Odeya Hey Odeya Song: ದೇಹಿ ಅನ್ನೋರ ಕಾಯುವವನೇ ಈ ಒಡೆಯ: ಟೈಟಲ್​ ಟ್ರ್ಯಾಕ್​​ ಸಿಕ್ಕಿದೆ ಭರ್ಜರಿ ರೆಸ್ಪಾನ್ಸ್​..!

Darshans Odeya: ಇಂದು ಬೆಳಿಗ್ಗೆ ಸರಿಯಾಗಿ 9:45ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್​ನಲ್ಲಿ ಲಿರಿಕಲ್​ ವಿಡಿಯೋ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Anitha E | news18-kannada
Updated:November 8, 2019, 10:25 AM IST
Odeya Hey Odeya Song: ದೇಹಿ ಅನ್ನೋರ ಕಾಯುವವನೇ ಈ  ಒಡೆಯ: ಟೈಟಲ್​ ಟ್ರ್ಯಾಕ್​​ ಸಿಕ್ಕಿದೆ ಭರ್ಜರಿ ರೆಸ್ಪಾನ್ಸ್​..!
ಒಡೆಯ ಸಿನಿಮಾದಲ್ಲಿ ದರ್ಶನ್​
  • Share this:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಹಾಗೂ ಅವರ 52ನೇ ಸಿನಿಮಾ ‘ಒಡೆಯ’ನ ಟೈಟಲ್ ಟ್ರ್ಯಾಕ್ ಈಗಷ್ಟೆ ಬಿಡುಗಡೆಯಾಗಿದೆ. 'ಒಡೆಯ ಹೇ ಒಡೆಯ' ಲಿರಿಕಲ್ ವಿಡಿಯೋವನ್ನು ಆನಂದ್​ ಆಡಿಯೋದ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಹಾಡು ವೀಕ್ಷಣೆಗೆ ಲಭ್ಯವಿದೆ.

ಇಂದು ಬೆಳಿಗ್ಗೆ ಸರಿಯಾಗಿ 9:45ಕ್ಕೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್​ನಲ್ಲಿ ಲಿರಿಕಲ್​ ವಿಡಿಯೋ ಬಿಡುಗಡೆಯಾಗಿದ್ದು, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿಗೆ ವಿ ನಾಗೇಂದ್ರ ಪ್ರಸಾದ್​ ಅವರ ಸಾಹಿತ್ಯ ಹಾಗೂ ವ್ಯಾಸರಾಜ್​ ಅವರ ಕಂಠದಾನ ಮಾಡಲಾಗಿದೆ. ದರ್ಶನ್​ ಅವರನ್ನು ಪರಿಚಯಿಸುವ ಟೈಟಲ್​ ಹಾಡು ಬಿಡುಗಡೆಯಾದ 20 ನಿಮಿಷಕ್ಕೆ 1.34 ಲಕ್ಷ ವೀಕ್ಷಣೆ ಸಿಕ್ಕಿದೆ.


ಕನ್ನಡ ರಾಜ್ಯೋತ್ಸವದಂದು ಬಿಡುಗಡೆ ಮಾಡಲಾದ ಈ ಸಿನಿಮಾದ ಟೀಸರ್​ ಹೊಸ ದಾಖಲೆಗಳನ್ನು ಮಾಡುತ್ತಾ ಇನ್ನೂ ಮುನ್ನುಗ್ಗುತ್ತಿದೆ. ಅದನ್ನು ಟ್ರೆಂಡಿಂಗ್​ನಲ್ಲಿ ಟಾಪ್​ನಲ್ಲಿಡಲು ಡಿಬಾಸ್​ ಅಭಿಮಾನಿಗಳು ತುಂಬಾ ಶ್ರಮಪಟ್ಟಿದ್ದಾರೆ. ಸದ್ಯಕ್ಕೆ ಈ ಟೀಸರ್​ಗೆ 3 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿದೆ.

ಸಂದೇಶ್​ ನಾಗರಾಜ್​ ನಿರ್ಮಾಣದ ಈ ಸಿನಿಮಾಗೆ ಎಂ.ಡಿ. ಶ್ರೀಧರ್​ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಸನಾ ತಿಮ್ಮಯ್ಯ ದರ್ಶನ್​ಗೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಎಲ್ಲ ಸರಿಹೋದರೆ ಈ ವರ್ಷಾಂತ್ಯಕ್ಕೆ ಒಡೆಯನ ದರ್ಶನ ಆಗಲಿದೆ.Katrina Kaif: ಮೊದಲ ಬಾರಿಗೆ ಸಿಕ್ಕಾಪಟ್ಟೆ ಹಾಟ್​ ಆಗಿ ಫೋಟೋಶೂಟ್​ಗೆ ಪೋಸ್ ಕೊಟ್ಟ ರಿಸ್ಕ್​ ಟೇಕರ್​ ಕತ್ರಿನಾ ಕೈಫ್ ​​..!

First published:November 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ