ಬಾಲಿವುಡ್ (Bollywood) ಸಿನಿಮಾಗಳಲ್ಲಿ ರೋಮ್ಯಾನ್ಸ್ (Romance) ತುಸು ಹೆಚ್ಚಿರುತ್ತೆ. ಅದರಲ್ಲೂ ಇಂಟಿಮೆಟ್ (Intimate) ದೃಶ್ಯಗಳು ಸಹ ಹೆಚ್ಚು. ಇದನ್ನೇ ಬಾಲಿವುಡ್ ಮಂದಿ ಕೂಡ ಇಷ್ಟ ಪಡುತ್ತಾರೆ. ಮೊದಲಿನಿಂದಲೂ ಹಿಂದಿ ಚಿತ್ರರಂಗದಲ್ಲಿ ಕಿಸ್ಸಿಂಗ್ (Kissing) ಸೀನ್ಗಳೇ ಹೈಲೆಟ್. ಯಾವುದೇ ಮುಜುಗರ ಇಲ್ಲದೇ ನಟ-ನಟಿಯರು ಕಿಸ್ ಮಾಡುತ್ತಾರೆ. ಕೆಲವೊಮ್ಮೆ ಮುಜುಗರವಾದರೂ ನಟನೆ ಮಾಡಲೇಬೇಕು. ಬಾಲಿವುಡ್ನಲ್ಲಿ (Bollywood) ನುಸ್ರತ್ ಬರುಚಾ (Nushrratt Bharucha) ತಮ್ಮ ನಟನೆ ಮೂಲಕ ಛಾಪು ಮೂಡಿಸಿದ್ದಾರೆ. ‘ಸೋನು ಕೆ ಟಿಟ್ಟೂ ಕಿ ಸ್ವೀಟಿ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡ ಅವರು ನಂತರ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡರು. ಈಗ ಅವರು ‘ಜನ್ಹಿತ್ ಮೆ ಜಾರಿ’ ಸಿನಿಮಾದಲ್ಲಿ (Janhit Mein Jaari) ಕಾಂಡೋಮ್ ಸೇಲ್ಸ್ ಎಕ್ಸಿಕ್ಯೂಟಿವ್ ಪಾತ್ರ ಮಾಡಿದ್ದಾರೆ.
ನಟಿ ಪ್ಯಾಂಟ್ ಜೇಬಿನಲ್ಲಿ ಕಾಂಡೋಮ್!
ಕಲಾವಿದರು ಮಡಿವಂತಿಕೆ ಬಿಟ್ಟು ಈ ರೀತಿಯ ಪಾತ್ರಗಳನ್ನು ಒಪ್ಪಿಕೊಂಡಾಗ ಟೀಕೆಗಳು ಎದುರಾಗುತ್ತವೆ. ಸುಸ್ರತ್ ವಿಚಾರದಲ್ಲೂ ಹೀಗೆಯೇ ಆಗಿದೆ. ಈ ಬಗ್ಗೆ ಅವರು ಬೇಸರ ತೋಡಿಕೊಂಡಿದ್ದಾರೆ. ಜೊತೆಗೆ ತಮ್ಮ ಜೇಬಿನಲ್ಲಿ ಕಾಂಡೋಮ್ ಕೂಡ ಇಟ್ಟುಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ‘ಜನ್ಹಿತ್ ಮೆ ಜಾರಿ’ ಸಿನಿಮಾದಲ್ಲಿ ನುಸ್ರತ್ ಡಿಫ್ರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥಾ ನಾಯಕಿ ಕೆಲಸ ಹುಡುಕಿಕೊಂಡು ನಗರಕ್ಕೆ ಬರುತ್ತಾಳೆ. ಅವಳಿಗೆ ಕಾಂಡೋಮ್ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಸಿಗುತ್ತದೆ. ಪ್ರತಿ ಮೆಡಿಕಲ್ ಸ್ಟೋರ್ಗೆ ಹೋಗಿ ಕಾಂಡೋಮ್ ಮಾರುವ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ನುಸ್ರತ್ ವಿರುದ್ಧ ನೆಗೆಟಿವ್ ಕಮೆಂಟ್!
ಕೆಲ ದಿನಗಳ ಹಿಂದೆ ನುಸ್ರುತ್ ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದರು. ಜೀನ್ಸ್ ಪ್ಯಾಂಟ್ನ ಹಿಂದಿನ ಪಾಕೆಟ್ನಲ್ಲಿ ಕಾಂಡೋಮ್ ಕಾಣುವ ರೀತಿಯಲ್ಲಿ ಈ ಫೋಟೋ ಇತ್ತು. ‘ಜನ್ಹಿತ್ ಮೆ ಜಾರಿ’ ಸಿನಿಮಾದ ರಿಲೀಸ್ ಡೇಟ್ ಘೋಷಣೆ ಮಾಡಲು ಈ ರೀತಿಯ ಪೋಸ್ಟರ್ ಸಿದ್ಧಪಡಿಸಲಾಗಿತ್ತು. ಆದರೆ, ಇದನ್ನು ನುಸ್ರತ್ ಫ್ಯಾನ್ಸ್ ಬೇರೆಯದೇ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಈ ಫೋಟೊ ಇಟ್ಟುಕೊಂಡು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಇದಕ್ಕೆ ಬೇಸರಗೊಂಡಿರುವ ನುಸ್ರತ್ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಫಿಟ್ನೆಸ್ ಜರ್ನಿ ಹೇಗಿದೆ ಗೊತ್ತಾ? ಡಯಟ್ ದಿನಚರಿ ಹೀಗಿದೆ..
ಕೆಟ್ಟ ಕಮೆಂಟ್ಗಳ ಪಟ್ಟಿ ಮಾಡಿದ ನಟಿ!
ಸೋಷಿಯಲ್ ಮೀಡಿಯಾದಲ್ಲಿ ನಟಿ ನುಸ್ರತ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 'ಎಲ್ಲರೂ ತಮ್ಮ ಪೋಸ್ಟ್ಗೆ ಬಂದ ಬೆಸ್ಟ್ ಕಮೆಂಟ್ ಸೆಲೆಕ್ಟ್ ಮಾಡುತ್ತಾರೆ. ಆದರೆ, ನಾನು ಇಲ್ಲಿ ಅತಿ ಕೆಟ್ಟ ಕಮೆಂಟ್ಗಳನ್ನು ಆಯ್ಕೆ ಮಾಡುವ ಪರಿಸ್ಥಿತಿ ಬಂದಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವರು ನಟಿಯ ದೇಹದ ಖಾಸಗಿ ಭಾಗದ ಬಗ್ಗೆ ಅಶ್ಲೀಲವಾಗಿ ಮಾತನಾಡಿದ್ದಾರೆ. ‘ನಿಮಗೆ ಯಾವ ಫ್ಲೇವರ್ ಇಷ್ಟವಾಗುತ್ತದೆ’ ಎಂದುಬ ಮತ್ತೊಬ್ಬ ಕೇಳಿದ್ದಾನೆ.
ಇದನ್ನೂ ಓದಿ : ನಟ ಕಾರ್ತಿಕ್ ಆರ್ಯನ್ ಜೊತೆ ಕೃತಿ ಡೇಟಿಂಗ್? ಬಾಲಿವುಡ್ ಅಂಗಳದಲ್ಲಿ ಹೊಸ ಗುಸುಗುಸು!
ಸಿನಿಮಾ ನೋಡುವ ರೀತಿ ಬದಲಾಗಬೇಕು
ಹೌದು, ಸಿನಿಮಾವನ್ನು ಸಿನಿಮಾ ರೀತಿಯಲ್ಲೇ ನೋಡಬೇಕು, ನಟನೆಗೂ ನಿಹ ಜೀವನಕ್ಕೂ ಸಂಬಂಧವಿರವುದಿಲ್ಲ. ಆದರೆ, ಕೆಲವರು ಸಿನಿಮಾದಲ್ಲಿ ಕಲಾವಿದರನ್ನು ನೋಡುವ ರೀತಿ ಯೇ ಬೇರೆಯಾಗಿ ಬಿಡುತ್ತೆ. ಅದೇ ರೀತಿ ನುಸ್ರತ್ ಕೂಡ ಸಿನಿಮಾದಲ್ಲಿ ಮಾತ್ರ ಕಾಂಡೋಮ್ ಮಾರುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ