ಪುನೀತ್​ ರಾಜ್​ಕುಮಾರ್​ ಬೇಕು ಎಂದು ಹಠ ಹಿಡಿದ ಕಾರನ್ನು ಗಿಫ್ಟ್​ ಕೊಟ್ಟಿದ್ದರಂತೆ ಎನ್​ಟಿಆರ್​!

ಎನ್​ಟಿಆರ್​ ಶೂಟಿಂಗ್​ ಸೆಟ್​ಗೆ ಪುನೀತ್​ ಒಮ್ಮೆ ಭೇಟಿ ನೀಡಿದ್ದರಂತೆ. ಅಲ್ಲಿದ್ದ ಕಾರೊಂದನ್ನು ನೋಡಿ ತನಗೆ ಆ ಕಾರು ಬೇಕು ಎಂದು ಹಠ ಹಿಡಿದಿದ್ದರಂತೆ. ವಿಶೇಷ ಎಂದರೆ, ಕಾರನ್ನು ಮನೆಗೆ ಕಳುಹಿಸಿಕೊಟ್ಟಿದ್ದರಂತೆ ಎನ್​ಟಿಆರ್​!

Rajesh Duggumane | news18
Updated:January 8, 2019, 3:02 PM IST
ಪುನೀತ್​ ರಾಜ್​ಕುಮಾರ್​ ಬೇಕು ಎಂದು ಹಠ ಹಿಡಿದ ಕಾರನ್ನು ಗಿಫ್ಟ್​ ಕೊಟ್ಟಿದ್ದರಂತೆ ಎನ್​ಟಿಆರ್​!
ಪುನೀತ್​
Rajesh Duggumane | news18
Updated: January 8, 2019, 3:02 PM IST
ಖ್ಯಾತ ನಟ ಹಾಗೂ ರಾಜಕಾರಣಿ ನಂದಮುರಿ ತಾರಕರಾಮ ರಾವ್​ ಅವರ ಜೀವನ ಸಿನಿಮಾ ರೂಪ ತಾಳಿ ನಾಳೆ ತೆರೆಗೆ ಬರುತ್ತಿದೆ. ಎರಡು ಭಾಗದಲ್ಲಿ ಈ ಚಿತ್ರ ತೆರೆಕಾಣುತ್ತಿದೆ. ಮೊದಲ ಪಾರ್ಟ್​​ನಲ್ಲಿ ಅವರ ಸಿನಿಮಾ ಬದುಕನ್ನು ಹೇಳಲಾಗುತ್ತಿದ್ದು, ಎರಡನೇ ಭಾಗದಲ್ಲಿ ಅವರ ರಾಜಕೀಯ ಬದುಕನ್ನು ಕಟ್ಟಿಕೊಡಲಾಗುತ್ತಿದೆ. ಸಿನಿಮಾ ಬಗ್ಗೆ ಮಾಹಿತಿ ನೀಡಲು ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಪುನೀತ್​ ರಾಜ್​ಕುಮಾರ್​ ಕೂಡ ಆಗಮಿಸಿದ್ದರು. ಕನ್ನಡದಲ್ಲಿ ಎನ್​ಟಿಆರ್​ ಅವರನ್ನು ಹತ್ತಿರದಿಂದ ಕಂಡವರಲ್ಲಿ ಅವರು ಕೂಡ ಒಬ್ಬರು. ಈ ವೇಳೆ ಎನ್​ಟಿಆರ್​ ಔದಾರ್ಯ ಕೊಂಡಾಡಿದರು ಪುನೀತ್​.

ರಾಜ್​ಕುಮಾರ್​ ಕೇವಲ ಸ್ಯಾಂಡಲ್​ವುಡ್ ಮಾತ್ರವಲ್ಲ, ದಕ್ಷಿಣ ಭಾರತಕ್ಕೇ ಚಿರಪರಿಚಿತರು. ಹಾಗಾಗಿ ಪುನೀತ್​ಗೆ ಬೇರೆ ಚಿತ್ರರಂಗದ ಸ್ಟಾರ್​ಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಕ್ಕಿತ್ತಂತೆ. ‘ನಾನು ಎನ್​ಟಿಆರ್​ ಅವರನ್ನು ತುಂಬ ಹತ್ತಿರದಿಂದ ನೋಡಿದ್ದೇನೆ. ಚಿಕ್ಕವನಿದ್ದಾಗ ಅವರ ತೊಡೆಯ ಮೇಲೆ ಕೂತು ಆಟವಾಡಿದ್ದೆ. ಅದು ನನ್ನ ಸೌಭಾಗ್ಯ. ಅನೇಕ ಬಾರಿ ಅವರನ್ನು ತಂದೆಯವರ ಜೊತೆ ಭೇಟಿ ಮಾಡಿದ್ದೆ’ ಎಂದು ಹಳೆಯ ದಿನಗಳನ್ನು ನೆನೆದರು ಪುನೀತ್​.

ಇದನ್ನೂ ಓದಿ: ಡಾ. ರಾಜ್​ಕುಮಾರ್​ ಬಯೋಪಿಕ್​ನಲ್ಲಿ 'ಅಪ್ಪು' ಅಭಿನಯಿಸಬೇಕಂತೆ; ಇದು ತೆಲುಗು ನಟ ಬಾಲಯ್ಯ ಕೋರಿಕೆ!

ಎನ್​ಟಿಆರ್​ ಶೂಟಿಂಗ್​ ಸೆಟ್​ಗೆ ಪುನೀತ್​ ಒಮ್ಮೆ ಭೇಟಿ ನೀಡಿದ್ದರಂತೆ. ಅಲ್ಲಿದ್ದ ಕಾರೊಂದನ್ನು ನೋಡಿ ತನಗೆ ಆ ಕಾರು ಬೇಕು ಎಂದು ಹಠ ಹಿಡಿದಿದ್ದರಂತೆ. ಅಚ್ಚರಿ ಎಂದರೆ, ಕಾರನ್ನು ಮನೆಗೆ ಕಳುಹಿಸಿಕೊಟ್ಟಿದ್ದರಂತೆ ಎನ್​ಟಿಆರ್​!

“ಎನ್​ಟಿಆರ್​ ಶೂಟಿಂಗ್​ ಸೆಟ್​ಗೆ ತೆರಳಿದ್ದೆ. ಅವರು ಆ ಚಿತ್ರದಲ್ಲಿ ಕಾರ್​ ರೇಸರ್​ ಆಗಿ ಕಾಣಿಸಿಕೊಂಡಿದ್ದರು. ಸೆಟ್​ನ ಹೊರಭಾಗದಲ್ಲಿ ಶೂಟಿಂಗ್​ಗೆ ಬಳಸುವ ರೇಸ್​ ಕಾರೊಂದನ್ನು ನಿಲ್ಲಿಸಿದ್ದರು. ಅದು ನನಗೆ ಬೇಕು ಎನ್ನುವ ಹಠಕ್ಕೆ ಬಿದ್ದಿದ್ದೆ. ಕೆಲ ದಿನಗಳ ನಂತರ ಅದನ್ನು ನಮ್ಮ ಮನೆಗೆ ಕಳುಹಿಸಿಕೊಟ್ಟಿದ್ದರು. ನಮ್ಮ ತಂದೆ ಆ ಕಾರನ್ನು ಮರಳಿಸಿದರು” ಎಂದು ಎನ್​ಟಿಆರ್​ ಔದಾರ್ಯವನ್ನು ಕೊಂಡಾಡಿದ ಪುನೀತ್​, "ಎನ್​ಟಿಆರ್​ ಸಿನಿಮಾವನ್ನು ನೋಡಲು ಕಾತುರನಾಗಿದ್ದೇನೆ" ಎಂದರು.

ಇದನ್ನೂ ಓದಿ: ಎನ್​ಟಿಆರ್​ ಜೀವನಾಧಾರಿತ ಸಿನಿಮಾ 'ಕಥಾನಾಯಕುಡು' ಪ್ರಚಾರದಲ್ಲಿ ಭಾಗಿಯಾದ ಪುನೀತ್​, ಯಶ್​..!

First published:January 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ