ಎನ್​ಟಿಆರ್ ಬಯೋಪಿಕ್​ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ

ಮೊದಲಾರ್ಧ ಸ್ವಲ್ಪ ಬೇಸರ ತರಿಸಿದರೆ, ದ್ವಿತೀಯಾರ್ಧ ಉತ್ತಮವಾಗಿದೆ ಎಂದು ಕೆಲವರು ಟ್ವೀಟ್​​ ಮಾಡಿದ್ದಾರೆ. ನಂದಮುರಿ ಬಾಲಕೃಷ್ಣ ಹಾಗೂ ವಿದ್ಯಾ ಬಾಲನ್​ ನಟನೆಯನ್ನು ಎಲ್ಲರೂ ಕೊಂಡಾಡಿದ್ದಾರೆ.

Rajesh Duggumane | news18
Updated:January 9, 2019, 12:16 PM IST
ಎನ್​ಟಿಆರ್ ಬಯೋಪಿಕ್​ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ
ಎನ್​ಟಿಆರ್​ ಪೋಸ್ಟರ್​
Rajesh Duggumane | news18
Updated: January 9, 2019, 12:16 PM IST
ತೆಲುಗಿನ ಖ್ಯಾತ ನಟ ಹಾಗೂ ರಾಜಕಾರಣಿ ನಂದಮೂರಿ ತಾರಕರಾಮ ರಾವ್​ ಅವರ ಜೀವನ ಕಥೆಯನ್ನು ‘ಎನ್​ಟಿಆರ್​ ಕಥಾನಾಯಕುಡು’ ಹೆಸರಿನಲ್ಲಿ ನಿರ್ದೇಶಕ ಕ್ರಿಷ್​ ತೆರೆಮೇಲೆ ತಂದಿದ್ದಾರೆ. ಇಂದು ವಿಶ್ವಾದ್ಯಂತ ಸಿನಿಮಾ ಬಿಡುಗಡೆ ಆಗಿದ್ದು, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಎನ್​ಟಿಆರ್​ ಪುತ್ರ ನಂದಮೂರಿ ಬಾಲಕೃಷ್ಣ ಅವರು ಈ ಚಿತ್ರದ ನಾಯಕ. ಎನ್​ಟಿಆರ್​ ಪಾತ್ರವನ್ನು ಸ್ವತಃ ಅವರೇ ನಿರ್ವಹಿಸಿದ್ದರು. ಇತ್ತೀಚೆಗೆ ರಿಲೀಸ್ ಆಗಿದ್ದ ಟ್ರೈಲರ್​ನ ಕೆಲ ದೃಶ್ಯಗಳಲ್ಲಿ ಬಾಲಯ್ಯ ಅವರು ಎನ್​ಟಿಆರ್​ ರೀತಿಯಲ್ಲೇ ಕಾಣುತ್ತಿದ್ದರು. ಈ ಎಲ್ಲ ವಿಷಯಗಳು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿತ್ತು. ಆದರೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರಕ್ಕೆ ಸಾಧಾರಣ ಪ್ರತಿಕ್ರಿಯೆ ಕೇಳಿ ಬಂದಿದೆ.

ಇದನ್ನೂ ಓದಿ: ಯಶ್​ ಆಫರ್​ ನೀಡಿದರೆ ಈ ಬಾಲಿವುಡ್​ ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ!

ಮೊದಲಾರ್ಧ ಸ್ವಲ್ಪ ಬೇಸರ ತರಿಸಿದರೆ, ದ್ವಿತೀಯಾರ್ಧ ಉತ್ತಮವಾಗಿದೆ ಎಂದು ಕೆಲವರು ಟ್ವೀಟ್​​ ಮಾಡಿದ್ದಾರೆ. ನಂದಮುರಿ ಬಾಲಕೃಷ್ಣ ಹಾಗೂ ವಿದ್ಯಾ ಬಾಲನ್​ ನಟನೆಯನ್ನು ಎಲ್ಲರೂ ಕೊಂಡಾಡಿದ್ದಾರೆ. ತೆಲುಗು ಚಿತ್ರಕ್ಕೆ ಕರ್ನಾಟಕದಲ್ಲಿ ಒಳ್ಳೆಯ ಮಾರುಕಟ್ಟೆ ಇದೆ. ಆದರೆ, ‘ಎನ್​ಟಿಆರ್​’ ಬಯೋಪಿಕ್​ ಬೆಂಗಳೂರಿನಲ್ಲೂ ಹೇಳಿಕೊಳ್ಳುವಂಥ ಓಪನಿಂಗ್​ ಸಿಕ್ಕಿಲ್ಲ. ಈ ಚಿತ್ರ ಬೆಂಗಳೂರಿನಲ್ಲಿ ಕೇವಲ 100 ಶೋಗಳು ಮಾತ್ರ ಪ್ರದರ್ಶನ ಕಂಡಿವೆ.

ಎನ್​ಟಿಆರ್​ ಅವರು ಚಿತ್ರರಂಗ ಹಾಗೂ ರಾಜಕೀಯ ಎರಡಲ್ಲೂ ತೊಡಗಿಕೊಂಡವರು. ಹಾಗಾಗಿ ಎರಡು ಭಾಗದಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ‘ಎನ್​ಟಿಆರ್​ ಕಥಾನಾಯುಕುಡು’ವಿನಲ್ಲಿ ಅವರ ಬಣ್ಣದ ಬದುಕಿನ ಜೀವನವನ್ನು ಚಿತ್ರಿಸಲಾಗಿದೆ. ಎನ್​ಟಿಆರ್​ ಚಿತ್ರರಂಗಕ್ಕೆ ಬರಲು ಕಾರಣವೇನು? ಅವರು ಚಿತ್ರರಂಗದಲ್ಲಿ ಹೇಗೆ ಬೆಳೆದರು ಎಂಬುದನ್ನು ತೋರಿಸಲಾಗಿದೆ. ಎರಡನೇ ಭಾಗ ಫೆ.9ರಂದು ತೆರೆಕಾಣುತ್ತಿದ್ದು, ಅದರಲ್ಲಿ ಎನ್​ಟಿಆರ್​ ರಾಜಕೀಯ ಬದುಕನ್ನು ಚಿತ್ರಿಸಲಾಗಿದೆಯಂತೆ.

ಇದನ್ನೂ ಓದಿ: ಜನ್ಮದಿನದ ಶುಭಾಶಯ ತಿಳಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಯತ್ನಿಸಿದ್ದ ಯಶ್ ಅಭಿಮಾನಿ ಸಾವುPositives:First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ