Sandalwood: ಒಂದೇ ದಿನ ಸಲಗ, ಕೋಟಿಗೊಬ್ಬ 3 ಬಿಡುಗಡೆ; ಸ್ಟಾರ್ ವಾರ್ ಆತಂಕ, ಈ ಬಗ್ಗೆ ಕಿಚ್ಚ ಸುದೀಪ್, ದುನಿಯಾ ವಿಜಯ್ ಹೇಳಿದ್ದೇನು?

ಸಲಗ ಸಿನಿಮಾದ ನಿರ್ದೇಶಕ ಹಾಗೂ ನಟ ದುನಿಯಾ ವಿಜಯ್ ಮಾತನಾಡಿ, ಇದು ಸಹೋದರರ ಸವಾಲ್ ಅಲ್ಲ, ಇದು ಸಹೋದರರ ಪ್ರೀತಿ. ಸುದೀಪ್ ನನ್ನ ಜೊತೆ ಒಡನಾಟ ಬಹಳ ಚೆನ್ನಾಗಿದೆ. ಫಸ್ಟ್ ಡೇ ಸಲಗ ಸಿನಿಮಾ ನೋಡೋದಾಗಿ ಸುದೀಪ್ ಹೇಳಿದ್ದಾರೆ. ಸುದೀಪ್ ಗೆ ಒಳ್ಳೆಯ ಮನಸ್ಸಿದೆ ಎಂದು ಹೇಳಿದ್ದಾರೆ.

ದುನಿಯಾ ವಿಜಯ್ ಹಾಗೂ ಕಿಚ್ಚ ಸುದೀಪ್

ದುನಿಯಾ ವಿಜಯ್ ಹಾಗೂ ಕಿಚ್ಚ ಸುದೀಪ್

  • Share this:
    ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಶೇ. 100 ರಷ್ಟು ಆಸನ ಭರ್ತಿಯೊಂದಿಗೆ ಸಿನಿಮಾ ಥಿಯೇಟರ್ (Theatre Open)​ ತೆರೆಯಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.  ಹೌಸ್​ಫುಲ್ ಪ್ರದರ್ಶನಕ್ಕೆ ಅವಕಾಶ ಸಿಕ್ಕ  ಹಿನ್ನೆಲೆಯಲ್ಲಿ ಬಿಗ್ ಬಜೆಟ್ ಸಿನಿಮಾಗಳು (Big Budget Cinema) ರಿಲೀಸ್​ಗೆ ರೆಡಿಯಾಗಿವೆ. ಅಕ್ಟೋಬರ್ 1ರಿಂದ ರಾಜ್ಯಾದ್ಯಂತ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಶೇಕಡಾ 100ರಷ್ಟು ಪ್ರದರ್ಶನಕ್ಕೆ ಅವಕಾಶ ನೀಡಲಾಗಿದೆ. ಶಿವರಾಜಕುಮಾರ್ ನಟಿಸಿರುವ ಭಜರಂಗಿ 2 (Bhajarangi 2) ಸಿನಿಮಾ ಅಕ್ಟೋಬರ್ 29ರಂದು ತೆರೆಗೆ ಬರಲಿದೆ. ಅದಕ್ಕೂ ಮುನ್ನ ನಟ ದುನಿಯಾ ವಿಜಯ್ (Duniya Vijay) ಮೊದಲ ಬಾರಿಗೆ ನಿರ್ದೇಶಿಸಿರುವ ಸಲಗ ಅಕ್ಟೋಬರ್ 14ರಂದು ರಿಲೀಸ್ ಆಗಲಿದೆ. ಇದರ ನಡುವೆಯೇ ಅದೇ ದಿನದಿಂದ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಕೋಟಿಗೊಬ್ಬ 3 (Kotigobba 3) ಸಿನಿಮಾ ಕೂಡ ರಿಲೀಸ್ ಆಗಲಿದೆ. ಹೀಗಾಗಿ ಈ ಎರಡು ಬಹುನಿರೀಕ್ಷಿತ ಚಿತ್ರಗಳಿಗೆ ಕ್ಲಾಷ್ ಆಗುವ ಸಾಧ್ಯತೆ ಇದೆ. ಸ್ಟಾರ್ ವಾರ್ (Sandalwood Box Office Star War) ಆರಂಭವಾಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಇಬ್ಬರು ನಟರು ಪರಸ್ಪರವಾಗಿ ಶುಭಾಶಯ ಹೇಳುವ ಮೂಲಕ ಸ್ಟಾರ್ ವಾರ್​ಗೆ ತಿಲಾಂಜಲಿ ಹಾಡಿದ್ದಾರೆ.

    ಸಲಗ ಹಾಗೂ ಕೋಟಿಗೊಬ್ಬ 3 ಚಿತ್ರಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಅಕ್ಟೋಬರ್ 14ರಂದೇ ಸಿನಿಮಾ ರಿಲೀಸ್ ಮಾಡಲು ಎರಡೂ ಚಿತ್ರತಂಡಗಳ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇದು ಸ್ಯಾಂಡಲ್​ವುಡ್​ ಬಾಕ್ಸಾಫೀಸ್ ನಲ್ಲಿ ಸ್ಟಾರ್ ವಾರ್ ಶುರು ಎಂಬಂತಾಗಿತ್ತು. ಆದರೆ ಈಗ ಕಿಚ್ಚ ಸುದೀಪ್ ಸಲಗ ಚಿತ್ರತಂಡಕ್ಕೆ ಶುಭಾಶಯ ಕೋರುವ ಮೂಲಕ ಸ್ಟಾರ್ ವಾರ್ ಗೆ ಅಂತ್ಯ ಹಾಡಿದ್ದಾರೆ

    ಕಿಚ್ಚ ಸುದೀಪ್ ಅವರು ಟ್ವಿಟ್ ಮೂಲಕ ಸಲಗ ವಿಜಯ್ ಗೆ ಶುಭಾಶಯ ಹೇಳಿದ್ದಾರೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಹಾಗೂ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ದುನಿಯಾ ವಿಜಯ್ ಅವರಿಗೆ ಶುಭವಾಗಲಿ. ಸ್ಯಾಂಡಲ್ವುಡ್ ನ ಸುದೀರ್ಘ ಪಯಣಕ್ಕೆ ಸಲಗ ರಿಲೀಸ್ ಮುನ್ನುಡಿಯಾಗಲಿ ಎಂದು ಟ್ವೀಟ್ ಮೂಲಕ ಶುಭಾಶಯ ಹೇಳಿದ್ದಾರೆ.

    ಇನ್ನು ಸಲಗ ಚಿತ್ರತಂಡ ಸಹ ಇದೇ ವಿಷಯವಾಗಿ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಲಗ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಸಲಗ ಸಿನಿಮಾ ಅಕ್ಟೋಬರ್ 14 ರಂದು ತೆರೆ ಕಾಣಲಿದೆ. ಆ ದಿನವೇ ಸುದೀಪ್ ನಟನೆಯ ಕೋಟಿಗೊಬ್ಬ- 3 ಸಿನಿಮಾ ರಿಲೀಸ್ ಆಗಲಿದೆ. ಇದು ಸ್ಟಾರ್ ವಾರ್ ಆಗೋದಿಲ್ಲ. ಸುದೀಪ್ ಅವರು ಮೊದಲಿನಿಂದಲೂ ನಮ್ಮ ತಂಡಕ್ಕೆ ಸಪೋರ್ಟಿವ್ ಆಗಿದ್ದಾರೆ. ಮೊದಲು ಸಲಗ ಸಿನಿಮಾನೇ ರಿಲೀಸಾಗಬೇಕು. 15 ದಿನಗಳು ಅಂತರ ನಮಗೆ ಬೇಕಿತ್ತು. ಆ ನಿಟ್ಟಿನಲ್ಲೇ ನಿರ್ಮಾಪಕರ ನಡುವೆ ಪ್ಲಾನ್ ಆಗಿತ್ತು. ಈ ಬಗ್ಗೆ ನಿರ್ಮಾಪಕ ಸೂರಪ್ಪಬಾಬು ನಮಗೆ ಹೇಳಿದ್ರು. ಆದರೆ ಈಗ ಅವರೇ ಡೇಟ್ ಅನೌನ್ಸ್ ಮಾಡಿದ್ದಾರೆ. ನಮ್ಮ ಸಿನಿಮಾ 14ನೇ ತಾರೀಖು ರಿಲೀಸಾಗೋದು ಪಕ್ಕಾ ಎಂದು ಸ್ಪಷ್ಟಪಡಿಸಿದರು.

    ಇದನ್ನು ಓದಿ: Aaramse: ಸೋಲು-ನಿರಾಶೆಗಳ ನಡುವೆ ಹೇಗಿರಬೇಕು ಆರಾಮ್ಸೆ: ಸಿನಿಮಾ ಹಾಡುಗಳನ್ನೂ ಮೀರಿಸೋ ಆಲ್ಬಂ ಸಾಂಗ್!

    ಸಲಗ ಸಿನಿಮಾದ ನಿರ್ದೇಶಕ ಹಾಗೂ ನಟ ದುನಿಯಾ ವಿಜಯ್ ಮಾತನಾಡಿ, ಇದು ಸಹೋದರರ ಸವಾಲ್ ಅಲ್ಲ, ಇದು ಸಹೋದರರ ಪ್ರೀತಿ. ಸುದೀಪ್ ನನ್ನ ಜೊತೆ ಒಡನಾಟ ಬಹಳ ಚೆನ್ನಾಗಿದೆ. ಫಸ್ಟ್ ಡೇ ಸಲಗ ಸಿನಿಮಾ ನೋಡೋದಾಗಿ ಸುದೀಪ್ ಹೇಳಿದ್ದಾರೆ. ಸುದೀಪ್ ಗೆ ಒಳ್ಳೆಯ ಮನಸ್ಸಿದೆ. ಮಾಧ್ಯಮದವರ ಸಹಕಾರ ಸಾಕಷ್ಟಿದೆ. ಮತ್ತೆ ಕೊರೋನಾ ಭಯ ಖಂಡಿತವಾಗಿಯೂ ಇಲ್ಲ. ಸಿಂಗಲ್ ಡೋಸ್ ವ್ಯಾಕ್ಸಿನ್ ತೆಗೆದುಕೊಂಡವರು ದಯವಿಟ್ಟು ಬರಲೇಬೇಡಿ. ಎಲ್ಲರೂ ದಯವಿಟ್ಟು ಡಬಲ್ ವ್ಯಾಕ್ಸಿನ್ ಹಾಕಿಸಿಕೊಂಡೇ ಬನ್ನಿ ಎಂದು ಮನವಿ ಮಾಡಿದರು.
    Published by:HR Ramesh
    First published: