ಮಾಸ್‌ ಹೀರೋಗಳಿಗೆಲ್ಲಾ ಗೋಲ್ಡನ್‌ ಸ್ಟಾರ್‌ ಆರೆಂಜ್‌ ಕೌಂಟರ್‌..!!! ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದಾರೆ ಗಣೇಶ್​​

ನಿರ್ದೇಶಕ ಪ್ರಶಾಂತ್‌ ರಾಜ್‌ ಜೂಮ್‌ನಲ್ಲೇ ಗೋಲ್ಡನ್‌ ಸ್ಟಾರ್‌ಗೆ ಮಾಸ್‌ ಫೀಲ್‌ ಟಚ್‌ ಕೊಟ್ಟಿದ್ದರು, ಇದೀಗ ಆರೇಂಜ್‌ನಲ್ಲಿ ಇನ್ನೆರಡು ಪಟ್ಟು ಜಾಸ್ತಿ ಹೋಗಿ ಔಟ್‌ ಅಂಡ್‌ ಔಟ್‌ ಮಾಸ್‌ ಟಚ್‌ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕ್ವಾಲಿಟಿ ಮೇಕಿಂಗ್‌ಗೆ ಫೇಮಸ್‌ ಆಗಿರುವ ಪ್ರಶಾಂತ್‌ ರಾಜ್‌ ಆರೆಂಜ್‌ ಸಿನಿಮಾ ಮೂಲಕ ಮತ್ತೊಮ್ಮೆ ತಾವು ಸ್ಟೈಲಿಶ್‌ ಮೇಕರ್‌ ಅನ್ನೋದನ್ನ ಪ್ರೂವ್‌ ಮಾಡಿದ್ದಾರೆ

G Hareeshkumar | news18
Updated:December 1, 2018, 3:54 PM IST
ಮಾಸ್‌ ಹೀರೋಗಳಿಗೆಲ್ಲಾ ಗೋಲ್ಡನ್‌ ಸ್ಟಾರ್‌ ಆರೆಂಜ್‌ ಕೌಂಟರ್‌..!!! ಗಾಂಧಿನಗರದಲ್ಲಿ ಸದ್ದು ಮಾಡುತ್ತಿದ್ದಾರೆ ಗಣೇಶ್​​
ಆರೆಂಜ್ ಸಿನಿಮಾ
  • News18
  • Last Updated: December 1, 2018, 3:54 PM IST
  • Share this:
ಗೋಲ್ಡನ್‌ ಸ್ಟಾರ್‌ ಗಣೇಶ್‌ ಎಲ್ಲಾ ಮಾಸ್‌ ಹೀರೋಗಳಿಗೆ ಆರೆಂಜ್‌ ಮೂಲಕ ಖಡಕ್‌ ಆಗಿ ಕೌಂಟರ್‌ ಕೊಟ್ಟಿದ್ದಾರೆ. ಅವರ ಹೊಸ ಆರೆಂಜ್‌ ಸಿನಿಮಾದ ಟ್ರೈಲರ್‌ನಲ್ಲಿ ಮಾಸ್‌ ಹೀರೋ ಆಗಿ ಎಂಟ್ರಿ ಕೊಟ್ಟಿರುವ ಗೋಲ್ಡನ್‌ ಸ್ಟಾರ್‌ ರಗಡ್‌ ಲುಕ್‌ನಲ್ಲಿ ಖಡಕ್‌ ಡೈಲಾಗ್‌ ಹೊಡೆದಿದ್ದಾರೆ. ಆರೆಂಜ್‌ ಟ್ರೈಲರ್‌ನಲ್ಲಿಗೋಲ್ಡನ್‌ ಸ್ಟಾರ್‌ ಮಾಸ್‌ ಮಹಾರಾಜನಾಗಿ ರಾರಾಜಿಸಿದ್ದಾರೆ.

ಇದನ್ನು ಓದಿ :  ಕಣ್ಣೀರಿಟ್ಟರೆ ಅಮ್ಮನಿಗೆ ನೋವಾಗುತ್ತೆಂದು ದುಖಃವನ್ನೇ ನುಂಗಿದ ಅಂಬಿ ಮಗ ಅಭಿ..!​

ಪ್ರಶಾಂತ್‌ ರಾಜ್‌ ಸ್ಟೈಲಿಶ್‌ ಮೇಕಿಂಗ್‌ ಕಮಾಲ್‌

ನಿರ್ದೇಶಕ ಪ್ರಶಾಂತ್‌ ರಾಜ್‌ ಜೂಮ್‌ನಲ್ಲೇ ಗೋಲ್ಡನ್‌ ಸ್ಟಾರ್‌ಗೆ ಮಾಸ್‌ ಫೀಲ್‌ ಟಚ್‌ ಕೊಟ್ಟಿದ್ದರು. ಇದೀಗ ಆರೇಂಜ್‌ನಲ್ಲಿ ಇನ್ನೆರಡು ಪಟ್ಟು ಜಾಸ್ತಿ ಹೋಗಿ ಮಾಸ್‌ ಟಚ್‌ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಉತ್ತಮ  ಮೇಕಿಂಗ್‌ಗೆ ಹೆಸರಾಗಿರುವ ಪ್ರಶಾಂತ್‌ ರಾಜ್‌ ಆರೆಂಜ್‌ ಸಿನಿಮಾ ಮೂಲಕ ಮತ್ತೊಮ್ಮೆ ತಾವು ಸ್ಟೈಲಿಶ್‌ ಮೇಕರ್‌ ಎನ್ನುವುದನ್ನು ಪ್ರೂವ್‌ ಮಾಡಿದ್ದಾರೆ. 

ರಾಜಕುಮಾರನ ಪ್ರಿಯೆ ಆರೆಂಜ್‌ನಲ್ಲಿ ಗಣಿ ಸುಕುಮಾರಿ.!!

ರಾಜಕುಮಾರ್ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ, ಕಾಲಿವುಡ್‌ ಬ್ಯೂಟಿ ಪ್ರಿಯಾ ಆನಂದ್‌ 'ಆರೆಂಜ್‌' ಮೂಲಕ ಮತ್ತೊಮ್ಮೆ ಕನ್ನಡ ಸಿನಿಪ್ರಿಯರೆದುರಿಗೆ ವಾಪಸ್‌ ಆಗಿದ್ದಾರೆ. ಈ ಸಲ ಅಪ್ಪಟ ಮನೆಮಗಳಾಗಿ, ಗ್ಲ್ಯಾಮರ್‌ ಗೊಂಬೆಯಾಗಿ, ಗೋಲ್ಡನ್‌ ಸ್ಟಾರ್‌ ಸುಕುಮಾರಿಯಾಗಿ ಮಿಂಚಿದ್ದಾರೆ.

ಆರೆಂಜ್‌ ರೇಂಜ್‌ ಹೆಚ್ಚಿಸಿದ ಗಣೇಶ್‌ ಡೈಲಾಗ್ಸ್‌...!!!ಆರೆಂಜ್‌ ಸಿನಿಮಾದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌  ಮಾಸ್‌ ಆಗಿ ಕಾಣಿಸಿಕೊಳ್ಳುತ್ತಿದ್ದು,  ಡೈಲಾಗ್ಸ್‌ ಕೂಡ ಅಷ್ಟೇ ಪಂಚಿಂಗ್‌ ಆಗಿ ಹೊಡೆದಿದ್ದಾರೆ. ಸಾಧುಕೋಕಿಲಾ ಕಚಗುಳಿ, ಮಗಧೀರ ದೇವ್‌ ಗಿಲ್‌ ವಿಲನ್‌ಗಿರಿ ಆರೆಂಜ್‌ ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌ ಜೊತೆಗೆ ನಟಿಸಿದ್ದಾರೆ.

ನಿರ್ದೇಶಕ ಪ್ರಶಾಂತ್‌ ಹಾಗೂ ಗಣೇಶ್‌ ಕಾಂಬಿನೇಶನ್‌ನ ಜೂಮ್‌ ಸಿನಿಮಾದಲ್ಲಿ, ಸಾಧು ಕೋಕಿಲಾ ಮೇಜರ್‌ ರೋಲ್‌ ಪ್ಲೇ ಮಾಡಿದ್ದರು, ಅದೇ ರೀತಿ ಇದೀಗ ಆರೆಂಜ್‌ನಲ್ಲೂ ಅಂತಹದ್ದೇ ಪಾತ್ರದಲ್ಲಿ ಸಾಧು ಕಮಾಲ್‌ ಮಾಡಿದ್ದಾರೆ. ಈ ಚಿತ್ರದಲ್ಲಿ ವಿಲನ್‌ ಆಗ ಮಗಧೀರ ಖ್ಯಾತಿಯ ದೇವ್‌ಗಿಲ್‌ ಕಾಣಿಸಿಕೊಂಡಿದ್ದಾರೆ. 

ಆರೆಂಜ್‌ಗೆ ಎಸ್‌.ಎಸ್‌ ತಮನ್‌ ಮ್ಯೂಸಿಕ್‌ ಮ್ಯಾಜಿಕ್‌

ಆರೆಂಜ್‌ ಸಿನಿಮಾಗೆ ಪ್ರಶಾಂತ್‌ ರಾಜ್‌ ನೆಚ್ಚಿನ ಸಂಗೀತ ನಿರ್ದೇಶಕ ಎಸ್.ಎಸ್‌ ತಮನ್‌ ಸಂಗೀತ ಸಂಯೋಜಿಸಿದ್ದಾರೆ. ಜೂಮ್‌ ಸಿನಿಮಾ ಮೂಲಕ ಗಣೇಶ್‌- ಪ್ರಶಾಂತ್‌ಗೆ  ಒಳ್ಳೆಯ ಹಾಡುಗಳನ್ನು ಕೊಟ್ಟಿದ್ದ ತಮನ್‌, ಆರೆಂಜ್‌ ಚಿತ್ರಕ್ಕೂ ಅಷ್ಟೇ ಉತ್ತಮ ಹಾಡುಗಳನ್ನ ಕೊಟ್ಟಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಲಿರಿಕಲ್‌ ವಿಡಿಯೋಗಳು ಸೂಪರ್‌ ಹಿಟ್ ಆಗಿವೆ. ಸುಕುಮಾರಿ ಸಾಂಗ್‌, ಬ್ರದರೂ ಸಾಂಗ್‌ ಆಗಾಗಲೇ ಹಿಟ್‌ ಲಿಸ್ಟ್‌ ಸೇರಿವೆ.

ಇದನ್ನುಓದಿ : ಜಲೀಲನ ಪಾತ್ರದಿಂದ ಹಿಡಿದು ಕನ್ನಡದ ಕರ್ಣನಾಗಿ ಅಂಬಿ ಬೆಳೆದು ಬಂದ ಹಾದಿ...ಚಿತ್ರಕ್ಕೆ ಸಂತೋಷ್‌ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ಅದ್ಭುತ ಕ್ಯಾಮೆರಾ ವರ್ಕ್‌ಗೆ ಪ್ರಶಾಂತ್‌ ರಾಜ್‌ ದೃಶ್ಯಕ್ಕೆ ತಕ್ಕಂತೆ ತಮ್ಮನ್‌ ಇಡೀ ಸಿನಿಮಾಗೆ ಜೀವ ತುಂಬಿದ್ದಾರೆ.

First published: December 1, 2018, 3:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading