#NTR Biopic Review: ಅಭಿಮಾನಿಗಳ ಮನ ಮುಟ್ಟಿದ 'ಕಥಾನಾಯಕುಡು'..!

ಅಭಿಮಾನಿಗಳ ಆರಾಧ್ಯ ದೈವ ಎನ್​ಟಿಆರ್​ ಜೀನಾಧಾರಿತ ಸಿನಿಮಾ 'ಕಥಾನಾಯಕುಡು' ಅಭಿಮಾನಿಗಳ ಮನ ಮುಟ್ಟಿದ್ದಾನೆ. ಆದರೆ ಸಿನಿಮಾದ ಎರಡನೇ ಭಾಗದಿಂದಾಗಿ ಕೊಂಚ ನಿರಾಶೆ ಮೂಡಿದೆ.

Anitha E | news18
Updated:January 9, 2019, 3:00 PM IST
#NTR Biopic Review: ಅಭಿಮಾನಿಗಳ ಮನ ಮುಟ್ಟಿದ 'ಕಥಾನಾಯಕುಡು'..!
'ಕಥಾನಾಯಕುಡು' ಎನ್​ಟಿಆರ್​ ಜೀವನಾಧಾರಿತ ಸಿನಿಮಾ
Anitha E | news18
Updated: January 9, 2019, 3:00 PM IST
ಟಾಲಿವುಡ್​ನ ಆರಾಧ್ಯ ದೈವ ಎಂದೇ ಕರೆಯಲ್ಪಡುವ ನಂದಮೂರಿ ತಾರಕ ರಾಮಾರಾವ್​ (ಎನ್​ಟಿಆರ್​) ಅವರ ಜೀವನಾಧಾರಿತ ಸಿನಿಮಾ 'ಕಥಾನಾಯಕುಡು' ಇಂದು (ಜ.09) ವಿಶ್ವದಾದ್ಯಂತ ತೆರೆ ಕಂಡಿದೆ. ಅಭಿಮಾನಿಗಳ ಬಹುನಿರೀಕ್ಷಿತ ಸಿನಿಮಾ ಇದಾಗಿದ್ದು, ಎಲ್ಲೆಡೆ ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಯ್ಯನಲ್ಲಿ ನಿಜವಾದ ಎನ್​ಟಿಆರ್ ಅವರನ್ನು ತೋರಿಸಲು ನಿರ್ದೇಶಕ ಕ್ರಿಷ್​ರ ಪ್ರಯತ್ನಿಸಿದ್ದಾರೆ.

ಸಿನಿಮಾ: ಎನ್​ಟಿಆರ್​ ಕಥಾನಾಯಕುಡು

ನಿದೇರ್ಶಶಕ: ಕ್ರಿಷ್​

ನಿರ್ಮಾಪಕರು: ಬಾಲಕೃಷ್ಣ, ಕೊರ್ರಪಾಟಿ ರಂಗನಾಥ್​ ಸಾಯಿ, ವಿಷ್ಣು ಇಂದೂರಿ

ಸಂಗೀತ ನಿರ್ದೇಶಕ: ಎಂ.ಎಂ. ಕೀರವಾಣಿ

ಬ್ಯಾನರ್​: ಎನ್​ಬಿಕೆ ಫಿಲ್ಮ್ಸ್​, ವರಾಹಿ ಚಲನಚಿತ್ರಂ, ವಿಬ್ರಿ ಮೀಡಿಯಾ

ತಾರಾಬಳಗ: ಬಾಲಕೃಷ್ಣ, ವಿದ್ಯಾಬಾಲನ್​, ರಾಣಾ ದಗ್ಗುಬಾಟಿ, ಸುಮಂತ್​, ರಾಕುಲ್​ ಪ್ರೀತ್​ ಸಿಂಗ್​
Loading...

ವಿಮರ್ಶೆ:  ಟಾಲಿವುಡ್​ ನಟ ಹಾಗೂ ಎನ್​ಟಿಆರ್​ ಅವರ ಮಗ ಬಾಲಕೃಷ್ಣ ಅವರ ಕನಸಿನ ಕೂಸು 'ಕಥಾನಾಯಕುಡು' ಸಿನಿಮಾ ಇಂದು ತೆರೆಕಂಡಿದೆ. ಈ ಸಿನಿಮಾದಲ್ಲಿ ಬಾಲಯ್ಯ ಎನ್​ಟಿಆರ್​ ಪಾತ್ರಕ್ಕೆ ಜೀವ ತುಂಬಿದರೆ, ವಿದ್ಯಾಬಾಲನ್​, ಎನ್​ಟಿಆರ್​ ಅವರ ಹೆಂಡತಿ ಬಸವತಾರಕಂ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಂದಮೂರಿ ಕಲ್ಯಾಣ ರಾಮ್​, ಹರಿಕೃಷ್ಣನ ಪಾತ್ರದಲ್ಲಿ ಹಾಗೂ ರಾಣಾ ದಗ್ಗುಬಾಟಿ ಎನ್​ಟಿಆರ್​ ಅಳಿಯ ಚಂದ್ರಬಾಬು ನಾಯ್ಡು ಆಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಹಂಸಿಕಾ ಮೋಟ್ವಾನಿ, ರಾಕುಲ್​ ಪ್ರೀತ್​ ಸಿಂಗ್​, ಸಚಿನ್​ ಖೇದ್ಕರ್​, ಹಿಮಾಂಶು ಚೌಧರಿ, ಭರತ್​ ರೆಡ್ಡಿ, ನಿತ್ಯಾ ಮೆನನ್​ ಸೇರಿದಂತೆ ಹಲವರು ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾವನ್ನು ಎನ್​ಬಿಕೆ ಫಿಲ್ಮ್ಸ್​, ವರಾಹಿ ಚಲನಚಿತ್ರಂ, ವಿಬ್ರಿ ಮೀಡಿಯಾ ನಿರ್ಮಿಸಿದ್ದು, ಎಂ.ಎಂ. ಕೀರವಾಣಿ ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಯ ಮೇಲಿನ ಪ್ರೀತಿಯಿಂದ ಶಿವಣ್ಣ ಮಾಡಿದ ಡಬ್​ಸ್ಮ್ಯಾಶ್​ ಹೇಗಿದೆ ಗೊತ್ತಾ..?

ಸಿನಿಮಾ ಕುರಿತು: 

ನಿರ್ದೇಶಕ ಕ್ರಿಷ್​ ಮತ್ತೊಮ್ಮೆ ತಮ್ಮ ಕೈಚಳ ತೋರಿದ್ದಾರೆ. 'ಕಥಾನಾಯಕುಡು' ಸಿನಿಮಾ ಮೊದಲಾರ್ಧವನ್ನು ಅಭಿಮಾನಿಗಳು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಒಳ್ಳೆಯ ಡೈಲಾಗ್ಸ್​, ಪಾತ್ರಗಳು, ಹಿನ್ನಲೆ ಸಂಗೀತ ಸೇರಿದಂತೆ ಒಟ್ಟಾರೆ ಸಿನಿಮಾದ ಮೊದಲ ಭಾಗ ಚೆನ್ನಾಗಿ ಮೂಡಿ ಬಂದಿದೆ. ಸಿನಿಮಾದ ಕೊನೆಯ 20 ನಿಮಿಷಗಳಲ್ಲಿ ಬಾಲಕೃಷ್ಣ ಅಭಿನಯ ತುಂಬಾ ಚೆನ್ನಾಗಿದೆ. ಆದರೆ ಸಿನಿಮಾ ತುಂಬಾ ದೀರ್ಘವಾಗಿರುವುದೇ ಪ್ರೇಕ್ಷಕನಿಗೆ ಹೊರೆ ಎನಿಸುವಂತಿದೆ. ಸಿನಿಮಾದಲ್ಲಿ ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವುದು ಸಾಕಷ್ಟು ಅಭಿಮಾನಿಗಳ ಅಭಿಪ್ರಾಯವಾಗಿದೆ. ಎನ್​ಟಿಆರ್​ ಆಗಿ ತೆರೆ ಕಾಣಿಸಿಕೊಳ್ಳಲು ಬಾಲಕೃಷ್ಣ ಶಕ್ತಿ ಮೀರಿ ಪ್ರಯತ್ನಿಸಿದ್ದಾರೆ. ಆದರೂ ಅವರ ವಯಸ್ಸಿನ ಕಾರಣದಿಂದಾಗಿ ರಾಮಾರಾವ್​ ಅವರ ಚಿಕ್ಕಂದಿನ ಪಾತ್ರಕ್ಕೆ ಬಾಲಯ್ಯನಿಂದ ನ್ಯಾಯ ಒದಗಿಸಲಾಗಲಿಲ್ಲ. ಒಟ್ಟಾರೆ ಈ ಸಿನಿಮಾ ಸಾಧಾರಣಕ್ಕಿಂತ ಉತ್ತಮವಾಗಿದೆ ಎನ್ನುವ ಮಾತುಗಳು ಸದ್ಯಕ್ಕೆ ಕೇಳಿ ಬರುತ್ತಿವೆ.

ಸಿನಿಮಾ ತೆರೆ ಕಾಣುತ್ತಿದ್ದಂತೆಯೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲಡೆ ಮಧ್ಯ ರಾತ್ರಿಯಿಂದಲೇ ಸಂಭ್ರಮಾಚರಣೆ ಆರಂಭವಾಗಿದೆ. ಅದರ ವಿಡಿಯೋ ಇಲ್ಲಿದೆ ನೋಡಿ... 

ಎನ್​ಟಿಆರ್​ 'ಕಥಾನಾಯಕುಡು' ಸಿನಿಮಾದ ಕೆಲವು ಚಿತ್ರಗಳು ನಿಮಗಾಗಿ...!

First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ