ದಿವಂಗತ ಖ್ಯಾತ ನಟ ಎನ್‌ಟಿಆರ್ (Famous Actor NTR) ಅವರ ಕಿರಿಯ ಪುತ್ರಿ ಕಾಂತಮನೇನಿ ಉಮಾಮಹೇಶ್ವರಿ (Uma Maheswari) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಕೆಲ ಸಮಯದ ಹಿಂದೆ ಅವರು ಹಠಾತ್ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಈಗ ಆಕೆ ಆತ್ಮಹತ್ಯೆ (Suicide) ಮಾಡಿಕೊಂಡಿರುವಂತೆ ಕಾಣುತ್ತಿದೆ. ಜುಬಿಲಿ ಹಿಲ್ಸ್ (Jubilee Hills) ನಲ್ಲಿರುವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಆದರೆ ಇದನ್ನು ಕುಟುಂಬ ಸದಸ್ಯರು ಇನ್ನೂ ಖಚಿತಪಡಿಸಿಲ್ಲ. ಘಟನೆಗೆ ಯಾರೂ ಸ್ಪಂದಿಸಿಲ್ಲ. ಪೊಲೀಸರು (Police) ಈಗಾಗಲೇ ಜುಬಿಲಿ ಹಿಲ್ಸ್‌ನಲ್ಲಿರುವ ಉಮಾಮಹೇಶ್ವರಿ ಮನೆಗೆ ತಲುಪಿದ್ದಾರೆ. ಸದಾ ಚಟುವಟಿಕೆಯಿಂದ ಇರುತ್ತಿದ್ದ ಉಮಾಮಹೇಶ್ವರಿ ಏಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಗೊತ್ತಾಗಿಲ್ಲ.
ನೇಣಿಗೆ ಕೊರಳೊಡ್ಡಿದ ಎನ್‌ಟಿಆರ್ ಕಿರಿಯ ಮಗಳು!
ನಿಜವಾಗಿ ಏನಾಯಿತು ಎಂದು ತಿಳಿಯಲು ಎನ್‌ಟಿಆರ್ ಕುಟುಂಬ ಸದಸ್ಯರು ಪ್ರಯತ್ನಿಸುತ್ತಿದ್ದಾರೆ. ಮತ್ತೊಂದೆಡೆ ಆಕೆಯ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರವಷ್ಟೇ ಆಕೆಯ ಆತ್ಮಹತ್ಯೆ ಕುರಿತು ಹೆಚ್ಚಿನ ವಿವರಗಳು ಸಿಗುವ ಸಾಧ್ಯತೆ ಇದೆ. ಇನ್ನೂ ಎನ್‌ಟಿಆರ್‌ಗೆ ಒಟ್ಟು 12 ಮಕ್ಕಳಿದ್ದಾರೆ. 8 ಗಂಡು ಮತ್ತು 4 ಹೆಣ್ಣು ಮಕ್ಕಳಿದ್ದಾರೆ. ಅವರಲ್ಲಿ ಕೆಲವರು ನಮಗೆ ಗೊತ್ತು, ಹರಿಕೃಷ್ಣ ಮತ್ತು ಬಾಲಕೃಷ್ಣ ಹೀರೋ ಆದದ್ದು ಎಲ್ಲರಿಗೂ ಗೊತ್ತು. ಹೆಣ್ಣು ಮಕ್ಕಳಾದ ಭುವನೇಶ್ವರಿ ಮತ್ತು ಪುರಂಧೇಶ್ವರಿಯ ಬಗ್ಗೆಯೂ ನಮಗೆ ತಿಳಿದಿದೆ. ಎನ್‌ಟಿಆರ್ ಅವರ ಇನ್ನೊಬ್ಬ ಮಗಳು ಲೋಕೇಶ್ವರಿ ಮತ್ತು ಕಿರಿಯ ಮಗಳು ಉಮಾ ಮಹೇಶ್ವರಿ.
ಕೋಟಿ ಕೋಟಿ ದುಡ್ಡಿದ್ರೂ ಸೂಸೈಡ್ ಮಾಡಿಕೊಂಡಿದ್ದೇಕೆ?
ಆದರೆ ಎಲ್ಲರ ಜೀವನವೂ ಸುಗಮವಾಗಿ ಸಾಗುತ್ತಿರುವಾಗ ಕಿರಿಯ ಮಗಳು ಉಮಾಮಹೇಶ್ವರಿಯ ಬದುಕು ದುರಂತಮಯವಾಗಿದೆ. ಉಮಾಮಹೇಶ್ವರಿ ನರೇಂದ್ರ ರಾಜನ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾದರು. ಆದರೆ ಅವರು ತುಂಬಾ ಸ್ಯಾಡಿಸ್ಟ್ ಆಗಿ ವರ್ತಿಸುತ್ತಿದ್ದರು. ಉಮಾ ಮಹೇಶ್ವರಿಗೆ ಸಿಗರೇಟ್ ಸುಡುತ್ತಿದ್ದರು ಎಂದು ಉಮಾ ಮಹೇಶ್ವರಿ ಎನ್ ಟಿಆರ್ ಗೆ ಹೇಳುತ್ತಿದ್ದರಂತೆ. ಅವರಿಗೆ ಡಿವೋರ್ಸ್ ನೀಡಿದ್ದರು. ಮತ್ತೊಬ್ಬರ ಜೊತೆ ಮದುವೆಯಾಗಿದ್ದರು. ಆದರೆ, ಏಕಾಏಕಿ ಈ ರೀತಿ ತಮ್ಮ ಜೀವನವನ್ನು ಅಂತ್ಯಗೊಳಿಸಿದ್ದು ದುರಂತವೇ ಸರಿ. ಉಮಾಮಹೇಶ್ವರಿ ನಿಧನಕ್ಕೆ ಹಲವು ರಾಜಕೀಯ, ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚಂದನ್ ಕುಮಾರ್‌ಗೆ ಕುತ್ತು ತರುತ್ತಾ ಕಿತ್ತಾಟ? ತೆಲುಗು ಧಾರಾವಾಹಿಗಳಿಂದ ಬ್ಯಾನ್ ಆಗ್ತಾರಾ ಕನ್ನಡದ ನಟ?
ತಾಯಿ ಆತ್ಮಹತ್ಯೆಗೆ ಆರೋಗ್ಯ ಸಮಸ್ಯೆನೆ ಕಾರಣ ಎಂದ ಮಗಳು!
ಉಮಾಮಹೇಶ್ವರಿ ಅವರ ಪುತ್ರಿ ದೀಕ್ಷಿತಾ ತಮ್ಮ ತಾಯಿಯ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿದ್ದಾರೆ. ತಾಯಿಯ ಆತ್ಮಹತ್ಯೆಗೆ ಆರೋಗ್ಯ ಸಮಸ್ಯೆಯೇ ಕಾರಣ ಎಂದರು. ಉಮಾಮಹೇಶ್ವರಿ ಆತ್ಮಹತ್ಯೆ ಮಾಡಿಕೊಂಡಾಗ ಮನೆಯಲ್ಲಿ ನಾಲ್ಕು ಮಂದಿ ಇದ್ದರು. ಮಧ್ಯಾಹ್ನ 12 ಗಂಟೆಗೆ ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡರು. ಆದರೆ ಊಟದ ಸಮಯವಾದರೂ ಹೊರಗೆ ಬರದ ಕಾರಣ ಬಾಗಿಲು ತೆರೆಯಲು ಯತ್ನಿಸಿದ್ದೆವು. ನಂತ ಡೋರ್ ಒಡೆದು ನೋಡಿದಾ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿಯುತು ಎಂದಿದ್ದಾರೆ.
ಇದನ್ನೂ ಓದಿ: ರಾಕಿ ಭಾಯ್ ಹಾಡಿ ಹೊಗಳಿದ ವಿಕ್ರಾಂತ್ ರೋಣ! ಸುಖಾಸುಮ್ಮನೆ ಟ್ರೋಲ್ ಮಾಡ್ತಿದ್ದವರಿಗೆ ಟಾಂಗ್ ಕೊಟ್ರಾ ಕಿಚ್ಚ?
ಉಮಾಮಹೇಶ್ವರಿ ಆತ್ಮಹತ್ಯೆಗೆ ಮಾನಸಿಕ ಒತ್ತಡ ಹಾಗೂ ಆರೋಗ್ಯ ಸಮಸ್ಯೆಯೇ ಕಾರಣವಂತೆ. ಮತ್ತೊಂದೆಡೆ ದೀಕ್ಷಿತಾ ತನ್ನ ತಾಯಿಯ ಆತ್ಮಹತ್ಯೆ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ