Thala Ajith: ‘ತಲಾ‘ ಅಜಿತ್​ ಮನೆ ಮುಂದೆ ನರ್ಸ್ ಆತ್ಮಹತ್ಯೆ ಯತ್ನ; ಮಹಿಳೆಯ ಕೆಲಸ ಹೋಗುವಂತೆ ಮಾಡಿದ್ದರಾ ಕಾಲಿವುಡ್ ನಟ?

"ನನ್ನ ಸ್ಥಿತಿಗೆ ನೀವೇ ಕಾರಣ" ಎಂದು ಕಿರಚುತ್ತಾ ಮಹಿಳೆ ಏಕಾಏಕಿ ತಮ್ಮ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.

ನಟ  ಅಜಿತ್ ಕುಮಾರ್

ನಟ ಅಜಿತ್ ಕುಮಾರ್

  • Share this:
    ಕಾಲಿವುಡ್ ಖ್ಯಾತ ನಟ "ತಲಾ" ಅಜಿತ್(Kollywood actor Thala Ajith) ಮನೆ ಮುಂದೆ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ(Suicide Attempt) ಘಟನೆ ನಡೆದಿದೆ. ಖಾಸಗಿ ಆಸ್ಪತ್ರೆಯೊಂದರ ನರ್ಸ್ ಫರ್ಜಾನಾ ಎಂಬ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಷ್ಟೇ ಅಲ್ಲದೆ ತನ್ನ ಕೆಲಸ ಹೋಗಲು ನಟ ಅಜಿತ್ ಕಾರಣವೆಂದು, ಮನೆ ಮುಂದೆಯೇ ರಂಪಾಟ ಮಾಡಿದ್ದಾರೆ. "ನನ್ನ ಸ್ಥಿತಿಗೆ ನೀವೇ ಕಾರಣ" ಎಂದು ಕಿರಚುತ್ತಾ ಮಹಿಳೆ ಏಕಾಏಕಿ ತಮ್ಮ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ. ಅಷ್ಟರಲ್ಲಾಗಲೆ ಅಜಿತ್(Actor Ajith Kumar) ಮನೆ ಸುತ್ತ ಜಮಾಯಿಸಿದ್ದ ಸ್ಥಳೀಯರು ಆಕೆಯನ್ನು ತಡೆದಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಪೊಲೀಸರ ಮಾತಿಗೂ ಬೆಲೆ ಕೊಡದೆ ಫರ್ಜಾನಾ ಆತ್ಮಹತ್ಯೆಗೆ ಮುಂದಾಗಿದ್ದರು. ಈ ವೇಳೆ ಪೊಲೀಸರು ಸೀಮೆಎಣ್ಣೆ ತುಂಬಿದ ಬಿಂದಿಗೆಯನ್ನು ತೆಗೆದುಕೊಂಡು ಆಕೆಯನ್ನು ಸಮಾಧಾನ ಪಡಿಸಿದ್ದಾರೆ.

    ಅಷ್ಟಕ್ಕೂ ಆಗಿದ್ದೇನು?

    ಫರ್ಜಾನಾ ಎಂಬ ಮಹಿಳೆ ತಮಿಳುನಾಡಿನ ತೇನಂಪೇಟೆ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. 2020ರಲ್ಲಿ ನಟ ಅಜಿತ್ ಹಾಗೂ ಅವರ ಪತ್ನಿ ಶಾಲಿನಿ ಖಾಸಗಿ ವಿಚಾರಕ್ಕಾಗಿ ಈ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಫರ್ಜಾನಾ ತಮ್ಮ ಮೊಬೈಲ್ ನಲ್ಲಿ ಸಂಪೂರ್ಣ ದೃಶ್ಯವನ್ನು ಸೆರೆಹಿಡಿದಿದ್ದರು. ಬಳಿಕ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಅಜಿತ್ ಹಾಗೂ ಪತ್ನಿ ಶಾಲಿನಿ ಯಾಕೆ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು ಎಂಬ ಪ್ರಶ್ನೆ ನೆಟ್ಟಿಗರನ್ನ ಕಾಡಿತ್ತು. ಮಾಧ್ಯಮಗಳಲ್ಲೂ ನಟ ಅಜಿತ್ ಆಸ್ಪತ್ರೆ ಭೇಟಿ ಬಗ್ಗೆ ಚರ್ಚೆಗಳು ನಡೆದಿದ್ದವು.

    ಆಸ್ಪತ್ರೆ ಸಿಬ್ಬಂದಿ ಯಾರೇ ಆಸ್ಪತ್ರೆಗೆ ಬಂದರು ಅವರ ಖಾಸಗಿತನಕ್ಕೆ ಧಕ್ಕೆ ತರಬಾರದು. ಹಾಗೂ ಅವರಿಗೆ ಯಾವುದೇ ತೊಂದರೆ ನೀಡುವಂತಿಲ್ಲ. ಇದು ಎಲ್ಲಾ ಆಸ್ಪತ್ರೆಯಲ್ಲಿ ಇರುವ ನಿಯಮಗಳು. ಫರ್ಜಾನಾ, ಅಜಿತ್ ನೋಡಿದ ಖುಷಿಯಲ್ಲಿ ವಿಡಿಯೋ ಮಾಡಿದ್ದರು,
    ಅದು ಆಸ್ಪತ್ರೆಯ ನಿಯಮ ಮೀರಿದಂತೆ. ಹೀಗಾಗಿ ಆಕೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಇದಾದ ಬಳಿಕ ಅನೇಕ ಬಾರಿ ಫರ್ಜಾನಾ ನಟ ಅಜಿತ್ ಪತ್ನಿ ಶಾಲಿನಿ ಅವರನ್ನು ಭೇಟಿಯಾಗಿ ಕ್ಷಮೆ ಕೇಳಿದ್ದರು. ಅಷ್ಟೇ ಅಲ್ಲದೆ ತನ್ನ ನಕ್ಕೆ ಆಸೆಯಿಂದ ತೆಗೆಯದಂತೆ ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದರು. ಫರ್ಜಾನಾ ಎಷ್ಟೇ ಪ್ರಯತ್ನಿಸಿದರೂ ನಟ ಅಜಿತ್ ಅವರನ್ನು ಭೇಟಿಯಾಗಲು ಆಗಲಿಲ್ಲ.

    ಇದನ್ನೂ ಓದಿ:ರಶ್ಮಿಕಾರ ಹೊಸ ಪೋಸ್ಟರ್ ಜತೆಗೆ ಮತ್ತೊಂದು ಅಪ್ಡೇಟ್​ ಕೊಟ್ಟ Pushpa ಚಿತ್ರತಂಡ

    ಇದರಿಂದ ಬೇಸರಗೊಂಡ ನರ್ಸ್ ಫರ್ಜಾನಾ ಏಕಾಏಕಿ ಅಜಿತ್ ಅವರ ಮನೆ ಮುಂದೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದಾಗ, ಮನೆಯ ಸೆಕ್ಯೂರಿಟಿ ಗಾರ್ಡ್ ಬಂದು ಬೆಂಕಿ ಆರಿಸಿದ್ದಾರೆ.

    ಅಜಿತ್ ಸುತ್ತ ಕಾಂಟ್ರೋವರ್ಸಿ!

    ನಟ ಅಜಿತ್ ಯಾರ ತಂಟೆಗೂ ಹೋದವರಲ್ಲ ತಮ್ಮ ಪಾಡಿಗೆ ಇರುವಂತಹ ವ್ಯಕ್ತಿ. ಆದರೆ ಕಾಂಟ್ರೋವರ್ಸಿಗಳು ಇವರನ್ನು ಹುಡುಕಿಕೊಂಡು ಬರುತ್ತವೆ. ಈ ಹಿಂದೆಯೂ ಅನೇಕ ಬಾರಿ ಅಜಿತ್ ಮನೆಗೆ ಬಾಂಬ್ ಇಡಲಾಗಿದೆ ಎನ್ನುವ ಬೆದರಿಕೆ ಕರೆಗಳು ಬಂದಿದ್ದವು. ಜೂನ್ ತಿಂಗಳಲ್ಲಿ ಚೆನ್ನೈನಲ್ಲಿರುವ ಇಂಜಮ್‌ಬಕ್ಕಮ್‌ನಲ್ಲಿರುವ ಅಜಿತ್ ನಿವಾಸಕ್ಕೆ ಬಾಂಬ್ ಇಡಲಾಗಿದೆ ಎಂಬ ಅನಾಮಿಕ ಕರೆ ಬಂದಿತ್ತು. ಪೊಲೀಸರು ಅಜಿತ್ ಮನೆ ಪರಿಶೀಲನೆ ನಡೆಸಿದರು. ಬಳಿಕ ಅದು ಫೇಕ್ ಕರೆ ಎಂದು ಹೇಳಿದ್ದರು. ಸದ್ಯ ನಟ ಅಜಿತ್ "ವಲಿಮೈ" ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ನೇರ್ಕೊಂಡ ಪಾರ್ವೈ' ಸಿನಿಮಾಕ್ಕೆ ನಿರ್ದೇಶನ ಮಾಡಿದ್ದ ವಿನೋದ್ ಈ ಸಿನಿಮಾಕ್ಕೂ ನಿರ್ದೇಶನ ಮಾಡಿದ್ದಾರೆ.
    Published by:Latha CG
    First published: