Rockline Venkatesh: 9 ವರ್ಷದಿಂದ ತೆರಿಗೆ ವಂಚಿಸುತ್ತಿದ್ದಾರಾ ರಾಕ್​ಲೈನ್​ ವೆಂಕಟೇಶ್​?

ರಮೇಶ್ ಹಿಂದೆ ಯಾರು ಇದ್ದರೆ ಗೊತ್ತಿಲ್ಲ.ಇದಕ್ಕೆಲ್ಲ ನಾನೂ ಹೆದರುವುದಿಲ್ಲ. ನಾನೂ ಯಾವ ವಂಚನೆಯೂ ಮಾಡಿಲ್ಲ

ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್​

ನಿರ್ಮಾಪಕ ರಾಕ್​​ಲೈನ್​ ವೆಂಕಟೇಶ್​

  • Share this:
ಬೆಂಗಳೂರು (ಆ. 14): ಕನ್ನಡ ಸಿನಿ ಜಗತ್ತಿನ ಖ್ಯಾತ ನಿರ್ಮಾಪಕ ಕಂಮ್  ಬ್ಯುಸಿನೆಸ್​ಮೆನ್​​, ನೂರಾರು ಕೋಟಿ ಆಸ್ತಿಯ ಒಡೆಯ ಕೂಡಾ ಹೌದು. ಕನ್ನಡ ಮಾತ್ರವಲ್ಲದೇ ಪರಬಾಷಾ ಚಿತ್ರಗಳಲ್ಲೂ ನಿರ್ಮಾಣ ಮಾಡಿ ಸೈ ಎನಿಸಿಕೊಂಡಿದ್ದಾರೆ ಅವರು.  ಅದರೂ ಕೂಡಾ ಬಿಬಿಎಂಪಿ ಗೆ ಆಸ್ತಿ ತೆರಿಗೆ ಕಟ್ಟಲು ಹಣವಿಲ್ಲದಷ್ಟು ಬಡವರಾದರೇ  ರಾಕ್‌ಲೈನ್ ವೆಂಕಟೇಶ್ ಎಂಬ ಪ್ರಶ್ನೆ ಕಾಡಿದೆ. ಕಾರಣ ಕಳೆದ 9 ವರ್ಷದಿಂದ ಬಿಬಿಎಂಪಿಗೆ ರಾಕ್​ಲೈನ್​​​ ವೆಂಕಟೇಶ್ ತೆರಿಗೆ ವಂಚಿಸಿರುವ ಗಂಭೀರ ಆರೋಪ ಕೇಳಿ ಬಂದಿದೆ.  ಯಶವಂತಪುರದ ಬಳಿ ಇರುವ ರಾಕ್‌ಲೈನ್ ಮಾಲ್ ಈಗ ತೆರಿಗೆ ಕಟ್ಟದ ವಿಚಾರದಲ್ಲಿ ಸುದ್ದಿಯಲ್ಲಿದೆ. 1 ಲಕ್ಷದ 22 ಸಾವಿರದ 743 ಚದರ ಅಡಿ ಇರುವ ರಾಕ್‌ಲೈನ್ ಮಾಲ್ ಮಾಲೀಕ ರಾಕ್‌ಲೈನ್ ವೆಂಕಟೇಶ್ ತೆರಿಗೆ ಕಟ್ಟಿರುವುದು ಮಾತ್ರ ಕೇವಲ 48 ಸಾವಿರದ 500 ಚದರ ಅಡಿಗೆ ಮಾತ್ರ. ಅಂದರೆ ಬಿಬಿಎಂಪಿಗೆ ಬರೋಬ್ಬರಿ ಎಂಟೂವರೆ ಕೋಟಿ ತೆರಿಗೆಯನ್ನು  ರಾಕ್‌ಲೈನ್ ವೆಂಕಟೇಶ್ ವಂಚಿಸಿದ್ದಾರೆ. ಹೀಗೆಂದು ದಾಖಲೆ ಸಮೇತ  ಎನ್.ಆರ್​ ರಮೇಶ್ ದೂರು ದಾಖಲಿಸಿದ್ದಾರೆ.

ಇನ್ನ ಸಾಮಾನ್ಯ ಜನ ಟ್ಯಾಕ್ಸ್ ಕಟ್ಟದಿದ್ರೆ ನೋಟಿಸ್ ಮೇಲೆ ನೋಟಿಸ್ ಕಳುಹಿಸುವ ಪಾಲಿಕೆ 9 ವರ್ಷದಿಂದ ರಾಕ್‌ಲೈನ್ ತೆರಿಗೆ ಕಟ್ಟದಿದ್ದರೂ ಸಮ್ಮನಿತ್ತಾ ಎಂಬ ಪ್ರಶ್ನೆ ಕೂಡ ಕಾಡಿದ್ದು, ಇದು  ಜನರ ಆಕ್ರೋಶಕ್ಕೂ ಕಾರಣವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ಈ ಪ್ರಕರಣದ ಕುರಿತು ತನಿಖೆ ನಡೆಸುತ್ತೇವೆ. ಪಾಲಿಕೆ ಆದಾಯಕ್ಕೆ ಯಾರೇ ಮೋಸ ಮಾಡಿದ್ದರೂ, ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನು ಓದಿ: ಪ್ರಿಯಾಂಕ್​ ಖರ್ಗೆ ವಿರುದ್ಧ ಕಟೀಲ್​ ಕಿಡಿ; ಇಂದಿರಾ ಬದಲು ಅಂಬೇಡ್ಕರ್​ ಹೆಸರೇ ಇಡಲಿ ಎಂದ​ ಬಿಜೆಪಿ ರಾಜ್ಯಾಧ್ಯಕ್ಷ

ಬಿಬಿಎಂಪಿ ತೆರಿಗೆ ವಂಚನೆ ಆರೋಪ ಹಿನ್ನೆಲೆ ಪ್ರತಿಕ್ರಿಯಿಸಿರುವ ರಾಕ್ ಲೈನ್, ಎನ್. ಆರ್. ರಮೇಶ್ ಯಾರೋ ನನಗೆ ಗೊತ್ತೇ ಇಲ್ಲ. ಯೋಗ್ಯತೆ ಇದ್ದಂತವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ನಾನೂ ಆರೋಪವನ್ನ ಸ್ವೀಕರಿಸ್ತೇನೆ. ಬೇಕಿದ್ದರೆ ಸಂಬಂಧ ಪಟ್ಟ ಅಧಿಕಾರಿಗಳು ಕೇಳಲಿ. ರಮೇಶ್ ಹಿಂದೆ ಯಾರು ಇದ್ದರೆ ಗೊತ್ತಿಲ್ಲ.ಇದಕ್ಕೆಲ್ಲ ನಾನೂ ಹೆದರುವುದಿಲ್ಲ. ನಾನೂ ಯಾವ ವಂಚನೆಯೂ ಮಾಡಿಲ್ಲ.ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನಾನು ಕೋರ್ಟ್​​ ಗೆ ಹೋಗಿದ್ದೆ. ಹೈ ಕೋರ್ಟ್​​ ಕೂಡಾ ತೆರಿಗೆ ವಿಚಾರಕ್ಕೆ ತಡೆ ನೀಡಿದೆ.  ನಾನು ಯಾರಿಗೂ ಮೋಸ ಮಾಡಿ ಕಟ್ಟಡ ಕಟ್ಟಿಲ್ಲ.ಕಷ್ಟ ಪಟ್ಟು ದುಡಿದು ಕಟ್ಟಡ ಕಟ್ಟಿದ್ದೇನೆ. ಎಷ್ಟು ಚದರ ಇದೆ ಅಂತ ಬಿಬಿಎಂಪಿ ಯವರೇ ಬಂದು  ಸರ್ವೆ ಮಾಡಲಿ‌ ನಾನು ತೆರಿಗೆ ಕಟ್ಟಲು ಯಾವಾಗಲೂ ಸಿದ್ದನಿದೀನಿ ಎಂದು ಸವಾಲ್​ ಹಾಕಿದ್ದಾರೆ

ಬಿಬಿಎಂಪಿಗೆ ಆಸ್ತಿ ತೆರಿಗೆಯೇ ಆದಾಯ ಮೂಲ. ಈ ಆದಾಯ ಮೂಲದಲ್ಲೇ ಸೋರಿಕೆಯಾದರೆಪಾಲಿಕೆ ನಡೆಯೋದಾದ್ರು ಹೇಗೆ..? ಇಂಥ ದೂರಿನಲ್ಲಿ ನಿಜವಾಗಿ ಹುರುಳಿದೆಯೇ? ಹಾಗೊಂದು ವೇಳೆ ಆರೋಪ ನಿಜವಾಗಿದ್ದರೆ ಕ್ರಮ ತೆಗೆದುಕೊಳ್ಳಿ. ಈ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತು ತೆರಿಗೆ ವಂಚನೆ ಮಾಡಿದವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Seema R
First published: