ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್!?

Darshan: ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ನಟ ಕಿಚ್ಚ ಸುದೀಪ್​, ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​, ರಮೇಶ್​ ಅರವಿಂದ್​, ಗಣೇಶ್​ ಅವರು ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

news18-kannada
Updated:December 2, 2019, 7:31 PM IST
ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್!?
ನಟ ದರ್ಶನ್​​
  • Share this:
ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಇನ್ಮುಂದೆ ಕಿರುತೆರೆಯಲ್ಲೂ ಕಾಣಿಸಿಕೊಳ್ಳಲಿದ್ದಾರಂತೆ!. ನಟ ದರ್ಶನ್​ ಅವರನ್ನು ಹಿರಿತೆರೆಯ ಮೇಲೆ ನೋಡುತ್ತಿದ್ದ ಅಭಿಮಾನಿಗಳಿಗೆ ಇನ್ನುಂದೆ ಕಿರುತೆರೆಯಲ್ಲಿ ನೋಡುವ ಅವಕಾಶ ಸಿಗಲಿದೆ.

ಹೌದು. ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ನಟ ಕಿಚ್ಚ ಸುದೀಪ್​, ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​, ರಮೇಶ್​ ಅರವಿಂದ್​, ಗಣೇಶ್​ ಅವರು ಕಾರ್ಯಕ್ರಮ ನಿರೂಪಣೆ ಮಾಡುವ ಮೂಲಕ ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಟ ದರ್ಶನ್​ ಮಾತ್ರ ಇತ್ತ ಕಡೆಗೆ ಮುಖ ಮಾಡಿರಲಿಲ್ಲ. ಇದೀಗ ದಾಸ ಕಿರುತೆರೆ ಪರದೆ ಮೇಲೆ ಬರಲಿದ್ದಾರೆ ಎಂಬ ಸುದ್ದಿ ಕೇಳಿ ಅಭಿಮಾನಿಗಳಿಗೆ ಸಂಭ್ರಮಿಸುತ್ತಿದ್ದಾರೆ.

ನಟ ದರ್ಶನ್​ ಕೆಲ ತಿಂಗಳ ಹಿಂದೆ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವುದು ಬಿಟ್ಟರೆ. ಬೇರೆ ಯಾವುದೇ ಚಾನೆಲ್​ಗಳ ಕಿರುತೆರೆಯ ಮೇಲೆ ಕಾಣಿಸಿಕೊಂಡಿರಲಿಲ್ಲ. ಇದೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ ನಟ ದರ್ಶನ್​ ಖಾಸಗಿ ವಾಹಿನಿಯೊಂದರ ಶೋವೊಂದನ್ನು ನಿರೂಪಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಯಾಔ ವಾಹಿನಿ? ದಾಸ ಯಾವ ಶೋ ನಿರೂಪಣೆ ಮಾಡಲಿದ್ದಾರೆ ಎಂಬ ಮಾಹಿತಿ ಇನ್ನು ಬಹಿರಂಗವಾಗಬೇಕಿದೆ.

ಸದ್ಯ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಡಿ.12 ರಂದು ದರ್ಶನ್​ ಅಭಿನಯದ ‘ಒಡೆಯ‘ ಸಿನಿಮಾ ರಾಜ್ಯದಾದ್ಯಂತ ಬೆಳ್ಳಿ ತೆರೆಗೆ ಬರತ್ತಿದೆ.

ಇದನ್ನೂ ಓದಿ: ಪುಸ್ತಕದ ಮೇಲೆ ನಿಂತು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ಖ್ಯಾತ ನಟಿ! 

ಇದನ್ನು ಓದಿ:  ನಿನ್ನೆ ಮುಷ್ತಾಕ್ ಟ್ರೋಫಿ ಗೆಲ್ಲಿಸಿ ಇಂದು ಹಸೆಮಣೆ ಏರಿದ ಮನೀಶ್ ಪಾಂಡೆ; ಖ್ಯಾತ ನಟಿಯ ಜೊತೆ ಕರ್ನಾಟಕ ಕ್ಯಾಪ್ಟನ್ ವಿವಾಹ

ಇದನ್ನೂ ಓದಿ: Bigg Boss Kannada 7: ಈ ವಾರ ಮನೆಯಿಂದ ಹೊರ ಹೋಗುವ 7ನೇ ಸ್ಪರ್ಧಿ ಇವರೇ!?
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading