ಹೆಚ್ಚಾಯಿತು ಕರೀನಾ ಕಪೂರ್ ಖಾನ್ ಸಂಭಾವನೆ: ಐಶ್ವಯಾ ರೈ ನಂತರ ಬೇಬೊ ಬರೆದ ದಾಖಲೆ ಇದು

news18
Updated:August 18, 2018, 3:58 PM IST
ಹೆಚ್ಚಾಯಿತು ಕರೀನಾ ಕಪೂರ್ ಖಾನ್ ಸಂಭಾವನೆ: ಐಶ್ವಯಾ ರೈ ನಂತರ ಬೇಬೊ ಬರೆದ ದಾಖಲೆ ಇದು
  • News18
  • Last Updated: August 18, 2018, 3:58 PM IST
  • Share this:
ನ್ಯೂಸ್​ 18 ಕನ್ನಡ 

ಕರೀನಾ ಕಪೂರ್ ಬಾಲಿವುಡ್‍ನಲ್ಲಿ ಹೊಸ ದಾಖಲೆ ಬರೆಯೋಕೆ ಹೊರಟಿದ್ದಾರೆ. ಒಂದು ಮಗುವಿನ ತಾಯಿ ಆದಮೇಲೂ ಬೇಡಿಕೆ ಉಳಿಸಿಕೊಂಡಿರೊ ಕರೀನಾ ಕಪೂರ್ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡಿದ್ದಾರೆ. ಇದರಲ್ಲೇನಿದೆ ವಿಶೇಷ ಅಂತಿರಾ? ಅದನ್ನ ತಿಳಿಯೋಕೆ ಈ ವರದಿ ಓದಿ.

ಕರೀನಾ ಕಪೂರ್, ನೀಳ ಮೂಗು ನೀಳ ದೇಹದ ಸಪೂರ ಸುಂದರಿ. ಸುಮಾರು 18 ವರ್ಷಗಳಿಂದ ಬಾಲಿವುಡ್‍ನಲ್ಲಿರೊ ಈಕೆ ಸೋಲು-ಗೆಲುವು ಎರಡನ್ನೂ ಕಂಡವರು. ಪ್ರಶಸ್ತ್ರಿಗಳ ಜತೆಗೆ ವಿಮರ್ಶಕರಿಂದ ಠೀಕೆಗೂ ಒಳಗಾಗಿದ್ದವರು. ಇಷ್ಟಾದರೂ ಕರೀನಾಗೆ ಎಂದೂ ಬೇಡಿಕೆ ಮಾತ್ರ ಕುಗ್ಗಿರಲಿಲ್ಲ, ಕರೀನಾ ಯಾವತ್ತೂ ಟಾಪ್​ನಲ್ಲೇ ಇದ್ದವರು. ಈಗ ಮದುವೆಯಾಗಿ ಒಂದು ಮಗುವಿನ ತಾಯಿ ಆದಮೇಲೂ ಕರೀನಾ ಅವರಿಗೆ ಅದೇ ಬೇಡಿಕೆ ಇದೆ.

ಸಿನಿ ರಂಗದಲ್ಲಿ ನಾಯಕಿಯರು ಹತ್ತು ವರ್ಷಕ್ಕಿಂತ ಹೆಚ್ಚು ಇದ್ದು, ಬೇಡಿಕೆಯನ್ನ ಉಳಿಸಿಕೊಳ್ಳೋದು ದೊಡ್ಡ ದಾಖಲೆ ಎನ್ನಬಹುದು. ಹೀಗಿರುವಾಗ ಮಗುವಿನ ತಾಯಿಯಾದ ಮೇಲೆಂತೂ ಅವರಿಗೆ ನೀಡುವ ಸಂಭಾವನೆ ಜತೆಗೆ ಅವಕಾಶಗಳೂ ಕಡಿಮೆಯಾಗುತ್ತೆ ಹಾಗೂ ನೋಡೊ ಜನಕ್ಕೂ ಬೋರಾಗುತ್ತೆ. ಆದರೆ ಇವನ್ನ ತುಂಬಾ ಚೆನ್ನಾಗಿ ಮೊದಲು ನಿರ್ವಹಿಸಿದ್ದು ಕರಾವಳಿ ಬೇಬಿ ಐಶ್ವರ್ಯಾ ರೈ. ಈಗ ಕರೀನಾ ಕಪೂರ್ ಖಾನ್.

'ವೀರೇ ದಿ ವೆಡ್ಡಿಂಗ್' ಸಿನಿಮಾ ಸಂಪೂರ್ಣ ಮಹಿಳಾ ಪ್ರಧಾನ ಲೇಡಿಸ್ ಪ್ಯಾಕೇಜ್ ಆಗಿದ್ದರೂ, ಬಾಕ್ಸಾಫಿಸ್‍ನಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಈ ಸಿನಿಮಾಗೆ ಕರೀನಾ ಕಪೂರ್ 7 ಕೋಟಿ ಸಂಭಾವನೆ ಪಡೆದಿದ್ದರಂತೆ, ಇದೀಗ 'ವೀರೇ ದಿ ವೆಡ್ಡಿಂಗ್' ಯಶಸ್ಸು ಕರೀನಾ ಸಂಭಾವನೆಯ ಮೊತ್ತವನ್ನ ಹೆಚ್ಚಿಸಿದೆ. ಇನ್ನು ಮುಂದೆ ಕರೀನಾ ಕಾಲ್​ಶೀಟ್​ ನಿಮಗೆ ಬೇಕಾದರೆ ನೀವಿನ್ನು 10 ಕೋಟಿಯನ್ನ ಪಾವತಿಸಬೇಕು. 10 ಕೋಟಿ ದುಡ್ಡು ಕೊಡಲೇಬೇಕಂತೇನಿಲ್ಲ, ಕರೀನಾ ದಿನಾಂಕ ಎಷ್ಟು ದಿನ ಬೇಕು, ಅವರ ಕೆಲಸ ಮತ್ತು ಪ್ರಾಮುಖ್ಯತೆ ಸಿನಿಮಾದಲ್ಲಿ ಎಷ್ಟಿರುತ್ತೆ ಅನ್ನೋದನ್ನ ನೋಡಿ ಚೂರುಪಾರು ಚೌಕಾಸಿಗೆ ಅವಕಾಶ ಇದ್ದೇ ಇದೆ.

ಈಗಾಗಲೇ ಬಾಲಿವುಡ್‍ನಲ್ಲಿ ಡಬಲ್ ನಂಬರ್ ಸಂಭಾವನೆ ಪಡೆಯುತ್ತಿರೊ ದೀಪಿಕಾ ಪಡುಕೋಣೆ ಮತ್ತು ಕಂಗನಾ ರನೋಟ್​ ಅವರ ಜತೆಗೆ ಕರೀನಾ ಕಪೂರ್ ಸಹ ಸೇರ್ಪಡೆಯಾಗಿದ್ದಾರೆ. ಅದರಲ್ಲೂ ಆ ಇಬ್ಬರೂ ಬ್ಯೂಟೀಸ್ ಇನ್ನು ಮದುವೆಯಾಗದ ಹುಡುಗೀರು, ಆದರೆ ಕರೀನಾ ಈಗಾಗಲೇ ಮದುವೆಯಾಗಿ ಅಮ್ಮನಾಗಿರೊ 37ರ ಮಹಿಳೆ. ಹಾಗಾಗಿಯೇ ಕರೀನಾ ಕಪೂರ್​ ನಿಜಕ್ಕೂ ಗ್ರೇಟ್​ ಎನ್ನಬಹುದು.

 
First published: August 18, 2018, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading