 ವರ್ಷದ ಮುದುಕಿ. ಆಕೆ 25 ವರ್ಷದ ಯುವತಿಯಾಗಿ ಬದಲಾಗುತ್ತಾಳೆ. ಇದನ್ನು ಟ್ರೈಲರ್​ನಲ್ಲಿ ತೋರಿಸಲಾಗಿದೆ.

Rajesh Duggumane | news18
Updated:June 20, 2019, 6:59 PM IST
ನಟಿ ಸಮಂತಾಗೆ 25 ವರ್ಷ!; ಬಯಲಾಯ್ತು ಟಾಲಿವುಡ್ ನಟಿಯ ಅಸಲಿ ವಯಸ್ಸು
ಸಮಂತಾ
  • News18
  • Last Updated: June 20, 2019, 6:59 PM IST
  • Share this:
ನಟಿ ಸಮಂತಾ 25 ವರ್ಷದ ಯುವತಿಯಾಗಿ ಬದಲಾಗಿದ್ದಾರೆ. ಅವರನ್ನು ರೇಗಿಸುವ ಹುಡುಗರಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಳ್ಳುತ್ತಿದ್ದಾರೆ. ಕೆಲವರಿಗೆ ಹೊಡೆದಿದ್ದಾರೆ ಕೂಡ! ಅಷ್ಟಕ್ಕೂ ಸಮಂತಾ ಹೀಗೆ ಬದಲಾಗಿದ್ದು ನಿಜ ಜೀವನದಲ್ಲಿ ಅಲ್ಲ. ಅವರ ಮುಂಬರುವ ‘ಓಹ್​ ಬೇಬಿ’ ಚಿತ್ರಕ್ಕಾಗಿ.

‘ಓಹ್​ ಬೇಬಿ’ ಚಿತ್ರದ ಟ್ರೈಲರ್​ ಇಂದು ಬಿಡುಗಡೆಗೊಂಡಿದೆ. ಕಥಾ ನಾಯಕಿ 70 ವರ್ಷದ ಮುದುಕಿ. ಆಕೆ 25 ವರ್ಷದ ಯುವತಿಯಾಗಿ ಬದಲಾಗುತ್ತಾಳೆ. ಸಮಾಜದ ಕಣ್ಣಿಗೆ ಆಕೆ ಯುವತಿ. ಹಾಗಾಗಿ ಅನೇಕ ಹುಡುಗರು ಆಕೆಗೆ ಲೈನ್​ ಹೊಡೆಯುತ್ತಾರೆ. ‘ಹಣ್ಣಣ್ಣು ಮುದುಕಿ ನಾನು. ನನಗೇ ಲೈನ್​ ಹೊಡೆಯುತ್ತೀರಾ’ ಎಂದು ಕಥಾ ನಾಯಕಿ ರೇಗುತ್ತಾಳೆ. ಯುವತಿಯಾಗಿ ಬದಲಾಗಿದ್ದನ್ನು ನೆನಪು ಮಾಡಿಕೊಳ್ಳಲು ಕಥಾನಾಯಕಿಗೆ ಸಮಯ ಹಿಡಿಯುತ್ತದೆ. ಇದಿಷ್ಟು ವಿಚಾರವನ್ನು ಟ್ರೈಲರ್​ನಲ್ಲಿ ತೋರಿಸಲಾಗಿದೆ.

ಈ ಚಿತ್ರದಲ್ಲಿ ಲಕ್ಷ್ಮೀ 70 ವರ್ಷದ ನಾಯಕಿ ಪಾತ್ರ ನಿರ್ವಹಿಸಿದ್ದು, 25 ವರ್ಷದ ಯುವತಿಯಾಗಿ ಸಮಂತಾ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ಹಾಸ್ಯದ ಜೊತೆಗೆ ಭಾವನಾತ್ಮಕ ಅಂಶಗಳನ್ನೂ ಇಡಲಾಗಿದೆ. ‘ಅಲಾ ಮೊದಲಾಯಿಂದಿ’ ಸೇರಿ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವ ನಂದಿನಿ ರೆಡ್ಡಿ ‘ಓಹ್​ ಬೇಬಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಜುಲೈ 5ರಂದು ತೆರೆಗೆ ಬರುತ್ತಿದೆ.

First published: June 20, 2019, 11:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading