ಕೈಯಲ್ಲಿ ಮೊಬೈಲ್ ಬಂದ ನಂತರ ಪ್ರಪಂಚವೇ ಬೆರಳ ತುದಿಗೆ ಬಂದು ನಿಂತಿದೆ. ಹೀಗಿರುವಾಗ ಸಾಮಾಜಿಕ ಜಾಲತಾಣಗಳನ್ನು ಸಿನಿಮಾ ಮಂದಿ ಹಾಗೂ ಅವರ ಅಭಿಮಾನಿಗಳು ಮಾತ್ರ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಈಗ ಸಿನಿಮಾದ ಹಾಡು, ಪೋಸ್ಟರ್, ಟೀಸರ್ ಹಾಗೂ ಟ್ರೈಲರ್ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.
ಹಿಂದಿ ಸೇರಿದಂತೆ ಇತರೆ ಭಾಷೆಗಳ ಸಿನಿಮಾಗೆ ಸಂಬಂಧಿತ ವಿಡಿಯೋಗಳು, ಆಲ್ಬಂ ಹಾಡುಗಳು ಯೂಟ್ಯೂಬ್ನಲ್ಲಿ ಕೋಟಿಗಟ್ಟಲೆ ವೀಕ್ಷಣೆ ಹಾಗೂ ಲೈಕ್ಸ್ ಪಡೆದದ್ದನ್ನು ನಾವೇ ನಿಮ್ಮ ಮುಂದೆ ಸಾಕಷ್ಟು ಬಾರಿ ಇಟ್ಟಿದ್ದೇವೆ. ಆದರೆ ಈಗ ಇವುಗಳ ಪಟ್ಟಿಗೆ ಕನ್ನಡ ಸಿನಿಮಾಗಳೂ ಸೇರಿಕೊಳ್ಳುತ್ತಿವೆ. ಸದ್ಯ ದರ್ಶನ್ ಅಭಿನಯದ 'ಒಡೆಯ' ಹಾಗೂ ಪುನೀತ್ ಅವರ 'ಯುವರತ್ನ' ಯೂಟ್ಯೂಬ್ನಲ್ಲಿ ಸಖತ್ ಸದ್ದು ಮಾಡುತ್ತಿವೆ. ಹೌದು, ಅತ್ತ 'ಒಡೆಯ'ನ ಟೀಸರ್ ಅಬ್ಬರಿಸುತ್ತಿದ್ದರೆ, ಇತ್ತ ಬೊಬ್ಬಿರಿದು ಸುಮ್ಮನಾಗಿದ್ದ 'ಯುವರತ್ನ' ಕೂಡ ಸೈಲೆಂಟಾಗಿಯೇ ಹೊಸ ದಾಖಲೆ ಸೃಷ್ಟಿಸಿದ್ದಾನೆ.
'ಯುವರತ್ನ'... 'ರಾಜಕುಮಾರ' ಚಿತ್ರದ ಸೂಪರ್ ಸಕ್ಸಸ್ ಬಳಿಕ ಪುನೀತ್ ರಾಜ್‍ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಮತ್ತೊಂದು ಸಿನಿಮಾ. ಹೀಗಾಗಿಯೇ ಮೊದಲಿಂದಲೂ ಈ 'ಯುವರತ್ನ' ಬಗ್ಗೆ ನಿರೀಕ್ಷೆ ಸ್ವಲ್ಪ ಜಾಸ್ತಿಯೇ ಇದೆ. ಅದರಲ್ಲೂ ಚಿತ್ರದಲ್ಲಿ ಅಪ್ಪು ಮತ್ತೆ ಕಾಲೇಜು ಮೆಟ್ಟಿಲೇರಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ.
ಇಂತಹ 'ಯುವರತ್ನ' ಚಿತ್ರದ ಟೀಸರ್ ಅನ್ನು ದಸರಾ ಹಬ್ಬದ ಸಡಗರದಲ್ಲಿ ಅಕ್ಟೋಬರ್ 7ರಂದು ರಿಲೀಸ್ ಮಾಡಲಾಗಿತ್ತು. ಇದುವರೆಗೆ ಬರೋಬ್ಬರಿ 31 ಲಕ್ಷಕ್ಕೂ ಹೆಚ್ಚು ಮಂದಿ ಟೀಸರ್ ನೋಡಿದ್ದು, 1 ಲಕ್ಷ ಮೂವತ್ತೈದು ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಬರೋಬ್ಬರಿ 66 ಸಾವಿರಕ್ಕೂ ಹೆಚ್ಚು ಮಂದಿ 'ಯುವರತ್ನ' ಟೀಸರ್ಗೆ ಕಮೆಂಟ್ ಮಾಡಿದ್ದಾರೆ. ಇಷ್ಟು ದೊಡ್ಡ ಮಟ್ಟದಲ್ಲಿ ಕಮೆಂಟ್ ಸಿಕ್ಕಿರುವ ಮೊದಲ ಟೀಸರ್ ಅನ್ನೋ ದಾಖಲೆ 'ಯುವರತ್ನ' ಪಾಲಾಗಿದೆ.
ಇದನ್ನೂ ಓದಿ: Odeya Teaser: ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ ಒಡೆಯ ಟೀಸರ್..!
ಇನ್ನು ಎಂ.ಡಿ. ಶ್ರೀಧರ್ ನಿರ್ದೇಶನದ, ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ 'ಒಡೆಯ' ಸಿನಿಮಾದ ಟ್ರೈಲರ್ ನಿನ್ನೆ ಬಿಡುಗಡೆಯಾಗಿನಿಂದ ಯೂಟ್ಯೂಬ್ನಲ್ಲಿ ಟ್ರೆಂಡಿಂಗ್ನಲ್ಲಿದೆ. ಖಡಕ್ ಡೈಲಾಗ್ ಹಾಗೂ ಆ್ಯಕ್ಷನ್ಗಳಿಂದ ಕೂಡಿರುವ ಈ ಒಂದು ನಿಮಿಷ 4 ಸೆಕೆಂಡ್ನ ಟೀಸರ್ ಯೂಟ್ಯೂಬ್ನಲ್ಲಿ ರಿಲೀಸ್ ಆದ ಒಂದು ತಾಸಿನಲ್ಲೇ 5 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿತ್ತು.
ಸದ್ಯ ಈ ಟ್ರೈಲರ್ಗೆ ಯೂಟ್ಯೂಬ್ನಲ್ಲಿ 17 ಲಕ್ಷ 42 ಸಾವಿರಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ. 1 ಲಕ್ಷದ 58 ಸಾವಿರ ಲೈಕ್ಸ್ ಹಾಗೂ 44 ಸಾವಿರಕ್ಕೂ ಅಧಿಕ ಕಮೆಂಡ್ ಮಾಡಲಾಗಿದೆ.
ಧ್ರುವ ಸಜಾ್ ಅಭಿನಯದ 'ಪೊಗರು' ಸಿನಿಮಾದ ಡೈಲಾಗ್ ಟ್ರೈಲರ್ ಸಹ ಯೂಟ್ಯೂಬ್ನಲ್ಲಿ ಸಿಕ್ಕಾಪಟ್ಟೆ ಹವಾ ಎಬ್ಬಿಸಿದೆ. 'ಪೊಗರು' ಡೈಲಾಗ್ ಟ್ರೈಲರ್ ಯೂಟ್ಯೂಬ್ ಸೇರಿದ ಕೆಲವೇ ತಾಸುಗಳಲ್ಲಿ ಹಲವು ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 56 ಲಕ್ಷ ವೀಕ್ಷಣೆ ಪಡೆದು ಬೀಗಿತ್ತು. ಸದ್ಯ ಒಂದು ಕೋಟಿ 36 ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ. ಇದಕ್ಕೆ 2.24 ಲಕ್ಷ ಲೈಕ್ಸ್ ಸಹ ಸಿಕ್ಕದೆ.
ಈ ಹಿಂದೆ ಒಂದೇ ದಿನದಲ್ಲಿ ಒಂದು ಕೋಟಿಗೂ ಅಧಿಕ ವೀಕ್ಷಣೆ ಪಡೆಯುವ ಮೂಲಕ 'ಯಜಮಾನ' ಚಿತ್ರದ ಟ್ರೈಲರ್ ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದಿತ್ತು. ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾದ ಟ್ರೈಲರ್ ಸಹ ಬಿಡುಗಡೆಯಾದ ಒಂದು ಗಂಟೆಯಲ್ಲೇ ನಾಲ್ಕು ಲಕ್ಷ ವೀಕ್ಷಣೆ ಪಡೆದುಕೊಂಡಿತ್ತು.
HBD Ileana DCruz: ಹುಟ್ಟುಹಬ್ಬಕ್ಕೂ ಹಾಟ್ ಫೋಟೋ ಹಂಚಿಕೊಂಡ ಬಿಕಿನಿ ಸುಂದರಿ ಇಲಿಯಾನಾ..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ